ಮಹಾಕುಂಭ ಮೇಳ ಮುಕ್ತಾಯದ ಬಳಿಕ ಗುಜರಾತ್‌ನ ಸೋಮನಾಥ ಮಂದಿರಕ್ಕೆ ಭೇಟಿ ನೀಡಿದ ಪ್ರಧಾನಮಂತ್ರಿ

March 02nd, 08:32 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಪ್ರಯಾಗ್‌ ರಾಜ್‌ನಲ್ಲಿ ಮಹಾಕುಂಭ ಮುಕ್ತಾಯದ ನಂತರ ಗುಜರಾತ್‌ನ ಸೋಮನಾಥ ಮಂದಿರಕ್ಕೆ ಭೇಟಿ ನೀಡಿದರು. ದೇವಾಲಯವು ನಮ್ಮ ಸಂಸ್ಕೃತಿಯ ಕಾಲಾತೀತ ಪರಂಪರೆ ಮತ್ತು ಧೈರ್ಯವನ್ನು ವ್ಯಕ್ತಪಡಿಸುತ್ತದೆ ಎಂದು ಅವರು ಹೇಳಿದರು.

ಜುಲೈ 12 ರಂದು ದಿಯೋಘರ್ ಮತ್ತು ಪಾಟ್ನಾಕ್ಕೆ ಭೇಟಿ ನೀಡಲಿರುವ ಪ್ರಧಾನಮಂತ್ರಿ

July 09th, 09:35 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2022 ಜುಲೈ12 ರಂದು ದಿಯೋಘರ್ ಮತ್ತು ಪಾಟ್ನಾಕ್ಕೆ ಭೇಟಿ ನೀಡಲಿದ್ದಾರೆ. ಮಧ್ಯಾಹ್ನ 1.15ಕ್ಕೆ ಪ್ರಧಾನಮಂತ್ರಿ ಅವರು ದಿಯೋಘರ್ ನಲ್ಲಿ 16,000 ಕೋಟಿ ರೂ.ಗಳಿಗೂ ಅಧಿಕ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸುವರು. ನಂತರ ಮಧ್ಯಾಹ್ನ 2:40 ಕ್ಕೆ, ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಒಂದಾದ ಬಾಬಾ ಬೈದ್ಯನಾಥ ದೇವಾಲಯದಲ್ಲಿ ದರ್ಶನ ಮತ್ತು ಪೂಜೆಯನ್ನು ನೆರವೇರಿಸಲಿದ್ದಾರೆ. ಸಂಜೆ 6 ಗಂಟೆಗೆ ಪ್ರಧಾನಮಂತ್ರಿ ಅವರು ಪಾಟ್ನಾದಲ್ಲಿ ಬಿಹಾರ ವಿಧಾನಸಭೆಯ ಶತಮಾನೋತ್ಸವ ಆಚರಣೆಯ ಸಮಾರೋಪ ಸಮಾರಂಭವನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ.