ಮತುವಾ ಧರ್ಮ ಮೇಳದಲ್ಲಿ ಭಾಗವಹಿಸಿದವರು ಮತ್ತು ಭಕ್ತರಿಗೆ ಶುಭ ಕೋರಿದ ಪ್ರಧಾನಮಂತ್ರಿ
March 16th, 01:12 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮತುವಾ ಧರ್ಮ ಮೇಳದಲ್ಲಿ ಭಾಗವಹಿಸಿದ ಎಲ್ಲಾ ಭಕ್ತರು ಮತ್ತು ಭಾಗವಹಿಸುವವರಿಗೆ ಶುಭಾಶಯ ಕೋರಿದ್ದಾರೆ. ಈ ವಿಶೇಷ ಸಂದರ್ಭವು ಪೂರ್ಣ ಬ್ರಹ್ಮ ಶ್ರೀ ಶ್ರೀ ಹರಿಚಂದ್ ಠಾಕೂರ್ ಅವರ ಜಯಂತಿಯ ಜತೆ ಸಂಬಂಧ ಹೊಂದಿದೆ. ನಾನು ಅವರಿಗೆ ನನ್ನ ವಿನಮ್ರ ನಮಸ್ಕಾರಗಳನ್ನು ಸಲ್ಲಿಸುತ್ತೇನೆ. ಅವರ ಚಿಂತನೆಗಳು ಮತ್ತು ಬೋಧನೆಗಳು ಹಲವಾರು ಜನರಿಗೆ ಶಕ್ತಿ ಮತ್ತು ಭರವಸೆಯನ್ನು ನೀಡುತ್ತಲೇ ಇವೆ. ಅವರು ಘನತೆ, ಸಮಾನತೆ ಮತ್ತು ಭಕ್ತಿಗಾಗಿ ಶಕ್ತಿಯುತ ಚಳವಳಿಯನ್ನು ಜಾಗೃತಗೊಳಿಸಿದರು. ಅವರು ತಲೆಮಾರುಗಳನ್ನು ಸದಾಚಾರ, ಸಾಮರಸ್ಯ ಮತ್ತು ಸಾಮೂಹಿಕ ಉನ್ನತಿಯ ಹಾದಿಯಲ್ಲಿ ನಡೆಯಲು ಪ್ರೇರೇಪಿಸಿದರು, ಎಂದು ಶ್ರೀ ನರೇಂದ್ರ ಮೋದಿ ಅವರು ಹೇಳಿದರು.