​​​​​​​ಏಷ್ಯನ್ ಕ್ರೀಡಾಕೂಟದಲ್ಲಿ ಪುರುಷರ ಕಾಕ್ಸ್ ಲೆಸ್ ಜೋಡಿ ರೋಯಿಂಗ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದ ಬಾಬುಲಾಲ್ ಯಾದವ್ ಮತ್ತು ಲೇಖರಾಮ್ ಅವರನ್ನು ಅಭಿನಂದಿಸಿದ ಪ್ರಧಾನಿ

September 24th, 11:10 pm

ಏಷ್ಯನ್ ಕ್ರೀಡಾಕೂಟ 2022ರ ಪುರುಷರ ಕಾಕ್ಸ್ ಲೆಸ್ ಜೋಡಿ ರೋಯಿಂಗ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದಿದ್ದಕ್ಕಾಗಿ ಬಾಬುಲಾಲ್ ಯಾದವ್ ಮತ್ತು ಲೇಖರಾಮ್ ಅವರನ್ನು ಶ್ಲಾಘಿಸಿರುವ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು “ನಿಮ್ಮ ಪ್ರಯತ್ನಗಳು ಮತ್ತು ದಣಿವರಿಯದ ಬದ್ಧತೆಯಿಂದ ನೀವು ಹಲವು ಭಾರತೀಯರ ಆಕಾಂಕ್ಷೆಗಳನ್ನು ಈಡೇರಿಸಿದ್ದೀರಿ’’ ಎಂದು ಹೇಳಿದ್ದಾರೆ. ಅಲ್ಲದೆ, ಪ್ರಧಾನಿ ಅವರು ಈ ಆಟಗಾರರ ಮಂದಿನ ಪ್ರಯತ್ನಗಳಿಗೆ ಶುಭ ಕೋರಿದ್ದಾರೆ.