ಭಾರತದ ಯುವಕರ ಅಪ್ರತಿಮ ಶಕ್ತಿ ಮತ್ತು ಬದ್ಧತೆಯನ್ನು ಉಲ್ಲೇಖಿಸಿದ ಪ್ರಧಾನಮಂತ್ರಿ

January 10th, 08:35 am

ಭಾರತದ ಯುವ ಪೀಳಿಗೆಯ ಮನೋಭಾವ ಮತ್ತು ದೃಢನಿಶ್ಚಯವನ್ನು ಉಲ್ಲೇಖಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು, ಮುಂಬರುವ ವಿಕಸಿತ ಭಾರತ ಯುವ ನಾಯಕರ ಸಂವಾದದಲ್ಲಿ ರಾಷ್ಟ್ರದ ಯುವಕರೊಂದಿಗೆ ತೊಡಗಿಸಿಕೊಳ್ಳುವ ಉತ್ಸಾಹ ವ್ಯಕ್ತಪಡಿಸಿದರು.

ಕಲ್ಯಾಣ ಆಧಾರಿತ ಅಭಿವೃದ್ಧಿಗೆ ಬದ್ಧ - ಪ್ರಧಾನಮಂತ್ರಿ ಪುನರುಚ್ಚಾರ

June 11th, 02:20 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಿವಿಧ ಜನಪರ ಯೋಜನೆಗಳು ಗರಿಷ್ಠ ಸಂಖ್ಯೆಯ ನಾಗರಿಕರನ್ನು ತಲುಪುವುದನ್ನು ಖಾತರಿಪಡಿಸಿಕೊಳ್ಳುತ್ತಾ ಕಲ್ಯಾಣ ಆಧಾರಿತ ಅಭಿವೃದ್ಧಿಗೆ ಸರ್ಕಾರದ ಅಚಲ ಬದ್ಧತೆಯನ್ನು ಇಂದು ಪುನರುಚ್ಚರಿಸಿದ್ದಾರೆ. ಈ ಉಪಕ್ರಮಗಳು ಹೆಚ್ಚು ಹೆಚ್ಚು ಪರಿಣಾಮಕಾರಿಯಾಗುತ್ತಿದೆ ಮತ್ತು ಹೆಚ್ಚು ಹೆಚ್ಚು ಜನರನ್ನು ತಲುಪುತ್ತಿವೆ ಎಂದು ಅವರು ಶ್ಲಾಘಿಸಿದ್ದಾರೆ.

ವಿಕಸಿತ ಭಾರತ ಯುವ ನಾಯಕರ ಸಂವಾದವು ನಮ್ಮ ಯುವ ಶಕ್ತಿ, ಅವರ ಕನಸುಗಳು, ಕೌಶಲ್ಯಗಳು ಮತ್ತು ಆಕಾಂಕ್ಷೆಗಳನ್ನು ಸಂತಸ ಪೂರಕ ಆಚರಿಸುತ್ತದೆ: ಪ್ರಧಾನಮಂತ್ರಿ

January 10th, 07:24 pm

ವಿಕಸಿತ ಭಾರತ ಯುವ ನಾಯಕರ ಸಂವಾದವು ನಮ್ಮ ಯುವ ಶಕ್ತಿ, ಅವರ ಕನಸುಗಳು, ಕೌಶಲ್ಯಗಳು ಮತ್ತು ಆಕಾಂಕ್ಷೆಗಳನ್ನು ಸಂತಸಪೂರ್ವಕ ಆಚರಿಸಿ ಕೊಂಡಾಡುತ್ತದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೇಳಿದರು. 2025ರ ಜನವರಿ 12 ರಂದು ಯುವ ಮನಸ್ಸುಗಳೊಂದಿಗೆ ಸಂವಹನ ನಡೆಸಲು ಎದುರು ನೋಡುತ್ತಿದ್ದೇನೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೇಳಿದರು.

​​​​​​​1.5 ಲಕ್ಷ ಸ್ವಾಸ್ಥ್ಯ ಕೇಂದ್ರಗಳ ಸ್ಥಾಪನೆಯ ಗುರಿ ಸಾಧನೆಗೆ ಪ್ರಧಾನಮಂತ್ರಿ ಶ್ಲಾಘನೆ

December 29th, 09:00 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 1.5 ಲಕ್ಷ ಆಯುಷ್ಮಾನ್ ಭಾರತ್ - ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳ ಸ್ಥಾಪನೆಯ ಗುರಿ ಸಾಧನೆಯು ನವ ಭಾರತದಲ್ಲಿ ಹೊಸ ಶಕ್ತಿಯನ್ನು ತುಂಬುತ್ತದೆ ಎಂದು ಹೇಳಿದ್ದಾರೆ. ಭಾರತದ ಸಮೃದ್ಧಿ ಆರೋಗ್ಯವಂತ ನಾಗರಿಕರಲ್ಲಿ ಅಡಗಿದೆ ಎಂದರು.

