Cabinet approves development of Green Field Airport at Kota-Bundi (Rajasthan) at an estimated cost of Rs.1507.00 Crore
August 19th, 03:13 pm
The Cabinet Committee on Economic Affairs chaired by PM Modi has approved the development of Green Field Airport at Kota-Bundi in Rajasthan worth Rs.1507.00 Crore. The project aimed at addressing the anticipated traffic growth in the region includes construction of a Terminal Building spanning an area of 20,000 sqm capable of handling 1000 Peak Hour Passengers (PHP).ರಾಜಸ್ಥಾನದ ಬಿಕಾನೇರ್‌ನಲ್ಲಿ ಅಭಿವೃದ್ಧಿ ಕಾರ್ಯಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ಕಾರ್ಯಕ್ರಮ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ
May 22nd, 12:00 pm
ರಾಜಸ್ಥಾನ ರಾಜ್ಯಪಾಲರಾದ ಹರಿಭಾವು ಬಾಗ್ಡೆ ಜಿ, ಈ ರಾಜ್ಯದ ಜನಪ್ರಿಯ ಮುಖ್ಯಮಂತ್ರಿ ಶ್ರೀಮನ್ ಭಜನ್ ಲಾಲ್ ಜಿ, ಮಾಜಿ ಮುಖ್ಯಮಂತ್ರಿ ಸಹೋದರಿ ವಸುಂಧರಾ ರಾಜೇ ಜಿ, ಕೇಂದ್ರ ಸಚಿವ ಸಂಪುಟದ ನನ್ನ ಸಹೋದ್ಯೋಗಿಗಳಾದ ಅಶ್ವಿನಿ ವೈಷ್ಣವ್ ಜಿ, ಅರ್ಜುನ್ ರಾಮ್ ಮೇಘವಾಲ್ ಜಿ, ರಾಜಸ್ಥಾನದ ಉಪಮುಖ್ಯಮಂತ್ರಿ ದಿಯಾ ಕುಮಾರಿ ಜಿ, ಪ್ರೇಮ್ ಚಂದ್ ಜಿ, ರಾಜಸ್ಥಾನ ಸರ್ಕಾರದ ಸಚಿವರುಗಳೆ, ಸಂಸತ್ತಿನ ನನ್ನ ಸಹೋದ್ಯೋಗಿ ಮದನ್ ರಾಥೋಡ್ ಜಿ, ಇತರೆ ಸಂಸದರು ಮತ್ತು ಶಾಸಕರೆ ಮತ್ತು ನನ್ನ ಪ್ರೀತಿಯ ಸಹೋದರ ಸಹೋದರಿಯರೆ.ರಾಜಸ್ಥಾನದ ಬಿಕಾನೇರ್‌ನಲ್ಲಿ 26,000 ಕೋಟಿ ರೂ. ಮೌಲ್ಯದ ಅಭಿವೃದ್ಧಿ ಯೋಜನೆಗಳಿಗೆ ಉದ್ಘಾಟನೆ, ಶಿಲಾನ್ಯಾಸ ಮತ್ತು ಲೋಕಾರ್ಪಣೆ ಮಾಡಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ
May 22nd, 11:30 am
ರಾಜಸ್ಥಾನದ ಬಿಕಾನೇರ್‌ನಲ್ಲಿಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 26,000 ಕೋಟಿ ರೂ. ಮೌಲ್ಯದ ಬಹು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿ, ಶಿಲಾನ್ಯಾಸ ನೆರವೇರಿಸಿ, ರಾಷ್ಟ್ರಕ್ಕೆ ಸಮರ್ಪಿಸಿದರು. ಈ ಸಂದರ್ಭದಲ್ಲಿ, ಕಾರ್ಯಕ್ರಮದಲ್ಲಿ ನೆರೆದಿದ್ದ ಬೃಹತ್ ಜನಸಮೂಹವನ್ನು ಸ್ವಾಗತಿಸಿ ಮಾತನಾಡಿದ ಅವರು, ಆನ್‌ಲೈನ್‌ನಲ್ಲಿ ಭಾಗವಹಿಸಿರುವ 18 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಜನರನ್ನು ಶ್ಲಾಘಿಸಿದರು. ಹಲವಾರು ರಾಜ್ಯಪಾಲರು, ಮುಖ್ಯಮಂತ್ರಿಗಳು, ಲೆಫ್ಟಿನೆಂಟ್ ಗವರ್ನರ್‌ಗಳು ಮತ್ತು ಇತರೆ ಸಾರ್ವಜನಿಕ ಪ್ರತಿನಿಧಿಗಳು ಇಲ್ಲಿ ಉಪಸ್ಥಿತರಿದ್ದು, ಜತೆಗೆ ದೇಶಾದ್ಯಂತ ಸಂಪರ್ಕ ಹೊಂದಿರುವ ಎಲ್ಲಾ ಗೌರವಾನ್ವಿತ ಗಣ್ಯರು ಮತ್ತು ನಾಗರಿಕರಿಗೆ ತಮ್ಮ ಶುಭಾಶಯಗಳನ್ನು ತಿಳಿಸಿದರು.ವಿಕಸಿತ ಭಾರತ ವಿಕಸಿತ ರಾಜಸ್ಥಾನ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಅವರ ಭಾಷಣದ ಕನ್ನಡ ಅನುವಾದ
February 16th, 11:30 am
ವಿಕಸಿತ ಭಾರತ-ವಿಕಸಿತ ರಾಜಸ್ಥಾನ: ಪ್ರಸ್ತುತ, ರಾಜಸ್ಥಾನದ ಪ್ರತಿಯೊಂದು ಕ್ಷೇತ್ರದ ಸಾವಿರಾರು ಸ್ನೇಹಿತರು ಈ ಮಹತ್ವದ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ. ನಾನು ನಿಮ್ಮೆಲ್ಲರಿಗೂ ನನ್ನ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಮತ್ತು ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಮತ್ತು ಅದನ್ನು ಜನಸಾಮಾನ್ಯರಿಗೆ ಹರಡಲು ನನಗೆ ಅವಕಾಶ ನೀಡಿದ್ದಕ್ಕಾಗಿ ನಾನು ಮುಖ್ಯಮಂತ್ರಿಯನ್ನು ಶ್ಲಾಘಿಸುತ್ತೇನೆ. ಕೆಲವು ದಿನಗಳ ಹಿಂದೆ ಜೈಪುರದಲ್ಲಿ ಫ್ರಾನ್ಸ್ ಅಧ್ಯಕ್ಷರಿಗೆ ನೀವು ನೀಡಿದ ಆತ್ಮೀಯ ಸ್ವಾಗತವು ಭಾರತದಲ್ಲಿ ಮಾತ್ರವಲ್ಲದೆ ಫ್ರಾನ್ಸ್ ನಲ್ಲೂ ಪ್ರತಿಧ್ವನಿಸಿದೆ. ಇದು ರಾಜಸ್ಥಾನದ ಜನರ ಹೆಗ್ಗುರುತಾಗಿದೆ. ನಮ್ಮ ಸಹ ರಾಜಸ್ಥಾನಿಗಳು ತಾವು ಪ್ರೀತಿಸುವವರ ಮೇಲೆ ತಮ್ಮ ವಾತ್ಸಲ್ಯವನ್ನು ಧಾರೆಯೆರೆಯಲು ಯಾವುದೇ ಪ್ರಯತ್ನವನ್ನು ಬಿಡುವುದಿಲ್ಲ. ವಿಧಾನಸಭಾ ಚುನಾವಣೆಯ ಸಮಯದಲ್ಲಿ, ನಾನು ರಾಜಸ್ಥಾನಕ್ಕೆ ಭೇಟಿ ನೀಡಿದಾಗಲೆಲ್ಲಾ ನೀವು ನಮಗೆ ನೀಡಿದ ಅಪಾರ ಬೆಂಬಲವನ್ನು ನಾನು ನೆನಪಿಸಿಕೊಳ್ಳುತ್ತೇನೆ. ನೀವೆಲ್ಲರೂ ನರೇಂದ್ರ ಮೋದಿ ಅವರ ಭರವಸೆಯಲ್ಲಿ ನಂಬಿಕೆ ಇಟ್ಟಿದ್ದೀರಿ, ಬಲವಾದ 'ಡಬಲ್ ಎಂಜಿನ್' ಸರ್ಕಾರವನ್ನು