ಜಿ7 ಶೃಂಗಸಭೆ ಸಂದರ್ಭದಲ್ಲಿ ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷರೊಂದಿಗೆ ಪ್ರಧಾನಮಂತ್ರಿ ಸಂವಾದ
June 18th, 05:03 pm
2025ರ ಜೂನ್ 17 ರಂದು ಕೆನಡಾದ ಕನನಾಸ್ಕಿಸ್ನಲ್ಲಿ ನಡೆದ ಜಿ 7 ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷರಾದ ಶ್ರೀ ಆಂಟೋನಿಯೊ ಕೋಸ್ಟಾ ಅವರೊಂದಿಗೆ ಫಲಪ್ರದ ಸಂಭಾಷಣೆ ನಡೆಸಿದರು.ಜಿ7 ಶೃಂಗಸಭೆಯ ಸಂದರ್ಭದಲ್ಲಿ ಕೊರಿಯಾ ಗಣರಾಜ್ಯದ ಅಧ್ಯಕ್ಷರನ್ನು ಭೇಟಿಯಾದ ಪ್ರಧಾನಮಂತ್ರಿ
June 18th, 03:17 pm
ಜೂನ್ 17, 2025 ರಂದು ಕೆನಡಾದ ಕನನಾಸ್ಕಿಸ್ ನಲ್ಲಿ ನಡೆದ 51 ನೇ ಜಿ7 ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕೊರಿಯಾ ಗಣರಾಜ್ಯದ ಅಧ್ಯಕ್ಷ ಘನತೆವೆತ್ತ ಶ್ರೀ ಲೀ ಜೇ-ಮ್ಯುಂಗ್ ಅವರನ್ನು ಭೇಟಿಯಾದರು. ವಾಣಿಜ್ಯ, ಹೂಡಿಕೆ, ತಂತ್ರಜ್ಞಾನ, ಹಸಿರು ಹೈಡ್ರೋಜನ್, ಹಡಗು ನಿರ್ಮಾಣ ಮತ್ತು ಇತರ ಕ್ಷೇತ್ರಗಳಲ್ಲಿ ಭಾರತ ಮತ್ತು ಕೊರಿಯಾ ಗಣರಾಜ್ಯ ಒಟ್ಟಾಗಿ ಕೆಲಸ ಮಾಡಲು ಬಯಸುತ್ತವೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೇಳಿದರು.ಜಿ7 ಶೃಂಗಸಭೆಯಲ್ಲಿ ದಕ್ಷಿಣ ಆಫ್ರಿಕಾ ಮತ್ತು ಬ್ರೆಜಿಲ್ ಅಧ್ಯಕ್ಷರೊಂದಿಗೆ ಪ್ರಧಾನಮಂತ್ರಿ ಸಂವಾದ
June 18th, 03:05 pm
2025ರ ಜೂನ್ 17 ರಂದು ಕೆನಡಾದ ಕನನಾಸ್ಕಿಸ್ನಲ್ಲಿ ನಡೆದ ಜಿ 7 ಶೃಂಗಸಭೆಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದಕ್ಷಿಣ ಆಫ್ರಿಕಾ ಗಣರಾಜ್ಯದ ಅಧ್ಯಕ್ಷ ಘನತೆವೆತ್ತ ಶ್ರೀ ಸಿರಿಲ್ ರಾಮಫೋಸಾ ಮತ್ತು ಬ್ರೆಜಿಲ್ ಅಧ್ಯಕ್ಷ ಘನತೆವೆತ್ತ ಶ್ರೀ ಲೂಯಿಜ್ ಇನಾಸಿಯೊ ಲುಲಾ ಡ ಸಿಲ್ವಾ ಅವರೊಂದಿಗೆ ವಿಸ್ತಾರವಾದ ಮತ್ತು ಹೃತ್ಪೂರ್ವಕ ಸಂಭಾಷಣೆಗಳನ್ನು ನಡೆಸಿದರು. ಜಾಗತಿಕ ದಕ್ಷಿಣದ ಉದ್ದೇಶವನ್ನು ಸಮರ್ಥಿಸುವ ಭಾರತದ ಅಚಲ ಬದ್ಧತೆಯನ್ನು ಅವರು ಪುನರುಚ್ಚರಿಸಿದರು.ಜಿ7 ಶೃಂಗಸಭೆಯ ಸಂದರ್ಭದಲ್ಲಿ ಯುರೋಪಿಯನ್ ಆಯೋಗದ ಅಧ್ಯಕ್ಷರ ಜೊತೆ ಪ್ರಧಾನಮಂತ್ರಿ ಸಂವಾದ
June 18th, 03:04 pm
2025ರ ಜೂನ್ 17 ರಂದು ಕೆನಡಾದ ಕನನಾಸ್ಕಿಸ್ನಲ್ಲಿ ನಡೆದ ಜಿ 7 ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಯುರೋಪಿಯನ್ ಆಯೋಗದ ಅಧ್ಯಕ್ಷರಾದ ಶ್ರೀಮತಿ ಉರ್ಸುಲಾ ವಾನ್ ಡೆರ್ ಲೇಯೆನ್ ಅವರೊಂದಿಗೆ ಫಲಪ್ರದ ಚರ್ಚೆ ನಡೆಸಿದರು.ಜಿ7 ಶೃಂಗಸಭೆಯಲ್ಲಿ ಜಪಾನ್ ಪ್ರಧಾನಮಂತ್ರಿಯೊಂದಿಗೆ ಪ್ರಧಾನಮಂತ್ರಿ ಸಂವಾದ
June 18th, 03:00 pm
2025ರ ಜೂನ್ 17 ರಂದು ಕೆನಡಾದ ಕನನಾಸ್ಕಿಸ್ನಲ್ಲಿ ನಡೆದ 51ನೇ ಜಿ7 ಶೃಂಗಸಭೆಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜಪಾನ್ ಜಿ7 ಶೃಂಗಸಭೆಯಲ್ಲಿ ಜಪಾನ್ ಪ್ರಧಾನಮಂತ್ರಿ ಗೌರವಾನ್ವಿತ ಶ್ರೀ ಶಿಗೇರು ಇಶಿಬಾ ಅವರೊಂದಿಗೆ ಒಳನೋಟವುಳ್ಳ ಸಂವಾದ ನಡೆಸಿದರು. ವಿವಿಧ ವಲಯಗಳಲ್ಲಿ ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಗಟ್ಟಿಗೊಳಿಸಲು ಭಾರತ ಮತ್ತು ಜಪಾನ್ ಬದ್ಧವಾಗಿವೆ ಎಂದು ನಾಯಕರು ದೃಢಪಡಿಸಿದರು.ಜಿ7 ಶೃಂಗಸಭೆಯ ನೇಪಥ್ಯದಲ್ಲಿ ಪ್ರಧಾನಮಂತ್ರಿ ಅವರಿಂದ ಇಟಲಿ ಪ್ರಧಾನಮಂತ್ರಿ ಭೇಟಿ
June 18th, 02:59 pm
ಕೆನಡಾದ ಕನನಾಸ್ಕಿಸ್‌ನಲ್ಲಿ 2025 ರ ಜೂನ್ 17 ರಂದು ನಡೆದ 51ನೇ ಜಿ7 ಶೃಂಗಸಭೆಯ ನೇಪಥ್ಯದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಟಲಿಯ ಪ್ರಧಾನಿ ಮಾನ್ಯ ಶ್ರೀಮತಿ ಜಾರ್ಜಿಯಾ ಮೆಲೋನಿ ಅವರನ್ನು ಭೇಟಿಯಾದರು. ಇಟಲಿಯೊಂದಿಗಿನ ಭಾರತದ ಸ್ನೇಹವು ಇನ್ನಷ್ಟು ಬಲಗೊಳ್ಳಲಿದ್ದು ನಮ್ಮ ಜನರಿಗೆ ಅಪಾರ ಅನುಕೂಲವಾಗಲಿದೆ ಎಂದು ಶ್ರೀ ಮೋದಿ ಅವರು ಹೇಳಿದ್ದಾರೆ.ಜಿ7 ಶೃಂಗಸಭೆಯಲ್ಲಿ ಫ್ರಾನ್ಸ್ ಅಧ್ಯಕ್ಷರೊಂದಿಗೆ ಪ್ರಧಾನಮಂತ್ರಿ ಸಂವಾದ
