ಮಹಾರಾಷ್ಟ್ರದ ನಾಗಪುರದಲ್ಲಿ ಮಾಧವ ನೇತ್ರಾಲಯ ಪ್ರೀಮಿಯಂ ಕೇಂದ್ರದ ಶಿಲಾನ್ಯಾಸ ಸಮಾರಂಭದಲ್ಲಿ ಪ್ರಧಾನಮಂತ್ರಿಯವರ ಭಾಷಣ
March 30th, 11:53 am
ಗುಡಿ ಪಾಡ್ವ ಮತ್ತು ಹೊಸ ವರ್ಷಕ್ಕೆ ನಾನು ನಿಮಗೆಲ್ಲರಿಗೂ ಹೃತ್ಪೂರ್ವಕವಾಗಿ ಶುಭಾಶಯಗಳನ್ನು ಕೋರುತ್ತೇನೆ! ಅತ್ಯಂತ ಗೌರವಾನ್ವಿತ ಸರ್ಸಂಘಚಾಲಕ್ ಜಿ, ಡಾ. ಮೋಹನ್ ಭಾಗವತ್ ಜಿ, ಸ್ವಾಮಿ ಗೋವಿಂದ್ ಗಿರಿ ಜಿ ಮಹಾರಾಜ್, ಸ್ವಾಮಿ ಅವಧೇಶಾನಂದ ಗಿರಿ ಜಿ ಮಹಾರಾಜ್, ಮಹಾರಾಷ್ಟ್ರದ ಜನಪ್ರಿಯ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಜಿ, ಕೇಂದ್ರ ಸಚಿವ ಸಂಪುಟದ ನನ್ನ ಸಹೋದ್ಯೋಗಿಗಳಾದ ನಿತಿನ್ ಗಡ್ಕರಿ ಜಿ, ಡಾ. ಅವಿನಾಶ್ ಚಂದ್ರ ಅಗ್ನಿಹೋತ್ರಿ ಜಿ, ಇತರ ಗಣ್ಯರೇ ಹಾಗು ಇಲ್ಲಿ ಉಪಸ್ಥಿತರಿರುವ ಎಲ್ಲಾ ಹಿರಿಯ ಸಹೋದ್ಯೋಗಿಗಳೇ, ಇಂದು ರಾಷ್ಟ್ರ ಯಜ್ಞದ ಈ ಪವಿತ್ರ ಆಚರಣೆಯಲ್ಲಿ ಭಾಗವಹಿಸುವ ಸೌಭಾಗ್ಯ ನನಗೆ ಸಿಕ್ಕಿದೆ. ಇಂದು, ಚೈತ್ರ ಶುಕ್ಲ ಪ್ರತಿಪದದ ಈ ದಿನವು ತುಂಬಾ ವಿಶೇಷವಾಗಿದೆ. ನವರಾತ್ರಿಯ ಪವಿತ್ರ ಹಬ್ಬ ಇಂದಿನಿಂದ ಆರಂಭವಾಗುತ್ತಿದೆ. ಇಂದು ದೇಶದ ವಿವಿಧ ಭಾಗಗಳಲ್ಲಿ ಗುಡಿ-ಪಾಡ್ವ, ಯುಗಾದಿ ಮತ್ತು ನವರೆಹ್ ಹಬ್ಬಗಳನ್ನು ಆಚರಿಸಲಾಗುತ್ತಿದೆ. ಇಂದು ಭಗವಾನ್ ಜುಲೇಲಾಲ್ ಜಿ ಮತ್ತು ಗುರು ಅಂಗದ್ ದೇವ್ ಜಿ ಅವರ ಜನ್ಮ ದಿನಾಚರಣೆಯೂ ಆಗಿದೆ. ಇದು ನಮ್ಮ ಸ್ಫೂರ್ತಿ, ಅತ್ಯಂತ ಗೌರವಾನ್ವಿತ ಡಾಕ್ಟರ್ ಸಾಹೇಬ್ ಅವರ ಜನ್ಮ ದಿನಾಚರಣೆಯೂ ಆಗಿದೆ. ಮತ್ತು ಈ ವರ್ಷ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಅದ್ಭುತ ಪ್ರಯಾಣದ 100 ವರ್ಷಗಳು ಪೂರ್ಣಗೊಂಡಿವೆ. ಇಂದು ಈ ಸಂದರ್ಭದಲ್ಲಿ, ಸ್ಮೃತಿ ಮಂದಿರಕ್ಕೆ ಭೇಟಿ ನೀಡುವ ಮತ್ತು ಗೌರವಾನ್ವಿತ ಡಾಕ್ಟರ್ ಸಾಹೇಬ್ ಮತ್ತು ಗೌರವಾನ್ವಿತ ಗುರೂಜಿ ಅವರಿಗೆ ಗೌರವ ಸಲ್ಲಿಸುವ ಸೌಭಾಗ್ಯ ನನಗೆ ಸಿಕ್ಕಿದೆ.ಮಹಾರಾಷ್ಟ್ರದ ನಾಗ್ಪುರದಲ್ಲಿ ಮಾಧವ ನೇತ್ರಾಲಯ ಪ್ರೀಮಿಯಂ ಕೇಂದ್ರಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶಂಕುಸ್ಥಾಪನೆ ನೆರವೇರಿಸಿದರು
