Prime Minister welcomes President of Russia
December 05th, 10:30 am
The Prime Minister, Shri Narendra Modi has welcomed President of Russia, Vladimir Putin to India.The whole country will take inspiration from you: PM Modi during interaction with Indian Blind Women’s Cricket Team
November 28th, 10:15 am
PM Modi interacted warmly with the Indian Blind Women’s T20 World Cup Champions at his residence in 7, LKM, New Delhi. During the interaction, the PM acknowledged the team’s determination and resilience, appreciated the musical talent of one of the players and also highlighted the significance of 150 years of Vande Mataram. He remarked that their success is an inspiration not only for the differently-abled but for all citizens of India.Prime Minister Shri Narendra Modi interacts with Indian Blind Women’s T20 World Cup Champions
November 28th, 10:00 am
PM Modi interacted warmly with the Indian Blind Women’s T20 World Cup Champions at his residence in 7, LKM, New Delhi. During the interaction, the PM acknowledged the team’s determination and resilience, appreciated the musical talent of one of the players and also highlighted the significance of 150 years of Vande Mataram. He remarked that their success is an inspiration not only for the differently-abled but for all citizens of India.ಕಿಂಗ್ ಚಾರ್ಲ್ಸ್ III ಅವರು ಉಡುಗೊರೆಯಾಗಿ ನೀಡಿದ ಕದಂಬ ಸಸಿಯನ್ನು ತಮ್ಮ ನಿವಾಸದಲ್ಲಿ ನೆಟ್ಟ ಪ್ರಧಾನಮಂತ್ರಿ