June 18th, 02:57 pm
ಕೆನಡಾದ ಕನನಾಸ್ಕಿಸ್‌ನಲ್ಲಿ 2025ರ ಜೂನ್ 17 ರಂದು ನಡೆದ 51ನೇ ಜಿ 7 ಶೃಂಗಸಭೆಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಫ್ರಾನ್ಸ್ ಅಧ್ಯಕ್ಷ ಮಾನ್ಯ ಶ್ರೀ ಎಮ್ಯಾನುಯೆಲ್ ಮ್ಯಾಕ್ರನ್ ಅವರೊಂದಿಗೆ ಸಂವಾದ ನಡೆಸಿದರು. ವಿವಿಧ ವಿಷಯಗಳ ಕುರಿತ ತಮ್ಮ ತಮ್ಮ ದೃಷ್ಟಿಕೋನಗಳನ್ನು ವಿನಿಮಯ ಮಾಡಿಕೊಂಡ ಇಬ್ಬರೂ ನಾಯಕರು, ಭಾರತ ಮತ್ತು ಫ್ರಾನ್ಸ್ ನಮ್ಮ ಭೂಗ್ರಹದ ಯೋಗಕ್ಷೇಮಕ್ಕಾಗಿ ನಿಕಟವಾಗಿ ಕಾರ್ಯನಿರ್ವಹಿಸುವುದನ್ನು ಮುಂದುವರಿಸುತ್ತವೆ ಎಂದು ಪ್ರತಿಪಾದಿಸಿದರು.ಜಿ 7 ಶೃಂಗಸಭೆ ಸಂದರ್ಭದಲ್ಲಿ ಪ್ರಧಾನಮಂತ್ರಿ ಮತ್ತು ಯುನೈಟೆಡ್ ಕಿಂಗ್‌ಡಂ ಪ್ರಧಾನಮಂತ್ರಿ ಸಂವಾದ
June 18th, 02:55 pm
ಕೆನಡಾದ ಕನನಾಸ್ಕಿಸ್‌ನಲ್ಲಿ 2025ರ ಜೂನ್ 17 ರಂದು ನಡೆದ 51ನೇ ಜಿ 7 ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಯುನೈಟೆಡ್ ಕಿಂಗ್‌ಡಂನ ಪ್ರಧಾನಮಂತ್ರಿ ಮಾನ್ಯ ಶ್ರೀ ಕೀರ್ ಸ್ಟಾರ್ಮರ್ ಅವರೊಂದಿಗೆ ಸಂವಾದ ನಡೆಸಿದರು. ಭಾರತ ಮತ್ತು ಯುಕೆ ನಡುವಿನ ಬಾಂಧವ್ಯ ಬಲಗೊಳ್ಳುತ್ತಿವೆ ಎಂಬುದನ್ನು ವ್ಯಾಪಾರ ಮತ್ತು ವಾಣಿಜ್ಯ ಕ್ಷೇತ್ರಗಳಲ್ಲಿ ವಾಸ್ತವಿಕತೆಯಯು ಪ್ರತಿಬಿಂಬಿಸುತ್ತದೆ ಎಂದು ಶ್ರೀ ಮೋದಿ ಅವರು ಹೇಳಿದ್ದಾರೆ.ಜಿ7 ಶೃಂಗಸಭೆಯ ಸಂದರ್ಭದಲ್ಲಿ ದಕ್ಷಿಣ ಆಫ್ರಿಕಾದ ಅಧ್ಯಕ್ಷರೊಂದಿಗೆ ಸಂವಾದ ನಡೆಸಿದ ಪ್ರಧಾನಮಂತ್ರಿ
June 18th, 02:51 pm
ಜೂನ್ 17, 2025 ರಂದು ಕೆನಡಾದ ಕನನಾಸ್ಕಿಸ್ನಲ್ಲಿ ನಡೆದ 51 ನೇ ಜಿ7 ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದಕ್ಷಿಣ ಆಫ್ರಿಕಾ ಅಧ್ಯಕ್ಷರಾದ ಘನತೆವೆತ್ತ ಶ್ರೀ ಸಿರಿಲ್ ರಾಮಫೋಸಾ ಅವರೊಂದಿಗೆ ಮಾತುಕತೆ ನಡೆಸಿದರು.ಜಿ7 ಶೃಂಗಸಭೆಯ ಸಂದರ್ಭದಲ್ಲಿ ಆಸ್ಟ್ರೇಲಿಯಾದ ಪ್ರಧಾನಮಂತ್ರಿ ಅವರನ್ನು ಭೇಟಿ ಮಾಡಿದ ಪ್ರಧಾನಮಂತ್ರಿ
