ಅಸ್ಸಾಂನಲ್ಲಿ ಕಾಜಿರಂಗಾ ಎಲಿವೇಟೆಡ್ ಕಾರಿಡಾರ್ ಯೋಜನೆಯ ಭೂಮಿ ಪೂಜೆ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರ ಭಾಷಣದ ಕನ್ನಡ ಅನುವಾದ
January 18th, 11:30 am
ಇಂದು, ನನಗೆ ಮತ್ತೆ ಕಾಜಿರಂಗಕ್ಕೆ ಬರುವ ಸೌಭಾಗ್ಯ ಸಿಕ್ಕಿದೆ. ನನ್ನ ಹಿಂದಿನ ಭೇಟಿಯನ್ನು ನೆನಪಿಸಿಕೊಳ್ಳುವುದು ಸ್ವಾಭಾವಿಕವಾಗಿದೆ. ಎರಡು ವರ್ಷಗಳ ಹಿಂದೆ ಕಾಜಿರಂಗದಲ್ಲಿ ಕಳೆದ ಕ್ಷಣಗಳು ನನ್ನ ಜೀವನದ ವಿಶೇಷ ಅನುಭವಗಳಲ್ಲಿ ಒಂದಾಗಿದೆ. ಕಾಜಿರಂಗ ರಾಷ್ಟ್ರೀಯ ಉದ್ಯಾನವನದಲ್ಲಿ ರಾತ್ರಿ ತಂಗುವ ಅವಕಾಶ ನನಗೆ ಸಿಕ್ಕಿತು ಮತ್ತು ಮರುದಿನ ಬೆಳಿಗ್ಗೆ ಆನೆ ಸಫಾರಿ ಸಮಯದಲ್ಲಿ, ನಾನು ಈ ಪ್ರದೇಶದ ಸೌಂದರ್ಯವನ್ನು ಬಹಳ ಹತ್ತಿರದಿಂದ ಅನುಭವಿಸಿದೆ.ಅಸ್ಸಾಂನ ಕಲಿಯಾಬೋರ್‌ನಲ್ಲಿ ₹6,950 ಕೋಟಿಗೂ ಅಧಿಕ ವೆಚ್ಚದ ಕಾಜಿರಂಗ ಎಲಿವೇಟೆಡ್ ಕಾರಿಡಾರ್ ಯೋಜನೆಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದ ಭೂಮಿ ಪೂಜೆ
January 18th, 11:00 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅಸ್ಸಾಂನ ಕಲಿಯಾಬೋರ್ ನಲ್ಲಿ ₹6,950 ಕೋಟಿಗೂ ಅಧಿಕ ವೆಚ್ಚದ ಕಾಜಿರಂಗ ಎಲಿವೇಟೆಡ್ ಕಾರಿಡಾರ್ ಯೋಜನೆಗೆ (NH-715 ರ ಕಲಿಯಾಬೋರ್-ನುಮಾಲಿಗಢ ವಿಭಾಗದ 4-ಲೇನ್ ರಸ್ತೆ) ಭೂಮಿಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ನೆರೆದಿದ್ದ ಜನರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಬಂದು ತಮ್ಮನ್ನು ಆಶೀರ್ವದಿಸಿದ ಜನತೆಗೆ ಕೃತಜ್ಞತೆ ಸಲ್ಲಿಸಿದರು. ಕಾಜಿರಂಗಕ್ಕೆ ಮತ್ತೊಮ್ಮೆ ಭೇಟಿ ನೀಡಿದ್ದರಿಂದ ತಮ್ಮ ಹಳೆಯ ನೆನಪುಗಳು ಮರುಕಳಿಸಿವೆ ಎಂದು ಸ್ಮರಿಸಿದ ಅವರು, ಎರಡು ವರ್ಷಗಳ ಹಿಂದೆ ಕಾಜಿರಂಗದಲ್ಲಿ ಕಳೆದ ಕ್ಷಣಗಳು ತಮ್ಮ ಜೀವನದ ಅತ್ಯಂತ ವಿಶೇಷ ಅನುಭವಗಳಲ್ಲಿ ಒಂದಾಗಿವೆ ಎಂದು ಹೇಳಿದರು. ಪ್ರಧಾನಮಂತ್ರಿ ಶ್ರೀ ಮೋದಿಯವರು ಕಾಜಿರಂಗ ರಾಷ್ಟ್ರೀಯ ಉದ್ಯಾನವನದಲ್ಲಿ ರಾತ್ರಿ ಕಳೆಯುವ ಅವಕಾಶ ಸಿಕ್ಕಿದ್ದನ್ನು ಮತ್ತು ಮರುದಿನ ಬೆಳಿಗ್ಗೆ ಆನೆ ಸವಾರಿಯ ಮೂಲಕ ಈ ಪ್ರದೇಶದ ಸೌಂದರ್ಯವನ್ನು ಹತ್ತಿರದಿಂದ ಅನುಭವಿಸಿದ್ದನ್ನು ವಿಶೇಷವಾಗಿ ಉಲ್ಲೇಖಿಸಿದರುಜನವರಿ 17-18 ರಂದು ಅಸ್ಸಾಂಗೆ ಪ್ರಧಾನಮಂತ್ರಿ ಭೇಟಿ
January 16th, 02:51 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2026ರ ಜನವರಿ 17-18, ರಂದು ಅಸ್ಸಾಂಗೆ ಭೇಟಿ ನೀಡಲಿದ್ದಾರೆ.