3ನೇ ಭಾರತ-ನಾರ್ಡಿಕ್ ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ಐಸ್ಲ್ಯಾಂಡ್ ಪ್ರಧಾನಮಂತ್ರಿಯೊಂದಿಗೆ ಸಭೆ ನಡೆಸಿದರು
May 19th, 06:44 pm
ಪ್ರಧಾನಮಂತ್ರಿ ಶ್ರೀಮತಿ ಫ್ರಾಸ್ಟಾಡೊಟ್ಟಿರ್ ಅವರು ಅಧಿಕಾರ ವಹಿಸಿಕೊಂಡ ನಂತರ ಇದು ಇಬ್ಬರು ನಾಯಕರ ಮೊದಲ ಸಭೆಯಾಗಿದೆ. ಐಸ್ಲ್ಯಾಂಡ್ ಇತಿಹಾಸದಲ್ಲಿ ಅತ್ಯಂತ ಕಿರಿಯ ಪ್ರಧಾನಮಂತ್ರಿಯಾಗಿದ್ದಕ್ಕಾಗಿ ಪ್ರಧಾನಮಂತ್ರಿ ಶ್ರೀಮತಿ ಫ್ರಾಸ್ಟಾಡೊಟ್ಟಿರ್ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದರು.ಪ್ರಧಾನಮಂತ್ರಿಗಳಿಂದ 3ನೇ ಭಾರತ-ನಾರ್ಡಿಕ್ ಶೃಂಗಸಭೆಯ ನೇಪಥ್ಯದಲ್ಲಿ ಡೆನ್ಮಾರ್ಕ್ ಹಂಗಾಮಿ ಪ್ರಧಾನಮಂತ್ರಿಯೊಂದಿಗೆ ಸಭೆ
May 19th, 06:40 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 3ನೇ ಭಾರತ-ನಾರ್ಡಿಕ್ ಶೃಂಗಸಭೆಯ ನೇಪಥ್ಯದಲ್ಲಿ ಇಂದು ಓಸ್ಲೋದಲ್ಲಿ ಡೆನ್ಮಾರ್ಕ್ ಹಂಗಾಮಿ ಪ್ರಧಾನಮಂತ್ರಿ ಶ್ರೀಮತಿ ಮೆಟ್ಟೆ ಫ್ರೆಡೆರಿಕ್ಸನ್ ಅವರನ್ನು ಭೇಟಿ ಮಾಡಿದರು.3ನೇ ಭಾರತ-ನಾರ್ಡಿಕ್ ಶೃಂಗಸಭೆಯ ಜಂಟಿ ಪತ್ರಿಕಾ ಹೇಳಿಕೆ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರ ಪತ್ರಿಕಾ ಹೇಳಿಕೆ
May 19th, 04:25 pm
ಇಂದು 3ನೇ ಭಾರತ-ನಾರ್ಡಿಕ್ ಶೃಂಗಸಭೆಯಲ್ಲಿ ಭಾಗವಹಿಸುತ್ತಿರುವುದು ನನಗೆ ತುಂಬಾ ಸಂತೋಷ ತಂದಿದೆ. ಮೊದಲನೆಯದಾಗಿ, ಈ ಶೃಂಗಸಭೆ ಆಯೋಜಿಸಿದ್ದಕ್ಕಾಗಿ ನಾರ್ವೆ ಪ್ರಧಾನಮಂತ್ರಿ ಅವರಿಗೆ ನಾನು ಹೃತ್ಪೂರ್ವಕವಾಗಿ ಧನ್ಯವಾದ ಹೇಳುತ್ತೇನೆ. ಇಲ್ಲಿ ಉಪಸ್ಥಿತರಿರುವ ಎಲ್ಲಾ ನಾರ್ಡಿಕ್ ನಾಯಕರನ್ನು ನಾನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ.ನಾರ್ವೆ-ಭಾರತ ಉದ್ಯಮ ವ್ಯವಹಾರ ಮತ್ತು ಸಂಶೋಧನಾ ಶೃಂಗಸಭೆ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
May 18th, 11:49 pm