June 18th, 02:49 pm
ಜೂನ್ 17, 2025 ರಂದು ಕೆನಡಾದ ಕನನಾಸ್ಕಿಸ್ ನಲ್ಲಿ ನಡೆದ 51ನೇ ಜಿ7 ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಆಸ್ಟ್ರೇಲಿಯಾದ ಪ್ರಧಾನಮಂತ್ರಿ ಗೌರವಾನ್ವಿತ ಶ್ರೀ ಆಂಥೋನಿ ಅಲ್ಬನೀಸ್ ಅವರನ್ನು ಭೇಟಿ ಮಾಡಿದರು.ಇಂಧನ ಸುರಕ್ಷತೆಯ ಕುರಿತಾದ ಜಿ 7 ಔಟ್ರೀಚ್ ಅಧಿವೇಶನದಲ್ಲಿ (ಜೂನ್ 17, 2025) ಪ್ರಧಾನಮಂತ್ರಿ ಅವರ ಭಾಷಣ
June 18th, 11:15 am
ನಮ್ಮನ್ನು G-7 ಶೃಂಗಸಭೆಗೆ ಆಹ್ವಾನಿಸಿದ್ದಕ್ಕಾಗಿ ಮತ್ತು ನಮಗೆ ನೀಡಿದ ಅದ್ಭುತ ಸ್ವಾಗತಕ್ಕಾಗಿ ನಾನು ಪ್ರಧಾನಮಂತ್ರಿ ಕಾರ್ನಿ ಅವರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. G-7 ಗುಂಪು 50 ವರ್ಷಗಳನ್ನು ಪೂರ್ಣಗೊಳಿಸಿದ ಈ ಐತಿಹಾಸಿಕ ಸಂದರ್ಭದಲ್ಲಿ ನಾನು ನಮ್ಮೆಲ್ಲಾ ಸ್ನೇಹಿತರನ್ನು ಅಭಿನಂದಿಸುತ್ತೇನೆ.G7 ಔಟ್ರೀಚ್ ಅಧಿವೇಶನವನ್ನುದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
June 18th, 11:13 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಕಾನನಾಸ್ಕಿಸ್ ನಲ್ಲಿ ನಡೆದ G7 ಶೃಂಗಸಭೆಯ ಹೊರನೋಟದ ಅಧಿವೇಶನದಲ್ಲಿ (Outreach Session) ಭಾಗವಹಿಸಿದರು. 'ಇಂಧನ ಭದ್ರತೆ: ಬದಲಾಗುತ್ತಿರುವ ಜಗತ್ತಿನಲ್ಲಿ ಲಭ್ಯತೆ ಮತ್ತು ಕೈಗೆಟಕುವಿಕೆಯನ್ನು ಖಚಿತಪಡಿಸಿಕೊಳ್ಳಲು ವೈವಿಧ್ಯೀಕರಣ, ತಂತ್ರಜ್ಞಾನ ಮತ್ತು ಮೂಲಸೌಕರ್ಯ' ಕುರಿತ ಅಧಿವೇಶನವನ್ನು ಅವರು ಉದ್ದೇಶಿಸಿ ಮಾತನಾಡಿದರು. ಅವರು ಕೆನಡಾದ ಪ್ರಧಾನಿ, ಘನತೆವೆತ್ತ ಶ್ರೀ ಮಾರ್ಕ್ ಕಾರ್ನಿ ಅವರ ಆಹ್ವಾನಕ್ಕಾಗಿ ಧನ್ಯವಾದ ಅರ್ಪಿಸಿದರು ಮತ್ತು G7 ತನ್ನ 50 ವರ್ಷಗಳ ಪಯಣವನ್ನು ಪೂರ್ಣಗೊಳಿಸಿದ್ದಕ್ಕಾಗಿ ಅಭಿನಂದಿಸಿದರು.ಜಿ 7 ಶೃಂಗಸಭೆಯ ನೇಪಥ್ಯದಲ್ಲಿ ಪ್ರಧಾನಮಂತ್ರಿ ಮಾರ್ಕ್ ಕಾರ್ನೆ ಅವರನ್ನು ಭೇಟಿ ಮಾಡಿದ ಪ್ರಧಾನಮಂತ್ರಿ
