ಪ್ರಧಾನಮಂತ್ರಿ ಅವರು ಆಸ್ಟ್ರೇಲಿಯಾದ ಗವರ್ನರ್ ಜನರಲ್ ಅವರನ್ನು ಭೇಟಿ ಮಾಡಿದರು

July 09th, 01:55 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮೆಲ್ಬೋರ್ನ್ ನಲ್ಲಿ ಆಸ್ಟ್ರೇಲಿಯಾದ ಗವರ್ನರ್ ಜನರಲ್ ಗೌರವಾನ್ವಿತ ಸ್ಯಾಮ್ ಮೋಸ್ಟಿನ್ ಎಸಿ ಅವರನ್ನು ಭೇಟಿ ಮಾಡಿದರು.

ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ ಪ್ರಂಬನನ್ ದೇವಾಲಯ ಸಂಕೀರ್ಣಕ್ಕೆ ಪ್ರಧಾನಮಂತ್ರಿ ಭೇಟಿ

July 08th, 01:46 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಯೋಗ್ಯಕರ್ತಾದಲ್ಲಿರುವ ಯುನೆಸ್ಕೋ ವಿಶ್ವ ಪಾರಂಪರಿಕ ತಾಣ ಪ್ರಂಬನನ್ ದೇವಾಲಯ ಸಂಕೀರ್ಣಕ್ಕೆ ಭೇಟಿ ನೀಡಿದರು. ವಿಶೇಷ ಗೌರವಾರ್ಥವಾಗಿ ಇಂಡೋನೇಷ್ಯಾದ ಅಧ್ಯಕ್ಷರಾದ ಘನತೆವೆತ್ತ ಶ್ರೀ ಪ್ರಬೋವೊ ಸುಬಿಯಾಂಟೊ ಅವರು ಪ್ರಧಾನಮಂತ್ರಿಯವರೊಂದಿಗೆ ದೇವಾಲಯ ಭೇಟಿಗೆ ಜೊತೆಯಾದರು. ಉಭಯ ನಾಯಕರು ದೇವಾಲಯ ಸಂಕೀರ್ಣದಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎ.ಎಸ್.ಐ.) ಸಂರಕ್ಷಣೆ ಮತ್ತು ಪುನಃಸ್ಥಾಪನೆ ಯೋಜನೆಯ ಆರಂಭದ ಸಂಕೇತವಾಗಿ ಫಲಕವನ್ನು ಅನಾವರಣ ಮಾಡಿದರು.

ಇಂಡೋನೇಷ್ಯಾದಲ್ಲಿ ನಡೆದ ಸಮುದಾಯ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

July 07th, 11:47 pm

ಇಂಡೋನೇಷ್ಯಾದಲ್ಲಿ ನಡೆದ ಈ ಮೂರು ಕಾರ್ಯಕ್ರಮಗಳಲ್ಲೂ 'ಪಂದ್ಯ ಶ್ರೇಷ್ಠ' ಪ್ರಶಸ್ತಿ ಒಂದೇ ಆಗಿತ್ತು - ನೀವೆಲ್ಲರೂ ಇಂಡೋನೇಷ್ಯಾದಲ್ಲಿ ವಾಸಿಸುತ್ತಿದ್ದೀರಿ. ನಿಮ್ಮಲ್ಲಿ ಪ್ರತಿಯೊಬ್ಬರೂ ನಿಜವಾದ 'ಪಂದ್ಯ ಶ್ರೇಷ್ಠರು'!

ಜಕಾರ್ತದಲ್ಲಿ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಭಾಷಣ ಮಾಡಿದ ಪ್ರಧಾನಮಂತ್ರಿ

