ಅಜ್ಮೀರ್ ನಲ್ಲಿ ಅಭಿವೃದ್ಧಿ ಕಾರ್ಯಗಳು, ಎಚ್ ಪಿ ವಿ ಲಸಿಕೆಗಾಗಿ ದೇಶವ್ಯಾಪಿ ಅಭಿಯಾನದ ಉದ್ಘಾಟನೆಯ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರ ಭಾಷಣ
February 28th, 12:00 pm
ಇಂದು, ತೀರ್ಥರಾಜ ಪುಷ್ಕರ್ ಮತ್ತು ಮಾತಾ ಸಾವಿತ್ರಿಯ ಈ ಪವಿತ್ರ ಭೂಮಿಯಲ್ಲಿ, ನಿಮ್ಮೆಲ್ಲರ ನಡುವೆ ಇದ್ದು ನಿಮ್ಮ ಆಶೀರ್ವಾದ ಪಡೆಯುವ ಅವಕಾಶ ಸಿಕ್ಕಿದೆ. ಈ ವೇದಿಕೆಯಿಂದ, ನಾನು ಸುರಾಸುರನ ತೇಜಜಿ ಧಾಮ ಮತ್ತು ಪೃಥ್ವಿರಾಜ್ ಅವರ ನೆಲ ಅಜ್ಮೀರ್ ಗೆ ನಮಸ್ಕರಿಸುತ್ತೇನೆ.ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರಾಜಸ್ಥಾನದ ಅಜ್ಮೀರ್‌ನಲ್ಲಿ ₹17,000 ಕೋಟಿ ಮೌಲ್ಯದ ರಾಷ್ಟ್ರವ್ಯಾಪಿ ಎಚ್‌ಪಿವಿ ಲಸಿಕೆ ಅಭಿಯಾನಕ್ಕೆ ಚಾಲನೆ ಮತ್ತು ಅಭಿವೃದ್ಧಿ ಯೋಜನೆ ಲೋಕಾರ್ಪಣೆ
February 28th, 11:30 am
ರಾಜಸ್ಥಾನದಲ್ಲಿನ ಡಬಲ್-ಎಂಜಿನ್ ಸರ್ಕಾರ ಎರಡು ವರ್ಷಗಳ ತ್ವರಿತ ಪ್ರಗತಿಯನ್ನು ಪೂರ್ಣಗೊಳಿಸಿದೆ ಎಂದು ಪ್ರಧಾನಮಂತ್ರಿ ತೃಪ್ತಿ ವ್ಯಕ್ತಪಡಿಸಿದರು. ಜನರಿಗೆ ಸೇವೆ ಸಲ್ಲಿಸಲು ಬಂದ ಅಭಿವೃದ್ಧಿಯ ಭರವಸೆಗಳನ್ನು ಸರ್ಕಾರ ಪೂರೈಸುತ್ತಿದೆ. ಮತ್ತು ಇಂದು ಈ ಅಭಿವೃದ್ಧಿಯ ಅಭಿಯಾನವನ್ನು ಮತ್ತಷ್ಟು ವೇಗಗೊಳಿಸುವ ದಿನವಾಗಿದೆ. ಎಂದು ಮೋದಿ ಅವರು ಹೇಳಿದರು. ಇಂದಿನ ಕಾರ್ಯಕ್ರಮದಲ್ಲಿ ರಸ್ತೆಗಳು, ವಿದ್ಯುತ್, ನೀರು, ಆರೋಗ್ಯ ಮತ್ತು ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸುಮಾರು ₹17,000 ಕೋಟಿ ಮೌಲ್ಯದ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನಡೆದಿದ್ದು, ರಾಜಸ್ಥಾನದ ಜನರ ಅನುಕೂಲತೆಯನ್ನು ಹೆಚ್ಚಿಸಲು ಮತ್ತು ಯುವಕರಿಗೆ ಅಪಾರ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಉದ್ದೇಶಿಸಲಾಗಿದೆ ಎಂದು ಪ್ರಧಾನಿ ಹೇಳಿದರು.ಭಾರತ - ಇಸ್ರೇಲ್ ಜಂಟಿ ಹೇಳಿಕೆ
February 26th, 07:44 pm
ಭಾರತ ಮತ್ತು ಇಸ್ರೇಲ್ ನಡುವಿನ ಆತ್ಮೀಯತೆ, ಸದ್ಭಾವನೆ ಮತ್ತು ಆಳವಾದ ಕಾರ್ಯತಂತ್ರದ ಬಾಂಧವ್ಯವನ್ನು ಗೌರವಿಸಿ, ಇಸ್ರೇಲ್ ಪ್ರಧಾನಮಂತ್ರಿ ಶ್ರೀ ಬೆಂಜಮಿನ್ ನೆತನ್ಯಾಹು ಅವರ ಆಹ್ವಾನದ ಮೇರೆಗೆ ಭಾರತದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2026ರ ಫೆಬ್ರವರಿ 25 ರಿಂದ 26 ರವರೆಗೆ ಇಸ್ರೇಲ್ ಗೆ ಅಧಿಕೃತ ಭೇಟಿ ನೀಡಿದರು. ಪ್ರಧಾನಮಂತ್ರಿಯವರೊಂದಿಗೆ ಹಿರಿಯ ಸಚಿವರು ಮತ್ತು ಅಧಿಕಾರಿಗಳನ್ನೊಳಗೊಂಡ ಉನ್ನತ ಮಟ್ಟದ ನಿಯೋಗವು ಆಗಮಿಸಿತ್ತು.ಇಸ್ರೇಲ್ ಪ್ರಧಾನಮಂತ್ರಿ ಅವರೊಂದಿಗಿನ ಜಂಟಿ ಪತ್ರಿಕಾ ಹೇಳಿಕೆಯ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರ ಭಾಷಣದ ಕನ್ನಡ ಅನುವಾದ