ಇದು ಕೇವಲ ಸಾಧ್ಯತೆಗಳ ಪಾಲುದಾರಿಕೆಯಲ್ಲ, ಇದು ಸಾಬೀತಾಗಿರುವ ಪಾಲುದಾರಿಕೆಯಾಗಿದೆ. ಇಂದು ಆಹಾರ, ಇಂಧನ ಮತ್ತು ರಸಗೊಬ್ಬರ ಭದ್ರತೆಯು ಜಾಗತಿಕ ಸವಾಲುಗಳಾಗಿ ಮಾರ್ಪಟ್ಟಿರುವಾಗ, ಭಾರತ ಮತ್ತು ನಾರ್ವೆ ಅವುಗಳನ್ನು ಪರಿಹರಿಸಲು ಒಟ್ಟಾಗಿ ಕೆಲಸ ಮಾಡುತ್ತಿವೆ. ಅದು ಭಾರತದ ಆಹಾರ ವಲಯದಲ್ಲಿ ಓರ್ಕ್ಲಾದ ಹೂಡಿಕೆಗಳಾಗಲಿ, ಈಕ್ವಿನಾರ್ ಭಾರತಕ್ಕೆ ಮಾಡುವ ಎಲ್ಪಿಜಿ ಮತ್ತು ಎಲ್ಎನ್ ಜಿ ಪೂರೈಕೆಯಾಗಿರಲಿ ಅಥವಾ ಭಾರತದ ರಸಗೊಬ್ಬರ ವಲಯಕ್ಕೆ ಯಾರಾ ಇಂಟರ್ ನ್ಯಾಷನಲ್‌ನ ಕೊಡುಗೆಯಾಗಿರಲಿ - ಈ ಸಹಭಾಗಿತ್ವಗಳು ನಮ್ಮ ಪಾಲುದಾರಿಕೆಯನ್ನು ಬಲಪಡಿಸುತ್ತಿವೆ.ಭಾರತ-ನಾರ್ವೆ ಉದ್ಯಮ ವ್ಯವಹಾರ ಮತ್ತು ಸಂಶೋಧನಾ ಶೃಂಗಸಭೆಯಲ್ಲಿ ಪಾಲ್ಗೊಂಡ ಪ್ರಧಾನಮಂತ್ರಿ
May 18th, 08:50 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಓಸ್ಲೋದಲ್ಲಿ ನಡೆದ ಭಾರತ-ನಾರ್ವೆ ಉದ್ಯಮ ವ್ಯವಹಾರ ಮತ್ತು ಸಂಶೋಧನಾ ಶೃಂಗಸಭೆಯಲ್ಲಿ ಭಾಗವಹಿಸಿದ್ದರು. ಗೌರವಾನ್ವಿತ ರಾಜಕುಮಾರ ಹಾಕನ್ ಮತ್ತು ನಾರ್ವೆಯ ಪ್ರಧಾನಮಂತ್ರಿ ಗೌರವಾನ್ವಿತ ಜೋನಾಸ್ ಗಹರ್ ಸ್ಟೋರೆ ಕೂಡ ಶೃಂಗಸಭೆಯಲ್ಲಿ ಭಾಗವಹಿಸಿದ್ದರು.ನಾರ್ವೆ ಪ್ರಧಾನಮಂತ್ರಿಯೊಂದಿಗೆ ಪ್ರಧಾನಮಂತ್ರಿ ಅವರು ದ್ವಿಪಕ್ಷೀಯ ಮಾತುಕತೆ ನಡೆಸಿದರು
May 18th, 08:21 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಓಸ್ಲೋದಲ್ಲಿ ನಾರ್ವೆ ಪ್ರಧಾನಮಂತ್ರಿ ಗೌರವಾನ್ವಿತ ಶ್ರೀ ಜೋನಸ್ ಗಹರ್ ಸ್ಟೋರೆ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಭಾರತ ಮತ್ತು ನಾರ್ವೆ ನಡುವಿನ ನಿಕಟ ಸಂಬಂಧಗಳ ಸಂಕೇತವಾಗಿ, ಇಂದು ಬೆಳಿಗ್ಗೆ ಓಸ್ಲೋ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಧಾನಮಂತ್ರಿಯವರನ್ನು ನಾರ್ವೆ ಪ್ರಧಾನಮಂತ್ರಿ ಶ್ರೀ ಸ್ಟೋರೆ ಅವರು ಆತ್ಮೀಯವಾಗಿ ಸ್ವಾಗತಿಸಿ ಬರಮಾಡಿಕೊಂಡರು.ನಾರ್ವೆಯ ದೊರೆ ಐದನೇ ಹೆರಾಲ್ಡ್ ಅವರೊಂದಿಗೆ ಪ್ರಧಾನ ಮಂತ್ರಿಯವರ ಸಭೆ.
