ಚಿಲಿಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಜೋಸ್ ಆಂಟೋನಿಯೊ ಕಾಸ್ಟ್ ರಿಸ್ಟ್ ಅವರನ್ನು ಅಭಿನಂದಿಸಿದ ಪ್ರಧಾನಮಂತ್ರಿ

March 13th, 12:54 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಚಿಲಿಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಜೋಸೆ ಆಂಟೋನಿಯೊ ಕಾಸ್ಟ್ ರಿಸ್ಟ್ ಅವರನ್ನು ಅಭಿನಂದಿಸಿದರು. ಭಾರತ ಮತ್ತು ಚಿಲಿ ನಡುವಿನ ಆತ್ಮೀಯ ಮತ್ತು ಸ್ನೇಹಪರ ಸಂಬಂಧಗಳನ್ನು ಮತ್ತಷ್ಟು ಬಲಪಡಿಸಲು ಮತ್ತು ವ್ಯಾಪಾರ, ತಂತ್ರಜ್ಞಾನ ಮತ್ತು ಇಂಧನದಾದ್ಯಂತ ಸಹಕಾರವನ್ನು ಗಾಢವಾಗಿಸಲು ಅವರೊಂದಿಗೆ ನಿಕಟವಾಗಿ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ ಎಂದು ಶ್ರೀ ನರೇಂದ್ರ ಮೋದಿ ಹೇಳಿದ್ದಾರೆ. ಯಶಸ್ವಿ ಅಧಿಕಾರಾವಧಿಗೆ ಶುಭ ಹಾರೈಕೆಗಳು!, ಎಂದು ಶ್ರೀ ನರೇಂದ್ರ ಮೋದಿ ಅವರು ಹೇಳಿದ್ದಾರೆ.