ನಾರಿ ಶಕ್ತಿ ವಂದನ ಅಧಿನಿಯಮ ತಿದ್ದುಪಡಿಯ ಪರ ಮತ ಚಲಾಯಿಸುವಂತೆ ಸಂಸದರಿಗೆ ಕರೆ ನೀಡಿದ ಪ್ರಧಾನಮಂತ್ರಿ, ಇದು ಐತಿಹಾಸಿಕ ಅವಕಾಶ ಎಂದು ಬಣ್ಣನೆ

April 17th, 02:13 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ನಾರಿ ಶಕ್ತಿ ವಂದನ ಅಧಿನಿಯಮ ತಿದ್ದುಪಡಿಯ ಕುರಿತು ಸಂಸತ್ತಿನಲ್ಲಿ ಸದ್ಯ ಚರ್ಚೆ ನಡೆಯುತ್ತಿದೆ ಎಂದು ಪ್ರಮುಖವಾಗಿ ಪ್ರಸ್ತಾಪಿಸಿರುವ ಅವರು, ನಿನ್ನೆ ರಾತ್ರಿ 1 ಗಂಟೆಯವರೆಗೆ ಚರ್ಚೆಗಳು ಮುಂದುವರೆದಿವೆ ಎಂದು ಅವರು ಹೇಳಿದರು.

ರಾಜ್ಯಸಭೆಯಲ್ಲಿ ಪ್ರಧಾನಮಂತ್ರಿ ಅವರ ಹೇಳಿಕೆ

April 17th, 11:10 am

ಸದನದ ಪರವಾಗಿ ಮತ್ತು ನನ್ನ ಪರವಾಗಿ, ನಾನು ಶ್ರೀ ಹರಿವಂಶ್ ಅವರಿಗೆ ಅನೇಕ ಅಭಿನಂದನೆಗಳು ಮತ್ತು ಶುಭಾಶಯಗಳನ್ನು ಸಲ್ಲಿಸುತ್ತೇನೆ. ರಾಜ್ಯಸಭೆ ಉಪಸಭಾಪತಿಯಾಗಿ ಸತತ 3ನೇ ಬಾರಿಗೆ ಆಯ್ಕೆಯಾಗಿರುವುದು, ಈ ಸದನವು ನಿಮ್ಮ ಮೇಲೆ ಹೊಂದಿರುವ ಆಳವಾದ ನಂಬಿಕೆಗೆ ಸಾಕ್ಷಿಯಾಗಿದೆ. ಹಿಂದಿನ ಅವಧಿಯಲ್ಲಿ ನಿಮ್ಮ ಅನುಭವ ಮತ್ತು ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುವ ನಿಮ್ಮ ಪ್ರಯತ್ನಗಳಿಂದ ಪಡೆದ ಪ್ರಯೋಜನಕ್ಕೆ ಸದನವು ಪರಿಣಾಮಕಾರಿಯಾಗಿ ತನ್ನ ಅನುಮೋದನೆಯ ಮುದ್ರೆ ಹೊತ್ತಿದೆ. ಇದು ಅನುಭವಕ್ಕೆ ಸಂದ ಗೌರವ, ಸ್ವಾಭಾವಿಕ ಕಾರ್ಯ ಶೈಲಿಗೆ ಸಂದ ಗೌರವ ಮತ್ತು ಆ ಸ್ವಾಭಾವಿಕ ಕಾರ್ಯ ಶೈಲಿಯ ಸ್ವೀಕಾರವೂ ಆಗಿದೆ. ಹರಿವಂಶ್ ಜಿ ಅವರ ನಾಯಕತ್ವದಲ್ಲಿ ಸದನದ ಶಕ್ತಿ ಹೆಚ್ಚು ಪರಿಣಾಮಕಾರಿಯಾಗುವುದನ್ನು ನಾವೆಲ್ಲರೂ ನೋಡಿದ್ದೇವೆ. ಅವರು ಸದನದ ಕಲಾಪಗಳನ್ನು ಕೇವಲ ನಡೆಸುವುದಿಲ್ಲ ಎಂದು ನಾನು ಹೇಳಬಲ್ಲೆ; ಅವರು ತಮ್ಮ ಹಿಂದಿನ ಜೀವನದ ಅನುಭವಗಳನ್ನು ಸದನವನ್ನು ಉತ್ಕೃಷ್ಟಗೊಳಿಸಲು ಅತ್ಯಂತ ನಿಖರವಾದ ರೀತಿಯಲ್ಲಿ ಬಳಸಿಕೊಳ್ಳುತ್ತಾರೆ. ಅವರ ಅನುಭವವು ಸದನದ ಸಂಪೂರ್ಣ ಕಲಾಪಗಳು, ನಡವಳಿಕೆ ಮತ್ತು ವಾತಾವರಣವನ್ನು ಹೆಚ್ಚು ಪ್ರಬುದ್ಧಗೊಳಿಸುತ್ತದೆ. ಉಪಸಭಾಪತಿಯ ಹೊಸ ಅವಧಿಯು ಅದೇ ಮನೋಭಾವ, ಸಮತೋಲನ ಮತ್ತು ಸಮರ್ಪಣೆಯೊಂದಿಗೆ ಮುಂದುವರಿಯುತ್ತದೆ. ನಮ್ಮ ಎಲ್ಲಾ ಪ್ರಯತ್ನಗಳ ಮೂಲಕ ಸದನದ ಘನತೆ ಹೊಸ ಎತ್ತರವನ್ನು ತಲುಪುತ್ತದೆ ಎಂಬ ವಿಶ್ವಾಸ ನನಗಿದೆ.

