ಕುರುಕ್ಷೇತ್ರದಲ್ಲಿ ಶ್ರೀ ಗುರು ತೇಜ್ ಬಹದ್ದೂರ್ ಅವರ 350ನೇ ಶಹೀದಿ ದಿವಸ್ ಕಾರ್ಯಕ್ರಮ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
November 25th, 04:40 pm
ಹರಿಯಾಣ ರಾಜ್ಯಪಾಲರಾದ ಆಶಿಮ್ ಘೋಷ್ ಜಿ, ಜನಪ್ರಿಯ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಜಿ, ಕೇಂದ್ರ ಸಚಿವ ಸಂಪುಟದ ನನ್ನ ಸಹೋದ್ಯೋಗಿಗಳಾದ ಮನೋಹರ್ ಲಾಲ್ ಜಿ, ರಾವ್ ಇಂದರ್ಜಿತ್ ಸಿಂಗ್ ಜಿ, ಕೃಷನ್ ಪಾಲ್ ಜಿ, ಹರಿಯಾಣ ಎಸ್‌ಜಿಪಿಸಿ ಅಧ್ಯಕ್ಷ ಜಗದೀಶ್ ಸಿಂಗ್ ಜಿಂದಾ ಜಿ, ಇತರೆ ಗಣ್ಯರೆ, ಮಹಿಳೆಯರೆ ಮತ್ತು ಮಹನೀಯರೆ!ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹರಿಯಾಣದ ಕುರುಕ್ಷೇತ್ರದಲ್ಲಿ ಶ್ರೀ ಗುರು ತೇಜ್ ಬಹದ್ದೂರ್ ಅವರ 350ನೇ ಹುತಾತ್ಮ ದಿನಾಚರಣೆಯನ್ನು ಉದ್ದೇಶಿಸಿ ಮಾತನಾಡಿದರು
November 25th, 04:38 pm
ಹರಿಯಾಣದ ಕುರುಕ್ಷೇತ್ರದಲ್ಲಿ ಇಂದು ನಡೆದ ಶ್ರೀ ಗುರು ತೇಜ್ ಬಹದ್ದೂರ್ ಅವರ 350ನೇ ಹುತಾತ್ಮ ದಿನಾಚರಣೆಯನ್ನುದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮಾತನಾಡಿದರು. ಇಂದು ಭಾರತದ ಪರಂಪರೆಯ ಮಹತ್ವದ ಸಂಗಮವಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ತಾವು ಬೆಳಿಗ್ಗೆ ರಾಮಾಯಣ ನಗರವಾದ ಅಯೋಧ್ಯೆಯಲ್ಲಿ ಮತ್ತು ಈಗ ಗೀತಾ ನಗರವಾದ ಕುರುಕ್ಷೇತ್ರದಲ್ಲಿರುವುದಾಗಿ ಅವರು ಉಲ್ಲೇಖಿಸಿದರು. ಶ್ರೀ ಗುರು ತೇಜ್ ಬಹದ್ದೂರ್ ಅವರ 350 ನೇ ಹುತಾತ್ಮ ದಿನಾಚರಣೆಯ ಸಂದರ್ಭದಲ್ಲಿ ಎಲ್ಲರೂ ಅವರಿಗೆ ಗೌರವ ಸಲ್ಲಿಸುತ್ತಿದ್ದಾರೆ ಎಂದು ಅವರು ಹೇಳಿದರು. ಕಾರ್ಯಕ್ರಮದಲ್ಲಿ ಸಂತರು ಮತ್ತು ಗಣ್ಯರ ಉಪಸ್ಥಿತಿಯನ್ನು ಪ್ರಧಾನಮಂತ್ರಿ ಶ್ಲಾಘಿಸಿದರು ಮತ್ತು ಎಲ್ಲರಿಗೂ ಗೌರವದಿಂದ ನಮಸ್ಕರಿಸಿದರು.ಗುರು ಚರಣ ಯಾತ್ರೆಯಲ್ಲಿ ಪಾಲ್ಗೊಂಡು ಪವಿತ್ರ ‘ಜೋರೆ ಸಾಹಿಬ್’ ದರ್ಶನ ಪಡೆಯುವಂತೆ ಪ್ರಧಾನಮಂತ್ರಿ ಮನವಿ