July 07th, 05:30 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜಕಾರ್ತದಲ್ಲಿಂದು ನಡೆದ ಅನಿವಾಸಿ ಭಾರತೀಯ ಸಮುದಾಯದ ಸ್ವಾಗತ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮಕ್ಕೆ ಆಗಮಿಸಿದ ಅವರಿಗೆ, ಅನಿವಾಸಿ ಭಾರತೀಯರು ಮತ್ತು ಭಾರತದ ಇಂಡೋನೇಷ್ಯಾದ ಸ್ನೇಹಿತರು ದೊಡ್ಡ ಸಂಖ್ಯೆಯಲ್ಲಿ ಸೇರಿ ಆತ್ಮೀಯ ಮತ್ತು ಉತ್ಸಾಹಭರಿತ ಸ್ವಾಗತ ನೀಡಿದರು. ವಿಶೇಷ ಗೌರವದ ಸಂಕೇತವಾಗಿ ಇಂಡೋನೇಷ್ಯಾ ಗಣರಾಜ್ಯದ ಅಧ್ಯಕ್ಷರಾದ ಗೌರವಾನ್ವಿತ ಶ್ರೀ ಪ್ರಬೋವೊ ಸುಬಿಯಾಂಟೊ ಅವರು ಕೂಡ ಈ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಯವರೊಂದಿಗೆ ಪಾಲ್ಗೊಂಡರು.

India-Indonesia Joint Statement on the State Visit by Prime Minister of India to Indonesia

July 07th, 05:15 pm

At the invitation of Indonesian President Prabowo Subianto, PM Modi is on a State Visit to Indonesia from 6-8 July 2026. PM Modi's visit reflects the shared commitment of the two leaders to achieve a substantial upward trajectory in the India-Indonesia Comprehensive Strategic Partnership. The two leaders held discussions at Istana Merdeka in Jakarta, covering the full spectrum of bilateral relations.

ಇಂಡೋನೇಷ್ಯಾದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ 'ಇಂಡೋನೇಷ್ಯಾ ಗಣರಾಜ್ಯದ ಬಿಂಟಾಂಗ್ ಆದಿಪೂರ್ಣ'ವನ್ನು ಆ ದೇಶದ ರಾಷ್ಟ್ರಾಧ್ಯಕ್ಷರು ಪ್ರಧಾನಮಂತ್ರಿ ಅವರಿಗೆ ಪ್ರದಾನ ಮಾಡಿದರು

July 07th, 03:27 pm

ಇಂಡೋನೇಷ್ಯಾ ಅಧ್ಯಕ್ಷರಾದ ಘನತೆವೆತ್ತ ಶ್ರೀ ಪ್ರಬೋವೊ ಸುಬಿಯಾಂಟೊ ಅವರು ಇಂದು 'ಇಂಡೋನೇಷ್ಯಾ ಗಣರಾಜ್ಯದ ಬಿಂಟಾಂಗ್ ಆದಿಪೂರ್ಣ' ಪದಕದವನ್ನು ಗೌರವಪೂರ್ಣವಾಗಿ ಪ್ರಧಾನಮಂತ್ರಿಯವರಿಗೆ ಪ್ರದಾನ ಮಾಡಿದರು. ಈ ಪ್ರಶಸ್ತಿಯು ಇಂಡೋನೇಷ್ಯಾ ಗಣರಾಜ್ಯದ ಅತ್ಯುನ್ನತ ನಾಗರಿಕ ಗೌರವವಾಗಿದೆ. ಭಾರತ-ಇಂಡೋನೇಷ್ಯಾ ಸಂಬಂಧಗಳನ್ನು ಬಲಪಡಿಸುವಲ್ಲಿ ಪ್ರಧಾನಮಂತ್ರಿಯವರ ನಾಯಕತ್ವ ಮತ್ತು ಅಸಾಧಾರಣ ಕೊಡುಗೆಗಾಗಿ ಇದನ್ನು ಪ್ರಧಾನಮಂತ್ರಿಯವರಿಗೆ ನೀಡಲಾಯಿತು. ಪ್ರಧಾನಮಂತ್ರಿಯವರು ಈ ಪ್ರಶಸ್ತಿಯನ್ನು ಭಾರತ ಮತ್ತು ಇಂಡೋನೇಷ್ಯಾ ಜನರಿಗೆ ಮತ್ತು ಎರಡೂ ದೇಶಗಳ ನಡುವಿನ ಶಾಶ್ವತ ನಾಗರಿಕ ಸಂಬಂಧಗಳಿಗೆ ಅರ್ಪಿಸಿದ್ದಾರೆ.

