ಪ್ರಧಾನಮಂತ್ರಿ ಅವರು ಎಲ್ವಿಎಂ3-ಎಂ6 ಮೂಲಕ ಬ್ಲೂಬರ್ಡ್ ಬ್ಲಾಕ್-2 ಯಶಸ್ವಿ ಉಡಾವಣೆಗಾಗಿ ಬಾಹ್ಯಾಕಾಶ ವಿಜ್ಞಾನಿಗಳು ಮತ್ತು ಇಂಜಿನಿಯರ್ಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ
December 24th, 10:04 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಎಲ್ವಿಎಂ3-ಎಂ6 ಉಡಾವಣಾ ವಾಹನದ ಮೂಲಕ 'ಬ್ಲೂಬರ್ಡ್ ಬ್ಲಾಕ್-2' (BlueBird Block-2) ಉಪಗ್ರಹವನ್ನು ಯಶಸ್ವಿಯಾಗಿ ಉಡಾವಣೆ ಮಾಡಿದ ಬಾಹ್ಯಾಕಾಶ ವಿಜ್ಞಾನಿಗಳು ಮತ್ತು ಇಂಜಿನಿಯರ್ಗಳನ್ನು ಅಭಿನಂದಿಸಿದ್ದಾರೆ. ಬ್ಲೂಬರ್ಡ್ ಬ್ಲಾಕ್-2 ಅಮೆರಿಕದ ಒಂದು ಬಾಹ್ಯಾಕಾಶ ನೌಕೆಯಾಗಿದ್ದು, ಇದು ಭಾರತದಿಂದ ಉದ್ದೇಶಿತ ಕಕ್ಷೆಗೆ ಉಡಾವಣೆಗೊಂಡ ಅತ್ಯಂತ ಭಾರವಾದ ಉಪಗ್ರಹವಾಗಿದೆ. ಇದು ಭಾರತದ ಬಾಹ್ಯಾಕಾಶ ಪಯಣದಲ್ಲಿ ಹೆಮ್ಮೆಯ ಮೈಲಿಗಲ್ಲಾಗಿದೆ ಮತ್ತು ಆತ್ಮನಿರ್ಭರ ಭಾರತದ ಕಡೆಗಿನ ನಮ್ಮ ಪ್ರಯತ್ನಗಳ ಪ್ರತಿಬಿಂಬವಾಗಿದೆ ಎಂದು ಶ್ರೀ ಮೋದಿ ಅವರು ತಿಳಿಸಿದ್ದಾರೆ.