September 19th, 05:24 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ತಮ್ಮ ನಿವಾಸವಾದ 7, ಲೋಕ ಕಲ್ಯಾಣ್ ಮಾರ್ಗ್‌ನಲ್ಲಿ ಕದಂಬ ಸಸಿಯನ್ನು ನೆಟ್ಟರು, ಇದನ್ನು ಘನತೆವೆತ್ತ ರಾಜ ಚಾರ್ಲ್ಸ್ III ಅವರು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರಿಗೆ ಉಡುಗೊರೆಯಾಗಿ ನೀಡಿದ್ದಾರೆ. ಅವರು ಪರಿಸರ ಮತ್ತು ಸುಸ್ಥಿರತೆಯ ಬಗ್ಗೆ ತುಂಬಾ ಉತ್ಸುಕರಾಗಿದ್ದಾರೆ, ಈ ವಿಷಯವು ನಮ್ಮ ಚರ್ಚೆಗಳಲ್ಲಿಯೂ ಕಾಣಿಸಿಕೊಳ್ಳುತ್ತದೆ ಎಂದು ಶ್ರೀ ಮೋದಿಯವರು ಹೇಳಿದ್ದಾರೆ.ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಶಿಕ್ಷಕರೊಂದಿಗಿನ ಸಭೆಯಲ್ಲಿ ಪ್ರಧಾನಮಂತ್ರಿ ಅವರ ಭಾಷಣದ ಅನುವಾದ
September 04th, 05:35 pm
ನಮ್ಮ ಸಂಪ್ರದಾಯದಲ್ಲಿ ಶಿಕ್ಷಕರ ಬಗ್ಗೆ ವಿಶೇಷ ಗೌರವವಿದೆ, ಮತ್ತು ಅವರು ಸಮಾಜದ ದೊಡ್ಡ ಶಕ್ತಿಯೂ ಹೌದು. ಶಿಕ್ಷಕರು ಆಶೀರ್ವಾದಕ್ಕಾಗಿ ಎದ್ದು ನಿಲ್ಲುವಂತೆ ಮಾಡುವುದು ತಪ್ಪು. ನಾನು ಅಂತಹ ಪಾಪವನ್ನು ಮಾಡಲು ಬಯಸುವುದಿಲ್ಲ. ಆದರೆ ನಾನು ಖಂಡಿತವಾಗಿಯೂ ನಿಮ್ಮೊಂದಿಗೆ ಸಂವಾದ ನಡೆಸಲು ಬಯಸುತ್ತೇನೆ. ನನಗೆ, ನಿಮ್ಮೆಲ್ಲರನ್ನು ಭೇಟಿಯಾಗುವ ಅವಕಾಶ ಸಿಕ್ಕಿರುವುದು ಅದ್ಭುತ ಅನುಭವವಾಗಿದೆ. ನಿಮ್ಮಲ್ಲಿ ಪ್ರತಿಯೊಬ್ಬರೂ ನಿಮ್ಮದೇ ಆದ ಕಥೆಯನ್ನು ಹೊಂದಿರಬೇಕು, ಏಕೆಂದರೆ ಅದು ಇಲ್ಲದೇ, ನೀವು ಈ ಹಂತವನ್ನು ತಲುಪುತ್ತಿರಲಿಲ್ಲ. ಆ ಎಲ್ಲಾ ಕಥೆಗಳನ್ನು ತಿಳಿದುಕೊಳ್ಳಲು ಸಾಕಷ್ಟು ಸಮಯವನ್ನು ಒದಗಿಸುವುದು ಕಷ್ಟ, ಆದರೆ ನಾನು ನಿಮ್ಮಿಂದ ಕಲಿಯಬಹುದಾದ ಸ್ವಲ್ಪವಾದರೂ ನಿಜವಾಗಿಯೂ ಸ್ಪೂರ್ತಿದಾಯಕವಾಗಿತ್ತು ಮತ್ತು ಅದಕ್ಕಾಗಿ, ನಾನು ನಿಮ್ಮೆಲ್ಲರನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ. ಈ ರಾಷ್ಟ್ರೀಯ ಪ್ರಶಸ್ತಿಯನ್ನು ಸ್ವೀಕರಿಸುವುದು ಕೊನೆಯಲ್ಲ. ಈಗ, ಈ ಪ್ರಶಸ್ತಿಯ ನಂತರ ಎಲ್ಲರ ಗಮನವು ನಿಮ್ಮ ಮೇಲಿದೆ. ಇದರರ್ಥ ನಿಮ್ಮ ವ್ಯಾಪ್ತಿಯು ಗಮನಾರ್ಹವಾಗಿ ವಿಸ್ತರಿಸಿದೆ. ಹಿಂದೆ, ನಿಮ್ಮ ಪ್ರಭಾವ ಅಥವಾ ಆದೇಶದ ವ್ಯಾಪ್ತಿಯು