ಫ್ರಾನ್ಸ್ ನ ಮಯೋಟ್ಟೆಯಲ್ಲಿ ಚಿಡೋ ಚಂಡಮಾರುತದಿಂದಾದ ಅಪಾರ ನಾಶ ತೀವ್ರ ದುಃಖಕರ : ಪ್ರಧಾನಮಂತ್ರಿ
December 17th, 05:19 pm
ಫ್ರಾನ್ಸ್ ನ ಮಯೋಟ್ಟೆಯಲ್ಲಿ ಚಿಡೋ ಚಂಡಮಾರುತದಿಂದ ಉಂಟಾಗಿರುವ ವಿನಾಶದ ಬಗ್ಗೆ ತೀವ್ರ ದುಃಖ ವ್ಯಕ್ತಪಡಿಸಿರುವ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಫ್ರಾನ್ಸ್ ಗೆ ಭಾರತ ಬೆಂಬಲವಾಗಿ ನಿಂತಿದೆ ಮತ್ತು ಎಲ್ಲ ಸಾಧ್ಯ ನೆರವು ನೀಡಲು ಸಿದ್ಧವಾಗಿದೆ ಎಂದು ಹೇಳಿದ್ದಾರೆ. ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಅವರ ನಾಯಕತ್ವದಲ್ಲಿ, ಫ್ರಾನ್ಸ್ ಈ ದುರಂತವನ್ನು ಸ್ಥಿತಿಸ್ಥಾಪಕತ್ವ ಮತ್ತು ಸಂಕಲ್ಪದೊಂದಿಗೆ ಎದುರಿಸಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.