ಇಂಡೋನೇಷ್ಯಾದ ಸಂಸತ್ ಉದ್ದೇಶಿಸಿ ಪ್ರಧಾನಮಂತ್ರಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

July 07th, 03:15 pm

ಇಂಡೋನೇಷ್ಯಾದ ಜನರು - ಅದರ ಮಕ್ಕಳು, ಯುವಕರು ಮತ್ತು ಮಹಿಳೆಯರು - ಇಂದಿನ ದಿನವನ್ನು ನನ್ನ ಜೀವನದ ಅತ್ಯಂತ ಸ್ಮರಣೀಯ ದಿನಗಳಲ್ಲಿ ಒಂದನ್ನಾಗಿ ಮಾಡಿದ್ದಾರೆ. ಇಂದು ಬೆಳಿಗ್ಗೆ ಇಂಡೋನೇಷ್ಯಾದ ಜನರಿಂದ ನನಗೆ ದೊರೆತ ಆತ್ಮೀಯ, ಪ್ರೀತಿಯ ಮತ್ತು ಅದ್ದೂರಿ ಸ್ವಾಗತವನ್ನು ನಾನು ಎಂದಿಗೂ ಸ್ಮರಿಸುತ್ತೇನೆ. ಇಂದು ಮುಂಜಾನೆ, ಅಧ್ಯಕ್ಷ ಪ್ರಬೋವೊ ಹಕ್ಕುಸ್ವಾಮ್ಯದ ಬಗ್ಗೆ ಮಾತನಾಡಿದರು. ಪ್ರೀತಿ, ವಾತ್ಸಲ್ಯ, ಸ್ನೇಹ ಅಥವಾ ಪರಸ್ಪರ ಗೌರವದ ಮೇಲೆ ಯಾರೂ ಹಕ್ಕುಸ್ವಾಮ್ಯವನ್ನು ಪಡೆಯಲು ಸಾಧ್ಯವಿಲ್ಲ ಎಂದು ನಾನು ಅವರಿಗೆ ಹೇಳಲು ಬಯಸುತ್ತೇನೆ. ಅಧ್ಯಕ್ಷ ಪ್ರಬೋವೊ ಅವರೊಂದಿಗಿನ ನನ್ನ ಸ್ನೇಹವು ಹಕ್ಕುಸ್ವಾಮ್ಯದ ಎಲ್ಲಾ ಗಡಿಗಳನ್ನು ಮೀರಿದೆ.

ಇಂಡೋನೇಷ್ಯಾ ಸಂಸತ್ತನ್ನು ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

July 07th, 03:00 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಜಕಾರ್ತದಲ್ಲಿ ಇಂಡೋನೇಷ್ಯಾ ಸಂಸತ್ತನ್ನುದ್ದೇಶಿಸಿ ಭಾಷಣ ಮಾಡಿದರು. ಇಂಡೋನೇಷ್ಯಾ ಸಂಸತ್ತನ್ನು ಉದ್ದೇಶಿಸಿ ಭಾಷಣ ಮಾಡಿದ ಭಾರತದ ಮೊದಲ ಪ್ರಧಾನಮಂತ್ರಿ ಅವರಾಗಿದ್ದಾರೆ.

ಇಂಡೋನೇಷ್ಯಾದ ಅಧ್ಯಕ್ಷರೊಂದಿಗೆ ಪ್ರಧಾನಮಂತ್ರಿ ಅವರ ಅಧಿಕೃತ ಮಾತುಕತೆ

July 07th, 02:51 pm

ಇಂಡೋನೇಷ್ಯಾ ದೇಶಕ್ಕೆ ತಮ್ಮ ಅಧಿಕೃತ ಪ್ರವಾಸದ ಭಾಗವಾಗಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಇಂದು ಇಂಡೋನೇಷ್ಯಾ ಗಣರಾಜ್ಯದ ಅಧ್ಯಕ್ಷರಾದ ಗೌರವಾನ್ವಿತ ಶ್ರೀ ಪ್ರಬೊವೊ ಸುಬಿಯಾಂತೊ ಅವರು ಇಸ್ತಾನಾ ಮೆರ್ಡೆಕಾ (ಅಧ್ಯಕ್ಷರ ಭವನ) ದಲ್ಲಿ ಆತ್ಮೀಯವಾಗಿ ಬರಮಾಡಿಕೊಂಡು, ಔಪಚಾರಿಕ ಸ್ವಾಗತವನ್ನು ನೀಡಿದರು. ಜನವರಿ 2025 ರಲ್ಲಿ ಭಾರತದ 76ನೇ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಅಧ್ಯಕ್ಷ ಪ್ರಬೊವೊ ಅವರು ಭಾರತಕ್ಕೆ ಭೇಟಿ ನೀಡಿದ ನಂತರ, ಉಭಯ ನಾಯಕರ ನಡುವೆ ನಡೆದ ಮೊದಲ ಭೇಟಿ ಇದಾಗಿದೆ.

