ರಾಷ್ಟ್ರೀಯ ಹೆದ್ದಾರಿ-19 ಮತ್ತು ಉತ್ತರ ಪ್ರದೇಶದ ವಾರಣಾಸಿ ರಿಂಗ್ ರಸ್ತೆ ನಡುವೆ 6 ಪಥದ ಗ್ರೀನ್ಫೀಲ್ಡ್ ಎಲಿವೇಟೆಡ್ ಕಾರಿಡಾರ್ ಮತ್ತು ಇಳಿಜಾರುಗಳು/ಲೂಪ್ಗಳು ಮತ್ತು ಪಾದಚಾರಿ ಮೇಲ್ಸೇತುವೆಯನ್ನು ಹೈಬ್ರಿಡ್ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಕೇಂದ್ರ ಸಚಿವ ಸಂಪುಟ ಅನುಮೋದನೆ; ರಾಷ್ಟ್ರೀಯ ಹೆದ್ದಾರಿ(O) ಅಡಿಯಲ್ಲಿ ಒಟ್ಟು 14447.64 ಕೋಟಿ ರೂ. ಬಂಡವಾಳ ವೆಚ್ಚ
July 15th, 04:53 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅಧ್ಯಕ್ಷತೆಯಂದು ನಡೆದ ಆರ್ಥಿಕ ವ್ಯವಹಾರಗಳ ಸಚಿವ ಸಂಪುಟ ಸಮಿತಿ ಉತ್ತರ ಪ್ರದೇಶದ ವಾರಣಾಸಿ ನಗರದ ವಾಹನ ದಟ್ಟಣೆಯನ್ನು ನಿವಾರಿಸಲು ಗಂಗಾ ನದಿಯ ಉದ್ದಕ್ಕೂ ನದಿ ದಂಡೆಯ ಸಂಪರ್ಕದೊಂದಿಗೆ ರಾಷ್ಟ್ರೀಯ ಹೆದ್ದಾರಿ-19 (NH-19) ಮತ್ತು ವಾರಣಾಸಿ ರಿಂಗ್ ರಸ್ತೆ ನಡುವೆ ಲಿಂಕ್/ಕನೆಕ್ಟರ್ ಕಾರಿಡಾರ್ ಅಭಿವೃದ್ಧಿಪಡಿಸಲು ಅನುಮೋದನೆ ನೀಡಿದೆ. ಆರು ಪಥಗಳ ಎತ್ತರದ ಮುಖ್ಯ ಕ್ಯಾರೇಜ್ವೇ, ಐಕಾನಿಕ್ ಕೇಬಲ್-ಸ್ಟೇಯ್ಡ್ ಸೇತುವೆ, ಎಕ್ಸ್ಟ್ರಾಡೋಸ್ಡ್ ಫುಟ್ ಓವರ್ ಬ್ರಿಡ್ಜ್-ಕಮ್-ಮೇಜರ್ ಬ್ರಿಡ್ಜ್, ಲೂಪ್ಗಳು, ಇಳಿಜಾರುಗಳು, ಲಿಂಕ್ ರಸ್ತೆಗಳು ಮತ್ತು ಸೇವಾ ರಸ್ತೆಗಳನ್ನು ಒಳಗೊಂಡಿರುವ 46.039 ಕಿ.ಮೀ ಯೋಜನೆಯನ್ನು ಹೈಬ್ರಿಡ್ ಅನ್ಯುಟಿ ಮಾದರಿ (HAM) ಅಡಿಯಲ್ಲಿ14,447.64 ಕೋಟಿ ರೂ. ಒಟ್ಟು ಬಂಡವಾಳ ವೆಚ್ಚದಲ್ಲಿ ಜಾರಿಗೊಳಿಸಲಾಗುವುದು, ಇದರಲ್ಲಿ ಸಿವಿಲ್ ಕಾಮಗಾರಿ ವೆಚ್ಚ 6,037.85 ಕೋಟಿ ರೂ. (ಯುಟಿಲಿಟಿ ಶಿಫ್ಟಿಂಗ್ ಸೇರಿದಂತೆ, ಜಿಎಸ್ಟಿ ಹೊರತುಪಡಿಸಿ) ಮತ್ತು 541.11 ಕೋಟಿ ರೂ. ಭೂಸ್ವಾಧೀನ ವೆಚ್ಚ ಸೇರಿವೆ.ಏಪ್ರಿಲ್ 28-29 ರಂದು ಉತ್ತರ ಪ್ರದೇಶಕ್ಕೆ ಪ್ರಧಾನಮಂತ್ರಿ ಭೇಟಿ
April 26th, 03:46 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಏಪ್ರಿಲ್ 28-29 ರಂದು ಉತ್ತರ ಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ. ಏಪ್ರಿಲ್ 28 ರಂದು ಸಂಜೆ 5 ಗಂಟೆಗೆ ಪ್ರಧಾನಮಂತ್ರಿಯವರು ಮಹಿಳಾ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ, ಅವರು ವಾರಣಾಸಿಯಲ್ಲಿ ಸುಮಾರು 6,350 ಕೋಟಿ ರೂ.ಗಳ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ಸಂದರ್ಭದಲ್ಲಿ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.