ಸೀಮಿತವಾಗಿತ್ತು, ಆದರೆ ಈಗ ಈ ಮನ್ನಣೆಯ ನಂತರ, ಅದು ಹೆಚ್ಚು ವಿಸ್ತಾರವಾಗಿ ಬೆಳೆಯಬಹುದು. ಇದು ಆರಂಭ ಎಂದು ನಾನು ನಂಬುತ್ತೇನೆ ಮತ್ತು ಈ ಅವಕಾಶವನ್ನು ಬಳಸಿಕೊಳ್ಳಬೇಕು. ನಿಮ್ಮೊಳಗೆ ಏನೇ ಇರಲಿ, ಅದನ್ನು ನೀವು ಸಾಧ್ಯವಾದಷ್ಟು ಹಂಚಿಕೊಳ್ಳಬೇಕು. ನೀವು ಹಾಗೆ ಮಾಡಿದಾಗ, ನಿಮ್ಮ ತೃಪ್ತಿಯ ಭಾವನೆ ಬೆಳೆಯುತ್ತದೆ ಮತ್ತು ನೀವು ಆ ದಿಕ್ಕಿನಲ್ಲಿ ಶ್ರಮಿಸುವುದನ್ನು ಮುಂದುವರಿಸಬೇಕು. ಈ ಪ್ರಶಸ್ತಿಗೆ ನಿಮ್ಮ ಆಯ್ಕೆಯು ನಿಮ್ಮ ಕಠಿಣ ಪರಿಶ್ರಮ ಮತ್ತು ನಿರಂತರ ಸಮರ್ಪಣೆಗೆ ಸಾಕ್ಷಿಯಾಗಿದೆ. ಅದಕ್ಕಾಗಿಯೇ ಇದು ಸಾಧ್ಯವಾಗಿದೆ. ಒಬ್ಬ ಶಿಕ್ಷಕ ಕೇವಲ ವರ್ತಮಾನದ ಬಗ್ಗೆ ಅಲ್ಲ, ರಾಷ್ಟ್ರದ ಭವಿಷ್ಯದ ಪೀಳಿಗೆಯನ್ನು ರೂಪಿಸುತ್ತಾನೆ, ಭವಿಷ್ಯವನ್ನು ಮೆರುಗುಗೊಳಿಸುತ್ತಾನೆ ಮತ್ತು ಇದು ಇತರರಿಗಿಂತ ಕಡಿಮೆಯಿಲ್ಲದ ರಾಷ್ಟ್ರ ಸೇವೆಯಾಗಿದೆ ಎಂದು ನಾನು ನಂಬುತ್ತೇನೆ. ಇಂದು, ನಿಮ್ಮಂತಹ ಕೋಟ್ಯಂತರ ಶಿಕ್ಷಕರು ಅದೇ ಭಕ್ತಿ, ಪ್ರಾಮಾಣಿಕತೆ ಮತ್ತು ಸಮರ್ಪಣೆಯೊಂದಿಗೆ ರಾಷ್ಟ್ರ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಎಲ್ಲರಿಗೂ ಇಲ್ಲಿಗೆ ಬರುವ ಅವಕಾಶ ಸಿಗುವುದಿಲ್ಲ. ಬಹುಶಃ ಅನೇಕರು ಪ್ರಯತ್ನಿಸಿಲ್ಲ, ಅಥವಾ ಕೆಲವರು ಗಮನಿಸಿಲ್ಲ. ಅಂತಹ ಸಾಮರ್ಥ್ಯಗಳನ್ನು ಹೊಂದಿರುವ ಅಸಂಖ್ಯಾತ ಜನರಿದ್ದಾರೆ. ಅವರೆಲ್ಲರ ಸಾಮೂಹಿಕ ಪ್ರಯತ್ನಗಳಿಂದ ರಾಷ್ಟ್ರವು ಮುಂದುವರಿಯುವುದು, ಹೊಸ ಪೀಳಿಗೆಗಳನ್ನು ಪೋಷಿಸುವುದನ್ನು, ರಾಷ್ಟ್ರಕ್ಕಾಗಿ ಬದುಕುವುದನ್ನು ಖಚಿತಪಡಿಸುತ್ತವೆ ಮತ್ತು ಅದರಲ್ಲಿ ಪ್ರತಿಯೊಬ್ಬರ ಕೊಡುಗೆಯೂ ಇದೆ.ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಶಿಕ್ಷಕರನ್ನು ಉದ್ದೇಶಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಭಾಷಣ
September 04th, 05:33 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯಲ್ಲಿ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಶಿಕ್ಷಕರನ್ನುದ್ದೇಶಿಸಿ ಭಾಷಣ ಮಾಡಿದರು. ಭಾರತೀಯ ಸಮಾಜವು ಶಿಕ್ಷಕರ ಬಗ್ಗೆ ಹೊಂದಿರುವ ಸ್ವಾಭಾವಿಕ ಗೌರವವನ್ನು ಶ್ಲಾಘಿಸಿದ ಶ್ರೀ ನರೇಂದ್ರ ಮೋದಿ, ಅವರು ರಾಷ್ಟ್ರ ನಿರ್ಮಾಣದಲ್ಲಿ ಪ್ರಬಲ ಶಕ್ತಿ ಎಂದು ಬಣ್ಣಿಸಿದರು. ಶಿಕ್ಷಕರನ್ನು ಗೌರವಿಸುವುದು ಕೇವಲ ಆಚರಣೆಯಲ್ಲ, ಆದರೆ ಅವರ ಜೀವಮಾನದ ಸಮರ್ಪಣೆ ಮತ್ತು ಪ್ರಭಾವದ ಮನ್ನಣೆಯಾಗಿದೆ ಎಂದು ಅವರು ಒತ್ತಿ ಹೇಳಿದರು.ರಕ್ಷಾ ಬಂಧನ ವಿಶೇಷ ಸಂಭ್ರಮಾಚರಣೆಯ ಮುಖ್ಯಾಂಶಗಳನ್ನು ಹಂಚಿಕೊಂಡ ಪ್ರಧಾನಮಂತ್ರಿ
August 09th, 03:04 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವದೆಹಲಿಯ ಲೋಕ ಕಲ್ಯಾಣ್ ಮಾರ್ಗದ ಸಂ. 7ರಲ್ಲಿರುವ ತಮ್ಮ ನಿವಾಸದಲ್ಲಿ ಮಕ್ಕಳೊಂದಿಗೆ ರಕ್ಷಾ ಬಂಧನವನ್ನು ವಿಶೇಷವಾಗಿ ಆಚರಿಸಿದ್ದು, ಈ ಸಂಭ್ರಮದ ಮುಖ್ಯಾಂಶಗಳನ್ನು ಹಂಚಿಕೊಂಡಿದ್ದಾರೆ. ಇದೇ ವೇಳೆ ನಾರಿ ಶಕ್ತಿಯ ನಿರಂತರ ನಂಬಿಕೆ ಮತ್ತು ವಾತ್ಸಲ್ಯಕ್ಕೆ ಶ್ರೀ ಮೋದಿ ಅವರು ಕೃತಜ್ಞತೆ ಅರ್ಪಿಸಿದ್ದಾರೆ.ಪ್ರಧಾನಮಂತ್ರಿಯವರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ
May 10th, 02:31 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯ 7, ಲೋಕ ಕಲ್ಯಾಣ್ ಮಾರ್ಗ್ ನಲ್ಲಿ ನಡೆದ ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಈ ಸಭೆಯಲ್ಲಿ ರಕ್ಷಣಾ ಸಚಿವರಾದ ಶ್ರೀ ರಾಜನಾಥ್ ಸಿಂಗ್, ರಾಷ್ಟ್ರೀಯ ಭದ್ರತಾ ಸಲಹೆಗಾರರಾದ (ಎನ್ ಎಸ್ ಎ) ಅಜಿತ್ ದೋವಲ್, ರಕ್ಷಣಾ ಪಡೆಗಳ ಮುಖ್ಯಸ್ಥರಾದ (ಸಿಡಿಎಸ್) ಜನರಲ್ ಅನಿಲ್ ಚೌಹಾಣ್, ಸಶಸ್ತ್ರ ಪಡೆಗಳ ಮುಖ್ಯಸ್ಥರು ಮತ್ತು ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದರು.ಪ್ರಧಾನಮಂತ್ರಿ ಅವರ ಅಧ್ಯಕ್ಷತೆಯಲ್ಲಿ ರಕ್ಷಣಾ ಸಚಿವರು, ರಾಷ್ಟ್ರೀಯ ಭದ್ರತಾ ಸಲಹೆಗಾರರು, ರಕ್ಷಣಾ ಸಿಬ್ಬಂದಿ ಮುಖ್ಯಸ್ಥರು, ಸಶಸ್ತ್ರ ಪಡೆಗಳ ಮುಖ್ಯಸ್ಥರು ಮತ್ತು ಹಿರಿಯ ಅಧಿಕಾರಿಗಳ ಸಭೆ