ರಚಿಸಿದ್ದೀರಿ. ಮತ್ತು ಈಗ, ರಾಜಸ್ಥಾನದ ಡಬಲ್ ಎಂಜಿನ್ ಸರ್ಕಾರದ ತ್ವರಿತ ಪ್ರಗತಿಗೆ ನಾವು ಸಾಕ್ಷಿಯಾಗಿದ್ದೇವೆ. ಇಂದು ನಾವು ರಾಜಸ್ಥಾನದ ಅಭಿವೃದ್ಧಿಗಾಗಿ ಅಂದಾಜು 17 ಸಾವಿರ ಕೋಟಿ ರೂಪಾಯಿ ಮೌಲ್ಯದ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದ್ದೇವೆ ಮತ್ತು ಉದ್ಘಾಟಿಸಿದ್ದೇವೆ. ಈ ಯೋಜನೆಗಳು ರೈಲು, ರಸ್ತೆ, ಸೌರ ಶಕ್ತಿ, ನೀರು ಮತ್ತು ಎಲ್ ಪಿಜಿಯಂತಹ ವಿವಿಧ ಅಭಿವೃದ್ಧಿ ಉಪಕ್ರಮಗಳನ್ನು ಒಳಗೊಂಡಿವೆ. ಅವರು ರಾಜಸ್ಥಾನದ ಸಾವಿರಾರು ಯುವಕರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಸಜ್ಜಾಗಿದ್ದಾರೆ. ಈ ಯೋಜನೆಗಳಿಗೆ ಕೊಡುಗೆ ನೀಡಿದ ರಾಜಸ್ಥಾನದ ನನ್ನ ಎಲ್ಲ ಸ್ನೇಹಿತರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.‘ವಿಕಸಿತ ಭಾರತ ವಿಕಸಿತ ರಾಜಸ್ಥಾನ’ ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರಧಾನಮಂತ್ರಿಯವರು ಭಾಷಣ ಮಾಡಿದರು
February 16th, 11:07 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೊ ಸಮಾವೇಶ ಮೂಲಕ ‘ವಿಕಸಿತ ಭಾರತ ವಿಕಸಿತ ರಾಜಸ್ಥಾನ’ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಪ್ರಧಾನಮಂತ್ರಿಯವರು 17,000 ಕೋಟಿ ರೂ.ಗಳ ಬಹುವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ, ರಾಷ್ಟ್ರಕ್ಕೆ ಸಮರ್ಪಿಸಿದರು ಮತ್ತು ಶಂಕುಸ್ಥಾಪನೆ ಮಾಡಿದರು. ಯೋಜನೆಗಳು ರಸ್ತೆಗಳು, ರೈಲ್ವೇಗಳು, ಸೌರಶಕ್ತಿ, ವಿದ್ಯುತ್ ಪ್ರಸರಣ, ಕುಡಿಯುವ ನೀರು ಮತ್ತು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸೇರಿದಂತೆ ಹಲವಾರು ಪ್ರಮುಖ ಕ್ಷೇತ್ರಗಳನ್ನು ಪೂರೈಸುತ್ತವೆ.PM Modi addresses Grand Public Rallies in poll-bound Rajasthan’s Baran, Kota and Karauli
November 21st, 12:00 pm
