ಮುತ್ತುಗಳಿಂದ ಮಾಡಿದ ಕಲಾಕೃತಿ ಪ್ರಧಾನಿಗೆ ಸಮರ್ಪಣೆ
June 15th, 03:32 pm
ಮುತ್ತುಗಳಿಂದ ಮಾಡಿದ ವಿಶಿಷ್ಠ ಕಲಾಕೃತಿಯನ್ನು ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರಿಗಿಂದು ಅರ್ಪಿಸಲಾಯಿತು. ಈ ಕಲಾಕೃತಿಯು ಭಾರತದ ಭೂಪಟ ಮತ್ತು ಪ್ರಧಾನಿಯವರ ಚಿತ್ರವನ್ನೂ ಒಳಗೊಂಡಿದೆ. ಈ ಕೃತಿಯನ್ನು ರಚಿಸಿದ ಶ್ರೀಮತಿ. ಕುಶ್ಬೋ ಆಕಾಶ್ ದೇವ್ ಅವರು, ಈ ಕಲಾಕೃತಿಯ ರಚನೆಗೆ ಐದು ಲಕ್ಷಕ್ಕೂ ಹೆಚ್ಚು ಮುತ್ತುಗಳನ್ನು, 10 ಕಿಲೋ ಮೀಟರ್ ಉದ್ದದಷ್ಟು ದಾರವನ್ನು ಬಳಸಲಾಗಿದೆ ಎಂದು ತಿಳಿಸಿದರು.