ಹುಲ್ ದಿವಸ್ ಅಂಗವಾಗಿ ವೀರ ಯೋಧರಿಗೆ ಗೌರವ ನಮನ ಸಲ್ಲಿಸಿದ ಪ್ರಧಾನಮಂತ್ರಿ

June 30th, 06:10 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಹುಲ್ ದಿವಸ್ ಸಂದರ್ಭದಲ್ಲಿ ವಿದೇಶಿ ಆಡಳಿತದ ಅನ್ಯಾಯದ ವಿರುದ್ಧ ದೃಢವಾಗಿ ನಿಂತ ಸಿಡೋ-ಕನ್ಹು, ಚಾಂದ್-ಭೈರವ್ ಮತ್ತು ಫುಲೋ-ಝಾನೊ ಅವರಂತಹ ಎಲ್ಲಾ ವೀರ ಯೋಧರಿಗೆ ಗೌರವ ನಮನ ಸಲ್ಲಿಸಿದರು. ಬುಡಕಟ್ಟು ಘನತೆ ಮತ್ತು ಗೌರವವನ್ನು ರಕ್ಷಿಸಲು ಅವರ ಹೋರಾಟ ಮತ್ತು ತ್ಯಾಗದ ಕಥೆಯು ದೇಶವಾಸಿಗಳ ಹೃದಯದಲ್ಲಿ ಹೊಸ ಶಕ್ತಿಯನ್ನು ತುಂಬುತ್ತಲೇ ಇರುತ್ತದೆ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು.