ಮಲೇಷ್ಯಾದಲ್ಲಿ ವ್ಯಾಪಾರೋದ್ಯಮಿಗಳ ನಾಯಕರೊಂದಿಗೆ ಪ್ರಧಾನಮಂತ್ರಿ ಅವರ ಸಭೆ
February 08th, 02:50 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮಲೇಷ್ಯಾದ ನಾಲ್ವರು ಉದ್ಯಮದ ನಾಯಕರೊಂದಿಗೆ ಸಂವಾದ ನಡೆಸಿದರು. ಅವರು ಪೆಟ್ರೋನಾಸ್‌ನ ಅಧ್ಯಕ್ಷ ಮತ್ತು ಗ್ರೂಪ್ ಸಿಇಒ ತಾನ್ ಶ್ರೀ ಟೆಂಕು ಮುಹಮ್ಮದ್ ತೌಫಿಕ್; ಟಾನ್ ಶ್ರೀ ಡಾಟೊ ಸೆರಿ ವಿನ್ಸೆಂಟ್ ಟಾನ್ ಚೀ ಯಿಯೋನ್, ಬೆರ್ಜಯಾ ಕಾರ್ಪೊರೇಷನ್ ಬರ್ಹಾದ್‌ನ ಸಂಸ್ಥಾಪಕ; ಡಾಟೊ ಅಮಿರುಲ್ ಫೈಸಲ್ ವಾನ್ ಜಹೀರ್, ಖಜಾನಾ ನ್ಯಾಷನಲ್ ಬೆರ್ಹಾದ್‌ನ ವ್ಯವಸ್ಥಾಪಕ ನಿರ್ದೇಶಕ; ಮತ್ತು ಫಿಸನ್ ಎಲೆಕ್ಟ್ರಾನಿಕ್ಸ್‌ನ ಸಂಸ್ಥಾಪಕ ಡಾಟೊ ಪುವಾ ಖೈನ್ ಸೆಂಗ್ ಅವರನ್ನು ಭೇಟಿಯಾದರು.ಭಾರತೀಯ ವಲಸಿಗರ ಗೌರವಾನ್ವಿತ ಸದಸ್ಯರೊಂದಿಗೆ ಸಂವಾದ ನಡೆಸಿದ ಪ್ರಧಾನಮಂತ್ರಿ
February 08th, 02:48 pm
ಸಚಿವರು, ಸೆನೆಟರ್‌ಗಳು, ಸಂಸತ್ ಸದಸ್ಯರು ಮತ್ತು ಆಜಾದ್ ಹಿಂದ್ ಫೌಜ್ (ಭಾರತೀಯ ರಾಷ್ಟ್ರೀಯ ಸೇನೆ-ಐ.ಎನ್.ಎ.)ಯ ಹಿರಿಯ ಯೋಧರು ಸೇರಿದಂತೆ ಆಯ್ದ ಭಾರತೀಯ ವಲಸಿಗ ನಾಯಕರೊಂದಿಗೆ ಪ್ರಧಾನಿ ಇಂದು ಸಂವಾದ ನಡೆಸಿದರು. ತುವಾನ್ ಗೋವಿಂದ್ ಸಿಂಗ್ ಡಿಯೋ, ಡಿಜಿಟಲ್ ಸಚಿವ; ದತೋ ಶ್ರೀ ರಮಣನ್ ರಾಮಕೃಷ್ಣನ್, ಮಾನವ ಸಂಪನ್ಮೂಲ ಸಚಿವ; ತುವಾನ್ ಎಂ. ಕುಲಸೆಗರನ್, ಪ್ರಧಾನ ಮಂತ್ರಿಗಳ ಇಲಾಖೆಯ ಉಪ ಮಂತ್ರಿ; ಮತ್ತು ರಾಷ್ಟ್ರೀಯ ಏಕತೆಯ ಉಪ ಸಚಿವ ತುವಾನ್ ಆರ್.ಇವರಲ್ಲಿ ಸೇರಿದ್ದಾರೆ.ಮಲೇಷ್ಯಾದ ಪ್ರಧಾನಮಂತ್ರಿ ಅವರೊಂದಿಗೆ ಅಧಿಕೃತ ಮಾತುಕತೆ ನಡೆಸಿದ ಪ್ರಧಾನಮಂತ್ರಿ ಮೋದಿ
February 08th, 11:19 am
ನಾಯಕರು ವ್ಯಾಪಕ ಚರ್ಚೆಗಳನ್ನು ನಡೆಸಿದರು ಮತ್ತು 2024ರಲ್ಲಿ ಉಭಯ ದೇಶಗಳ ನಡುವೆ ಸ್ಥಾಪಿಸಲಾದ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸಲು ಸಹಮತ ವ್ಯಕ್ತಪಡಿಸಿದರು. ಪಾಲುದಾರಿಕೆ ಮತ್ತು ಜನರ ನಡುವಿನ ನಿಕಟ ಸಂಬಂಧದಲ್ಲಿ ನೆಲೆಯೂರಿರುವ ಭಾರತ-ಮಲೇಷ್ಯಾ ಹಳೆಯ ಬಾಂಧವ್ಯವನ್ನು ಅವರು ಸ್ಮರಿಸಿದರು. ವ್ಯಾಪಾರ, ಹೂಡಿಕೆ, ರಕ್ಷಣೆ, ಭದ್ರತೆ, ಸಮುದ್ರ, ಶುದ್ಧ ಇಂಧನ, ಮೂಲಸೌಕರ್ಯ, ನವೋದ್ಯಮಗಳು, ಕೃಷಿ, ಶಿಕ್ಷಣ, ಆರೋಗ್ಯ, ಆಯುರ್ವೇದ, ಪ್ರವಾಸೋದ್ಯಮ ಮತ್ತು ಸಾಂಸ್ಕೃತಿಕ ಸಂಪರ್ಕಗಳಂತಹ ಆದ್ಯತೆಯ ಕ್ಷೇತ್ರಗಳು ಸೇರಿದಂತೆ ದ್ವಿಪಕ್ಷೀಯ ಸಂಬಂಧಗಳ ಸಂಪೂರ್ಣ ಆಯಾಮವನ್ನು ನಾಯಕರು ಪರಿಶೀಲಿಸಿದರು. ಸೆಮಿಕಂಡಕ್ಟರ್‌ಗಳು ಮತ್ತು ಕೃತಕ ಬುದ್ಧಿಮತ್ತೆಯಂತಹ ಉದಯೋನ್ಮುಖ ಕ್ಷೇತ್ರಗಳಲ್ಲಿ ಸಹಕಾರವನ್ನು ಹೆಚ್ಚಿಸುವ ಬಗ್ಗೆಯೂ ಅವರು ಚರ್ಚಿಸಿದರು. 