ಹವಾಮಾನ ಬದಲಾವಣೆ ಕುರಿತ ವಿಶ್ವಸಂಸ್ಥೆಯ ಚೌಕಟ್ಟಿನ ಸಮಾವೇಶಕ್ಕೆ (ಯು ಎನ್‌ ಎಫ್‌ ಸಿ ಸಿ ಸಿ) ಸಲ್ಲಿಸಲಿರುವ ಭಾರತದ ರಾಷ್ಟ್ರೀಯ ನಿರ್ಧರಿತ ಕೊಡುಗೆಗೆ (2031-2035) ಕೇಂದ್ರ ಸಂಪುಟದ ಅನುಮೋದನೆ

March 25th, 05:35 pm

ಭಾರತದ ಕ್ರಮಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟವು 2031 ರಿಂದ 2035ರ ಅವಧಿಯ ಭಾರತದ ರಾಷ್ಟ್ರೀಯ ನಿರ್ಧರಿತ ಕೊಡುಗೆಯನ್ನು (ಎನ್‌ ಡಿ ಸಿ) ಅನುಮೋದಿಸಿದೆ. ಇದು ಯು ಎನ್‌ ಎಫ್‌ ಸಿ ಸಿ ಸಿ ಮತ್ತು ಪ್ಯಾರಿಸ್ ಒಪ್ಪಂದದ ಅಡಿಯಲ್ಲಿ ದೇಶದ ಮಹತ್ವಾಕಾಂಕ್ಷೆಯನ್ನು ಹೆಚ್ಚಿಸುವುದಲ್ಲದೆ, ಸುಸ್ಥಿರ ಅಭಿವೃದ್ಧಿ ಮತ್ತು ಹವಾಮಾನ ನ್ಯಾಯದ ಬಗೆಗಿನ ತನ್ನ ಬದ್ಧತೆಯನ್ನು ಪುನರುಚ್ಚರಿಸುತ್ತದೆ.

ಮಾರ್ಚ್ 1 ರಂದು ತಮಿಳುನಾಡು ಮತ್ತು ಪುದುಚೇರಿಗೆ ಭೇಟಿ ನೀಡಲಿರುವ ಪ್ರಧಾನಮಂತ್ರಿ

February 27th, 04:40 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾರ್ಚ್ 1, 2026 ರಂದು ತಮಿಳುನಾಡು ಮತ್ತು ಪುದುಚೇರಿಗೆ ಭೇಟಿ ನೀಡಲಿದ್ದಾರೆ. ರಾಜಸ್ಥಾನ ಮತ್ತು ಗುಜರಾತ್ ಭೇಟಿಯ ನಂತರ, ಪ್ರಧಾನಮಂತ್ರಿ ಫೆಬ್ರವರಿ 28 ರಂದು ರಾತ್ರಿ 9 ಗಂಟೆಗೆ ಚೆನ್ನೈ ಆಗಮಿಸಲಿದ್ದಾರೆ.