Ahead of the assembly election in poll-bound Rajasthan, PM Modi addressed grand public rallies in Baran, Kota and Karauli. He said, “The people of Mewar’s intent for change in favour of BJP are clearly visible in the whole of Rajasthan”.‘ಮನದ ಮಾತು’ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ದಿನಾಂಕ 27.08.2023 ರಂದು ಮಾಡಿದ ‘ಮನ್ ಕಿ ಬಾತ್’ – 104 ನೇ ಸಂಚಿಕೆಯ ಕನ್ನಡ ಅವತರಣಿಕೆ
August 27th, 11:30 am
ನನ್ನ ಪ್ರಿಯ ಕುಟುಂಬದ ಸದಸ್ಯರೆ, ನಮಸ್ಕಾರ. ಮನದ ಮಾತಿನ ಆಗಸ್ಟ್ ಸಂಚಿಕೆಗೆ ಮತ್ತೊಮ್ಮೆ ತಮ್ಮೆಲ್ಲರಿಗೂ ಆತ್ಮೀಯ ಸ್ವಾಗತ. ಶ್ರಾವಣ ಮಾಸದಲ್ಲಿ ಹಿಂದೆಂದೂ ಎರಡು ಬಾರಿ ‘ಮನದ ಮಾತು’ ಕಾರ್ಯಕ್ರಮ ನಡೆದಿದ್ದು ನನಗೆ ನೆನಪಿಲ್ಲ, ಆದರೆ, ಈ ಬಾರಿ ಅದು ಸಾಧ್ಯವಾಗಿದೆ. ಶ್ರಾವಣ ಎಂದರೆ ಮಹಾಶಿವನ ಮಾಸ, ಸಂಭ್ರಮಾಚರಣೆ ಮತ್ತು ಸಂತೋಷದ ತಿಂಗಳಿದು. ಚಂದ್ರಯಾನದ ಯಶಸ್ಸು ಈ ಸಂಭ್ರಮದ ವಾತಾವರಣಕ್ಕೆ ಮತ್ತಷ್ಟು ಕಳೆ ತಂದಿದೆ. ಚಂದ್ರಯಾನ ಚಂದ್ರನನ್ನು ತಲುಪಿ ಮೂರು ದಿನಗಳಿಗಿಂತ ಹೆಚ್ಚು ಸಮಯ ಕಳೆದಿದೆ. ಈ ಯಶಸ್ಸು ಎಷ್ಟು ಮಹತ್ತರವಾದದ್ದು ಎಂದರೆ ಅದರ ಬಗ್ಗೆ ಎಷ್ಟು ಚರ್ಚೆ ಮಾಡಿದರೂ ಕಡಿಮೆಯೇ ಅನ್ನಿಸುತ್ತದೆ. ಇಂದು ನಿಮ್ಮೊಂದಿಗೆ ಮಾತನಾಡುವಾಗ ಹಳೆಯ ನನ್ನ ಕವಿತೆಯ ಕೆಲವು ಸಾಲುಗಳು ನೆನಪಿಗೆ ಬರುತ್ತಿವೆ.ಲೋಕಸಭಾಧ್ಯಕ್ಷ ಶ್ರೀ ಓಂ ಬಿರ್ಲಾ ಅವರ ‘ಸುಪೋಷಿತ್ ಮಾ’ಉಪಕ್ರಮವನ್ನು ಶ್ಲಾಘಿಸಿದ ಪ್ರಧಾನಮಂತ್ರಿ
February 21st, 11:26 am
ಲೋಕಸಭಾಧ್ಯಕ್ಷ ಶ್ರೀ ಓಂ ಬಿರ್ಲಾ ಅವರ ‘ಸುಪೋಷಿತ್ ಮಾ’ ಉಪಕ್ರಮವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶ್ಲಾಘಿಸಿದ್ದಾರೆ. ಶ್ರೀ ಬಿರ್ಲಾ ಅವರು ಕೋಟಾದ ರಾಮಗಂಜಮಂಡಿ ಪ್ರದೇಶದಲ್ಲಿ “ಸುಪೋಶಿತ್ ಮಾ” ಅಭಿಯಾನವನ್ನು ಉದ್ಘಾಟಿಸಿದರು. ಪ್ರತಿ ತಾಯಿ ಮತ್ತು ಮಗು ಆರೋಗ್ಯವಾಗಿರುವುದು ಈ ಉಪಕ್ರಮದ ಗುರಿಯಾಗಿದೆರಾಜಸ್ಥಾನದ ಕೋಟಾದಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಪ್ರಾಣಕಳೆದುಕೊಂಡವರಿಗೆ ಪ್ರಧಾನಮಂತ್ರಿಯವರ ಸಂತಾಪ
February 21st, 09:52 am
