2025ರ ಏಷ್ಯಾ ಕಪ್‌ನಲ್ಲಿ ಅದ್ಭುತ ಗೆಲುವು ಸಾಧಿಸಿದ ಭಾರತೀಯ ಪುರುಷರ ಹಾಕಿ ತಂಡವನ್ನು ಅಭಿನಂದಿಸಿದ ಪ್ರಧಾನಮಂತ್ರಿ
September 08th, 07:20 am
ಬಿಹಾರದ ರಾಜಗೀರ್‌ನಲ್ಲಿ ನಡೆದ 2025ರ ಏಷ್ಯಾ ಕಪ್‌ನಲ್ಲಿ ಅದ್ಭುತ ಗೆಲುವು ಸಾಧಿಸಿದ ಭಾರತೀಯ ಪುರುಷರ ಹಾಕಿ ತಂಡವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ. ಹಾಲಿ ಚಾಂಪಿಯನ್ ದಕ್ಷಿಣ ಕೊರಿಯಾವನ್ನು ಸೋಲಿಸಿದ ಈ ಗೆಲುವು ಇನ್ನಷ್ಟು ವಿಶೇಷವಾಗಿದೆ ಎಂದು ಶ್ರೀ ಮೋದಿ ಅವರು ಹೇಳಿದ್ದಾರೆ.ರಾಷ್ಟ್ರೀಯ ಕ್ರೀಡಾ ದಿನದಂದು ಬಿಹಾರದ ರಾಜ್ ಗಿರ್ ನಲ್ಲಿ ಪುರುಷರ ಹಾಕಿ ಏಷ್ಯಾ ಕಪ್ 2025 ಆರಂಭ – ಪ್ರಧಾನಮಂತ್ರಿ ಅವರಿಂದ ಶುಭ ಹಾರೈಕೆ
August 28th, 09:33 pm
ಬಿಹಾರದ ಐತಿಹಾಸಿಕ ನಗರಿ ರಾಜ್ ಗಿರ್ ನಲ್ಲಿ ನಾಳೆ, ಆಗಸ್ಟ್ 29ರಂದು ಪುರುಷರ ಹಾಕಿ ಏಷ್ಯಾಕಪ್ 2025 ಪ್ರಾರಂಭವಾಗಲಿದ್ದು, ಏಷ್ಯಾದಾದ್ಯಂತ ಕ್ರೀಡಾಕೂಟದಲ್ಲಿ ಭಾಗವಹಿಸುವ ಎಲ್ಲಾ ತಂಡಗಳು, ಆಟಗಾರರು, ಅಧಿಕಾರಿಗಳು ಮತ್ತು ಬೆಂಬಲಿಗರಿಗೆ ಕ್ರೀಡಾಕೂಟ ಆರಂಭವಾಗುವ ರಾಷ್ಟ್ರೀಯ ಕ್ರೀಡಾ ದಿನದ ಮುನ್ನಾ ದಿನವಾದ ಇಂದು ಭಾರತದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೃತ್ಪೂರ್ವಕವಾಗಿ ಶುಭ ಕೋರಿದ್ದಾರೆ. ಬಿಹಾರವು ಇತ್ತೀಚಿನ ದಿನಗಳಲ್ಲಿ ಖೇಲೋ ಇಂಡಿಯಾ ಯುವ ಕ್ರೀಡಾಕೂಟ 2025, ಏಷ್ಯಾ ರಗ್ಬಿ U20 ಸೆವೆನ್ಸ್ ಚಾಂಪಿಯನ್ಶಿಪ್ 2025, ISTAF ಸೆಪಕ್ ಟಕ್ರಾ ವಿಶ್ವಕಪ್ 2024 ಮತ್ತು ಮಹಿಳಾ ಏಷ್ಯನ್ ಚಾಂಪಿಯನ್ಸ್ ಟ್ರೋಫಿ 2024 ನಂತಹ ಪ್ರಮುಖ ಪಂದ್ಯಾವಳಿಗಳನ್ನು ಆಯೋಜಿಸುತ್ತಾ ರೋಮಾಂಚಕ ಕ್ರೀಡಾ ಕೇಂದ್ರವಾಗಿ ಗುರುತಿಸಿಕೊಂಡಿದೆ ಎಂದು ಶ್ರೀ ಮೋದಿ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.