ಭೋಪಾಲ್ ನಲ್ಲಿ ಮಾನಸಿಕ ಆರೋಗ್ಯ ಪುನರ್ವಸತಿಯ ರಾಷ್ಟ್ರೀಯ ಸಂಸ್ಥೆ ಸ್ಥಾಪನೆಗೆ ಸಂಪುಟದ ಅನುಮೋದನೆ
May 16th, 07:15 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಸೊಸೈಟಿಗಳ ನೋಂದಣಿ ಕಾಯ್ದೆ 1860ರ ಅಡಿಯಲ್ಲಿ ವಿಕಲಚೇತನ ವ್ಯಕ್ತಿಗಳ ಸಬಲೀಕರಣ ಇಲಾಖೆಯ ಅಧೀನದಲ್ಲಿ ಮಾನಸಿಕ ಆರೋಗ್ಯ ಪುನಶ್ಚೇತನ ಕುರಿತ ರಾಷ್ಟ್ರೀಯ ಆರೋಗ್ಯ ಸಂಸ್ಥೆ (ಎನ್.ಐ.ಎಂ.ಎಚ್.ಆರ್)ಯನ್ನು ಭೋಪಾಲ್ ನಲ್ಲಿ ಒಂದು ಸೊಸೈಟಿಯಾಗಿ ಸ್ಥಾಪಿಸಲು ತನ್ನ ಅನುಮೋದನೆ ನೀಡಿದೆ. ಯೋಜನೆಯ ವೆಚ್ಚ ಮೊದಲ ಮೂರು ವರ್ಷಗಳಲ್ಲಿ ಅಂದಾಜು ಒಟ್ಟು 179.54 ಕೋಟಿ ರೂಪಾಯಿಗಳಾಗಿರುತ್ತದೆ. ಇದರಲ್ಲಿ ಮರುಕಳಿಸುವ ವೆಚ್ಚ 128.54 ಕೋಟಿ ರೂ. ಮತ್ತು ಮರುಕಳಿಸುವ ವೆಚ್ಚ ರೂ. 51 ಕೋಟಿಯೂ ಸೇರಿರುತ್ತದೆ.