2025ರ ಫಿಡೆ ವಿಶ್ವ ರಾಪಿಡ್ ಚೆಸ್ ಚಾಂಪಿಯನ್ ಷಿಪ್ ನಲ್ಲಿ ಕಂಚಿನ ಪದಕ ಗೆದ್ದ ಕೊನೇರು ಹಂಪಿಗೆ ಪ್ರಧಾನಮಂತ್ರಿ ಅಭಿನಂದನೆ

December 29th, 03:35 pm

ದೋಹಾದಲ್ಲಿ ನಡೆದ 2025ರ ಫಿಡೆ ವಿಶ್ವ ರಾಪಿಡ್ ಚೆಸ್ ಚಾಂಪಿಯನ್ ಷಿಪ್ ನ ಮಹಿಳಾ ವಿಭಾಗದಲ್ಲಿ ಕಂಚಿನ ಪದಕ ಗೆದ್ದ ಕೊನೇರು ಹಂಪಿ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ. ಆಟದ ಬಗ್ಗೆ ಅವರ ಸಮರ್ಪಣೆ ಶ್ಲಾಘನೀಯ. ಮುಂದಿನ ಪ್ರಯತ್ನಗಳಿಗೆ ಶುಭ ಹಾರೈಕೆಗಳು, ಎಂದು ಶ್ರೀ ನರೇಂದ್ರ ಮೋದಿ ಅವರು ಹೇಳಿದ್ದಾರೆ.

ಪ್ರಧಾನಮಂತ್ರಿ ಅವರು ದಿವ್ಯಾ ದೇಶಮುಖ್ ಅವರನ್ನು ಗ್ರ್ಯಾಂಡ್ ಮಾಸ್ಟರ್ ಆಗಿದ್ದಕ್ಕೆ ಅಭಿನಂದಿಸಿದ್ದಾರೆ

July 29th, 06:00 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದಿವ್ಯಾ ದೇಶಮುಖ್ ಅವರನ್ನು ಕೇವಲ 2025 ಫಿಡೆ (FIDE) ಮಹಿಳಾ ವಿಶ್ವಕಪ್ ಗೆದ್ದಿರುವುದಕ್ಕೆ ಮಾತ್ರವಲ್ಲದೇ ಗ್ರ್ಯಾಂಡ್ ಮಾಸ್ಟರ್ ಆಗಿದ್ದಕ್ಕೆ ಅಭಿನಂದಿಸಿದ್ದಾರೆ. “ಅವರ ಸಾಧನೆ ಜನರನ್ನು ಪ್ರೇರೇಪಿಸುತ್ತದೆ ಮತ್ತು ಯುವಜನರಲ್ಲಿ ಚೆಸ್ ಅನ್ನು ಮತ್ತಷ್ಟು ಪ್ರಖ್ಯಾತಗೊಳಿಸಲು ಕೊಡುಗೆ ನೀಡುತ್ತದೆ” ಎಂದು ಶ್ರೀ ಮೋದಿ ಅವರು ಹೇಳಿದ್ದಾರೆ.

ಎಫ್ ಐ ಡಿ ಇ ಮಹಿಳಾ ವಿಶ್ವ ಚೆಸ್ ಚಾಂಪಿಯನ್ 2025 ದಿವ್ಯಾ ದೇಶಮುಖ್ ಅವರಿಗೆ ಪ್ರಧಾನಮಂತ್ರಿ ಅಭಿನಂದನೆ

July 28th, 06:29 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಫಿಡೆ ಮಹಿಳಾ ವಿಶ್ವ ಚೆಸ್ ಚಾಂಪಿಯನ್ 2025 ಆಗಿ ಹೊರಹೊಮ್ಮಿರುವ ದಿವ್ಯಾ ದೇಶಮುಖ್ ಅವರನ್ನು ಅಭಿನಂದಿಸಿದ್ದಾರೆ. ಕೊನೇರು ಹಂಪಿ ಅವರೂ ಕೂಡ ಪಂದ್ಯಾವಳಿಯಾದ್ಯಂತ ಅಗಾಧ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ. ಇಬ್ಬರೂ ಆಟಗಾರ್ತಿಯರಿಗೆ ಅವರ ಭವಿಷ್ಯದ ಪ್ರಯತ್ನಗಳಿಗೆ ಶುಭ ಹಾರೈಕೆಗಳು ಎಂದು ಶ್ರೀ ಮೋದಿ ಅವರು ಹೇಳಿದ್ದಾರೆ.

ಚೆಸ್ ಚಾಂಪಿಯನ್ ಕೊನೇರು ಹಂಪಿ ಅವರಿಂದ ಪ್ರಧಾನಮಂತ್ರಿ ಭೇಟಿ

January 03rd, 08:42 pm

ಚೆಸ್ ಚಾಂಪಿಯನ್ ಕೊನೇರು ಹಂಪಿ ಅವರು ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು. ಕೊನೇರು ಹಂಪಿ ಅವರು ಭಾರತಕ್ಕೆ ಅಪಾರ ಹೆಮ್ಮೆ ತಂದಿದ್ದಾರೆ ಎಂದು ಶ್ಲಾಘಿಸಿರುವ ಶ್ರೀ ಮೋದಿ ಅವರು, ಹಂಪಿ ಅವರ ತೀಕ್ಷ್ಣ ಬುದ್ಧಿಮತ್ತೆ ಮತ್ತು ಅಚಲವಾದ ಬದ್ಧತೆಯು ಸ್ಪಷ್ಟವಾಗಿ ಗೋಚರಿಸಿದೆ ಎಂದು ಬಣ್ಣಿಸಿದ್ದಾರೆ.