ಪ್ರಧಾನಮಂತ್ರಿ ಅವರನ್ನು ಭೇಟಿ ಮಾಡಿದ ಕಿಂಡ್ರಿಲ್ ನ ಅಧ್ಯಕ್ಷ ಮತ್ತು ಸಿ.ಇ ಒ. ಶ್ರೀ ಮಾರ್ಟಿನ್ ಶ್ರೋಟರ್
August 21st, 09:50 pm
ಕಿಂಡ್ರಿಲ್ ನ ಅಧ್ಯಕ್ಷ ಮತ್ತು ಸಿ.ಇ.ಒ ಶ್ರೀ ಮಾರ್ಟಿನ್ ಶ್ರೋಟರ್ ಅವರು ನವದೆಹಲಿಯಲ್ಲಿ ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿಯಾದರು. ಪ್ರಧಾನಮಂತ್ರಿ ಅವರು ಜಾಗತಿಕ ಪಾಲುದಾರರಿಗೆ ಆತ್ಮೀಯ ಸ್ವಾಗತವನ್ನು ನೀಡಿದರು, ಭಾರತದಲ್ಲಿ ಅಪಾರವಾದ ಅವಕಾಶಗಳನ್ನು ಅನ್ವೇಷಿಸಲು ಮತ್ತು ಹೊಸತನ ಮತ್ತು ಉತ್ಕೃಷ್ಟತೆಗಾಗಿ ರಾಷ್ಟ್ರದ ಪ್ರತಿಭಾವಂತ ಯುವಕರೊಂದಿಗೆ ಸಹಕರಿಸಲು ಅವರನ್ನು ಆಹ್ವಾನಿಸಿದರು.