'ದ್ವಿಪಕ್ಷೀಯ ಡಿಜಿಟಲ್ ಮಂಡಳಿ' ಮೂಲಕ ಉಭಯ ದೇಶಗಳ ನಡುವಿನ ಡಿಜಿಟಲ್ ಸಹಕಾರದ ಸ್ಥಿರ ಪ್ರಗತಿಯನ್ನು ನಾಯಕರು ಶ್ಲಾಘಿಸಿದರು. ಇದೇವೇಳೆ 'ಫಿನ್‌ಟೆಕ್' ಕ್ಷೇತ್ರದಲ್ಲಿ ಸಹಯೋಗವನ್ನು ಹೆಚ್ಚಿಸಲು 'ಯುಪಿಐ' ಮತ್ತು 'ಪೇ-ನೆಟ್' ನಡುವಿನ ಒಪ್ಪಂದವನ್ನು ಅವರು ಸ್ವಾಗತಿಸಿದರು.ಮಲೇಷ್ಯಾದಲ್ಲಿರುವ ಭಾರತೀಯ ಸಮುದಾಯವನ್ನುದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
February 07th, 03:59 pm
ನಿಮ್ಮ ಶುಭಾಶಯಗಳ ಆತ್ಮೀಯತೆಯು ನಮ್ಮ ಹಂಚಿಕೆಯ ಸಂಸ್ಕೃತಿಯ ಸುಂದರ ವೈವಿಧ್ಯತೆಯನ್ನು ಪ್ರತಿಬಿಂಬಿಸುತ್ತದೆ.ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಲೇಷ್ಯಾದ ಕೌಲಾಲಂಪುರ್ ನಲ್ಲಿ ಸಮುದಾಯ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು
February 07th, 03:15 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮಲೇಷ್ಯಾದ ಕೌಲಾಲಂಪುರ್‌ನಲ್ಲಿ ಸಮುದಾಯ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಈ ಆತ್ಮೀಯ ಸ್ವಾಗತವು ನಮ್ಮ ಹಂಚಿಕೆಯ ಸಂಸ್ಕೃತಿಯ ಸುಂದರ ವೈವಿಧ್ಯತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು. ಈ ಸಮುದಾಯ ಸಂಭ್ರಮಾಚರಣೆಯಲ್ಲಿ ಭಾಗವಹಿಸಿದ್ದಕ್ಕಾಗಿ ಅವರು ತಮ್ಮ ಆತ್ಮೀಯ ಮಿತ್ರರಾದ ಪ್ರಧಾನಮಂತ್ರಿ ಅನ್ವರ್ ಇಬ್ರಾಹಿಂ ಅವರಿಗೆ ಧನ್ಯವಾದ ಅರ್ಪಿಸಿದರು. ಪ್ರಧಾನಮಂತ್ರಿ ಅನ್ವರ್ ಇಬ್ರಾಹಿಂ ಅವರು ವಿಮಾನ ನಿಲ್ದಾಣಕ್ಕೆ ಬಂದು ತಮ್ಮನ್ನು ಸ್ವಾಗತಿಸಿ, ತಮ್ಮ ಕಾರಿನಲ್ಲೇ ಈ ಕಾರ್ಯಕ್ರಮಕ್ಕೆ ಕರೆತಂದಿದ್ದನ್ನು ಅವರು ಸ್ಮರಿಸಿದರು. ಈ ವಿಶೇಷ ಸನ್ನೆಗಳು ಭಾರತದ ಮೇಲೆ ಮತ್ತು ಇಲ್ಲಿ ಉಪಸ್ಥಿತರಿರುವ ಜನರ ಮೇಲೆ ಪ್ರಧಾನಮಂತ್ರಿ ಅನ್ವರ್ ಇಬ್ರಾಹಿಂ ಅವರಿಗಿರುವ ಪ್ರೀತಿ ಮತ್ತು ಗೌರವವನ್ನು ಪ್ರತಿಬಿಂಬಿಸುತ್ತವೆ ಎಂದು ಶ್ರೀ ಮೋದಿ ಸೇರಿಸಿದರು.ಕೌಲಾಲಂಪುರಕ್ಕೆ ಆಗಮಿಸಿದ ಪ್ರಧಾನಮಂತ್ರಿ ಅವರನ್ನು ಮಲೇಷ್ಯಾ ಪ್ರಧಾನಮಂತ್ರಿ ಸ್ವಾಗತಿಸಿ ಬರಮಾಡಿಕೊಂಡರು
