ನೆಸ್ಸೆಟ್ ಅನ್ನು ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
February 25th, 08:20 pm
ಈ ಗೌರವಾನ್ವಿತ ಸದನದ ಮುಂದೆ ನಿಂತಿರುವುದು ನನಗೆ ಸಂದ ಗೌರವ ಮತ್ತು ಸೌಭಾಗ್ಯವಾಗಿದೆ. ನಾನು ಭಾರತದ ಪ್ರಧಾನಮಂತ್ರಿಯಾಗಿ ಮಾತ್ರವಲ್ಲದೆ, ಒಂದು ಪ್ರಾಚೀನ ನಾಗರಿಕತೆಯ ಪ್ರತಿನಿಧಿಯಾಗಿ ಮತ್ತೊಂದು ಪ್ರಾಚೀನ ನಾಗರಿಕತೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದೇನೆ. ನಾನು ನಿಮ್ಮ ಬಳಿಗೆ 140 ಕೋಟಿ ಭಾರತೀಯರ ಶುಭಾಶಯಗಳು ಹಾಗೂ ಸ್ನೇಹ, ಗೌರವ ಮತ್ತು ಸಹಭಾಗಿತ್ವದ ಸಂದೇಶವನ್ನು ಹೊತ್ತು ತಂದಿದ್ದೇನೆ.ಇಸ್ರೇಲ್ ಸಂಸತ್ತನ್ನು (ನೆಸ್ಸೆಟ್) ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ
February 25th, 08:00 pm
ಕನೆಸೆಟ್‌ಗೆ ಆಗಮಿಸಿದ ಪ್ರಧಾನಮಂತ್ರಿಯವರನ್ನು ನೆಸ್ಸೆಟ್ ನ ಸ್ಪೀಕರ್ ಘನತೆವೆತ್ತ ಅಮೀರ್ ಓಹಾನಾ ಸ್ವಾಗತಿಸಿದರು ಮತ್ತು ವಿಧ್ಯುಕ್ತ ಸ್ವಾಗತ ನೀಡಿದರು. ಇಸ್ರೇಲ್ ಪ್ರಧಾನಮಂತ್ರಿ, ಘನತೆವೆತ್ತ ಶ್ರೀ ಬೆಂಜಮಿನ್ ನೆತನ್ಯಾಹು; ವಿರೋಧ ಪಕ್ಷದ ನಾಯಕರಾದ ಘನತೆವೆತ್ತ ಶ್ರೀ ಯಾಯಿರ್ ಲಾಪಿಡ್; ಮತ್ತು ಸ್ಪೀಕರ್ ಒಹಾನಾ ಅವರು ಪ್ರಧಾನಮಂತ್ರಿಯವರ ಭಾಷಣಕ್ಕೂ ಮುನ್ನ ಅಧಿವೇಶನದಲ್ಲಿ ಮಾತನಾಡಿ, ಭಾರತ-ಇಸ್ರೇಲ್ ಸಂಬಂಧಗಳಿಗೆ ಬಲವಾದ ದ್ವಿಪಕ್ಷೀಯ ಬೆಂಬಲವನ್ನು ವ್ಯಕ್ತಪಡಿಸಿದರು.