May 09th, 10:24 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ರಕ್ಷಣಾ ಸಚಿವರಾದ ಶ್ರೀ ರಾಜನಾಥ್ ಸಿಂಗ್, ರಾಷ್ಟ್ರೀಯ ಭದ್ರತಾ ಸಲಹೆಗಾರರಾದ ಶ್ರೀ ಅಜಿತ್ ದೋವಲ್, ರಕ್ಷಣಾ ಸಿಬ್ಬಂದಿ ಮುಖ್ಯಸ್ಥರಾದ ಜನರಲ್ ಅನಿಲ್ ಚೌಹಾಣ್, ಸಶಸ್ತ್ರ ಪಡೆಗಳ ಮುಖ್ಯಸ್ಥರು ಮತ್ತು ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.ಪ್ರಧಾನಮಂತ್ರಿಯವರ ಅಧ್ಯಕ್ಷತೆಯಲ್ಲಿ ಭದ್ರತೆ ಕುರಿತ ಸಂಪುಟ ಸಮಿತಿ (CCS) ಸಭೆ
April 23rd, 09:00 pm
ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 7, ಲೋಕ ಕಲ್ಯಾಣ್ ಮಾರ್ಗ್‌ನಲ್ಲಿ ಭದ್ರತೆ ಕುರಿತ ಸಂಪುಟ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿದ್ದರು.ದಾವೂದಿ ಬೊಹ್ರಾ ಸಮುದಾಯದ ನಿಯೋಗದೊಂದಿಗೆ ಪ್ರಧಾನಮಂತ್ರಿ ಸಂವಾದ
April 17th, 08:05 pm
ಈ ನಿಯೋಗದಲ್ಲಿ ಉದ್ಯಮ ನಾಯಕರು, ವೃತ್ತಿಪರರು, ವೈದ್ಯರು, ಶಿಕ್ಷಣ ತಜ್ಞರು ಮತ್ತು ದಾವೂದಿ ಬೊಹ್ರಾ ಸಮುದಾಯದ ಪ್ರಮುಖ ಪ್ರತಿನಿಧಿಗಳು ಭಾಗವಹಿಸಿದ್ದರು. ಅವರು ತಮ್ಮ ಕಷ್ಟಗಳನ್ನು ವಿವರಿಸಿದರು ಮತ್ತು ತಮ್ಮ ಸಮುದಾಯದ ಸದಸ್ಯರ ಆಸ್ತಿಗಳನ್ನು ವಕ್ಫ್ ಮಂಡಳಿಯು ಅಕ್ರಮವಾಗಿ ವಶಪಡಿಸಿಕೊಂಡ ಕಥೆಗಳನ್ನು ಹಂಚಿಕೊಂಡರು. ವಕ್ಫ್ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತಂದಿದ್ದಕ್ಕಾಗಿ ಪ್ರಧಾನ ಮಂತ್ರಿಯವರಿಗೆ ಕೃತಜ್ಞತೆ ಸಲ್ಲಿಸಿದರು ಮತ್ತು ಇದು ಬಹಳ ಕಾಲದಿಂದ ನೆನೆಗುದಿಗೆ ಬಿದ್ದಿದ್ದ ಬೇಡಿಕೆಯಾಗಿತ್ತು ಎಂದು ತಿಳಿಸಿದರು.ಮುದ್ರಾ ಯೋಜನೆಯ ಫಲಾನುಭವಿಗಳೊಂದಿಗೆ ಪ್ರಧಾನಮಂತ್ರಿ ಸಂವಾದ
April 08th, 01:30 pm
ಸರ್, ನಾನು ಸಾಕುಪ್ರಾಣಿಗಳ ಹವ್ಯಾಸದಿಂದ ಇಂದು ಉದ್ಯಮಶೀಲನಾದ ನನ್ನ ಕಥೆ ಹಂಚಿಕೊಳ್ಳಲು ಬಯಸುತ್ತೇನೆ. ನನ್ನ ವ್ಯವಹಾರದ ಹೆಸರು ಕೆ9 ವರ್ಲ್ಡ್, ಅಲ್ಲಿ ನಾವು ಎಲ್ಲಾ ರೀತಿಯ ಸಾಕುಪ್ರಾಣಿಗಳು, ಮುದ್ದಿನ ಪ್ರಾಣಿಗಳು ಮತ್ತು ಔಷಧಗಳ ಪೂರೈಕೆ ಮಾಡುತ್ತಿದ್ದೇವೆ. ಸರ್, ಮುದ್ರಾ ಸಾಲ ಪಡೆದ ನಂತರ, ನಾವು ಅನೇಕ ಸೌಲಭ್ಯಗಳನ್ನು ಪ್ರಾರಂಭಿಸಿದ್ದೇವೆ, ನಾವು ಸಾಕುಪ್ರಾಣಿಗಳಿಗೆ ವಸತಿ ಸೌಲಭ್ಯ ಪ್ರಾರಂಭಿಸಿದ್ದೇವೆ, ಸಾಕುಪ್ರಾಣಿ ಪೋಷಕರಾಗಿರುವ ಯಾರಾದರೂ, ಅವರು ಎಲ್ಲೋ ಹೊರಗೆ ಹೋಗುತ್ತಿದ್ದರೆ, ಅವರು ತಮ್ಮ ಸಾಕುಪ್ರಾಣಿಗಳನ್ನು