ಪ್ರಧಾನಮಂತ್ರಿ ಮೋದಿ ಅವರ 79ನೇ ಸ್ವಾತಂತ್ರ್ಯ ದಿನಾಚರಣೆ ಭಾಷಣ: ವಿಕಸಿತ ಭಾರತ 2047ಗಾಗಿ ಒಂದು ದೃಷ್ಟಿಕೋನ
August 15th, 11:58 am
79ನೇ ಸ್ವಾತಂತ್ರ್ಯ ದಿನಾಚರಣೆಯಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಕೆಂಪು ಕೋಟೆಯಿಂದ 103 ನಿಮಿಷಗಳ ಕಾಲ ತಮ್ಮ ಸುದೀರ್ಘ ಮತ್ತು ಅತ್ಯಂತ ನಿರ್ಣಾಯಕ ಭಾಷಣವನ್ನು ಮಾಡಿದರು. 2047 ರ ವೇಳೆಗೆ ವಿಕಸಿತ ಭಾರತಕ್ಕಾಗಿ ದಿಟ್ಟ ಮಾರ್ಗಸೂಚಿಯನ್ನು ರೂಪಿಸಿದರು. ಸ್ವಾವಲಂಬನೆ, ನಾವೀನ್ಯತೆ ಮತ್ತು ನಾಗರಿಕ ಸಬಲೀಕರಣದ ಮೇಲೆ ತೀಕ್ಷ್ಣವಾದ ಗಮನ ಹರಿಸಿದ ಪ್ರಧಾನಮಂತ್ರಿ ಅವರು, ಇತರರ ಮೇಲೆ ಅವಲಂಬಿತವಾಗಿರುವ ರಾಷ್ಟ್ರದಿಂದ ಜಾಗತಿಕವಾಗಿ ಆತ್ಮವಿಶ್ವಾಸದ, ತಾಂತ್ರಿಕವಾಗಿ ಮುಂದುವರಿದ ಮತ್ತು ಆರ್ಥಿಕವಾಗಿ ಸ್ಥಿತಿಸ್ಥಾಪಕ ದೇಶವಾಗಿ ಭಾರತದ ಪ್ರಯಾಣವನ್ನು ಬಿಂಬಿಸಿದರು.ಆತ್ಮನಿರ್ಭರ ಭಾರತ: ಬಲಿಷ್ಠ ಮತ್ತು ಅಭಿವೃದ್ಧಿ ಹೊಂದಿದ ಭಾರತಕ್ಕೆ ಅಡಿಪಾಯ
August 15th, 10:20 am
79ನೇ ಸ್ವಾತಂತ್ರ್ಯ ದಿನದಂದು, ರಕ್ಷಣೆ, ತಂತ್ರಜ್ಞಾನ, ಇಂಧನ, ಬಾಹ್ಯಾಕಾಶ ಮತ್ತು ಉತ್ಪಾದನೆಯಲ್ಲಿ ಭಾರತದ ಪ್ರಗತಿಯನ್ನು ಉಲ್ಲೇಖಿಸಿದ ಪ್ರಧಾನಮಂತ್ರಿ ಮೋದಿ, ಆತ್ಮನಿರ್ಭರ ಭಾರತವನ್ನು ವಿಕ್ಷಿತ್ ಭಾರತಕ್ಕೆ ಪ್ರಮುಖ ಅಡಿಪಾಯಗಳಲ್ಲಿ ಒಂದೆಂದು ಒತ್ತಿ ಹೇಳಿದರು. ಆಪರೇಷನ್ ಸಿಂದೂರ್ ಬಗ್ಗೆ ಪ್ರಸ್ತಾಪಿಸಿದ ಅವರು ಕಾರ್ಯತಂತ್ರದ ಸ್ವಾಯತ್ತತೆ ಮತ್ತು ಸ್ಥಳೀಯ/ದೇಶೀಯ ಸಾಮರ್ಥ್ಯಗಳು ಬೆದರಿಕೆಗಳನ್ನು ನಿರ್ಣಾಯಕವಾಗಿ ನಿಭಾಯಿಸಲು, ಸ್ವಾವಲಂಬನೆಯನ್ನು ರಾಷ್ಟ್ರೀಯ ಶಕ್ತಿ, ಘನತೆಯ ಆಧಾರಸ್ತಂಭವನ್ನಾಗಿ ಮಾಡಲು ಮತ್ತು 2047ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತಕ್ಕೆ ಪ್ರಯಾಣ ಬೆಳೆಸಲು ಪ್ರಮುಖವಾಗಿವೆ ಎಂದು ಹೇಳಿದರು.