ಪ್ರಧಾನಮಂತ್ರಿಯವರ ಇಂಡೋನೇಷ್ಯಾ ಭೇಟಿಯ ಫಲಪ್ರದತೆಯ ವಿವರ

July 07th, 01:03 pm

ಶಾಂತಿಯುತ ಉದ್ದೇಶಕ್ಕಾಗಿ ಬಾಹ್ಯಾಕಾಶ ಬಳಕೆ ಮತ್ತು ಶೋಧನೆಯ ಸಹಕಾರಕ್ಕಾಗಿ ನೀತಿ ಚೌಕಟ್ಟು ಒಪ್ಪಂದದ ವಿಸ್ತರಣೆ

ಇಂಡೋನೇಷ್ಯಾ ಅಧ್ಯಕ್ಷರೊಂದಿಗೆ ಜಂಟಿ ಪತ್ರಿಕಾ ಹೇಳಿಕೆಯ ಸಂದರ್ಭದಲ್ಲಿ ಪ್ರಧಾನಮಂತ್ರಿಯವರ ಪತ್ರಿಕಾ ಹೇಳಿಕೆಯ ಕನ್ನಡ ಅನುವಾದ

July 07th, 11:21 am

2018ರಲ್ಲಿ ಸ್ಥಾಪನೆಯಾದ ನಮ್ಮ ʻಸಮಗ್ರ ಕಾರ್ಯತಂತ್ರದ ಸಹಭಾಗಿತ್ವʼವು ಇಂದು ಹೊಸ ಎತ್ತರವನ್ನು ತಲುಪುತ್ತಿದೆ. ಅಭಿವೃದ್ಧಿ, ಭದ್ರತೆ, ತಂತ್ರಜ್ಞಾನ, ಸಂಸ್ಕೃತಿ ಮತ್ತು ಶಿಕ್ಷಣ ಸೇರಿದಂತೆ ಸಹಕಾರದ ಪ್ರತಿಯೊಂದು ಕ್ಷೇತ್ರದಲ್ಲೂ ನಾವು ಗಮನಾರ್ಹ ದಾಪುಗಾಲು ಹಾಕುತ್ತಿದ್ದೇವೆ.

ಜಕಾರ್ತಕ್ಕೆ ಆಗಮಿಸಿದ ಪ್ರಧಾನಿ ಮೋದಿ

July 06th, 05:03 pm

ಇಂಡೋನೇಷ್ಯಾದ ಜಕಾರ್ತಕ್ಕೆ ಪ್ರಧಾನಿ ಮೋದಿ ಆಗಮಿಸಿದರು. ಸ್ವಾಗತಾರ್ಹ ಸೂಚಕದಲ್ಲಿ, ಅಧ್ಯಕ್ಷ ಪ್ರಬೋವೊ ಸುಬಿಯಾಂಟೊ ಅವರು ಪ್ರಧಾನಿ ಮೋದಿ ಅವರನ್ನು ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡರು.

ಇಂಡೋನೇಷ್ಯಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ಗೆ ಮೂರು ರಾಷ್ಟ್ರಗಳ ಅಧಿಕೃತ ಭೇಟಿಗೆ ತೆರಳುವ ಮುನ್ನ ಪ್ರಧಾನಮಂತ್ರಿ ಅವರ ಹೇಳಿಕೆ