May 18th, 07:36 pm
ನಾರ್ವೆಯ ದೊರೆ ಐದನೇ ಹೆರಾಲ್ಡ್ ಅವರೊಂದಿಗೆ ಪ್ರಧಾನ ಮಂತ್ರಿಯವರ ಸಭೆ. ಓಸ್ಲೋದ ರಾಯಲ್ ಪ್ಯಾಲೇಸ್‌ನಲ್ಲಿ ನಾರ್ವೆಯ ಘನತೆವೆತ್ತ ರಾಜ ಹೆರಾಲ್ಡ್ V ಅವರೊಂದಿಗೆ ಪ್ರಧಾನಿ ಮೋದಿ ಸಮಾಲೋಚಿಸಿದರು, ಅಲ್ಲಿ ಇಬ್ಬರೂ ಭಾರತ-ನಾರ್ವೆ ಪಾಲುದಾರಿಕೆ ಮತ್ತು ವಿವಿಧ ಕ್ಷೇತ್ರಗಳಲ್ಲಿ, ವಿಶೇಷವಾಗಿ ಹೊಸ ತಂತ್ರಜ್ಞಾನಗಳ ಪ್ರಗತಿಯ ಬಗ್ಗೆ ಚರ್ಚಿಸಿದರು. ಸಭೆಯ ನಂತರ ಪ್ರಧಾನಿ ಮೋದಿ ಅವರ ಗೌರವಾರ್ಥವಾಗಿ ಭೋಜನ ಕೂಟವನ್ನು ಆಯೋಜಿಸಲಾಗಿತ್ತು.ರಾಯಲ್ ನಾರ್ವೇಜಿಯನ್ ಆರ್ಡರ್ ಆಫ್ ಮೆರಿಟ್ ಪ್ರಶಸ್ತಿಯ ಗ್ರ್ಯಾಂಡ್ ಕ್ರಾಸ್ ಪದಕವನ್ನು ಸ್ವೀಕರಿಸಿದ ಪ್ರಧಾನಮಂತ್ರಿ
May 18th, 07:35 pm
ಓಸ್ಲೋದಲ್ಲಿ ಆಯೋಜಿಸಲಾದ ವಿಶೇಷ ಸಮಾರಂಭದಲ್ಲಿ, ನಾರ್ವೆಯ ಮಹಾರಾಜ ಘನತೆವೆತ್ತ 5ನೇ ಹೆರಾಲ್ಡ್ ಅವರು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ 'ಗ್ರ್ಯಾಂಡ್ ಕ್ರಾಸ್ ಆಫ್ ದಿ ರಾಯಲ್ ನಾರ್ವೇಜಿಯನ್ ಆರ್ಡರ್ ಆಫ್ ಮೆರಿಟ್' ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಈ ಪ್ರಶಸ್ತಿಯು, ವಿದೇಶಿ ಸರ್ಕಾರದ ಮುಖ್ಯಸ್ಥರಿಗೆ ನೀಡಲಾಗುವ ನಾರ್ವೆಯ ಅತ್ಯುನ್ನತ ಗೌರವವಾಗಿದೆ ಮತ್ತು ನಾರ್ವೆ ಮತ್ತು ಮಾನವಕುಲದ ಹಿತಾಸಕ್ತಿಗಾಗಿ ಅತ್ಯುತ್ತಮ ಸೇವೆಯನ್ನು ಗುರುತಿಸಿ ಇದನ್ನು ನಾರ್ವೆ ಸರ್ಕಾರದಿಂದ ನೀಡಲಾಗುತ್ತದೆ.ನಾರ್ವೆ ಪ್ರಧಾನಮಂತ್ರಿ ಜತೆ ಜಂಟಿ ಪತ್ರಿಕಾ ಹೇಳಿಕೆ ಸಂದರ್ಭದಲ್ಲಿ ಪ್ರಧಾನಮಂತ್ರಿ ಪತ್ರಿಕಾ ಅವರ ಹೇಳಿಕೆ
May 18th, 04:44 pm
ಕಳೆದ ವರ್ಷ ನಾನು ನಾರ್ವೆಗೆ ಭೇಟಿ ನೀಡಬೇಕಿತ್ತು, ಆದರೆ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಿಂದಾಗಿ ಪ್ರವಾಸ ಮುಂದೂಡಬೇಕಾಯಿತು. ಆ ಕಷ್ಟದ ಸಮಯದಲ್ಲಿ, ಭಯೋತ್ಪಾದನೆಯ ವಿರುದ್ಧ ನಾರ್ವೆ ಭಾರತದೊಂದಿಗೆ ಸದೃಢವಾಗಿ ನಿಂತಿತು. ಇದು ನಮ್ಮ ಸ್ನೇಹದ ಬಲವನ್ನು ಪ್ರತಿಬಿಂಬಿಸುತ್ತದೆ. ಇಂದು ನಾನು ನಾರ್ವೆಗೆ ಭೇಟಿ ನೀಡಿರುವಾಗ ಆ ಬೆಂಬಲ ಮತ್ತು ಒಗ್ಗಟ್ಟಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ.