ಭೂತಾನ್ ನ ನಾಲ್ಕನೇ ರಾಜರೋಂದಿಗೆ ಸಭಿಕರು ಪ್ರಧಾನಮಂತ್ರಿ ಅವರನ್ನು ಬರಮಾಡಿಕೊಂಡರು ಮತ್ತು ಜಾಗತಿಕ ಶಾಂತಿ ಪ್ರಾರ್ಥನಾ ಉತ್ಸವದಲ್ಲಿ ಭಾಗವಹಿಸಿದರು
November 12th, 09:54 am
ಪ್ರಧಾನಮಂತ್ರಿ ಅವರು ಥಿಂಪುವಿನ ನಾಲ್ಕನೇ ರಾಜರಿಗೆ ಅವರ 70ನೇ ಜನ್ಮ ದಿನಾಚರಣೆ ಸಂದರ್ಭದಲ್ಲಿ ಶುಭಾಶಯಗಳನ್ನು ತಿಳಿಸಿದರು ಮತ್ತು ಅವರಿಗೆ ನಿರಂತರ ಉತ್ತಮ ಆರೋಗ್ಯ ಮತ್ತು ಯೋಗಕ್ಷೇಮಕ್ಕಾಗಿ ಭಾರತ ಸರ್ಕಾರ ಮತ್ತು ಜನರ ಪರವಾಗಿ ಶುಭಾಶಯಗಳು ಹಾಗು ಹಾರೈಕೆಗಳನ್ನು ತಿಳಿಸಿದರು. ಭಾರತ-ಭೂತಾನ್ ಸ್ನೇಹವನ್ನು ಮತ್ತಷ್ಟು ಬಲಪಡಿಸುವಲ್ಲಿ ಅವರ ನಾಯಕತ್ವ, ಸಲಹೆ ಮತ್ತು ಮಾರ್ಗದರ್ಶನಕ್ಕಾಗಿ ಪ್ರಧಾನಮಂತ್ರಿ ಅವರು ಕೃತಜ್ಞತೆ ಸಲ್ಲಿಸಿದರು. ಇಬ್ಬರೂ ನಾಯಕರು ದ್ವಿಪಕ್ಷೀಯ ಸಂಬಂಧಗಳು ಮತ್ತು ಪರಸ್ಪರ ಆಸಕ್ತಿಯ ವಿಷಯಗಳ ಕುರಿತು ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ, ಎರಡೂ ದೇಶಗಳ ಜನರನ್ನು ಹತ್ತಿರ ತರುವ ಪರಸ್ಪರ ಹಂಚಿಕೆಯ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಬಾಂಧವ್ಯಗಳನ್ನು ಅವರು ಒತ್ತಿ ಹೇಳಿದರು.ಭೂತಾನ್ ನ ಮಹಾರಾಜ ಅವರ ಹುಟ್ಟುಹಬ್ಬ ಆಚರಣೆಯ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರ ಭಾಷಣದ ಕನ್ನಡ ಅನುವಾದ
November 11th, 12:00 pm
ನಮ್ಮ ಸಂಸ್ಥೆಗಳು ಈ ಪಿತೂರಿಯ ಆಳವನ್ನು ಕಂಡುಕೊಳ್ಳುತ್ತವೆ. ಇದರ ಹಿಂದಿನ ಅಪರಾಧಿಗಳನ್ನು ಕಠಿಣ ಶಿಕ್ಷೆಗೆ ಒಳಪಡಿಸದೆ ಬಿಡಲಾಗುವುದಿಲ್ಲ.ಭೂತಾನ್ ನ ಘನತೆವೆತ್ತ ನಾಲ್ಕನೇ ದೊರೆಯವರ 70ನೇ ಜನ್ಮ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಭಾಷಣ
November 11th, 11:39 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಭೂತಾನ್ ನ ಥಿಂಪು ನಗರದಲ್ಲಿರುವ ಚಾಂಗ್ಲಿಮೆಥಾಂಗ್ ಸಂಭ್ರಮಾಚರಣೆ ಮೈದಾನದಲ್ಲಿ ನಡೆದ, ಭೂತಾನ್ನ ಘನತೆವೆತ್ತ ನಾಲ್ಕನೇ ದೊರೆಯವರ 70ನೇ ಜನ್ಮ ವಾರ್ಷಿಕೋತ್ಸವದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರು ಭೂತಾನ್ನ ದೊರೆ, ಘನತೆವೆತ್ತ ಜಿಗ್ಮೆ ಖೇಸರ್ ನಾಮ್ಗ್ಯೆಲ್ ವಾಂಗ್ ಚುಕ್ ಅವರಿಗೆ ಹಾಗೂ ನಾಲ್ಕನೇ ದೊರೆ, ಘನತೆವೆತ್ತ ಜಿಗ್ಮೆ ಸಿಂಗ್ಯೆ ವಾಂ ಗ್ಚುಕ್ ಅವರಿಗೆ ಹಾರ್ದಿಕ ಶುಭಾಶಯಗಳನ್ನು ಸಲ್ಲಿಸಿದರು. ಅಲ್ಲದೆ, ರಾಜಮನೆತನದ ಗೌರವಾನ್ವಿತ ಸದಸ್ಯರು, ಭೂತಾನ್ ನ ಪ್ರಧಾನ ಮಂತ್ರಿಗಳಾದ ಘನತೆವೆತ್ತ ಶ್ರೀ ಶೆರಿಂಗ್ ತೊಬ್ಗೆ ಅವರು ಹಾಗೂ ಅಲ್ಲಿ ಉಪಸ್ಥಿತರಿದ್ದ ಇತರ ಗಣ್ಯಾತಿಗಣ್ಯರಿಗೆ ಪ್ರಧಾನಮಂತ್ರಿಗಳು ಗೌರವಪೂರ್ವಕ ವಂದನೆಗಳನ್ನು ಸಲ್ಲಿಸಿದರು.ಭೂತಾನ್‌ಗೆ ಆಗಮಿಸಿದ ಪ್ರಧಾನಿ
March 22nd, 09:53 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2024ರ ಮಾರ್ಚ್ 22-23ರಂದು ಭೂತಾನ್‌ಗೆ ಅಧಿಕೃತ ಭೇಟಿಯ ಭಾಗವಾಗಿ ಇಂದು ಪಾರೋಗೆ ಆಗಮಿಸಿದರು. ಈ ಭೇಟಿಯು ಭಾರತ ಮತ್ತು ಭೂತಾನ್ ನಡುವಿನ ನಿಯಮಿತವಾದ ಉನ್ನತ ಮಟ್ಟದ ವಿನಿಮಯ ಸಂಪ್ರದಾಯ ಹಾಗೂ ʻನೆರೆಹೊರೆಯವರಿಗೆ ಮೊದಲ ನೀತಿʼಗೆ ಭಾರತ ಸರ್ಕಾರ ನೀಡಿರುವ ಪ್ರಾಮುಖ್ಯತೆಯನ್ನು ಎತ್ತಿ ಹಿಡಿಯುತ್ತದೆ.