ಮಾರ್ಚ್ 13-14 ರಂದು ಅಸ್ಸಾಂಗೆ ಪ್ರಧಾನಮಂತ್ರಿ ಭೇಟಿ

March 12th, 05:33 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2026ರ ಮಾರ್ಚ್ 13-14 ರಂದು ಅಸ್ಸಾಂಗೆ ಭೇಟಿ ನೀಡಲಿದ್ದಾರೆ. ಈ ಭೇಟಿಯ ಸಮಯದಲ್ಲಿ, ಪ್ರಧಾನಮಂತ್ರಿ ಅವರು ಕೊಕ್ರಝಾರ್, ಗುವಾಹಟಿ ಮತ್ತು ಸಿಲ್ಚಾರ್‌ನಲ್ಲಿ ₹47,800 ಕೋಟಿಗೂ ಹೆಚ್ಚು ಮೌಲ್ಯದ ಬಹು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸುತ್ತಾರೆ, ರಾಷ್ಟ್ರಕ್ಕೆ ಸಮರ್ಪಿಸುತ್ತಾರೆ, ಶಿಲಾನ್ಯಾಸ ಮಾಡುತ್ತಾರೆ, ಹಾಗು ಭೂಮಿ ಪೂಜೆ ಮಾಡುತ್ತಾರೆ ಮತ್ತು ಹಸಿರು ನಿಶಾನೆ ತೋರಲಿದ್ದಾರೆ. .