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರಾಜಸ್ಥಾನದ ಕೋಟಾದಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಪ್ರಾಣಕಳೆದುಕೊಂಡವರಿಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಸಂತ್ರಸ್ತರಿಗೆ ಪ್ರಧಾನ ಮಂತ್ರಿಗಳ ರಾಷ್ಟ್ರೀಯ ವಿಪತ್ತು ನಿಧಿಯಿಂದ ಪರಿಹಾರ ಮೊತ್ತ ನೀಡಲು ಪ್ರಧಾನ ಮಂತ್ರಿಯವರು ಅನುಮೋದಿಸಿದ್ದಾರೆ.ನಿರ್ಗತಿಕ ಪ್ರಾಣಿಗಳಿಗೆ ಬೆಂಬಲ ನೀಡಿದ್ದಕ್ಕಾಗಿ ನಿವೃತ್ತ ಸೇನಾ ಅಧಿಕಾರಿಯನ್ನು ಪ್ರಶಂಸಿಸಿದ ಪ್ರಧಾನಮಂತ್ರಿ ಮೋದಿ
July 18th, 12:44 pm
ಭಾರತೀಯ ಸೇನೆಯಿಂದ ಮೇಜರ್ ಆಗಿ ನಿವೃತ್ತರಾಗಿರುವ ರಾಜಾಸ್ಥಾನದ ಕೋಟ ನಿವಾಸಿ ಪ್ರಮೀಳಾ ಸಿಂಗ್ ಅವರಿಗೆ ಪತ್ರ ಬರೆದಿರುವ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ, ಅವರ ಕರುಣೆ ಮತ್ತು ಸೇವೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೊರೊನಾ ಲಾಕ್ ಡೌನ್ ವೇಳೆ, ಮೇಜರ್ ಪ್ರಮೀಳಾ ಸಿಂಗ್ (ನಿವೃತ್ತ), ತಮ್ಮ ತಂದೆ ಶ್ಯಾಮ್ ವೀರ್ ಸಿಂಗ್ ಅವರೊಂದಿಗೆ ನಿರ್ಗತಿಕ ಪ್ರಾಣಿಗಳ ನೋವು ಅರ್ಥಮಾಡಿಕೊಂಡು, ಕಾಳಜಿ ವಹಿಸಿ, ನೆರವು ನೀಡಿದರು. ಮೇಜರ್ ಪ್ರಮೀಳಾ ಸಿಂಗ್ ಮತ್ತು ಅವರ ತಂದೆ, ರಸ್ತೆಯಲ್ಲಿ ಅಲೆಯುತ್ತಿದ್ದ ಬೀದಿ ಪ್ರಾಣಿಗಳಿಗೆ ಆಹಾರವನ್ನು ತಮ್ಮ ಸ್ವಂತ ವೆಚ್ಚದಿಂದ ಒದಗಿಸಿದ್ದರು. ಮೇಜರ್ ಪ್ರಮೀಳಾ ಅವರನ್ನು ಶ್ಲಾಘಿಸಿರುವ ಪ್ರಧಾನಮಂತ್ರಿ ಮೋದಿ, ಅವರ ಈ ಪ್ರಯತ್ನ ಸಮಾಜಕ್ಕೆ ಸ್ಫೂರ್ತಿಯ ಸೆಲೆಯಾಗಿದೆ ಎಂದು ಹೇಳಿದ್ದಾರೆ.ರಾಜಸ್ಥಾನದ ಕೋಟಾದಲ್ಲಿ ದೋಣಿ ದುರಂತದಲ್ಲಿ ಮಡಿದವರಿಗೆ ಪ್ರಧಾನಿ ಸಂತಾಪ
September 16th, 07:29 pm
ರಾಜಸ್ಥಾನದ ಕೋಟಾದಲ್ಲಿ ಸಂಭವಿಸಿದ ದೋಣಿ ದುರಂತದಲ್ಲಿ ಮಡಿದವರಿಗೆ ಪ್ರಧಾನಿ ಶ್ರೀ ನರೇಂದ್ರ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ."ಐದು ಲೋಕಸಭಾ ಕ್ಷೇತ್ರಗಳ ಬಿಜೆಪಿ ಕಾರ್ಯಕರ್ತರೊಂದಿಗೆ ಪ್ರಧಾನಿ ಸಂವಹನ "
November 03rd, 06:53 pm
ಪ್ರಧಾನಿ ನರೇಂದ್ರ ಮೋದಿ ಇಂದು ಬುಲಂದ್ ಶಹರ್, ಕೋಟಾ, ಕೊರ್ಬಾ, ಸಿಕರ್ ಮತ್ತು ಟಿಕಾಮ್ಗಢ ಲೋಕಸಭಾ ಕ್ಷೇತ್ರಗಳ ಬಿಜೆಪಿ ಬೂತ್ ಕಾರ್ಯಕರ್ತರೊಂದಿಗೆ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಸಂವಹನ ನಡೆಸಿದರು. 'ಮೇರಾ ಬೂತ್ ಸಬ್ಸೆ ಮಜ್ಬೂತ್ ' ಕಾರ್ಯಕ್ರಮದ ಸರಣಿಯಲ್ಲಿ ಈ ಸಂವಾದವು ಆರನೆಯದಾಗಿತ್ತು.