July 06th, 09:00 am

ಇಂಡೋನೇಷ್ಯಾ ಗಣತಂತ್ರದ ಅಧ್ಯಕ್ಷ ಘನತೆವೆತ್ತ ಶ್ರೀ ಪ್ರಬೊವೊ ಸುಬಿಯಾಂಟೊ ಅವರ ಆಹ್ವಾನದ ಮೇರೆಗೆ ನಾನು ಜುಲೈ 6-8ರವರೆಗೆ ಇಂಡೋನೇಷ್ಯಾಕ್ಕೆ ಭೇಟಿ ನೀಡುತ್ತಿದ್ದೇನೆ. 2018ರಲ್ಲಿ ನಾನು ಇಂಡೋನೇಷ್ಯಾಕ್ಕೆ ನೀಡಿದ ಮೊದಲ ಭೇಟಿಯ ಸಂದರ್ಭದಲ್ಲಿ ಭಾರತ ಮತ್ತು ಇಂಡೋನೇಷ್ಯಾ ನಡುವಿನ ದ್ವಿಪಕ್ಷೀಯ ಸಂಬಂಧಗಳನ್ನು ಸಮಗ್ರ ಕಾರ್ಯತಂತ್ರದ ಸಹಭಾಗಿತ್ವದ ಮಟ್ಟಕ್ಕೆ ಏರಿಸಲಾಗಿತ್ತು. ನಮ್ಮ ದ್ವಿಪಕ್ಷೀಯ ಸಂಬಂಧಗಳ ಉನ್ನತಿಯ ನಂತರ ಇದು ನನ್ನ ಮೊದಲ ದ್ವಿಪಕ್ಷೀಯ ಭೇಟಿಯಾಗಿದೆ. 2025ರ ಜನವರಿ 26ರಂದು ನಮ್ಮ ಗಣರಾಜ್ಯೋತ್ಸವ ಆಚರಣೆಯಲ್ಲಿ ಮುಖ್ಯ ಅತಿಥಿಯಾಗಿದ್ದ ಅಧ್ಯಕ್ಷ ಪ್ರಬೋವೊ ಅವರ ಅಧಿಕೃತ ಭಾರತ ಭೇಟಿಯ ನಂತರ ಇದು ನನ್ನ ಮೊದಲ ದ್ವಿಪಕ್ಷೀಯ ಭೇಟಿಯಾಗಿದೆ. ಭಾರತ ಮತ್ತು ಇಂಡೋನೇಷ್ಯಾ ಬಲವಾದ ನಾಗರಿಕ ಮತ್ತು ಜನ ಸಂಬಂಧಗಳನ್ನು ಹಂಚಿಕೊಂಡಿವೆ. ನನ್ನ ಭೇಟಿಯು ನಮ್ಮ ಬಹುಮುಖಿ ಪಾಲುದಾರಿಕೆಯ ಎಲ್ಲಾ ಅಂಶಗಳನ್ನು ಮತ್ತಷ್ಟು ಗಾಢಗೊಳಿಸುತ್ತದೆ. ಈ ಭೇಟಿಯ ಸಮಯದಲ್ಲಿ, ನಾನು ಇಂಡೋನೇಷ್ಯಾದಲ್ಲಿರುವ ಭಾರತೀಯ ವಲಸಿಗರೊಂದಿಗೆ ಸಂವಾದ ನಡೆಸುತ್ತೇನೆ ಮತ್ತು ಅಧ್ಯಕ್ಷ ಪ್ರಬೋವೊ ಅವರೊಂದಿಗೆ ಯೋಗ್ಯಕರ್ತಾದಲ್ಲಿರುವ ಪ್ರಂಬನನ್ ದೇವಾಲಯ ಸಂಕೀರ್ಣಕ್ಕೆ ಭೇಟಿ ನೀಡಲಿದ್ದೇನೆ. ಈ ದೇವಾಲಯವು ನಮ್ಮ ನಿಕಟ ಸಾಂಸ್ಕೃತಿಕ ಸಂಬಂಧಗಳಿಗೆ ಮತ್ತೊಂದು ಗಮನಾರ್ಹ ಸಾಕ್ಷಿಯಾಗಿದೆ.

18ನೇ ಪೂರ್ವ ಏಷ್ಯಾ ಶೃಂಗಸಭೆ ಉದ್ದೇಶಿಸಿ ಪ್ರಧಾನ ಮಂತ್ರಿ ಭಾಷಣ

September 07th, 01:28 pm

ಮತ್ತೊಮ್ಮೆ ಪೂರ್ವ ಏಷ್ಯಾ ಶೃಂಗಸಭೆಯಲ್ಲಿ ಭಾಗವಹಿಸುತ್ತಿರುವುದಕ್ಕೆ ನನಗೆ ಅತೀವ ಸಂತೋಷವಾಗಿದೆ. ಅಧ್ಯಕ್ಷ ವಿಡೊಡೊ ಅವರ ಅತ್ಯುತ್ತಮ ನಾಯಕತ್ವಕ್ಕಾಗಿ ನಾನು ನನ್ನ ಪ್ರಾಮಾಣಿಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಹೆಚ್ಚುವರಿಯಾಗಿ, ನಾನು ವೀಕ್ಷಕರಾಗಿ ಆಗಮಿಸಿರುವ ಟಿಮೋರ್-ಲೆಸ್ಟೆಯ ಪ್ರಧಾನ ಮಂತ್ರಿ ಕ್ಸಾನಾನಾ ಗುಸ್ಮಾವೊ ಅವರನ್ನು ಈ ಸಭೆಯಲ್ಲಿ ಪ್ರೀತಿಯಿಂದ ಸ್ವಾಗತಿಸುತ್ತೇನೆ.

20ನೇ ಆಸಿಯಾನ್- ಭಾರತ ಶೃಂಗಸಭೆ ಮತ್ತು 18ನೇ ಪೂರ್ವ ಏಷ್ಯಾ ಶೃಂಗಸಭೆಯಲ್ಲಿ ಪ್ರಧಾನಮಂತ್ರಿ ಭಾಗಿ

September 07th, 11:47 am

ಆಸಿಯಾನ್-ಭಾರತ ಶೃಂಗಸಭೆಯಲ್ಲಿ ಪ್ರಧಾನಮಂತ್ರಿ ಅವರು ಆಸಿಯಾನ್-ಭಾರತದ ಸಮಗ್ರ ಕಾರ್ಯತಂತ್ರ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವ ಮತ್ತು ಅದರ ಭವಿಷ್ಯದ ದಿಕ್ಕನ್ನು ರೂಪಿಸುವ ಕುರಿತು ಆಸಿಯಾನ್ ಪಾಲುದಾರರೊಂದಿಗೆ ವಿಸ್ತೃತ ಚರ್ಚೆ ನಡೆಸಿದರು. ಪ್ರಧಾನಮಂತ್ರಿ ಅವರು, ಇಂಡೋ-ಪೆಸಿಫಿಕ್ ನಲ್ಲಿ ಆಸಿಯಾನ್ ಕೇಂದ್ರೀಯತೆಯನ್ನು ಪುನರುಚ್ಚರಿಸಿದರು ಮತ್ತು ಭಾರತ ಇಂಡೋ-ಪೆಸಿಫಿಕ್ ಸಾಗರ ಉಪಕ್ರಮ (ಐಪಿಒಐ) ಮತ್ತು ಇಂಡೋ-ಪೆಸಿಫಿಕ್ ಕುರಿತು ಆಸಿಯಾನ್ ಆಮಾಯದ ಸಮನ್ವಯತೆಯನ್ನು ಪ್ರಮುಖವಾಗಿ ಪ್ರಸ್ತಾಪಿಸಿದರು. ಆಸಿಯಾನ್- ಭಾರತ ಎಫ್ ಟಿಎ (ಎಐಟಿಐಜಿಎ) ಯ ಪರಿಶೀಲನೆಯನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸುವ ಅಗತ್ಯತೆಯನ್ನು ಬಲವಾಗಿ ಪ್ರತಿಪಾಸಿದರು.

ಪ್ರಧಾನಮಂತ್ರಿ ಅವರು 20ನೇ ಆಸಿಯಾನ್ – ಭಾರತ ಶೃಂಗಸಭೆಯನ್ನುದ್ದೇಶಿಸಿ ಮಾಡಿದ ಆರಂಭಿಕ ಭಾಷಣದ ಆಂಗ್ಲ ಅನುವಾದ

September 07th, 10:39 am

ಆ ನಿಟ್ಟಿನಲ್ಲಿ ಭಾರತ – ಆಸಿಯಾನ್ ಶೃಂಗಸಭೆಯ ಸಹ ಅಧ್ಯಕ್ಷತೆಯನ್ನು ವಹಿಸುತ್ತಿರುವುದು ನನಗೆ ಹೆಮ್ಮೆ ಎನಿಸುತ್ತಿದೆ.

