ಕಾಮನ್‌ವೆಲ್ತ್ ರಾಷ್ಟ್ರಗಳ ಲೋಕಸಭೆಗಳ ಸ್ಪೀಕರ್‌ಗಳು ಮತ್ತು ಅಧ್ಯಕ್ಷಾಧಿಕಾರಿಗಳ 28ನೇ ಸಮ್ಮೇಳನದಲ್ಲಿ ಪ್ರಧಾನಮಂತ್ರಿ ಅವರ ಭಾಷಣದ ಕನ್ನಡ ಅವತರಣಿಕೆ
January 15th, 11:00 am
ಲೋಕಸಭೆಯ ಗೌರವಾನ್ವಿತ ಸ್ಪೀಕರ್ ಶ್ರೀ ಓಂ ಬಿರ್ಲಾ ಜೀ, ರಾಜ್ಯಸಭೆಯ ಉಪಸಭಾಪತಿ ಶ್ರೀ ಹರಿವಂಶ್ ಜೀ, ಅಂತರ-ಸಂಸದೀಯ ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ಟುಲಿಯಾ ಆಕ್ಸನ್, ಕಾಮನ್ವೆಲ್ತ್ ಸಂಸದೀಯ ಸಂಘದ ಅಧ್ಯಕ್ಷರಾದ ಶ್ರೀ ಕ್ರಿಸ್ಟೋಫರ್ ಕಲಿಲಾ, ಕಾಮನ್ವೆಲ್ತ್ ದೇಶಗಳ ಸ್ಪೀಕರ್‌ಗಳು ಮತ್ತು ಸಭಾಧ್ಯಕ್ಷರು, ಹಾಗು ಪ್ರತಿನಿಧಿಗಳೇ, ಮಹಿಳೆಯರೇ ಮತ್ತು ಮಹನೀಯರೇ!ಸಂವಿದಾನ ಸದನದ ಸೆಂಟ್ರಲ್ ಹಾಲ್‌ನಲ್ಲಿ ಕಾಮನ್‌ವೆಲ್ತ್‌ನ ಸ್ಪೀಕರ್‌ಗಳು ಮತ್ತು ಪೀಠಾಸೀನಾಧಿಕಾರಿಗಳ 28ನೇ ಸಮ್ಮೇಳನ ಉದ್ಘಾಟಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ
January 15th, 10:32 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಇಂದು ನವದೆಹಲಿಯ ಸಂಸತ್ ಭವನದ ಸಂಕೀರ್ಣದಲ್ಲಿರುವ ಸಂವಿಧಾನ ಸದನದ ಸೆಂಟ್ರಲ್ ಹಾಲ್‌ನಲ್ಲಿ ನಡೆದ ಕಾಮನ್‌ವೆಲ್ತ್‌ನ ಸ್ಪೀಕರ್‌ಗಳು ಮತ್ತು ಸಭಾಧ್ಯಕ್ಷರ 28 ನೇ ಸಮ್ಮೇಳನವನ್ನು (ಸಿಎಸ್‌ಪಿಒಸಿ) ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಶ್ರೀ ನರೇಂದ್ರ ಮೋದಿ, ಸಂಸದೀಯ ಪ್ರಜಾಪ್ರಭುತ್ವದಲ್ಲಿ ಸ್ಪೀಕರ್ ಪಾತ್ರ ವಿಶಿಷ್ಟವಾಗಿದೆ ಎಂದು ಹೇಳಿದರು. ಸ್ಪೀಕರ್‌ಗೆ ಹೆಚ್ಚು ಮಾತನಾಡಲು ಅವಕಾಶವಿಲ್ಲ, ಆದರೆ ಅವರ ಜವಾಬ್ದಾರಿ ಇತರರ ಮಾತುಗಳನ್ನು ಕೇಳುವುದು ಮತ್ತು ಪ್ರತಿಯೊಬ್ಬರೂ ತಮ್ಮ ಅನಿಸಿಕೆಗಳನ್ನು ಅಭಿವ್ಯಕ್ತ ವ್ಯಕ್ತಪಡಿಸಲು ಅವಕಾಶ ದೊರಕುವಂತೆ ನೋಡಿಕೊಳ್ಳುವುದಾಗಿದೆ ಎಂದು ಅವರು ಒತ್ತಿ ಹೇಳಿದರು. ಗದ್ದಲದ ಮತ್ತು ಅತಿಯಾದ ಉತ್ಸಾಹಭರಿತ ಸದಸ್ಯರನ್ನು ಸಹ ನಗುವಿನೊಂದಿಗೆ ನಿಭಾಯಿಸುವ ಸ್ಪೀಕರ್‌ಗಳ ಸಾಮಾನ್ಯ ಲಕ್ಷಣವೆಂದರೆ ತಾಳ್ಮೆ ಎಂದು ಅವರು ಬಲವಾಗಿ ಪ್ರತಿಪಾದಿಸಿದರು.ದೆಹಲಿಯಲ್ಲಿ ನಡೆದ ವೀರ್ ಬಾಲ್ ದಿವಸ್ ಕಾರ್ಯಕ್ರಮ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
December 26th, 01:30 pm
ಇಂದು ದೇಶವು ವೀರ್ ಬಾಲ್ ದಿವಸ್ ಆಚರಿಸುತ್ತಿದೆ. ಇದೀಗ ವಂದೇ ಮಾತರಂನ ಸುಂದರವಾದ ಗಾಯನವನ್ನು ನಾವು ಆಲಿಸಿದ್ದೇವೆ, ನಿಮ್ಮ ಕಠಿಣ ಪರಿಶ್ರಮ ಇಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ.ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವದೆಹಲಿಯಲ್ಲಿ ನಡೆದ ವೀರ ಬಾಲ ದಿವಸ್ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು
December 26th, 01:00 pm
ನವದೆಹಲಿಯ ಭಾರತ ಮಂಟಪದಲ್ಲಿ ಇಂದು ನಡೆದ 'ವೀರ ಬಾಲ ದಿವಸ್' ರಾಷ್ಟ್ರೀಯ ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು, ದೇಶದಾದ್ಯಂತ ಆಗಮಿಸಿದ್ದ ಅತಿಥಿಗಳನ್ನು ಸ್ವಾಗತಿಸಿದರು ಮತ್ತು ಅಲ್ಲಿ ನೆರೆದಿದ್ದ ಮಕ್ಕಳನ್ನು ಉದ್ದೇಶಿಸಿ ಮಾತನಾಡುತ್ತಾ, ಇಂದು ದೇಶವು 'ವೀರ ಬಾಲ ದಿವಸ್' ಆಚರಿಸುತ್ತಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಪ್ರಸ್ತುತಪಡಿಸಲಾದ 'ವಂದೇ ಮಾತರಂ'ನ ಸುಂದರ ಪ್ರದರ್ಶನವನ್ನು ಅವರು ಶ್ಲಾಘಿಸಿದರು ಹಾಗೂ ಪ್ರದರ್ಶನಕಾರರ ಸಮರ್ಪಣೆ ಮತ್ತು ಶ್ರಮವು ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂದು ಹೇಳಿದರು.ನವದೆಹಲಿಯಲ್ಲಿ ನಡೆದ ಅಂತಾರಾಷ್ಟ್ರೀಯ ಆರ್ಯ ಮಹಾಸಮ್ಮೇಳನ 2025 ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ
October 31st, 07:00 pm
ಮೊದಲಿಗೆ, ತಡವಾಗಿ ಬಂದಿದ್ದಕ್ಕಾಗಿ ನಾನುನಿಮ್ಮೆಲ್ಲರ ಕ್ಷಮೆ ಯಾಚಿಸುತ್ತೇನೆ. ಇಂದು ಸರ್ದಾರ್ ಸಾಹೇಬ್ ಅವರ 150ನೇ ಜನ್ಮ ದಿನಾಚರಣೆ. ಏಕ್ತಾ ನಗರದಲ್ಲಿರುವ ಏಕತಾ ಪ್ರತಿಮೆಯಲ್ಲಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು, ಆ ಕಾರ್ಯಕ್ರಮದಿಂದಾಗಿ, ನಾನು ಇಲ್ಲಿಗೆ ತಲುಪಲು ವಿಳಂಬವಾಯಿತು. ಸಮಯಕ್ಕೆ ಸರಿಯಾಗಿ ಆಗಮಿಸಲು ಮತ್ತು ಅದಕ್ಕಾಗಿ ನಿಮ್ಮ ಕ್ಷಮೆ ಕೇಳಲು ಸಾಧ್ಯವಾಗದಿದ್ದಕ್ಕೆ ನಾನು ನಿಜವಾಗಿಯೂ ವಿಷಾದಿಸುತ್ತೇನೆ. ಆರಂಭದಲ್ಲಿ ನಾವು ಕೇಳಿದ ಮಂತ್ರಗಳ ಶಕ್ತಿ ಮತ್ತು ಚೈತನ್ಯವನ್ನು ಇನ್ನೂ ನಾವೆಲ್ಲರೂ ಅನುಭವಿಸುತ್ತಿದ್ದೇವೆ. ನಿಮ್ಮೊಂದಿಗೆ ಬರಲು ಅವಕಾಶ ಸಿಕ್ಕಾಗಲೆಲ್ಲಾ ಇದು ನನಗೆ ದೈವಿಕ ಮತ್ತು ಅಸಾಧಾರಣ ಅನುಭವವಾಗಿದೆ. ಇದು ಸ್ವಾಮಿ ದಯಾನಂದ ಜಿ ಅವರ ಆಶೀರ್ವಾದ, ಇದು ಅವರ ಆದರ್ಶಗಳಿಗೆ ನಮ್ಮ ಸಾಮೂಹಿಕ ಗೌರವ, ಮತ್ತು ನಿಮ್ಮೆಲ್ಲ ಚಿಂತಕರೊಂದಿಗಿನ ನನ್ನ ದಶಕಗಳ ವೈಯಕ್ತಿಕ ಬಾಂಧವ್ಯದ ಪರಿಣಾಮವಾಗಿ ನಾನು ನಿಮ್ಮೊಂದಿಗೆ ಇರಲು ಅವಕಾಶ ಪಡೆದಿದ್ದೇನೆ. ನಾನು ನಿಮ್ಮನ್ನು ಭೇಟಿಯಾದಾಗ ಮತ್ತು ಅವರೊಂದಿಗೆ ಮಾತನಾಡುವಾಗಲೆಲ್ಲಾ ನಾನು ಒಂದು ಅನನ್ಯ ಶಕ್ತಿ ಮತ್ತು ಸ್ಫೂರ್ತಿಯಿಂದ ತುಂಬಿದ್ದೇನೆ. ಇದೇ ರೀತಿಯ 9 ಸಭಾಂಗಣಗಳನ್ನು ಸ್ಥಾಪಿಸಲಾಗಿದೆ ಎಂಬುದು ನನಗೆ ತಿಳಿದುಬಂದಿದೆ. ಅಲ್ಲಿ ನಮ್ಮ ಎಲ್ಲಾ ಆರ್ಯ ಸಮಾಜದ ಸದಸ್ಯರು ವೀಡಿಯೊ ಲಿಂಕ್ ಮೂಲಕ ಈ ಕಾರ್ಯಕ್ರಮ ವೀಕ್ಷಿಸುತ್ತಿದ್ದಾರೆ. ನಾನು ಅವರನ್ನು ನೋಡಲು ಸಾಧ್ಯವಾಗದಿದ್ದರೂ, ನಾನು ಇಲ್ಲಿಂದ ಅವರಿಗೆ ನನ್ನ ನಮನಗಳನ್ನು ಸಲ್ಲಿಸುತ್ತೇನೆ.ಕೆವಾಡಿಯಾದಲ್ಲಿ ನಡೆದ ರಾಷ್ಟ್ರೀಯ ಏಕತಾ ದಿವಸ್ ಕಾರ್ಯಕ್ರಮ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ
October 31st, 09:00 am
ಸರ್ದಾರ್ ಪಟೇಲ್ ಅವರ 150ನೇ ಜನ್ಮ ದಿನಾಚರಣೆಯ ಐತಿಹಾಸಿಕ ಸಂದರ್ಭ, ಏಕತಾನಗರದಲ್ಲಿ ಈ ಶುಭ ಬೆಳಗ್ಗೆ, ಈ ವಿಹಂಗಮ ನೋಟ, ಸರ್ದಾರ್ ಸಾಹೇಬರ ಪಾದಗಳ ಬಳಿ ನಮ್ಮ ಉಪಸ್ಥಿತಿಯ ಮೂಲಕ ಇಂದು ನಾವೆಲ್ಲರೂ ಒಂದು ಮಹಾನ್ ಕ್ಷಣಕ್ಕೆ ಸಾಕ್ಷಿಯಾಗುತ್ತಿದ್ದೇವೆ. ದೇಶಾದ್ಯಂತ ನಡೆಯುತ್ತಿರುವ ಏಕತಾ ಓಟ, ಕೋಟ್ಯಂತರ ಭಾರತೀಯರ ಉತ್ಸಾಹ, ನಾವು ಹೊಸ ಭಾರತದ ಸಂಕಲ್ಪವನ್ನು ನೇರವಾಗಿ ಅನುಭವಿಸುತ್ತಿದ್ದೇವೆ. ನಿನ್ನೆ ಸಂಜೆ ನಡೆದ ಅದ್ಭುತ ಪ್ರಸ್ತುತಿ ಸೇರಿದಂತೆ ಇತ್ತೀಚೆಗೆ ಇಲ್ಲಿ ನಡೆದ ಕಾರ್ಯಕ್ರಮಗಳು ಭೂತಕಾಲದ ಸಂಪ್ರದಾಯ, ವರ್ತಮಾನದ ಕಠಿಣ ಪರಿಶ್ರಮ, ಶೌರ್ಯ ಮತ್ತು ಭವಿಷ್ಯದ ಸಾಧನೆಗಳ ಒಂದು ನೋಟವನ್ನು ಹೊಂದಿದ್ದವು. ಸರ್ದಾರ್ ಸಾಹೇಬರ 150ನೇ ಜನ್ಮ ದಿನಾಚರಣೆ ಸ್ಮರಣಾರ್ಥವಾಗಿ, ನಾಣ್ಯ ಮತ್ತು ವಿಶೇಷ ಅಂಚೆ ಚೀಟಿಯನ್ನು ಸಹ ಬಿಡುಗಡೆ ಮಾಡಲಾಗಿದೆ. ಸರ್ದಾರ್ ಸಾಹೇಬರ ಜನ್ಮ ದಿನಾಚರಣೆ ಮತ್ತು ರಾಷ್ಟ್ರೀಯ ಏಕತಾ ದಿವಸ್(ರಾಷ್ಟ್ರೀಯ ಏಕತಾ ದಿನ)ದಂದು ಎಲ್ಲಾ 140 ಕೋಟಿ ದೇಶವಾಸಿಗಳಿಗೆ ನನ್ನ ಹೃತ್ಪೂರ್ವಕ ಶುಭಾಶಯಗಳು ಮತ್ತು ಧನ್ಯವಾದಗಳನ್ನು ಸಲ್ಲಿಸುತ್ತೇನೆ.ಗುಜರಾತ್ ನ ಕೆವಾಡಿಯಾದಲ್ಲಿ ನಡೆದ ರಾಷ್ಟ್ರೀಯ ಏಕತಾ ದಿನ ಕಾರ್ಯಕ್ರಮವನ್ನುದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮಾತನಾಡಿದರು
October 31st, 08:44 am
ಗುಜರಾತ್ ನ ಕೆವಾಡಿಯಾದಲ್ಲಿ ಇಂದು ನಡೆದ ರಾಷ್ಟ್ರೀಯ ಏಕತಾ ದಿನ ಕಾರ್ಯಕ್ರಮವನ್ನುದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮಾತನಾಡಿದರು. ಸರ್ದಾರ್ ಪಟೇಲ್ ಅವರ 150ನೇ ಜಯಂತಿಯು ಒಂದು ಐತಿಹಾಸಿಕ ಸಂದರ್ಭವಾಗಿದೆ ಎಂದು ಅವರು ಹೇಳಿದರು. ಏಕತಾ ನಗರದ ಮುಂಜಾವು ದೈವಿಕ ಮತ್ತು ಸುಂದರ ಎಂದು ಬಣ್ಣಿಸಿದ ಶ್ರೀ ಮೋದಿ, ಸರ್ದಾರ್ ಪಟೇಲ್ ಅವರ ಪಾದಗಳ ಬಳಿ ನೆರೆದ ಜನಸಮೂಹವನ್ನು ಉಲ್ಲೇಖಿಸಿದರು ಮತ್ತು ದೇಶವು ಬಹಳ ಮಹತ್ವದ ಕ್ಷಣಕ್ಕೆ ಸಾಕ್ಷಿಯಾಗುತ್ತಿದೆ ಎಂದು ಹೇಳಿದರು. ದೇಶಾದ್ಯಂತ ನಡೆದ ಏಕತಾ ಓಟ ಮತ್ತು ಲಕ್ಷಾಂತರ ಭಾರತೀಯರ ಉತ್ಸಾಹಭರಿತ ಭಾಗವಹಿಸುವಿಕೆಯನ್ನು ಅವರು ಎತ್ತಿ ತೋರಿಸಿದರು, ನವ ಭಾರತಕ್ಕಾಗಿ ಸಂಕಲ್ಪವು ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂದು ಒತ್ತಿ ಹೇಳಿದರು. ಹಿಂದೆ ನಡೆದ ಕಾರ್ಯಕ್ರಮಗಳು ಮತ್ತು ನಿನ್ನೆ ಸಂಜೆ ನಡೆದ ಗಮನಾರ್ಹ ಪ್ರಸ್ತುತಿಯನ್ನು ಉಲ್ಲೇಖಿಸಿದ ಪ್ರಧಾನಮಂತ್ರಿ, ಹಿಂದಿನ ಸಂಪ್ರದಾಯಗಳು, ಇಂದಿನ ಕಠಿಣ ಪರಿಶ್ರಮ ಮತ್ತು ಶೌರ್ಯ ಮತ್ತು ಭವಿಷ್ಯದ ಸಾಧನೆಗಳನ್ನು ಇವುಗಳು ಪ್ರತಿಬಿಂಬಿಸುತ್ತವೆ ಎಂದು ಹೇಳಿದರು. ಸರ್ದಾರ್ ಪಟೇಲ್ ಅವರ 150 ನೇ ಜಯಂತಿಯ ಸ್ಮರಣಾರ್ಥ ನಾಣ್ಯ ಮತ್ತು ವಿಶೇಷ ಅಂಚೆ ಚೀಟಿಯನ್ನು ಬಿಡುಗಡೆ ಮಾಡಲಾಗಿದೆ ಎಂದು ಅವರು ಹೇಳಿದರು. ಸರ್ದಾರ್ ಪಟೇಲ್ ಅವರ ಜನ್ಮ ದಿನಾಚರಣೆ ಮತ್ತು ರಾಷ್ಟ್ರೀಯ ಏಕತಾ ದಿನದ ಸಂದರ್ಭದಲ್ಲಿ ದೇಶದ 140 ಕೋಟಿ ನಾಗರಿಕರಿಗೆ ಪ್ರಧಾನಮಂತ್ರಿಯವರು ಹೃತ್ಪೂರ್ವಕ ಶುಭಾಶಯಗಳನ್ನು ಕೋರಿದರು.ಹಿಂದಿ ದಿವಸದ ಶುಭಾಶಯ ಕೋರಿದ ಪ್ರಧಾನಮಂತ್ರಿ, ಎಲ್ಲಾ ಭಾರತೀಯ ಭಾಷೆಗಳ ಸಮೃದ್ಧಿಗೆ ಕರೆ
