ಕುಮುದಿನಿ ಲಖಿಯಾ ಅವರ ನಿಧನಕ್ಕೆ ಪ್ರಧಾನಮಂತ್ರಿ ಸಂತಾಪ

April 12th, 03:39 pm

ನೃತ್ಯಗಾರ್ತಿ ಕುಮುದಿನಿ ಲಖಿಯಾ ಅವರ ನಿಧನಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಸಂತಾಪ ಸೂಚಿಸಿದ್ದಾರೆ. ಕಥಕ್ ಮತ್ತು ಭಾರತೀಯ ಶಾಸ್ತ್ರೀಯ ನೃತ್ಯಗಳ ಬಗ್ಗೆ ಅವರ ಆಸಕ್ತಿ ಹಾಗೂ ಉತ್ಸಾಹವು ಅವರ ಗಮನಾರ್ಹ ಕೆಲಸದಲ್ಲಿ ಸದಾ ಪ್ರತಿಫಲಿಸುತ್ತದೆ, ಅವರು ಅತ್ಯುತ್ತಮ ಸಾಂಸ್ಕೃತಿಕ ಮಾದರಿ ( ಐಕಾನ್) ವ್ಯಕ್ತಿಯಾಗಿದ್ದಾರೆ ಎಂದು ಅವರನ್ನು ಪ್ರಧಾನಮಂತ್ರಿಯವರು ತಮ್ಮ ಸಂದೇಶದಲ್ಲಿ ಶ್ಲಾಘಿಸಿದ್ದಾರೆ.