ನಮ್ಮೊಂದಿಗೆ ಬಿಡಬಹುದು, ಅವರ ಸಾಕುಪ್ರಾಣಿಗಳು ನಮ್ಮೊಂದಿಗೆ ಮನೆಯ ವಾತಾವರಣದಲ್ಲಿ ಉಳಿಯುತ್ತವೆ, ಸರ್. ಪ್ರಾಣಿಗಳ ಮೇಲೆ ನನಗೆ ಇರುವ ಪ್ರೀತಿ ವಿಭಿನ್ನವಾಗಿದೆ ಸರ್, ನಾನು ಅವುಗಳನ್ನು ತಿನ್ನುತ್ತೇನೋ ಇಲ್ಲವೋ ಎಂಬುದು ಮುಖ್ಯವಲ್ಲ, ಆದರೆ ಅವುಗಳಿಗೆ ನಾನು ಆಹಾರ ನೀಡುತ್ತೇನೆ ಸರ್.ಮುದ್ರಾ ಯೋಜನೆಯ ಫಲಾನುಭವಿಗಳೊಂದಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಸಂವಾದ
April 08th, 01:03 pm
ಪ್ರಧಾನಮಂತ್ರಿ ಮುದ್ರಾ ಯೋಜನೆಗೆ 10 ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯ 7, ಲೋಕ ಕಲ್ಯಾಣ್ ಮಾರ್ಗದಲ್ಲಿ ಮುದ್ರಾ ಯೋಜನೆಯ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದರು. ಅವರು ಹಾಜರಿದ್ದ ಎಲ್ಲರಿಗೂ ಹೃತ್ಪೂರ್ವಕ ಕೃತಜ್ಞತೆಗಳನ್ನು ವ್ಯಕ್ತಪಡಿಸಿದರು ಮತ್ತು ಅತಿಥಿಗಳನ್ನು ಸ್ವಾಗತಿಸುವ ಸಾಂಸ್ಕೃತಿಕ ಮಹತ್ವ ಮತ್ತು ಮನೆಯಲ್ಲಿ ಅವರ ಉಪಸ್ಥಿತಿಯು ತರುವ ಪಾವಿತ್ರ್ಯವನ್ನು ಒತ್ತಿ ಹೇಳಿದರು. ಭಾಗವಹಿಸುವವರು ತಮ್ಮ ಅನುಭವಗಳನ್ನು ಹಂಚಿಕೊಳ್ಳುವಂತೆ ಅವರು ಆಹ್ವಾನಿಸಿದರು. ಸಾಕುಪ್ರಾಣಿ ಸರಬರಾಜು, ಔಷಧಿ ಮತ್ತು ಸೇವೆಗಳ ಉದ್ಯಮಿಯಾಗಿ ಬದಲಾದ ಫಲಾನುಭವಿಯೊಂದಿಗೆ ಶ್ರೀ ಮೋದಿ ಅವರು ಸಂವಾದ ನಡೆಸುತ್ತಾ, ಸವಾಲಿನ ಸಮಯದಲ್ಲಿ ತಮ್ಮ ಸಾಮರ್ಥ್ಯದಲ್ಲಿ ನಂಬಿಕೆ ಇಟ್ಟವರಿಗೆ ಕೃತಜ್ಞತೆ ವ್ಯಕ್ತಪಡಿಸುವ ಮಹತ್ವವನ್ನು ಒತ್ತಿ ಹೇಳಿದರು. ಸಾಲ ಮಂಜೂರು ಮಾಡಿದ ಬ್ಯಾಂಕ್ ಅಧಿಕಾರಿಗಳನ್ನು ಆಹ್ವಾನಿಸಿ, ಸಾಲದಿಂದ ಆಗಿರುವ ಪ್ರಗತಿಯನ್ನು ತೋರಿಸುವಂತೆ ಅವರು ಫಲಾನುಭವಿಗೆ ತಿಳಿಸಿದರು. ಇಂತಹ ಕ್ರಮಗಳು ಅವರ ನಂಬಿಕೆಯನ್ನು ದೃಢೀಕರಿಸುವುದಲ್ಲದೆ, ದೊಡ್ಡ ಕನಸು ಕಾಣುವ ಧೈರ್ಯವಿರುವ ವ್ಯಕ್ತಿಗಳನ್ನು ಬೆಂಬಲಿಸುವ ನಿರ್ಧಾರ ಕೈಗೊಳ್ಳುವಲ್ಲಿ ವಿಶ್ವಾಸವನ್ನು ತುಂಬುತ್ತವೆ ಎಂದು ಶ್ರೀ ಮೋದಿ ಒತ್ತಿ ಹೇಳಿದರು. ಅವರ ಬೆಂಬಲದಿಂದ ಬಂದ ಫಲಿತಾಂಶಗಳನ್ನು ಪ್ರದರ್ಶಿಸುವುದರಿಂದ ಬೆಳವಣಿಗೆ ಮತ್ತು ಯಶಸ್ಸನ್ನು ಉತ್ತೇಜಿಸುವಲ್ಲಿ ತಮ್ಮ ಕೊಡುಗೆಯ ಬಗ್ಗೆ ಅವರು ನಿಸ್ಸಂದೇಹವಾಗಿ ಹೆಮ್ಮೆ ಪಡುವಂತೆ ಮಾಡುತ್ತದೆ ಎಂದು ಪ್ರಧಾನಿ ಹೇಳಿದರು.ಮಹಾನ್ ತಮಿಳು ಕವಿ ಮತ್ತು ಸ್ವಾತಂತ್ರ್ಯ ಹೋರಾಟಗಾರ ಸುಬ್ರಹ್ಮಣ್ಯ ಭಾರತಿ ಅವರ ಸಂಪೂರ್ಣ ಕೃತಿಗಳ ಸಂಕಲನ 2024ರ ಡಿಸೆಂಬರ್ 11 ರಂದು ಪ್ರಧಾನಮಂತ್ರಿ ಅವರಿಂದ ಬಿಡುಗಡೆ