September 14th, 11:00 am
ಹಿಂದಿ ದಿವಸದ ಸಂದರ್ಭದಲ್ಲಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ರಾಷ್ಟ್ರಕ್ಕೆ ಹೃತ್ಪೂರ್ವಕ ಶುಭಾಶಯಗಳನ್ನು ಕೋರಿದರು. ಭಾರತದ ಅಸ್ಮಿತೆ ಮತ್ತು ಮೌಲ್ಯಗಳ ಜೀವಂತ ಪರಂಪರೆಯಾಗಿ ಹಿಂದಿಯ ಸಾಂಸ್ಕೃತಿಕ ಮತ್ತು ಭಾವನಾತ್ಮಕ ಮಹತ್ವವನ್ನು ಒತ್ತಿ ಹೇಳಿದರು. ಎಲ್ಲಾ ಭಾರತೀಯ ಭಾಷೆಗಳನ್ನು ಶ್ರೀಮಂತಗೊಳಿಸಲು ಮತ್ತು ಅವುಗಳನ್ನು ಹೆಮ್ಮೆಯಿಂದ ಮುಂದಿನ ಪೀಳಿಗೆಗೆ ತಲುಪಿಸಲು ಸಾಮೂಹಿಕವಾಗಿ ಕೆಲಸ ಮಾಡುವಂತೆ ಅವರು ನಾಗರಿಕರಿಗೆ ಕರೆ ನೀಡಿದರು.ಫಿಜಿ ಪ್ರಧಾನಮಂತ್ರಿ ಅವರ ಜತೆಗಿನ ಜಂಟಿ ಪತ್ರಿಕಾ ಹೇಳಿಕೆಯ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರ ಪತ್ರಿಕಾ ಹೇಳಿಕೆಯ ಕನ್ನಡ ಅನುವಾದ
August 25th, 12:30 pm
ಆ ಸಮಯದಲ್ಲಿ, ನಾವು ಭಾರತ-ಪೆಸಿಫಿಕ್ ದ್ವೀಪಗಳ ಸಹಕಾರ ವೇದಿಕೆಯನ್ನು (ಎಫ್‌ಐಪಿಐಸಿ) ಪ್ರಾರಂಭಿಸಿದ್ದೇವೆ. ಈ ಉಪಕ್ರಮವು ಭಾರತ-ಫಿಜಿ ಸಂಬಂಧಗಳನ್ನು ಬಲಪಡಿಸುವುದಲ್ಲದೆ, ಇಡೀ ಪೆಸಿಫಿಕ್ ಪ್ರದೇಶದೊಂದಿಗಿನ ನಮ್ಮ ಸಂಬಂಧಗಳನ್ನು ಬಲಪಡಿಸಿದೆ. ಇಂದು, ಪ್ರಧಾನಮಂತ್ರಿ ರಬೂಕಾ ಅವರ ಭೇಟಿಯೊಂದಿಗೆ, ನಾವು ನಮ್ಮ ಪಾಲುದಾರಿಕೆಯಲ್ಲಿ ಹೊಸ ಅಧ್ಯಾಯವನ್ನು ಬರೆಯುತ್ತಿದ್ದೇವೆ.ತಿರು ಕುಮಾರಿ ಅನಂತನ್ ಅವರ ನಿಧನಕ್ಕೆ ಪ್ರಧಾನಮಂತ್ರಿ ಸಂತಾಪ
April 09th, 02:05 pm
ತಮಿಳುನಾಡಿನ ಹಿರಿಯ ನಾಯಕ ತಿರು ಕುಮಾರಿ ಅನಂತನ್ ಅವರ ನಿಧನಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.ಲೆಕ್ಸ್ ಫ್ರಿಡ್‌ಮ್ಯಾನ್ ಅವರೊಂದಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಪಾಡ್‌ಕ್ಯಾಸ್ಟ್ ಈಗ ಬಹು ಭಾಷೆಗಳಲ್ಲಿ ಲಭ್ಯ
March 23rd, 12:21 pm
ಖ್ಯಾತ ಕೃತಕ ಬುದ್ಧಿಮತ್ತೆ (ಎಐ) ಸಂಶೋಧಕ ಮತ್ತು ಪಾಡ್‌ಕ್ಯಾಸ್ಟರ್ ಲೆಕ್ಸ್ ಫ್ರಿಡ್ಮನ್ ಅವರೊಂದಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಇತ್ತೀಚಿನ ಪಾಡ್‌ಕ್ಯಾಸ್ಟ್ ಈಗ ಬಹು ಭಾಷೆಗಳಲ್ಲಿ ಲಭ್ಯವಿದ್ದು, ಪ್ರಪಂಚದಾದ್ಯಂತದ ಅನೇಕರಿಗೆ ಈ ಸಂಭಾಷಣೆ ತಲುಪಿಸುವ ಪ್ರಯತ್ನ ಇದಾಗಿದೆ.ಪಾಡ್‌ಕ್ಯಾಸ್ಟ್ ನಲ್ಲಿ ಲೆಕ್ಸ್ ಫ್ರಿಡ್ಮನ್ ಅವರೊಂದಿಗಿನ ಪ್ರಧಾನಮಂತ್ರಿಯವರ ಮಾತುಕತೆಯ ಕನ್ನಡ ಅನುವಾದ
March 16th, 11:47 pm
ಪ್ರಧಾನಮಂತ್ರಿ ನರೇಂದ್ರ ಮೋದಿ: ನನ್ನ ಶಕ್ತಿ ಇರುವುದು ಮೋದಿಯಾಗಿರುವುದರಲ್ಲಿ ಅಲ್ಲ; ಅದು 140 ಕೋಟಿ ಭಾರತೀಯರಿಂದ ಬಂದಿದೆ, ಸಾವಿರಾರು ವರ್ಷಗಳ ನಮ್ಮ ದೇಶದ ಶ್ರೀಮಂತ ಸಾಂಸ್ಕೃತಿಕ ಮತ್ತು ಐತಿಹಾಸಿಕ ಪರಂಪರೆಯಿಂದ ಬಂದಿದೆ. ಅದೇ ನನ್ನ ನಿಜವಾದ ಶಕ್ತಿ. ನಾನು ಎಲ್ಲಿಗೆ ಹೋದರೂ, ಮೋದಿಯಾಗಿ ಹೋಗುವುದಿಲ್ಲ - ವೇದಗಳಿಂದ ವಿವೇಕಾನಂದರವರೆಗೆ ನಮ್ಮ ನಾಗರಿಕತೆಯ ಸಾವಿರಾರು ವರ್ಷಗಳ ಹಳೆಯ ಶ್ರೇಷ್ಠ ಸಂಪ್ರದಾಯಗಳನ್ನು ನನ್ನೊಂದಿಗೆ ಕೊಂಡೊಯ್ಯತೇನೆ. ನಾನು 140 ಕೋಟಿ ಜನರನ್ನು, ಅವರ ಕನಸುಗಳನ್ನು ಮತ್ತು ಅವರ ಆಕಾಂಕ್ಷೆಗಳನ್ನು ಪ್ರತಿನಿಧಿಸುತ್ತೇನೆ. ಅದಕ್ಕಾಗಿಯೇ, ನಾನು ಯಾವುದೇ ವಿಶ್ವ ನಾಯಕರೊಂದಿಗೆ ಕೈಕುಲುಕಿದಾಗ, ಅದು ಕೇವಲ ಮೋದಿಯವರ ಕೈ ಆಗಿರುವುದಿಲ್ಲ - ಅದು 140 ಕೋಟಿ ಭಾರತೀಯರ ಸಾಮೂಹಿಕ ಕೈ ಆಗಿರುತ್ತದೆ. ನನ್ನ ಶಕ್ತಿ ಮೋದಿಯದ್ದಲ್ಲ; ಅದು ಭಾರತದ ಶಕ್ತಿ. ನಾವು ಶಾಂತಿಯ ಬಗ್ಗೆ ಮಾತನಾಡುವಾಗಲೆಲ್ಲಾ, ಜಗತ್ತು ಕೇಳುತ್ತದೆ, ಏಕೆಂದರೆ ಇದು ಬುದ್ಧನ ನಾಡು, ಮಹಾತ್ಮ ಗಾಂಧಿಯವರ ನಾಡು. ನಾವು ಸಂಘರ್ಷದ ಪ್ರತಿಪಾದಕರಲ್ಲ; ನಾವು ಸಾಮರಸ್ಯವನ್ನು ಪ್ರತಿಪಾದಿಸುತ್ತೇವೆ. ನಾವು ಪ್ರಕೃತಿಯೊಂದಿಗೆ ಸಂಘರ್ಷ ಅಥವಾ ರಾಷ್ಟ್ರಗಳ ನಡುವಿನ ಕಲಹವನ್ನು ಬಯಸುವುದಿಲ್ಲ - ನಾವು ಸಹಕಾರದಲ್ಲಿ ನಂಬಿಕೆ ಇಡುವ ಜನರು ಮತ್ತು ನಾವು ಶಾಂತಿಯನ್ನು ಉತ್ತೇಜಿಸಲು ಯಾವುದೇ ರೀತಿಯಲ್ಲಿ ಕೊಡುಗೆ ನೀಡಲು ಸಾಧ್ಯವಾದರೆ, ನಾವು ಯಾವಾಗಲೂ ಅದನ್ನು ಮಾಡಲು ಪ್ರಯತ್ನಿಸುತ್ತೇವೆ. ನನ್ನ ಜೀವನವು ಅತ್ಯಂತ ಬಡತನದಿಂದ ಬಂದಿದೆ, ಆದರೂ ನಾವು ಅದರ ಹೊರೆಯನ್ನು ಎಂದಿಗೂ ಅನುಭವಿಸಲಿಲ್ಲ. ಜೀವನದುದ್ದಕ್ಕೂ ಬೂಟುಗಳನ್ನು ಧರಿಸಿದ ವ್ಯಕ್ತಿಗೆ ಇದ್ದಕ್ಕಿದ್ದಂತೆ ಅವುಗಳಿಲ್ಲದೆ ಹೋದರೆ ಅವನು ಕಷ್ಟಪಡಬೇಕಾಗಬಹುದು. ಆದರೆ ಎಂದಿಗೂ ಬೂಟುಗಳನ್ನು ಧರಿಸದವರಿಗೆ, ಅಭಾವದ ಭಾವನೆಯೇ ಇರುವುದಿಲ್ಲ - ನಾವು ನಮ್ಮ ಜೀವನವನ್ನು ಅದು ಇದ್ದಂತೆಯೇ ಸರಳವಾಗಿ ಬದುಕಿದ್ದೇವೆ.ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಲೆಕ್ಸ್ ಫ್ರಿಡ್ಮನ್ ಅವರೊಂದಿಗೆ ʻಪಾಡ್‌ಕಾಸ್ಟ್ʼನಲ್ಲಿ ಸಂವಾದ ನಡೆಸಿದರು
March 16th, 05:30 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಲೆಕ್ಸ್ ಫ್ರಿಡ್ಮನ್ ಅವರೊಂದಿಗೆ ಇಂದು ವಿವಿಧ ವಿಷಯಗಳ ಬಗ್ಗೆ ʻಪಾಡ್‌ಕಾಸ್ಟ್ʼನಲ್ಲಿ ಸಂವಾದ ನಡೆಸಿದರು. ಪ್ರಾಮಾಣಿಕವಾದ, ಮನದಾಳದ ಮಾತುಕತೆಯ ವೇಳೆ ಪ್ರಧಾನಿ ಅವರನ್ನು ನೀವು ಏಕೆ ಉಪವಾಸ ಮಾಡುತ್ತೀರಿ ಮತ್ತು ಹೇಗೆ ನಿರ್ವಹಿಸುತ್ತೀರಿ ಎಂದು ಕೇಳಿದಾಗ, ಪ್ರಧಾನಿಯವರು ತಮ್ಮ ಮೇಲಿನ ಗೌರವದ ಸಂಕೇತವಾಗಿ ಉಪವಾಸ ಮಾಡಿದ ಪಾಡ್‌ಕಾಸ್ಟರ್ ಲೆಕ್ಸ್ ಫ್ರಿಡ್ಮನ್ ಅವರಿಗೆ ಕೃತಜ್ಞತೆ ಸಲ್ಲಿಸಿದರು. ಭಾರತದಲ್ಲಿ, ಧಾರ್ಮಿಕ ಸಂಪ್ರದಾಯಗಳು ದೈನಂದಿನ ಜೀವನದೊಂದಿಗೆ ಆಳವಾಗಿ ಹೆಣೆದುಕೊಂಡಿವೆ ಎಂದು ಶ್ರೀ ಮೋದಿ ಹೇಳಿದರು. ಹಿಂದೂ ಧರ್ಮವು ಕೇವಲ ಆಚರಣೆಗಳ ಕುರಿತಾದದ್ದಲ್ಲ. ಅದು ಜೀವನಕ್ಕೆ ಮಾರ್ಗದರ್ಶನ ನೀಡುವ ತತ್ವಶಾಸ್ತ್ರವಾಗಿದೆ ಎಂದು ಹೇಳಿದ ಶ್ರೀ ಮೋದಿ ಅವರು ಈ ಕುರಿತು ಭಾರತದ ಗೌರವಾನ್ವಿತ ಸರ್ವೋಚ್ಚ ನ್ಯಾಯಾಲಯದ ವ್ಯಾಖ್ಯಾನವನ್ನು ಉಲ್ಲೇಖಿಸಿದರು. ಉಪವಾಸವು ಶಿಸ್ತನ್ನು ಬೆಳೆಸಲು ಹಾಗೂ ಮನಸ್ಸು ಹಾಗೂ ದೇಹವನ್ನು ಸಮತೋಲನಗೊಳಿಸಲು ಒಂದು ಸಾಧನವಾಗಿದೆ ಎಂದು ಅವರು ಒತ್ತಿ ಹೇಳಿದರು. ಉಪವಾಸವು ಇಂದ್ರಿಯಗಳ ಪ್ರಜ್ಞೆಯನ್ನು ಹೆಚ್ಚಿಸುತ್ತದೆ, ಅವುಗಳನ್ನು ಹೆಚ್ಚು ಸೂಕ್ಷ್ಮ ಮತ್ತು ಜಾಗೃತಗೊಳಿಸುತ್ತದೆ ಎಂದು ಪ್ರಧಾನಿ ಹೇಳಿದರು. ಉಪವಾಸದ ಸಮಯದಲ್ಲಿ, ಅತ್ಯಂತ ಸೂಕ್ಷ್ಮವಾದ ಸುವಾಸನೆ ಮತ್ತು ವಿವರಗಳನ್ನು ಸಹ ಹೆಚ್ಚು ಸ್ಪಷ್ಟವಾಗಿ ಗ್ರಹಿಸಬಹುದು ಎಂದು ಅವರು ಹೇಳಿದರು. ಉಪವಾಸವು ಆಲೋಚನಾ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ, ಹೊಸ ದೃಷ್ಟಿಕೋನಗಳನ್ನು ಒದಗಿಸುತ್ತದೆ ಮತ್ತು ರೂಢಿಗತವಲ್ಲದ ರೀತಿಯಲ್ಲಿ (ಔಟ್ ಆಫ್ ದಿ ಬಾಕ್ಸ್) ಆಲೋಚನೆಯನ್ನು ಉತ್ತೇಜಿಸುತ್ತದೆ ಎಂದು ಅವರು ಒತ್ತಿ ಹೇಳಿದರು. ಉಪವಾಸವೆಂದರೆ ಕೇವಲ ಆಹಾರವನ್ನು ತ್ಯಜಿಸುವುದಷ್ಟೇ ಅಲ್ಲ ಎಂದು ಶ್ರೀ ಮೋದಿ ಸ್ಪಷ್ಟಪಡಿಸಿದರು. ಇದು ಪೂರ್ವ ಸಿದ್ಧತೆ ಮತ್ತು ನಿರ್ವಿಷೀಕರಣದ (ಡಿಟಾಕ್ಸಿಕೇಷನ್) ವೈಜ್ಞಾನಿಕ ಪ್ರಕ್ರಿಯೆಯನ್ನು ಒಳಗೊಂಡಿದೆ. ಹಲವಾರು ದಿನಗಳ ಮುಂಚಿತವಾಗಿ ಆಯುರ್ವೇದ ಮತ್ತು ಯೋಗ ಅಭ್ಯಾಸಗಳನ್ನು ಅನುಸರಿಸುವ ಮೂಲಕ ತಮ್ಮ ದೇಹವನ್ನು ಉಪವಾಸಕ್ಕಾಗಿ ಸಜ್ಜುಗೊಳಿಸುವುದಾಗಿ ಅವರು ಒತ್ತಿ ಹೇಳಿದರು ಮತ್ತು ಈ ಅವಧಿಯಲ್ಲಿ ದೇಹದಲ್ಲಿ ನೀರಿನ ಅಂಶವನ್ನು ಕಾಯ್ದುಕೊಳ್ಳುವುದರ ಮಹತ್ವವನ್ನು ಒತ್ತಿ ಹೇಳಿದರು. ಉಪವಾಸ ಪ್ರಾರಂಭವಾದ ನಂತರ, ಅವರು ಅದನ್ನು ಭಕ್ತಿ ಮತ್ತು ಸ್ವಯಂ ಶಿಸ್ತಿನ ಕ್ರಿಯೆಯಾಗಿ ನೋಡುವುದಾಗಿ, ಮತ್ತು ಇದು ಆಳವಾದ ಆತ್ಮಾವಲೋಕನ ಮತ್ತು ಏಕಾಗ್ರತೆಗೆ ಅನುವು ಮಾಡಿಕೊಡುತ್ತದೆ ಎಂದು ಹೇಳಿದರು. ತಮ್ಮ ಶಾಲಾ ದಿನಗಳಲ್ಲಿ ಉಪವಾಸದ ಅಭ್ಯಾಸವು ವೈಯಕ್ತಿಕ ಅನುಭವದಿಂದ ಪ್ರಾರಂಭವಾಯಿತು. ಮಹಾತ್ಮಾ ಗಾಂಧಿಯವರಿಂದ ಸ್ಫೂರ್ತಿಪಡೆದ ಆಂದೋಲನದಿಂದ ಅದು ಶುರುವಾಯಿತು ಎಂದು ಪ್ರಧಾನಿ ಹಂಚಿಕೊಂಡರು. ಅವರು ತಮ್ಮ ಮೊದಲ ಉಪವಾಸದ ಸಮಯದಲ್ಲಿ ಶಕ್ತಿ ಮತ್ತು ಜಾಗೃತಿಯಲ್ಲಿ ಉಂಟಾದ ತೀವ್ರತೆಯ ಅನುಭವನ್ನು ವಿವರಿಸಿದರು. ಅದು ಉಪವಾಸದ ಪರಿವರ್ತಕ ಶಕ್ತಿಯನ್ನು ತಮಗೆ ಮನವರಿಕೆ ಮಾಡಿಕೊಟ್ಟಿತು ಎಂದರು. ಉಪವಾಸವು ತಮ್ಮನ್ನು ತಾಮಸ ಅಥವಾ ನಿಧಾನಗೊಳಿಸುವುದಿಲ್ಲ. ಬದಲಾಗಿ, ಇದು ಆಗಾಗ್ಗೆ ತಮ್ಮ ಉತ್ಪಾದಕತೆಯನ್ನು ಹೆಚ್ಚಿಸುತ್ತದೆ ಎಂದು ಅವರು ಒತ್ತಿ ಹೇಳಿದರು. ಉಪವಾಸದ ಸಮಯದಲ್ಲಿ, ಅವರ ಆಲೋಚನೆಗಳು ಹೆಚ್ಚು ಮುಕ್ತವಾಗಿ ಮತ್ತು ಸೃಜನಶೀಲವಾಗಿ ಹರಿಯುತ್ತವೆ, ಇದು ತಮ್ಮನ್ನು ವ್ಯಕ್ತಪಡಿಸಲು ಅದ್ಭುತ ಅನುಭವವನ್ನು ನೀಡುತ್ತದೆ ಎಂದು ಅವರು ವಿವರಿಸಿದರು.ಮಾರಿಷಸ್ ನಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಪ್ರಧಾನಮಂತ್ರಿ ಅವರು ಮಾಡಿದ ಭಾಷಣ
March 12th, 06:07 am
10 ವರ್ಷಗಳ ಹಿಂದೆ ಇದೇ ದಿನದಂದು ನಾನು ಮಾರಿಷಸ್‌ಗೆ ಬಂದಾಗ, ನಾನು ಆಗಮನಕ್ಕೆ ಕೇವಲ ಒಂದು ವಾರ ಮೊದಲು ನಾವು ಹೋಳಿ ಆಚರಿಸಿದೆವು. ನಾನು ಭಾರತದಿಂದ ಫಾಗುವಾದ ಉತ್ಸಾಹವನ್ನು ನನ್ನೊಂದಿಗೆ ತಂದಿದ್ದೇನೆ. ಈ ಬಾರಿ ನಾನು ಮಾರಿಷಸ್‌ನಿಂದ ಭಾರತಕ್ಕೆ ಹೋಳಿಯ ಬಣ್ಣಗಳನ್ನು ನನ್ನೊಂದಿಗೆ ಕೊಂಡೊಯ್ಯುತ್ತೇನೆ. ಒಂದು ದಿನದ ನಂತರ ನಾವು ಅಲ್ಲಿ ಹೋಳಿಯನ್ನು ಆಚರಿಸುತ್ತೇವೆ. 14 ರಂದು ಎಲ್ಲೆಡೆ ಬಣ್ಣ ಇರುತ್ತದೆ.ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾರಿಷಸ್ ನಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದರು
March 11th, 07:30 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮಾರಿಷಸ್ ಪ್ರಧಾನಮಂತ್ರಿ ಘನತೆವೆತ್ತ ನವೀನಚಂದ್ರ ರಾಮಗೂಲಮ್ ಅವರೊಂದಿಗೆ ಟ್ರಿಯಾನಾನ್ ಕನ್ವೆನ್ಷನ್ ಸೆಂಟರ್ ನಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಮಾರಿಷಸ್ ನಲ್ಲಿರುವ ಭಾರತೀಯ ಸಮುದಾಯ ಮತ್ತು ಭಾರತದ ಸ್ನೇಹಿತರ ಸಭೆಯನ್ನುದ್ದೇಶಿಸಿ ಮಾತನಾಡಿದರು. ಕಾರ್ಯಕ್ರಮವು ವಿದ್ಯಾರ್ಥಿಗಳು, ವೃತ್ತಿಪರರು, ಸಾಮಾಜಿಕ-ಸಾಂಸ್ಕೃತಿಕ ಸಂಸ್ಥೆಗಳು ಮತ್ತು ವ್ಯಾಪಾರ ಮುಖಂಡರು ಸೇರಿದಂತೆ ಭಾರತೀಯ ಸಮುದಾಯದ ಉತ್ಸಾಹಪೂರ್ಣ ಭಾಗವಹಿಸುವಿಕೆಗೆ ಸಾಕ್ಷಿಯಾಯಿತು. ಇದರಲ್ಲಿ ಮಾರಿಷಸ್ ನ ಹಲವಾರು ಸಚಿವರು, ಸಂಸದರು ಮತ್ತು ಇತರ ಗಣ್ಯರು ಭಾಗವಹಿಸಿದ್ದರು.ನಮ್ಮ ಭಾಷೆ ನಮ್ಮ ಸಂಸ್ಕೃತಿಯ ವಾಹಕ: ಅಖಿಲ ಭಾರತೀಯ ಮರಾಠಿ ಸಾಹಿತ್ಯ ಸಮ್ಮೇಳನದಲ್ಲಿ ಪ್ರಧಾನಿ ಮೋದಿ
February 21st, 05:00 pm
ಪ್ರಧಾನಿ ಮೋದಿ ನವದೆಹಲಿಯಲ್ಲಿ 98 ನೇ ಅಖಿಲ ಭಾರತೀಯ ಮರಾಠಿ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿದರು. ರಾಷ್ಟ್ರವು ಛತ್ರಪತಿ ಶಿವಾಜಿ ಮಹಾರಾಜರ ಪಟ್ಟಾಭಿಷೇಕದ 350 ನೇ ವಾರ್ಷಿಕೋತ್ಸವ, ಪುಣ್ಯಶ್ಲೋಕ್ ಅಹಲ್ಯಾಬಾಯಿ ಹೋಳ್ಕರ್ ಅವರ 300 ನೇ ಜನ್ಮ ವಾರ್ಷಿಕೋತ್ಸವ ಮತ್ತು ಬಾಬಾಸಾಹೇಬ್ ಅಂಬೇಡ್ಕರ್ ಅವರ ಪ್ರಯತ್ನಗಳಿಂದ ರಚಿಸಲಾದ ನಮ್ಮ ಸಂವಿಧಾನದ 75 ನೇ ವಾರ್ಷಿಕೋತ್ಸವವನ್ನು ವೀಕ್ಷಿಸುತ್ತಿರುವ ಮಹತ್ವದ ಸಮಯದಲ್ಲಿ ಸಮ್ಮೇಳನ ನಡೆಯುತ್ತಿದೆ ಎಂದು ಶ್ರೀ ಮೋದಿ ಎತ್ತಿ ತೋರಿಸಿದರು.98ನೇ ಅಖಿಲ ಭಾರತೀಯ ಮರಾಠಿ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ
February 21st, 04:30 pm