June 18th, 08:02 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಆಲ್ಬರ್ಟಾದ ಕಾನನಸ್ಕಿಸ್ ನಲ್ಲಿ ನಡೆದ ಜಿ 7 ಶೃಂಗಸಭೆಯ ನೇಪಥ್ಯದಲ್ಲಿ ಕೆನಡಾದ ಪ್ರಧಾನಿ, ಘನತೆವೆತ್ತ ಶ್ರೀ ಮಾರ್ಕ್ ಕಾರ್ನೆ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಿದರು.ಜಿ-7 ಶೃಂಗಸಭೆಯ ನೇಪಥ್ಯದಲ್ಲಿ ಜರ್ಮನಿಯ ಚಾನ್ಸೆಲರ್ ಅವರನ್ನು ಭೇಟಿಯಾದ ಪ್ರಧಾನಮಂತ್ರಿ ಶ್ರೀ ಮೋದಿ
June 17th, 11:58 pm
ಕೆನಡಾದ ಕನನಾಸ್ಕಿಸ್ನಲ್ಲಿ ನಡೆದ ಜಿ-7 ಶೃಂಗಸಭೆಯ ನೇಪಥ್ಯದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಜರ್ಮನಿಯ ಚಾನ್ಸೆಲರ್ ಗೌರವಾನ್ವಿತ ಶ್ರೀ ಫ್ರೆಡ್ರಿಕ್ ಮೆರ್ಜ್ ಅವರನ್ನು ಭೇಟಿಯಾದರು. 2025 ಮೇ ತಿಂಗಳಲ್ಲಿ ಚಾನ್ಸೆಲರ್ ಮೆರ್ಜ್ ಅಧಿಕಾರ ವಹಿಸಿಕೊಂಡ ನಂತರ ಉಭಯ ನಾಯಕರ ನಡುವಿನ ಮೊದಲ ಭೇಟಿ ಇದಾಗಿದೆ. ಚುನಾವಣೆಯಲ್ಲಿ ಗೆಲುವು ಸಾಧಿಸಿ ಅಧಿಕಾರ ವಹಿಸಿಕೊಂಡಿದ್ದಕ್ಕಾಗಿ ಪ್ರಧಾನಮಂತ್ರಿ ಮೆರ್ಜ್ ಅವರನ್ನು ಅಭಿನಂದಿಸಿದರು. ಕಳೆದ ವಾರ ಅಹಮದಾಬಾದ್‌ನಲ್ಲಿ ನಡೆದ ವಿಮಾನ ಅಪಘಾತ ದುರಂತದ ಬಗ್ಗೆ ಜರ್ಮನ್ ಸರ್ಕಾರ ವ್ಯಕ್ತಪಡಿಸಿದ ಸಂತಾಪಕ್ಕೆ ಅವರು ಆಳವಾದ ಕೃತಜ್ಞತೆ ವ್ಯಕ್ತಪಡಿಸಿದರು.G7 ಶೃಂಗಸಭೆಯ ಸಂದರ್ಭದಲ್ಲಿ ಮೆಕ್ಸಿಕೋ ಅಧ್ಯಕ್ಷರನ್ನು ಭೇಟಿಯಾದ ಪ್ರಧಾನಮಂತ್ರಿ