February 07th, 02:30 pm
ಮಲೇಷ್ಯಾ ಪ್ರಧಾನಮಂತ್ರಿ ಗೌರವಾನ್ವಿತ ಡಾಟೋ’ಸೆರಿ ಅನ್ವರ್ ಇಬ್ರಾಹಿಂ ಅವರ ಆಹ್ವಾನದ ಮೇರೆಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಫೆಬ್ರವರಿ 7-8, 2026 ರಂದು ಮಲೇಷ್ಯಾಕ್ಕೆ ಈ ಭೇಟಿ ನೀಡುತ್ತಿದ್ದಾರೆ. 2015 ರಿಂದ ಇದು ಪ್ರಧಾನಮಂತ್ರಿ ಅವರ ಮಲೇಷ್ಯಾಕ್ಕೆ ಮೂರನೇ ಭೇಟಿಯಾಗಿದೆ.ಮಲೇಷ್ಯಾ ಭೇಟಿಗೂ ಮುನ್ನ ಪ್ರಧಾನಮಂತ್ರಿ ಅವರ ನಿರ್ಗಮನದ ಹೇಳಿಕೆ
February 07th, 08:45 am
ಮಲೇಷ್ಯಾ ಪ್ರಧಾನಮಂತ್ರಿ, ನನ್ನ ಸ್ನೇಹಿತ ಅನ್ವರ್ ಇಬ್ರಾಹಿಂ ಅವರ ಆಹ್ವಾನದ ಮೇರೆಗೆ ನಾನು ಇಂದು ಮಲೇಷ್ಯಾಕ್ಕೆ ಅಧಿಕೃತ ಭೇಟಿ ನೀಡುತ್ತಿದ್ದೇನೆ.ಮಲೇಷ್ಯಾದ ಕೌಲಾಲಂಪುರಕ್ಕೆ ಗೌರವಾನ್ವಿತ ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಅಧಿಕೃತ ಭೇಟಿ
February 04th, 04:17 pm
ಮಲೇಷ್ಯಾದ ಪ್ರಧಾನಿ ಅನ್ವರ್ ಇಬ್ರಾಹಿಂ ಅವರ ಆಹ್ವಾನದ ಮೇರೆಗೆ, ಪ್ರಧಾನಿ ಮೋದಿ ಅವರು ಫೆಬ್ರವರಿ 7–8, 2026 ರವರೆಗೆ ಮಲೇಷ್ಯಾಕ್ಕೆ ಭೇಟಿ ನೀಡಲಿದ್ದಾರೆ. ಭೇಟಿಯ ಸಮಯದಲ್ಲಿ, ಪ್ರಧಾನಿಯವರು ಮಲೇಷ್ಯಾದ ಪ್ರಧಾನಿಯೊಂದಿಗೆ ದ್ವಿಪಕ್ಷೀಯ ಚರ್ಚೆಗಳನ್ನು ನಡೆಸಲಿದ್ದಾರೆ ಮತ್ತು ದ್ವಿಪಕ್ಷೀಯ ಸಹಕಾರದ ಸಂಪೂರ್ಣ ವ್ಯಾಪ್ತಿಯನ್ನು ಪರಿಶೀಲಿಸಲಿದ್ದಾರೆ. ಅವರು ಭಾರತೀಯ ಸಮುದಾಯದ ಸದಸ್ಯರು, ಕೈಗಾರಿಕೆ ಮತ್ತು ವ್ಯಾಪಾರ ಪ್ರತಿನಿಧಿಗಳೊಂದಿಗೆ ಸಂವಹನ ನಡೆಸಲಿದ್ದಾರೆ ಮತ್ತು 10 ನೇ ಭಾರತ-ಮಲೇಷ್ಯಾ ಸಿಇಒ ವೇದಿಕೆಯಲ್ಲಿ ಭಾಗವಹಿಸಲಿದ್ದಾರೆ.ಪ್ರಧಾನ ಮಂತ್ರಿ ಮೋದಿಯವರಿಂದ ಮಲೇಷಿಯಾದ ಪ್ರಧಾನಿ ಮಹಾತಿರ್ ಮೊಹಮದ್ ಭೇಟಿ
May 31st, 09:51 am
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮಲೇಷಿಯಾದ ಪ್ರಧಾನಿ ಮಹಾತೀರ್ ಮೊಹಮದ್ ಅವರೊಂದಿಗೆ ಮಾತುಕತೆ ನಡೆಸಿದರು. ಭಾರತ-ಮಲೇಷಿಯಾ ಸಂಬಂಧಗಳ ವಿವಿಧ ಅಂಶಗಳ ಬಗ್ಗೆ ನಾಯಕರು ಚರ್ಚಿಸಿದ್ದಾರೆ.ಮಲೇಷಿಯಾದ ಕೌಲಾಲಂಪುರ್ ಗೆ ಪ್ರಧಾನಿ ಮೋದಿ ಆಗಮನ
May 31st, 09:42 am