February 26th, 03:30 pm
ನನಗೆ ಮತ್ತು ಭಾರತೀಯ ನಿಯೋಗಕ್ಕೆ ನೀಡಿದ ಆತ್ಮೀಯ ಸ್ವಾಗತಕ್ಕಾಗಿ ನಾನು ಮತ್ತೊಮ್ಮೆ ಪ್ರಧಾನಮಂತ್ರಿ ನೆತನ್ಯಾಹು ಅವರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ತಿಳಿಸುತ್ತೇನೆ.ನೆಸ್ಸೆಟ್ ಅನ್ನು ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
February 25th, 08:20 pm
ಈ ಗೌರವಾನ್ವಿತ ಸದನದ ಮುಂದೆ ನಿಂತಿರುವುದು ನನಗೆ ಸಂದ ಗೌರವ ಮತ್ತು ಸೌಭಾಗ್ಯವಾಗಿದೆ. ನಾನು ಭಾರತದ ಪ್ರಧಾನಮಂತ್ರಿಯಾಗಿ ಮಾತ್ರವಲ್ಲದೆ, ಒಂದು ಪ್ರಾಚೀನ ನಾಗರಿಕತೆಯ ಪ್ರತಿನಿಧಿಯಾಗಿ ಮತ್ತೊಂದು ಪ್ರಾಚೀನ ನಾಗರಿಕತೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದೇನೆ. ನಾನು ನಿಮ್ಮ ಬಳಿಗೆ 140 ಕೋಟಿ ಭಾರತೀಯರ ಶುಭಾಶಯಗಳು ಹಾಗೂ ಸ್ನೇಹ, ಗೌರವ ಮತ್ತು ಸಹಭಾಗಿತ್ವದ ಸಂದೇಶವನ್ನು ಹೊತ್ತು ತಂದಿದ್ದೇನೆ.ಇಸ್ರೇಲ್ ಸಂಸತ್ತನ್ನು (ನೆಸ್ಸೆಟ್) ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ
February 25th, 08:00 pm
ಕನೆಸೆಟ್‌ಗೆ ಆಗಮಿಸಿದ ಪ್ರಧಾನಮಂತ್ರಿಯವರನ್ನು ನೆಸ್ಸೆಟ್ ನ ಸ್ಪೀಕರ್ ಘನತೆವೆತ್ತ ಅಮೀರ್ ಓಹಾನಾ ಸ್ವಾಗತಿಸಿದರು ಮತ್ತು ವಿಧ್ಯುಕ್ತ ಸ್ವಾಗತ ನೀಡಿದರು. ಇಸ್ರೇಲ್ ಪ್ರಧಾನಮಂತ್ರಿ, ಘನತೆವೆತ್ತ ಶ್ರೀ ಬೆಂಜಮಿನ್ ನೆತನ್ಯಾಹು; ವಿರೋಧ ಪಕ್ಷದ ನಾಯಕರಾದ ಘನತೆವೆತ್ತ ಶ್ರೀ ಯಾಯಿರ್ ಲಾಪಿಡ್; ಮತ್ತು ಸ್ಪೀಕರ್ ಒಹಾನಾ ಅವರು ಪ್ರಧಾನಮಂತ್ರಿಯವರ ಭಾಷಣಕ್ಕೂ ಮುನ್ನ ಅಧಿವೇಶನದಲ್ಲಿ ಮಾತನಾಡಿ, ಭಾರತ-ಇಸ್ರೇಲ್ ಸಂಬಂಧಗಳಿಗೆ ಬಲವಾದ ದ್ವಿಪಕ್ಷೀಯ ಬೆಂಬಲವನ್ನು ವ್ಯಕ್ತಪಡಿಸಿದರು.ಇಸ್ರೇಲ್ ಭೇಟಿಗೆ ಮುನ್ನ ಪ್ರಧಾನಮಂತ್ರಿ ಅವರ ನಿರ್ಗಮನ ಹೇಳಿಕೆ
February 25th, 08:28 am
ನನ್ನ ಆತ್ಮೀಯ ಸ್ನೇಹಿತ ಪ್ರಧಾನಮಂತ್ರಿ ಬೆಂಜಮಿನ್ ನೆತನ್ಯಾಹು ಅವರ ಆಹ್ವಾನದ ಮೇರೆಗೆ ನಾನು 2026ರ ಫೆಬ್ರವರಿ 25ರಿಂದ 26ರವರೆಗೆ ಇಸ್ರೇಲ್‌ಗೆ ಅಧಿಕೃತ ಭೇಟಿ ನೀಡಲಿದ್ದೇನೆ.