March 30th, 11:52 am
ಮಹಾರಾಷ್ಟ್ರದ ನಾಗ್ಪುರದಲ್ಲಿ ಇಂದು ಪ್ರಧಾನಮಂತ್ರಿಯವರು ಮಾಧವ ನೇತ್ರಾಲಯ ಪ್ರೀಮಿಯಂ ಕೇಂದ್ರಕ್ಕೆ ಶಿಲಾನ್ಯಾಸ ನೆರವೇರಿಸಿದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಪವಿತ್ರ ನವರಾತ್ರಿ ಉತ್ಸವದ ಆರಂಭವನ್ನು ಸೂಚಿಸುವ ಚೈತ್ರ ಶುಕ್ಲ ಪ್ರತಿಪದದ ಮಹತ್ವದ ಬಗ್ಗೆ ತಿಳಿಸಿದರು. ದೇಶಾದ್ಯಂತ ಇಂದು ಗುಡಿ ಪಡ್ವಾ, ಯುಗಾದಿ ಮತ್ತು ನವರೇಹ್‌ನಂತಹ ಹಬ್ಬಗಳನ್ನು ಆಚರಿಸಲಾಗುತ್ತಿದೆ ಎಂದು ಅವರು ಹೇಳಿದರು. ಭಗವಾನ್ ಜುಲೇಲಾಲ್ ಮತ್ತು ಗುರು ಅಂಗದ್ ದೇವ್ ಅವರ ಜನ್ಮ ದಿನಾಚರಣೆಯೊಂದಿಗೆ ಈ ದಿನವು ಹೊಂದಿಕೆಯಾಗುವುದರಿಂದ ಈ ದಿನದ ಮಹತ್ವವನ್ನು ಅವರು ವಿವರಿಸಿದರು. ಈ ಸಂದರ್ಭವನ್ನು ಸ್ಪೂರ್ತಿದಾಯಕ ಡಾ. ಕೆ. ಬಿ. ಹೆಡ್ಗೆವಾರ್ ಅವರ ಜನ್ಮ ವಾರ್ಷಿಕೋತ್ಸವ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಶ್ರೇಷ್ಠ ಪ್ರಯಾಣದ ಶತಮಾನೋತ್ಸವ ವರ್ಷವೆಂದು ತಿಳಿಸಿದರು. ಈ ಮಹತ್ವದ ದಿನದಂದು ಡಾ. ಹೆಡ್ಗೆವಾರ್ ಮತ್ತು ಶ್ರೀ ಗೋಲ್ವಾಲ್ಕರ್ ಗುರೂಜಿ ಅವರಿಗೆ ಗೌರವ ಸಲ್ಲಿಸಲು ಸ್ಮೃತಿ ಮಂದಿರಕ್ಕೆ ಭೇಟಿ ನೀಡಿರುವುದು ನನಗೆ ಸಿಕ್ಕ ಗೌರವ ಎಂದು ಸಂತಸ ವ್ಯಕ್ತಪಡಿಸಿದರು.ಪ್ರಧಾನಮಂತ್ರಿ ಮಾರ್ಚ್ 30 ರಂದು ಮಹಾರಾಷ್ಟ್ರ ಮತ್ತು ಛತ್ತೀಸ್ ಗಢಕ್ಕೆ ಭೇಟಿ
March 28th, 02:15 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾರ್ಚ್ 30 ರಂದು ಮಹಾರಾಷ್ಟ್ರ ಮತ್ತು ಛತ್ತೀಸ್‌ಗಢಕ್ಕೆ ಭೇಟಿ ನೀಡಲಿದ್ದಾರೆ. ಅವರು ನಾಗ್ಪುರಕ್ಕೆ ಪ್ರಯಾಣಿಸಲಿದ್ದಾರೆ ಮತ್ತು ಬೆಳಿಗ್ಗೆ ಸುಮಾರು 9 ಗಂಟೆಗೆ ಸ್ಮೃತಿ ಮಂದಿರದಲ್ಲಿ ದರ್ಶನ ಪಡೆಯಲಿದ್ದಾರೆ ಮತ್ತು ನಂತರ ದೀಕ್ಷಾಭೂಮಿಗೆ ಭೇಟಿ ನೀಡಲಿದ್ದಾರೆ.