200 ಕೋಟಿ ಲಸಿಕೆ ಡೋಸ್ ಗುರಿ ದಾಟಿದ್ದಕ್ಕಾಗಿ ನಾಗರಿಕರಿಗೆ ಪ್ರಧಾನಮಂತ್ರಿ ಅಭಿನಂದನೆ

July 17th, 01:24 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ವಿಜ್ಞಾನದ ಮೇಲೆ ಅಸಾಧಾರಣ ನಂಬಿಕೆಯನ್ನು ತೋರಿಸಿದ್ದಕ್ಕಾಗಿ ಮತ್ತು 200 ಕೋಟಿ ಕೋವಿಡ್-19 ಲಸಿಕೆ ಡೋಸ್ ಗಳ ಗುರಿ ಸಂಖ್ಯೆಯನ್ನು ದಾಟಿದ್ದಕ್ಕಾಗಿ ಭಾರತದ ಜನತೆಯನ್ನು ಶ್ಲಾಘಿಸಿದ್ದಾರೆ. ಈ ಅಭಿಯಾನದಲ್ಲಿ ವೈದ್ಯರು, ದಾದಿಯರು, ಮುಂಚೂಣಿ ಕಾರ್ಯಕರ್ತರು, ವಿಜ್ಞಾನಿಗಳು, ಅನ್ವೇಷಕರು ಮತ್ತು ಉದ್ಯಮಿಗಳು ತೋರಿದ ಉತ್ಸಾಹ ಮತ್ತು ದೃಢ ನಿಶ್ಚಯವನ್ನು ಅವರು ಶ್ಲಾಘಿಸಿದರು.

ಇಂದಿನ ಸಂಪುಟ ನಿರ್ಧಾರವು ಭಾರತದ ಲಸಿಕಾಕರಣದ ವ್ಯಾಪ್ತಿಯನ್ನು ಹೆಚ್ಚಿಸುತ್ತದೆ ಮತ್ತು ಆರೋಗ್ಯಕರ ರಾಷ್ಟ್ರವನ್ನು ಸೃಷ್ಟಿಸುತ್ತದೆ: ಪ್ರಧಾನಮಂತ್ರಿ

July 13th, 10:52 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, 2022 ರ ಜುಲೈ 15 ರಿಂದ ಮುಂದಿನ 75 ದಿನಗಳವರೆಗೆ ಸರ್ಕಾರಿ ಲಸಿಕಾ ಕೇಂದ್ರಗಳಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ನಾಗರಿಕರಿಗೆ ಉಚಿತ ಕೋವಿಡ್ -19 ಮುನ್ನೆಚ್ಚರಿಕೆ ಡೋಸ್ ನೀಡುವ ನಿರ್ಧಾರವು ಭಾರತದ ಲಸಿಕಾಕರಣ ವ್ಯಾಪ್ತಿಯನ್ನು ಹೆಚ್ಚಿಸುತ್ತದೆ ಮತ್ತು ಆರೋಗ್ಯಕರ ರಾಷ್ಟ್ರವನ್ನು ಸೃಷ್ಟಿಸುತ್ತದೆ ಎಂಬ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ.

15 ರಿಂದ 18 ವರ್ಷ ವಯಸ್ಸಿನ 50% ಕ್ಕಿಂತ ಹೆಚ್ಚು ಯುವಕರಿಗೆ ಮೊದಲ ಡೋಸ್ ಲಸಿಕೆಯನ್ನು ನೀಡಿರುವುದಕ್ಕೆ ಪ್ರಧಾನಿ ಶ್ಲಾಘಿಸಿದರು

January 19th, 10:01 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, 15-18 ವರ್ಷದೊಳಗಿನ 50% ಕ್ಕಿಂತ ಹೆಚ್ಚು ಯುವಕರಿಗೆ ಮೊದಲ ಡೋಸ್ ಲಸಿಕೆ ನೀಡಿರುವುದನ್ನು ಶ್ಲಾಘಿಸಿದ್ದಾರೆ.