ಒಡಿಶಾದಲ್ಲಿ ಹೈಬ್ರಿಡ್ ಅನ್ಯೂಯಿಟಿ ಮಾದರಿಯಲ್ಲಿ ರಾಮೇಶ್ವರ್ ನಿಂದ ಪಾರದೀಪ್ ವರೆಗೆ (ಒಟ್ಟು 163.180 ಕಿ.ಮೀ ಉದ್ದದ ಕರಾವಳಿ ಹೆದ್ದಾರಿಯ ಭಾಗ - 2 ಪ್ಯಾಕೇಜ್ ಗಳಲ್ಲಿ) ಹೊಸ ಕರಾವಳಿ ಹೆದ್ದಾರಿ ನಿರ್ಮಾಣಕ್ಕೆ ಕೇಂದ್ರ ಸಚಿವ ಸಂಪುಟದ ಅನುಮೋದನೆ
June 03rd, 03:10 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಆರ್ಥಿಕ ವ್ಯವಹಾರಗಳ ಸಚಿವ ಸಂಪುಟ ಸಮಿತಿಯು, ಒಡಿಶಾದಲ್ಲಿ ಹೈಬ್ರಿಡ್ ಅನ್ಯೂಯಿಟಿ ಮಾದರಿಯ ಅಡಿಯಲ್ಲಿ ರಾಮೇಶ್ವರ್ ನಿಂದ ಪಾರದೀಪ್ ವರೆಗೆ ಹೊಸ ಕರಾವಳಿ ಹೆದ್ದಾರಿ ನಿರ್ಮಾಣಕ್ಕೆ ಅನುಮೋದನೆ ನೀಡಿದೆ. ಎರಡು ಪ್ಯಾಕೇಜ್ ಗಳ ಅಡಿಯಲ್ಲಿ ನಿರ್ಮಾಣವಾಗಲಿರುವ ಈ ಹೆದ್ದಾರಿಯು ಒಟ್ಟು 160.18 ಕಿ.ಮೀ ಉದ್ದವನ್ನು ಹೊಂದಿದ್ದು, ಇದರ ಒಟ್ಟು ಜಂಟಿ ಬಂಡವಾಳ ವೆಚ್ಚ ₹8300.79 ಕೋಟಿ ಆಗಿದೆ.