October 22nd, 06:41 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಗುರು ಚರಣ ಯಾತ್ರೆಯ ಅಂಗವಾಗಿ ಶುಭಾಶಯ ಕೋರಿದ್ದಾರೆ. ಶ್ರೀ ಗುರು ಗೋವಿಂದ ಸಿಂಗ್ ಮತ್ತು ಮಾತಾ ಸಾಹಿಬ್ ಕೌರ್ ಅವರ ಕಾಲಾತೀತ ಬೋಧನೆಗಳು ಮತ್ತು ಆಧ್ಯಾತ್ಮಿಕ ಪರಂಪರೆಯನ್ನು ಯಾತ್ರೆ ಮುನ್ನಡೆಸಲಿದೆ ಎಂದು ಮೋದಿ ಅವರು ಹೇಳಿದ್ದಾರೆ.ಶ್ರೀ ಗುರು ಗೋಬಿಂದ್ ಸಿಂಗ್ ಮತ್ತು ಮಾತಾ ಸಾಹಿಬ್ ಕೌರ್ ಅವರ ಅತ್ಯಂತ ಪುಣ್ಯಮಯ ಮತ್ತು ಅಮೂಲ್ಯವಾದ ಪವಿತ್ರ 'ಜೋರೆ ಸಾಹಿಬ್' ನ ಸುರಕ್ಷತೆ ಮತ್ತು ಸೂಕ್ತ ಪ್ರದರ್ಶನಕ್ಕೆ ಸಂಬಂಧಿಸಿದ ಶಿಫಾರಸ್ಸು ಸಲ್ಲಿಸಿರುವ ಸಿಖ್ ನಿಯೋಗದ ಗಣ್ಯರು ಮತ್ತು ಕೌಶಲ್ಯಯುತ ಸದಸ್ಯರಿಗೆ ಪ್ರಧಾನಮಂತ್ರಿ ಸ್ವಾಗತ
September 19th, 04:28 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಸಿಖ್ ನಿಯೋಗದ ಗಣ್ಯರು ಮತ್ತು ಕೌಶಲ್ಯಯುತ ಸದಸ್ಯರನ್ನು ಬರಮಾಡಿಕೊಂಡರು. ಅವರು ಶ್ರೀ ಗುರು ಗೋವಿಂದ ಸಿಂಗ್ ಮತ್ತು ಮಾತಾ ಸಾಹಿಬ್ ಕೌರ್ ಅವರ ಅತ್ಯಂತ ಪುಣ್ಯ ಮತ್ತು ಅಮೂಲ್ಯವಾದ ಪವಿತ್ರ 'ಜೋರ್ ಸಾಹಿಬ್' ನ ಸುರಕ್ಷತೆ ಮತ್ತು ಸೂಕ್ತ ಪ್ರದರ್ಶನಕ್ಕೆ ಸಂಬಂಧಿಸಿದಂತೆ ತಮ್ಮ ಶಿಫಾರಸುಗಳನ್ನು ಸಲ್ಲಿಸಿದರು. ಸಿಖ್ ಇತಿಹಾಸದ ಭವ್ಯ ಭಾಗವಾಗಿರುವ 'ಜೋರ್ ಸಾಹಿಬ್' ಆಧ್ಯಾತ್ಮಿಕವಾಗಿ ಪ್ರಮುಖವಾಗಿರುವಷ್ಟೇ ನಮ್ಮ ರಾಷ್ಟ್ರದ ಸಾಂಸ್ಕೃತಿಕ ಚೈತನ್ಯದ ಅಂಗವಾಗಿರುವ ಪವಿತ್ರ ಅವಶೇಷಗಳು ಸಹ ಮಹತ್ವದ್ದಾಗಿವೆ ಎಂದು ಶ್ರೀ ಮೋದಿ ಅವರು ಹೇಳಿದ್ದಾರೆ. ಶ್ರೀ ಗುರು ಗೋವಿಂದ ಸಿಂಗ್ ಅವರು ತೋರಿದ ಶೌರ್ಯ, ಸದಾಚಾರ, ನ್ಯಾಯ ಮತ್ತು ಸಾಮಾಜಿಕ ಸಾಮರಸ್ಯದ ಮಾರ್ಗವನ್ನು ಅನುಸರಿಸಲು ಪವಿತ್ರ ಅವಶೇಷಗಳು ಭವಿಷ್ಯದ ಪೀಳಿಗೆಗೆ ಸ್ಫೂರ್ತಿ ನೀಡುತ್ತವೆ ಎಂದು ಶ್ರೀ ಮೋದಿ ಅವರು ಅಭಿಪ್ರಾಯಪಟ್ಟಿದ್ದಾರೆ.