ಪ್ರಧಾನಮಂತ್ರಿ ಅವರು ನವೆಂಬರ್ 25 ರಂದು ಕುರುಕ್ಷೇತ್ರಕ್ಕೆ ಭೇಟಿ ನೀಡಲಿದ್ದಾರೆ

November 24th, 12:44 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವೆಂಬರ್ 25 ರಂದು ಹರಿಯಾಣದ ಕುರುಕ್ಷೇತ್ರಕ್ಕೆ ಭೇಟಿ ನೀಡಲಿದ್ದಾರೆ.

ಈ ವಾರ ಭಾರತದ ಬಗ್ಗೆ ವಿಶ್ವ

February 06th, 01:03 pm

ಈ ವಾರ, ಭಾರತವು ತನ್ನ ಜಾಗತಿಕ ಪಾಲುದಾರಿಕೆಗಳನ್ನು ಬಲಪಡಿಸುವಲ್ಲಿ, ತಾಂತ್ರಿಕ ಮತ್ತು ಬಾಹ್ಯಾಕಾಶ ಪರಿಶೋಧನೆಯನ್ನು ಮುನ್ನಡೆಸುವಲ್ಲಿ ಮತ್ತು ಜಾಗತಿಕ ಸಂರಕ್ಷಣೆ ಮತ್ತು ಆರೋಗ್ಯ ರಕ್ಷಣಾ ಪ್ರಯತ್ನಗಳಿಗೆ ಕೊಡುಗೆ ನೀಡುವಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸಿದೆ. ಇಸ್ರೇಲ್ ಜೊತೆಗಿನ ಸಂಬಂಧಗಳನ್ನು ಗಾಢವಾಗಿಸುವುದರಿಂದ ಹಿಡಿದು ಹೊಸ ಉಪಗ್ರಹ ಕಾರ್ಯಕ್ರಮಗಳನ್ನು ಉಡಾವಣೆ ಮಾಡುವವರೆಗೆ ಮತ್ತು ವಿದೇಶಗಳಲ್ಲಿ ಭಾರತೀಯ ಪ್ರತಿಭೆಗಳ ಸಾಧನೆಗಳನ್ನು ಗುರುತಿಸುವವರೆಗೆ, ಭಾರತವು ಅಂತರರಾಷ್ಟ್ರೀಯ ವ್ಯವಹಾರಗಳಲ್ಲಿ ತನ್ನ ಬೆಳೆಯುತ್ತಿರುವ ಪಾತ್ರವನ್ನು ಪ್ರತಿಪಾದಿಸುತ್ತಲೇ ಇದೆ. ಯುರೋಪ್ ಭಾರತವನ್ನು ಭವಿಷ್ಯದ ಸಹಯೋಗಕ್ಕೆ ಪ್ರಮುಖ ಅವಕಾಶವೆಂದು ನೋಡುತ್ತದೆ. ಈ ವಾರದ ಕೆಲವು ಪ್ರಮುಖ ಮುಖ್ಯಾಂಶಗಳನ್ನು ಇಲ್ಲಿ ನೋಡೋಣ.

ರಾಮಾಯಣ ಮತ್ತು ಮಹಾಭಾರತದ ಅರೇಬಿಕ್ ಭಾಷಾಂತರಗಳಿಗಾಗಿ ಅಬ್ದುಲ್ಲಾ ಅಲ್-ಬರೂನ್ ಮತ್ತು ಅಬ್ದುಲ್ ಲತೀಫ್ ಅಲ್-ನಸೀಫ್ ಅವರನ್ನು ಅಭಿನಂದಿಸಿದ ಪ್ರಧಾನಮಂತ್ರಿ

December 21st, 07:03 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ರಾಮಾಯಣ ಮತ್ತು ಮಹಾಭಾರತ ಮಹಾಗ್ರಂಥಗಳ ಅರೇಬಿಕ್ ಅನುವಾದ ಭಾಷಾಂತರ ಮತ್ತು ಪ್ರಕಟಿಸುವ ಪ್ರಯತ್ನಕ್ಕಾಗಿ ಅಬ್ದುಲ್ಲಾ ಅಲ್-ಬರೂನ್ ಮತ್ತು ಅಬ್ದುಲ್ ಲತೀಫ್ ಅಲ್-ನಸೀಫ್ ಅವರನ್ನು ಅಭಿನಂದಿಸಿದ್ದಾರೆ.