June 17th, 11:54 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಕೆನಡಾದ ಕಾನನಾಸ್ಕಿಸ್ ನಲ್ಲಿ ನಡೆಯುತ್ತಿರುವ G7 ಶೃಂಗಸಭೆಯ ಸಂದರ್ಭದಲ್ಲಿ ಮೆಕ್ಸಿಕೋ ಅಧ್ಯಕ್ಷೆ, ಘನತೆವೆತ್ತ ಡಾ. ಕ್ಲೌಡಿಯಾ ಶೀನ್ ಬಾಮ್ ಪಾರ್ಡೋ ಅವರನ್ನು ಭೇಟಿಯಾದರು. ಇದು ಇಬ್ಬರು ನಾಯಕರ ನಡುವಿನ ಮೊದಲ ಭೇಟಿಯಾಗಿತ್ತು. ಪ್ರಧಾನಮಂತ್ರಿಯವರು ಐತಿಹಾಸಿಕ ವಿಜಯಕ್ಕಾಗಿ ಮೆಕ್ಸಿಕೋ ಅಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಿದರು.ಜೂನ್ 15 ರಿಂದ 19 ರವರೆಗೆ ಪ್ರಧಾನಿ ಮೋದಿ ಸೈಪ್ರಸ್ ಗಣರಾಜ್ಯ, ಕೆನಡಾ ಮತ್ತು ಕ್ರೊಯೇಷಿಯಾಕ್ಕೆ ಭೇಟಿ ನೀಡಲಿದ್ದಾರೆ
June 14th, 11:58 am
ಪ್ರಧಾನಿ ಮೋದಿ ಜೂನ್ 15-16 ರಂದು ಸೈಪ್ರಸ್‌ಗೆ ಭೇಟಿ ನೀಡಲಿದ್ದಾರೆ, ಜೂನ್ 16-17 ರಂದು ಜಿ-7 ಶೃಂಗಸಭೆಗಾಗಿ ಕೆನಡಾಕ್ಕೆ ಮತ್ತು ಜೂನ್ 18 ರಂದು ಕ್ರೊಯೇಷಿಯಾಕ್ಕೆ ಭೇಟಿ ನೀಡಲಿದ್ದಾರೆ. ಪ್ರಧಾನಿ ಮೋದಿ ಸೈಪ್ರಸ್ ಅಧ್ಯಕ್ಷ ಕ್ರಿಸ್ಟೋಡೌಲೈಡ್ಸ್ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ ಮತ್ತು ಲಿಮಾಸೋಲ್‌ನಲ್ಲಿ ವ್ಯಾಪಾರ ನಾಯಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ನಂತರ ಕೆನಡಾದಲ್ಲಿ, ಜಿ-7 ಶೃಂಗಸಭೆಯಲ್ಲಿ, ಪ್ರಧಾನಿ ಮೋದಿ ಜಿ-7 ದೇಶಗಳ ನಾಯಕರೊಂದಿಗೆ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳಲಿದ್ದಾರೆ. ಕ್ರೊಯೇಷಿಯಾದಲ್ಲಿ, ಪ್ರಧಾನಿ ಮೋದಿ ಪ್ರಧಾನಿ ಪ್ಲೆಂಕೋವಿಕ್ ಅವರೊಂದಿಗೆ ದ್ವಿಪಕ್ಷೀಯ ಚರ್ಚೆ ನಡೆಸಲಿದ್ದಾರೆ ಮತ್ತು ಕ್ರೊಯೇಷಿಯಾದ ಅಧ್ಯಕ್ಷ ಜೊರಾನ್ ಮಿಲನೋವಿಕ್ ಅವರನ್ನು ಭೇಟಿ ಮಾಡಲಿದ್ದಾರೆ.ಕನನಾಸ್ಕಿಸ್ ನಲ್ಲಿ ನಡೆಯಲಿರುವ ಜಿ-7 ಶೃಂಗಸಭೆಯ ಆಹ್ವಾನಕ್ಕಾಗಿ ಕೆನಡಾದ ಪ್ರಧಾನಮಂತ್ರಿ ಶ್ರೀ ಮಾರ್ಕ್ ಕಾರ್ನೆ ಅವರಿಂದ ಪ್ರಧಾನಮಂತ್ರಿಯವರಿಗೆ ಕರೆ
June 06th, 07:12 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ಕೆನಡಾದ ಪ್ರಧಾನಮಂತ್ರಿ ಶ್ರೀ ಮಾರ್ಕ್ ಕಾರ್ನೆ ಅವರಿಂದ ಕರೆ ಬಂತು.