ಭಾರತದ ನಿವ್ವಳ ಶೂನ್ಯ ದೃಷ್ಟಿಕೋನವನ್ನು ಮುನ್ನಡೆಸುವ ಸುಸ್ಥಿರ ನಾವೀನ್ಯತೆಯನ್ನು ಪ್ರಧಾನಮಂತ್ರಿ ಶ್ಲಾಘಿಸಿದರು

August 03rd, 04:01 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಸುಸ್ಥಿರತೆಯನ್ನು ಎತ್ತಿಹಿಡಿಯುವ ಮತ್ತು ನಿವ್ವಳ ಶೂನ್ಯ ಹೊರಸೂಸುವಿಕೆಯನ್ನು ಸಾಧಿಸುವ ಭಾರತದ ಬದ್ಧತೆಯನ್ನು ಬಲಪಡಿಸುವ ಮಹತ್ವದ ಉಪಕ್ರಮವನ್ನು ಶ್ಲಾಘಿಸಿದರು.

ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು ಸ್ಥಾಪಿಸಲು ಎನ್ ಟಿ ಪಿ ಸಿ ರಿನ್ಯೂಯಬಲ್ ಎನರ್ಜಿ ಲಿಮಿಟೆಡ್ ಮತ್ತು ಅದರ ಇತರ ಜಂಟಿ ಉದ್ಯಮಗಳು/ ಅಂಗಸಂಸ್ಥೆಗಳಲ್ಲಿ ಹೂಡಿಕೆ ಮಾಡಲು ಎನ್ ಟಿ ಪಿ ಸಿ ಲಿಮಿಟೆಡ್ ಗೆ ಹೆಚ್ಚಿನ ಅಧಿಕಾರ ನೀಡಲು ಸಂಪುಟ ಅನುಮೋದನೆ ನೀಡಿದೆ

July 16th, 02:46 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು, ಮಹಾರತ್ನ ಸಿ ಪಿ ಎಸ್ ಇ ಗಳಿಗೆ ಅಧಿಕಾರ ನಿಯೋಜನೆಗಾಗಿ ಅಸ್ತಿತ್ವದಲ್ಲಿರುವ ಮಾರ್ಗಸೂಚಿಗಳನ್ನು ಮೀರಿ ಎನ್ ಟಿ ಪಿ ಸಿ ಲಿಮಿಟೆಡ್ ಗೆ ಹೆಚ್ಚಿನ ಅಧಿಕಾರ ನೀಡಲು ಅನುಮೋದನೆ ನೀಡಿದೆ. ಇದು ಅಂಗಸಂಸ್ಥೆಯಾದ ಎನ್ ಟಿ ಪಿ ಸಿ ಗ್ರೀನ್ ಎನರ್ಜಿ ಲಿಮಿಟೆಡ್ (ಎನ್ ಜಿ ಇ ಎಲ್) ನಲ್ಲಿ ಹೂಡಿಕೆ ಮಾಡಲು ಅನುವು ಮಾಡಿಕೊಡುತ್ತದೆ ಮತ್ತು ತರುವಾಯ, ಎನ್ ಟಿ ಪಿ ಸಿ ರಿನ್ಯೂಯಬಲ್ ಎನರ್ಜಿ ಲಿಮಿಟೆಡ್ (ಎನ್ ಆರ್ ಇ ಎಲ್) ಮತ್ತು ಅದರ ಇತರ ಜಂಟಿ ಉದ್ಯಮಗಳು/ಅಂಗಸಂಸ್ಥೆಗಳಲ್ಲಿ ಹೂಡಿಕೆ ಮಾಡಲು ಅನುವು ಮಾಡಿಕೊಡುತ್ತದೆ. ಈ ಹಿಂದೆ ಅನುಮೋದಿಸಲಾದ ರೂ. 7,500 ಕೋಟಿ ಮಿತಿಯನ್ನು ಮೀರಿ ನವೀಕರಿಸಬಹುದಾದ ಇಂಧನ (ಆರ್ ಇ) ಸಾಮರ್ಥ್ಯ ಸೇರ್ಪಡೆಗಾಗಿ ಎನ್ ಜಿ ಇ ಎಲ್ ರೂ. 20,000 ಕೋಟಿ ವರೆಗೆ ಹೂಡಿಕೆ ಮಾಡಲು ಸಾಧ್ಯವಾಗುತ್ತದೆ, ಇದು 2032 ರ ವೇಳೆಗೆ 60 ಗಿಗಾವ್ಯಾಟ್ ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು ಸಾಧಿಸಲು ಕಾರಣವಾಗುತ್ತದೆ.

ಪ್ರಧಾನ ಮಂತ್ರಿ JI-VAN ಯೋಜನೆಯಲ್ಲಿ ತಿದ್ದುಪಡಿಗೆ ಕ್ಯಾಬಿನೆಟ್ ಅನುಮೋದನೆ

August 09th, 10:21 pm

ಜೈವಿಕ ಇಂಧನ ಕ್ಷೇತ್ರದಲ್ಲಿನ ಇತ್ತೀಚಿನ ಬೆಳವಣಿಗೆಗಳೊಂದಿಗೆ ವೇಗವನ್ನು ಉಳಿಸಿಕೊಳ್ಳಲು ಮತ್ತು ಹೆಚ್ಚಿನ ಹೂಡಿಕೆಯನ್ನು ಆಕರ್ಷಿಸಲು, ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟವು ಇಂದು ಮಾರ್ಪಡಿಸಿದ ಪ್ರಧಾನ ಮಂತ್ರಿ JI-VAN ಯೋಜನೆಗೆ ಅನುಮೋದನೆ ನೀಡಿದೆ.

ಹವಾಮಾನ ಬದಲಾವಣೆಯ ಸಿಒಪಿ-28 ಶೃಂಗದ “ಕೈಗಾರಿಕಾ ಪರಿವರ್ತನೆಗೆ ನಾಯಕತ್ವ ಗುಂಪು” ಸಭೆ ಉದ್ದೇಶಿಸಿ ಪ್ರಧಾನ ಮಂತ್ರಿ ಭಾಷಣ

December 01st, 07:29 pm

ನಾವೆಲ್ಲರೂ ಸಾಮಾನ್ಯ ಬದ್ಧತೆ ಪ್ರದರ್ಶಿವು ಕಾರಣಕ್ಕಾಗಿ ಇಲ್ಲಿ ಸಂಪರ್ಕಿಸಿದ್ದೇವೆ – ಜಾಗತಿಕ ಇಂಗಾಲ ಹೊರಸೂಸುವಿಕೆಯನ್ನು ಶೂನ್ಯಕ್ಕೆ ತರುವ ಗುರಿಗಳನ್ನು ಸಾಧಿಸಲು ಸರ್ಕಾರ ಮತ್ತು ಉದ್ಯಮದ ನಡುವಿನ ಪಾಲುದಾರಿಕೆ ಬಹಳ ಮುಖ್ಯವಾಗಿದೆ.

PM hails progress in Mission Net Zero as solar capacity increases 54x in the last 9 years

August 29th, 08:41 pm

The Prime Minister, Shri Narendra Modi has lauded the the strides made in the direction of Mission Net Zero.