ರಾಜ್ಯಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ

April 17th, 11:00 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ರಾಜ್ಯಸಭೆಯನ್ನುದ್ದೇಶಿಸಿ ಭಾಷಣ ಮಾಡಿದರು ಮತ್ತು ಐತಿಹಾಸಿಕ ಸತತ ಮೂರನೇ ಅವಧಿಗೆ ರಾಜ್ಯಸಭೆಯ ಉಪಸಭಾಪತಿಯಾಗಿ ಆಯ್ಕೆಯಾದ ಶ್ರೀ ಹರಿವಂಶ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದರು. ಈ ಐತಿಹಾಸಿಕ ಸಾಧನೆಯನ್ನು ಪ್ರಮುಖವಾಗಿ ಪ್ರಸ್ತಾಪಿಸಿದ ಅವರು, ಇದು ಶ್ರೀ ಹರಿವಂಶ್ ಅವರ ಮೇಲಿನ ಸದನದ ಆಳವಾದ ನಂಬಿಕೆ ಮತ್ತು ಸಂಸ್ಥೆಗೆ ಅವರು ತಂದಿರುವ ಅಮೂಲ್ಯ ಅನುಭವವನ್ನು ಪ್ರತಿಬಿಂಬಿಸುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು. “ಸತತ ಮೂರನೇ ಅವಧಿಗೆ ಆಯ್ಕೆಯಾಗಿರುವುದು ಅವರ ಅನುಭವ, ಎಲ್ಲರನ್ನೂ ಒಳಗೊಳ್ಳುವ ವಿಧಾನ ಮತ್ತು ಅವರ ಘನತೆಯ ಕಾರ್ಯ ಶೈಲಿಗೆ ಸದನದಿಂದ ಅನುಮೋದನೆಯ ಮುದ್ರೆಯಾಗಿದೆ’’ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು.

ಮಾಜಿ ಸಂಸದ ಮತ್ತು ಕೇಂದ್ರ ಸಚಿವರಾದ ಶ್ರೀ ಕಬೀಂದ್ರ ಪುರ್ಕಾಯಸ್ಥ ಅವರ ನಿಧನಕ್ಕೆ ಪ್ರಧಾನಮಂತ್ರಿ ಅವರು ಸಂತಾಪ ಸೂಚಿಸಿದ್ದಾರೆ

January 07th, 07:07 pm

ಮಾಜಿ ಸಂಸದ ಮತ್ತು ಕೇಂದ್ರ ಸಚಿವರಾದ ಶ್ರೀ ಕಬೀಂದ್ರ ಪುರ್ಕಾಯಸ್ಥ ಅವರ ನಿಧನಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.

ಸಂಸತ್ತಿನಲ್ಲಿ ಶಾಂತಿ ಮಸೂದೆ ಅಂಗೀಕಾರ ಸ್ವಾಗತಿಸಿದ ಪ್ರಧಾನಮಂತ್ರಿ

December 18th, 09:47 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ, ಸಂಸತ್ತಿನ ಎರಡೂ ಸದನಗಳಲ್ಲಿ ಶಾಂತಿ ಮಸೂದೆ ಅಂಗೀಕಾರವನ್ನು ಸ್ವಾಗತಿಸಿದ್ದಾರೆ ಮತ್ತು ಇದು ಭಾರತದ ತಂತ್ರಜ್ಞಾನ ಆಯಾಮಕ್ಕೆ ಒಂದು ಪರಿವರ್ತನೆಯ ಕ್ಷಣ ಎಂದು ಬಣ್ಣಿಸಿದ್ದಾರೆ.

ಶ್ರೀ ಮಹೇಂದ್ರ ಸಿಂಗ್ ಮೇವಾಡ್ ಅವರ ನಿಧನಕ್ಕೆ ಪ್ರಧಾನಮಂತ್ರಿ ಸಂತಾಪ

November 10th, 10:38 pm

ಚಿತ್ತೋರ್ಗಢದ ಮಾಜಿ ಸಂಸದರಾದ ಶ್ರೀ ಮಹೇಂದ್ರ ಸಿಂಗ್ ಮೇವಾಡ್ ಅವರ ನಿಧನಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಂತಾಪ ಸೂಚಿಸಿದ್ದಾರೆ.