ಇಂಡೋನೇಷ್ಯಾದ ಜಕಾರ್ತಕ್ಕೆ ಆಗಮಿಸಿದ ಪ್ರಧಾನಿ ಮೋದಿ

September 07th, 06:58 am

ಪ್ರಧಾನಿ ನರೇಂದ್ರ ಮೋದಿ ಅವರು ಇಂಡೋನೇಷ್ಯಾದ ಜಕಾರ್ತಕ್ಕೆ ಆಗಮಿಸಿದ್ದಾರೆ. ಅವರು ಆಸಿಯಾನ್-ಭಾರತ ಶೃಂಗಸಭೆ ಮತ್ತು ಪೂರ್ವ ಏಷ್ಯಾ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಅವರ ಆಗಮನದ ನಂತರ, ಜಕಾರ್ತದಲ್ಲಿ ಭಾರತೀಯ ಸಮುದಾಯದಿಂದ ಪ್ರಧಾನಿ ಅವರನ್ನು ಆತ್ಮೀಯವಾಗಿ ಸ್ವಾಗತಿಸಲಾಯಿತು.

Prime Minister's meeting with the Prime Minister of the United Kingdom on the sidelines of G-20 Summit in Bali

November 16th, 03:54 pm

Prime Minister Narendra Modi met Rt. Hon. Rishi Sunak, Prime Minister of the United Kingdom on the sidelines of the G-20 Summit in Bali. The two leaders expressed satisfaction at the state of the wide-ranging India-UK Comprehensive Strategic Partnership and progress on the Roadmap 2030 for Future Relations.

ಬಾಲಿಯಲ್ಲಿ ಜಿ-20 ಶೃಂಗಸಭೆಯ ವೇಳೆ ಅಮೆರಿಕದ ಅಧ್ಯಕ್ಷರು ಮತ್ತು ಇಂಡೋನೇಷಿಯಾ ಅಧ್ಯಕ್ಷರೊಂದಿಗೆ ಪ್ರಧಾನಮಂತ್ರಿಯವರ ಸಭೆ

November 15th, 10:12 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬಾಲಿಯಲ್ಲಿಂದು ಜಿ-20 ನಾಯಕರ ಶೃಂಗಸಭೆಯ ವೇಳೆ ಅಮೆರಿಕದ ಅಧ್ಯಕ್ಷ ಮಾನ್ಯ ಶ್ರೀ ಜೋಸೆಫ್ ಆರ್. ಬಿಡೆನ್ ಮತ್ತು ಇಂಡೋನೇಷಿಯಾ ಅಧ್ಯಕ್ಷ ಮಾನ್ಯ ಶ್ರೀ ಜೋಕೋ ವಿಡೋಡೋ ಅವರನ್ನು ಭೇಟಿ ಮಾಡಿದರು.

ಇಂಡೋನೇಷ್ಯಾದ ಬಾಲಿಗೆ ಪ್ರಧಾನಿ ಮೋದಿ ಆಗಮನ

November 14th, 08:17 pm

ಪ್ರಧಾನಿ ನರೇಂದ್ರ ಮೋದಿ ಅವರು ಇಂಡೋನೇಷ್ಯಾದ ಬಾಲಿಗೆ ಆಗಮಿಸಿದ್ದಾರೆ. ಅವರು ಜಿ20 ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ. ತಮ್ಮ ಭೇಟಿಯ ಸಮಯದಲ್ಲಿ, ಪ್ರಧಾನಿ ಹಲವಾರು ವಿಶ್ವ ನಾಯಕರನ್ನು ಭೇಟಿ ಮಾಡಲಿದ್ದಾರೆ ಮತ್ತು ಬಾಲಿಯಲ್ಲಿರುವ ಭಾರತೀಯ ಸಮುದಾಯದೊಂದಿಗೆ ಸಂವಾದ ನಡೆಸಲಿದ್ದಾರೆ.