December 10th, 05:12 pm
ಸುಬ್ರಮಣ್ಯ ಭಾರತಿಯವರ ಬರಹಗಳು ಜನರಲ್ಲಿ ದೇಶಪ್ರೇಮವನ್ನು ತುಂಬುವ ಜೊತೆಗೆ, ಜನಸಾಮಾನ್ಯರು ಅರ್ಥೈಸಿಕೊಳ್ಳಬಹುದಾದ ಸರಳ ಭಾಷೆಯಲ್ಲಿ ಭಾರತೀಯ ಸಂಸ್ಕೃತಿ ಮತ್ತು ದೇಶದ ಆಧ್ಯಾತ್ಮಿಕ ಪರಂಪರೆಯ ಸಾರವನ್ನು ಹೇಳಿವೆ. ಸೀನಿ ವಿಶ್ವನಾಥನ್ ಅವರು ಸಂಕಲನ ಮಾಡಿ ಸಂಪಾದಿಸಿರುವ ಸುಬ್ರಹ್ಮಣ್ಯ ಭಾರತಿ ಅವರ ಸಂಪೂರ್ಣ ಕೃತಿಗಳ 23 ಸಂಪುಟಗಳನ್ನು ಅಲಯನ್ಸ್ ಪ್ರಕಾಶನ ಪ್ರಕಟಿಸಿದೆ. ಇದು ಸುಬ್ರಮಣ್ಯ ಭಾರತಿಯವರ ಬರಹಗಳ ಆವೃತ್ತಿಗಳು, ವಿವರಣೆಗಳು, ದಾಖಲೆಗಳು, ಹಿನ್ನೆಲೆ ಮಾಹಿತಿ ಮತ್ತು ತಾತ್ವಿಕ ಪ್ರಸ್ತುತಿಗಳ ವಿವರಗಳನ್ನು ಒಳಗೊಂಡಿದೆ.ಪ್ರಧಾನಮಂತ್ರಿ ಅವರ ಅಧ್ಯಕ್ಷತೆಯಲ್ಲಿ ಸೆಮಿಕಂಡಕ್ಟರ್ ಕಾರ್ಯನಿರ್ವಾಹಕರ ದುಂಡುಮೇಜಿನ ಸಭೆ
September 10th, 08:10 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಬೆಳಿಗ್ಗೆ ಲೋಕ ಕಲ್ಯಾಣ ಮಾರ್ಗದ 7 ರಲ್ಲಿರುವ ತಮ್ಮ ನಿವಾಸದಲ್ಲಿ ಅರೆವಾಹಕ (ಸೆಮಿ ಕಂಡಕ್ಟರ್ ) ಕಾರ್ಯನಿರ್ವಾಹಕರ ದುಂಡುಮೇಜಿನ ಸಭೆಯ ಅಧ್ಯಕ್ಷತೆ ವಹಿಸಿದ್ದರು.ದೇಶದ ವೈಜ್ಞಾನಿಕ ಸಮುದಾಯವು ಅವರ ಪ್ರಯತ್ನಗಳಿಗೆ ಸಂಪನ್ಮೂಲಗಳ ಕೊರತೆಯಾಗುವುದಿಲ್ಲ ಎಂಬ ನಂಬಿಕೆಯನ್ನು ಹೊಂದಿರಬೇಕು: ಪ್ರಧಾನಮಂತ್ರಿ
September 10th, 04:43 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಬೆಳಿಗ್ಗೆ ಲೋಕ ಕಲ್ಯಾಣ ಮಾರ್ಗದ, 7ರಲ್ಲಿರುವ ತಮ್ಮ ನಿವಾಸದಲ್ಲಿ ಅನುಸಂಧಾನ್ ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನದ ಆಡಳಿತ ಮಂಡಳಿಯ ಮೊದಲ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಭಾರತದ ವಿಜ್ಞಾನ ಮತ್ತು ತಂತ್ರಜ್ಞಾನ ಭೂದೃಶ್ಯ ಮತ್ತು ಸಂಶೋಧನೆ ಹಾಗು ಅಭಿವೃದ್ಧಿ ಕಾರ್ಯಕ್ರಮಗಳ ಮರುವಿನ್ಯಾಸದ ಬಗ್ಗೆ ಚರ್ಚೆ ನಡೆಯಿತು.2023 ಶ್ರೇಣಿಯ ಐ.ಎಫ್.ಎಸ್. ಅಧಿಕಾರಿ ಪ್ರಶಿಕ್ಷಣಾರ್ಥಿಗಳು ಪ್ರಧಾನ ಮಂತ್ರಿ ಅವರನ್ನು ಭೇಟಿ ಮಾಡಿದರು