ಪ್ರಧಾನಿ ಮೋದಿ ಮಲೇಷ್ಯಾದಲ್ಲಿ ಕೌಲಾಲಂಪುರ್ ಗೆ ಆಗಮಿಸಿದರು. ಅವರು ಪ್ರಧಾನಮಂತ್ರಿ ಮಹಾತೀರ್ ಮೊಹಮದ್ ಅವರನ್ನು ಭೇಟಿಯಾಗಲಿದ್ದಾರೆ ಮತ್ತು ಭಾರತ-ಮಲೇಷಿಯಾ ಸಹಕಾರಕ್ಕೆ ಸಂಬಂಧಿಸಿದ ಅಂಶಗಳನ್ನು ಚರ್ಚಿಸುತ್ತಿದ್ದಾರೆ.ಇಂಡೋನೇಷಿಯಾ, ಮಲೇಷಿಯಾ ಮತ್ತು ಸಿಂಗಾಪುರ ಪ್ರವಾಸಕ್ಕೆ ಹೊರಡುವ ಮೊದಲು ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಹೇಳಿಕೆ
May 28th, 10:05 pm
ಇಂಡೋನೇಷಿಯಾ, ಮಲೇಷಿಯಾ ಮತ್ತು ಸಿಂಗಾಪುರ ಪ್ರವಾಸಕ್ಕೆ ಹೊರಡುವ ಮೊದಲು ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ನೀಡಿದ ಹೇಳಿಕೆಯ ಪೂರ್ಣಪಾಠPM Modi inaugurates Torana Gate, holds bilateral meeting with PM Razak of Malaysia
November 23rd, 05:40 pm
Joint Statement on enhanced Malaysia-India Strategic Partnership (November 23, 2015)
November 23rd, 05:33 pm
PM Narendra Modi inaugurates the Torana Gate with PM Najib Razak in Malaysia
November 23rd, 11:49 am
PM Modi receives ceremonial welcome at Putrajaya, Malaysia
November 23rd, 09:00 am
India is not just united, but draws strength from its diversity: PM Narendra Modi in Malaysia
November 22nd, 05:11 pm
Vivekananda is not just a name. He personifies the thousands year old Indian culture & civilization: PM Narendra Modi in Malaysia
November 22nd, 05:08 pm
Day 1: PM Modi attends ASEAN Summit, holds bilateral talks with Chinese & Japanese counterparts in Malaysia
November 21st, 08:15 pm
Our prosperity rests on foundation of security & stability in our region, oceans, outer space & cyber world: PM at ASEAN-India Summit
November 21st, 01:36 pm
PM Modi Meets Japanese Prime Minister Shinzo Abe at Kuala Lumpur
November 21st, 12:45 pm