ಪ್ರಧಾನಮಂತ್ರಿ ಅವರು ಮಹಾತ್ಮ ಅಯ್ಯಂಕಾಳಿ ಅವರ ಜಯಂತಿಯಂದು ಅವರಿಗೆ ಗೌರವ ಸಲ್ಲಿಸಿದರು
August 28th, 03:45 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಹಾತ್ಮ ಅಯ್ಯಂಕಾಳಿ ಅವರ ಜಯಂತಿಯಂದು ಅವರಿಗೆ ಹೃತ್ಪೂರ್ವಕ ಗೌರವ ಸಲ್ಲಿಸಿದರು, ಅವರನ್ನು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣದ ಶಾಶ್ವತ ಸಂಕೇತ ಎಂದು ಸ್ಮರಿಸಿದರು. ಶ್ರೀ ಮೋದಿ ಅವರು, ಶಿಕ್ಷಣ ಮತ್ತು ಸಮಾನತೆಗೆ ಮಹಾತ್ಮ ಅಯ್ಯಂಕಾಳಿ ಅವರ ಅಚಲ ಬದ್ಧತೆ, ಜೊತೆಗೆ ಅವರ ಪರಂಪರೆಯು ಸಮಗ್ರ ಪ್ರಗತಿಯತ್ತ ರಾಷ್ಟ್ರದ ಸಾಮೂಹಿಕ ಪ್ರಯಾಣವನ್ನು ಈಗಲೂ ಪ್ರೇರೇಪಿಸುತ್ತಿದೆ ಎಂದು ಉಲ್ಲೇಖಿಸಿದರು.ಅಹಮದಾಬಾದ್ ನಲ್ಲಿ ಸರ್ದಾರ್ ಧಾಮ್ ಹಂತ-II, ಬಾಲಕಿಯರ ಹಾಸ್ಟೆಲ್ ನ ಶಿಲಾನ್ಯಾಸ ಸಮಾರಂಭದಲ್ಲಿ ಪ್ರಧಾನಮಂತ್ರಿ ಅವರ ಭಾಷಣ
August 24th, 10:39 pm
ಕೇಂದ್ರ ಸಚಿವ ಸಂಪುಟದ ನನ್ನ ಎಲ್ಲ ಸಹೋದ್ಯೋಗಿಗಳೇ, ಗುಜರಾತ್ ಸರ್ಕಾರದ ಎಲ್ಲ ಸಚಿವರೇ, ಇಲ್ಲಿ ನೆರೆದಿರುವ ಎಲ್ಲ ಸಂಸತ್ ಸದಸ್ಯರೇ, ಎಲ್ಲ ಶಾಸಕರೇ, ಸರ್ದಾರ್ ಧಾಮದ ಅಧ್ಯಕ್ಷರಾದ ಶ್ರೀ ಗಗ್ಜಿ ಭಾಯಿ ಅವರೇ, ಟ್ರಸ್ಟಿ ವಿ.ಕೆ. ಪಟೇಲ್ ಅವರೇ, ದಿಲೀಪ್ ಭಾಯಿ ಅವರೇ, ಎಲ್ಲ ಗಣ್ಯರೇ, ಹಾಗೂ ನನ್ನ ಪ್ರೀತಿಯ ಸಹೋದರ ಮತ್ತು ಸಹೋದರಿಯರೇ, ವಿಶೇಷವಾಗಿ ನನ್ನ ಪ್ರೀತಿಯ ಹೆಣ್ಣು ಮಕ್ಕಳೇ.ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಹ್ಮದಾಬಾದ್ ನ ʻಸರ್ದಾರ್ ಧಾಮ್ʼ ಎರಡನೇ ಹಂತದ ಬಾಲಕಿಯರ ವಸತಿಗೃಹದ ಶಂಕುಸ್ಥಾಪನೆ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು
August 24th, 10:25 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಗುಜರಾತ್ ನ ಅಹ್ಮದಾಬಾದ್ ನಲ್ಲಿ ಸರ್ದಾರ್ ಧಾಮ್ ಹಂತ-2ರ ಬಾಲಕಿಯರ ವಸತಿಗೃಹದ ಶಂಕುಸ್ಥಾಪನೆ ಸಮಾರಂಭವನ್ನು ಉದ್ದೇಶಿಸಿ ವಿಡಿಯೋ ಸಂದೇಶದ ಮೂಲಕ ಮಾತನಾಡಿದರು. ಸಭಿಕರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಅವರು, ಸರ್ದಾರ್ ಧಾಮದ ಹೆಸರು ಅದರ ಕಾರ್ಯದಷ್ಟೇ ಪವಿತ್ರವಾಗಿದೆ ಎಂದು ಬಣ್ಣಿಸಿದರು. ಹೆಣ್ಣುಮಕ್ಕಳ ಸೇವೆ ಮತ್ತು ಶಿಕ್ಷಣಕ್ಕಾಗಿ ಮೀಸಲಾಗಿರುವ ವಸತಿಗೃಹದ ಉದ್ಘಾಟನೆಯ ಬಗ್ಗೆ ಒತ್ತಿ ಹೇಳಿದರು. ಈ ವಸತಿಗೃಹದಲ್ಲಿ ತಂಗುವ ಬಾಲಕಿಯರು ಆಕಾಂಕ್ಷೆಗಳು ಮತ್ತು ಕನಸುಗಳನ್ನು ಹೊಂದಿರುತ್ತಾರೆ ಮತ್ತು ಅವುಗಳನ್ನು ಪೂರೈಸಲು ಹಲವಾರು ಅವಕಾಶಗಳನ್ನು ಒದಗಿಸಲಾಗುವುದು ಎಂದು ಅವರು ಹೇಳಿದರು. ಈ ಹೆಣ್ಣುಮಕ್ಕಳು ಒಮ್ಮೆ ಸ್ವಾವಲಂಬಿಗಳು ಮತ್ತು ಸಮರ್ಥರಾಗಿ ಬದಲಾದರೆ, ಅವರು ಸಹಜವಾಗಿಯೇ ರಾಷ್ಟ್ರ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ ಮತ್ತು ಅವರ ಕುಟುಂಬಗಳು ಸಹ ಸಬಲೀಕರಣಗೊಳ್ಳುತ್ತವೆ ಎಂದು ಶ್ರೀ ಮೋದಿ ಅವರು ಒತ್ತಿ ಹೇಳಿದರು. ತಮ್ಮ ಶುಭ ಹಾರೈಕೆಗಳನ್ನು ತಿಳಿಸಿದ ಪ್ರಧಾನಮಂತ್ರಿ ಅವರು, ಈ ವಸತಿಗೃಹದಲ್ಲಿ ಉಳಿಯಲು ಅವಕಾಶ ಪಡೆದ ಎಲ್ಲ ಹೆಣ್ಣುಮಕ್ಕಳಿಗೆ ಮತ್ತು ಉಜ್ವಲ ಭವಿಷ್ಯಕ್ಕಾಗಿ ಅವರ ಕುಟುಂಬ ಸದಸ್ಯರಿಗೆ ತಮ್ಮ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸಿದರು.ಬೆಳವಣಿಗೆ ಮತ್ತು ಕಲಿಕೆಗಾಗಿ ಬೇಸಿಗೆ ರಜೆಯನ್ನು ಉಪಯೋಗಿಸಿಕೊಳ್ಳುವಂತೆ ಯುವಕರಿಗೆ ಪ್ರಧಾನಮಂತ್ರಿಯವರ ಕಿವಿಮಾತು
April 01st, 12:05 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು, ಬೇಸಿಗೆ ರಜೆಯ ಈ ಸಂದರ್ಭದಲ್ಲಿ ರಾಷ್ಟ್ರದಾದ್ಯಂತ ತಮ್ಮ ಯುವ ಸ್ನೇಹಿತರಿಗೆ ಹಾರ್ದಿಕ ಶುಭಾಶಯಗಳನ್ನು ತಿಳಿಸಿದ್ದಾರೆ. ಈ ಬೇಸಿಗೆ ರಜೆಯ ಸಮಯವನ್ನು ಆನಂದ, ಕಲಿಕೆ ಮತ್ತು ವೈಯಕ್ತಿಕ ಬೆಳವಣಿಗೆಗೆ ಬಳಸಿಕೊಳ್ಳುವಂತೆ ಪ್ರೋತ್ಸಾಹಿಸಿದ್ದಾರೆ.