August 29th, 06:35 pm
ಭಾರತೀಯ ವಿದೇಶಾಂಗ ಸೇವೆಯ (ಐ.ಎಫ್.ಎಸ್) 2023 ಶ್ರೇಣಿಯ ಅಧಿಕಾರಿ ಪ್ರಶಿಕ್ಷಣಾರ್ಥಿಗಳು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಇಂದು ಮುಂಜಾನೆ 7, ಲೋಕ ಕಲ್ಯಾಣ್ ಮಾರ್ಗ್ ನಲ್ಲಿರುವ ಪ್ರಧಾನಮಂತ್ರಿಯವರ ನಿವಾಸದಲ್ಲಿ ಭೇಟಿ ಮಾಡಿದರು. ಇವರು 15 ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಆಯ್ಕೆ ಆಗಿರುವ 2023 ರ ಶ್ರೇಣಿಯ 36 ಐ.ಎಫ್.ಎಸ್ ಅಧಿಕಾರಿ ಪ್ರಶಿಕ್ಷಣಾರ್ಥಿಗಳಾಗಿದ್ದಾರೆ.ಪ್ರಧಾನ ಮಂತ್ರಿ ಮೋದಿಯವರನ್ನು ಭೇಟಿ ಮಾಡಿದ ಮಾಜಿ ಪ್ರಧಾನ ಮಂತ್ರಿ ಹೆಚ್ ಡಿ ದೇವೇಗೌಡ
July 25th, 08:41 pm
ಮಾಜಿ ಪ್ರಧಾನ ಮಂತ್ರಿ ಶ್ರೀ ಹೆಚ್ ಡಿ ದೇವೇಗೌಡ ಅವರು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರನ್ನು ದೆಹಲಿಯ 7, ಲೋಕ ಕಲ್ಯಾಣ ಮಾರ್ಗದಲ್ಲಿರುವ ಅವರ ನಿವಾಸದಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದರು.ರೆಮಲ್ ಚಂಡಮಾರುತದ ಸನ್ನದ್ಧತೆಯನ್ನು ಪ್ರಧಾನಮಂತ್ರಿ ಪರಿಶೀಲಿಸಿದರು
May 26th, 09:20 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮುಂಜಾನೆ 7, ಲೋಕ ಕಲ್ಯಾಣ್ ಮಾರ್ಗ್‌ನಲ್ಲಿರುವ ತಮ್ಮ ನಿವಾಸದಲ್ಲಿ ಉತ್ತರ ಬಂಗಾಳ ಕೊಲ್ಲಿಯಲ್ಲಿ ರೆಮಲ್ ಚಂಡಮಾರುತದ ಸಿದ್ಧತೆಯನ್ನು ಪರಿಶೀಲಿಸಲು ಸಭೆಯ ಅಧ್ಯಕ್ಷತೆ ವಹಿಸಿದ್ದರು.ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿ ಪುರಸ್ಕೃತರೊಂದಿಗೆ ಪ್ರಧಾನಮಂತ್ರಿ ಸಂವಾದ
January 23rd, 06:01 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಬೆಳಗ್ಗೆ 7 ಲೋಕ ಕಲ್ಯಾಣ ಮಾರ್ಗದಲ್ಲಿರುವ ತಮ್ಮ ನಿವಾಸದಲ್ಲಿ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ (ಪಿ.ಎಂ.ಆರ್.ಬಿ.ಪಿ.) ಪ್ರಶಸ್ತಿ ಪುರಸ್ಕೃತರೊಂದಿಗೆ ಸಂವಾದ ನಡೆಸಿದರು.