ಹುಲ್ ದಿವಸದ ಸಂದರ್ಭದಲ್ಲಿ ಬುಡಕಟ್ಟು ವೀರರಿಗೆ ಗೌರವ ಸಲ್ಲಿಸಿದ ಪ್ರಧಾನಮಂತ್ರಿ

June 30th, 02:28 pm

ಹುಲ್ ದಿವಸದ ಸಂದರ್ಭದಲ್ಲಿ, ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಭಾರತದ ಬುಡಕಟ್ಟು ಸಮುದಾಯದ ಅದಮ್ಯ ಧೈರ್ಯ ಮತ್ತು ಅಸಾಧಾರಣ ಶೌರ್ಯಕ್ಕೆ ಹೃತ್ಪೂರ್ವಕವಾಗಿ ಗೌರವ ಸಲ್ಲಿಸಿದರು. ಐತಿಹಾಸಿಕವಾದ ಸಂತಾಲ್ ದಂಗೆಯನ್ನು ಸ್ಮರಿಸುವ ಮೂಲಕ, ಪ್ರಧಾನ ಮಂತ್ರಿಯವರು ಪೂಜ್ಯ ಸ್ವಾತಂತ್ರ್ಯ ಹೋರಾಟಗಾರರಾದ ಸಿಡೋ-ಕನ್ಹು, ಚಾಂದ್-ಭೈರವ ಮತ್ತು ಫುಲೋ-ಜಾನೋ ಅವರ ಪರಂಪರೆಯನ್ನು ಮುಂದುವರೆಸಿ ವಸಾಹತುಶಾಹಿ ದಬ್ಬಾಳಿಕೆಯನ್ನು ಧಿಕ್ಕರಿಸಿ ತಮ್ಮ ಪ್ರಾಣವನ್ನೇ ಅರ್ಪಿಸಿದ ಅಸಂಖ್ಯಾತ ಇತರ ಧೈರ್ಯಶಾಲಿ ಬುಡಕಟ್ಟು ಹುತಾತ್ಮರಿಗೂ ಗೌರವಸಲ್ಲಿಸಿದರು.