1878ರಲ್ಲಿ ಮೊದಲ ಆವೃತ್ತಿಯಿಂದ ಇಲ್ಲಿಯವರೆಗೆ, ಅಖಿಲ ಭಾರತೀಯ ಮರಾಠಿ ಸಾಹಿತ್ಯ ಸಮ್ಮೇಳನವು 147 ವರ್ಷಗಳ ಭಾರತದ ಪ್ರಯಾಣಕ್ಕೆ ಸಾಕ್ಷಿಯಾಗಿದೆ ಎಂದು ಶ್ರೀ ಮೋದಿ ಹೇಳಿದರು. ಶ್ರೀ ಮಹಾದೇವ್ ಗೋವಿಂದ ರಾನಡೆ, ಶ್ರೀ ಹರಿ ನಾರಾಯಣ್ ಆಪ್ಟೆ, ಶ್ರೀ ಮಾಧವ ಶ್ರೀಹರಿ ಆನೆ, ಶ್ರೀ ಶಿವರಾಮ ಪರಾಂಜಪೆ, ಶ್ರೀ ವೀರ ಸಾವರ್ಕರ್ ಅವರಂತಹ ಅನೇಕ ದಿಗ್ಗಜರು ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು ಎಂದು ಅವರು ಹೇಳಿದರು. ಈ ಹೆಮ್ಮೆಯ ಸಂಪ್ರದಾಯದ ಭಾಗವಾಗಲು ತಮ್ಮನ್ನು ಆಹ್ವಾನಿಸಿದ್ದಕ್ಕಾಗಿ ಶ್ರೀ ಶರದ್ ಪವಾರ್ ಅವರಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸಿದರು ಮತ್ತು ಈ ಕಾರ್ಯಕ್ರಮಕ್ಕಾಗಿ ದೇಶದ ಮತ್ತು ಪ್ರಪಂಚದಾದ್ಯಂತದ ಎಲ್ಲಾ ಮರಾಠಿ ಪ್ರೇಮಿಗಳನ್ನು ಅಭಿನಂದಿಸಿದರು.Prime Minister condoles the demise of Dr. Pierre-Sylvain Filliozat
December 31st, 02:38 pm
The Prime Minister, Shri Narendra Modi today condoled the demise of Dr. Pierre-Sylvain Filliozat and remarked that he will be remembered for his exemplary efforts to popularise Sanskrit studies, especially in the field of literature and grammar.ಸಂವಿಧಾನವೇ ನಮ್ಮ ಮಾರ್ಗದರ್ಶಕ ಬೆಳಕು: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ
December 29th, 11:30 am
ಮನ್ ಕಿ ಬಾತ್‌ನ ಈ ಸಂಚಿಕೆಯಲ್ಲಿ, ಪ್ರಧಾನಿ ಮೋದಿ ಅವರು ಸಂವಿಧಾನದ 75 ನೇ ವಾರ್ಷಿಕೋತ್ಸವ ಮತ್ತು ಪ್ರಯಾಗರಾಜ್‌ನಲ್ಲಿ ಮಹಾಕುಂಭದ ಸಿದ್ಧತೆ ಸೇರಿದಂತೆ ಭಾರತದ ಸಾಧನೆಗಳನ್ನು ಪ್ರತಿಬಿಂಬಿಸಿದರು. ಅವರು ಬಸ್ತಾರ್ ಒಲಿಂಪಿಕ್ಸ್‌ನ ಯಶಸ್ಸನ್ನು ಶ್ಲಾಘಿಸಿದರು ಮತ್ತು ಆಯುಷ್ಮಾನ್ ಭಾರತ್ ಯೋಜನೆಯಡಿಯಲ್ಲಿ ಮಲೇರಿಯಾ ನಿರ್ಮೂಲನೆ ಮತ್ತು ಕ್ಯಾನ್ಸರ್ ಚಿಕಿತ್ಸೆಯ ಪ್ರಗತಿಯಂತಹ ಮಹತ್ವದ ಆರೋಗ್ಯ ಪ್ರಗತಿಗಳನ್ನು ಎತ್ತಿ ತೋರಿಸಿದರು. ಹೆಚ್ಚುವರಿಯಾಗಿ, ಅವರು ಒಡಿಶಾದ ಕಲಹಂಡಿಯಲ್ಲಿನ ಕೃಷಿ ರೂಪಾಂತರವನ್ನು ಶ್ಲಾಘಿಸಿದರು.We are working fast in every sector for the development of Odisha: PM Modi at Odisha Parba 2024
November 24th, 08:48 pm
PM Modi addressed Odisha Parba 2024, celebrating Odisha's rich cultural heritage. He paid tribute to Swabhaba Kabi Gangadhar Meher on his centenary, along with saints like Dasia Bauri, Salabega, and Jagannath Das. Highlighting Odisha's role in preserving India's cultural persity, he shared the inspiring tale of Lord Jagannath leading a battle and emphasized faith, unity, and pine guidance in every endeavor.