ಪ್ರಧಾನಮಂತ್ರಿ ಅವರು ಅರ್ಜೆಂಟೀನಾದ ಅಧ್ಯಕ್ಷ ಜೇವಿಯರ್ ಮಿಲೀ ಅವರನ್ನು ಭೇಟಿಯಾದರು
July 06th, 01:48 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅರ್ಜೆಂಟೀನಾದ ಅಧ್ಯಕ್ಷ ಘನತೆವೆತ್ತ ಜೇವಿಯರ್ ಮಿಲೀ ಅವರನ್ನು ಭೇಟಿ ಮಾಡಿದರು. ಕಾಸಾ ರೊಸಾಡಾಗೆ ಆಗಮಿಸಿದಾಗ ಅಧ್ಯಕ್ಷ ಮಿಲೀ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದರು. ನಿನ್ನೆ ಬ್ಯೂನಸ್ ಐರಿಸ್ ಗೆ ಆಗಮಿಸಿದ ಪ್ರಧಾನಮಂತ್ರಿ ಅವರಿಗೆ ಔಪಚಾರಿಕ ಸ್ವಾಗತ ನೀಡಲಾಯಿತು. 57 ವರ್ಷಗಳ ನಂತರ ಭಾರತದ ಪ್ರಧಾನಿಯೊಬ್ಬರು ಅರ್ಜೆಂಟೀನಾಕ್ಕೆ ನೀಡುತ್ತಿರುವ ಮೊದಲ ದ್ವಿಪಕ್ಷೀಯ ಭೇಟಿ ಇದಾಗಿರುವುದರಿಂದ ಈ ಭೇಟಿ ಮಹತ್ವ ಪಡೆದುಕೊಂಡಿದೆ. ಉಭಯ ದೇಶಗಳು ರಾಜತಾಂತ್ರಿಕ ಸಂಬಂಧಗಳ ಸ್ಥಾಪನೆಯ 75 ವರ್ಷಗಳನ್ನು ಆಚರಿಸುತ್ತಿರುವುದರಿಂದ ಇದು ಭಾರತ-ಅರ್ಜೆಂಟೀನಾ ಸಂಬಂಧಗಳಿಗೆ ಮಹತ್ವದ ವರ್ಷವಾಗಿದೆ. ತಮಗೆ ಮತ್ತು ತಮ್ಮ ನಿಯೋಗಕ್ಕೆ ನೀಡಿದ ಆತ್ಮೀಯ ಆತಿಥ್ಯಕ್ಕಾಗಿ ಪ್ರಧಾನಮಂತ್ರಿ ಅವರು ಅಧ್ಯಕ್ಷ ಮಿಲೀ ಅವರಿಗೆ ಧನ್ಯವಾದ ಅರ್ಪಿಸಿದರು.ಪ್ರಧಾನಿ ಮೋದಿ ಅರ್ಜೆಂಟೀನಾದ ಬ್ಯೂನಸ್ ಐರಿಸ್‌ಗೆ ಆಗಮಿಸಿದ್ದಾರೆ
July 05th, 07:23 am
ಪ್ರಧಾನಿ ನರೇಂದ್ರ ಮೋದಿ ಅವರು ಸ್ವಲ್ಪ ಸಮಯದ ಹಿಂದೆ ಅರ್ಜೆಂಟೀನಾಕ್ಕೆ ಆಗಮಿಸಿದ್ದಾರೆ. ಅವರು ಅಧ್ಯಕ್ಷ ಮಿಲೀ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.ಘಾನಾ, ಟ್ರಿನಿಡಾಡ್ ಮತ್ತು ಟೊಬಾಗೊ, ಅರ್ಜೆಂಟೀನಾ, ಬ್ರೆಜಿಲ್ ಮತ್ತು ನಮೀಬಿಯಾ ಭೇಟಿಯ ಮುನ್ನ ಪ್ರಧಾನಮಂತ್ರಿ ಅವರ ನಿರ್ಗಮನ ಹೇಳಿಕೆ
July 02nd, 07:34 am
ಇಂದು, ನಾನು ಜುಲೈ 2 ರಿಂದ 9, 2025 ರವರೆಗೆ ಘಾನಾ, ಟ್ರಿನಿಡಾಡ್ ಮತ್ತು ಟೊಬಾಗೊ, ಅರ್ಜೆಂಟೀನಾ, ಬ್ರೆಜಿಲ್ ಮತ್ತು ನಮೀಬಿಯಾಕ್ಕೆ ಐದು ರಾಷ್ಟ್ರಗಳ ಭೇಟಿಯನ್ನು ಕೈಗೊಳ್ಳುತ್ತೇನೆಘಾನಾ, ಟ್ರಿನಿಡಾಡ್ ಮತ್ತು ಟೊಬಾಗೊ, ಅರ್ಜೆಂಟೀನಾ, ಬ್ರೆಜಿಲ್ ಮತ್ತು ನಮೀಬಿಯಾಕ್ಕೆ ಪ್ರಧಾನಮಂತ್ರಿ ಅವರ ಭೇಟಿ (ಜುಲೈ 02-09)
June 27th, 10:03 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2025ರ ಜುಲೈ 02ರಿಂದ 3ರವರೆಗೆ ಘಾನಾಕ್ಕೆ ಭೇಟಿ ನೀಡಲಿದ್ದಾರೆ. ಇದು ಘಾನಾಕ್ಕೆ ಪ್ರಧಾನಮಂತ್ರಿ ಅವರ ಮೊದಲ ದ್ವಿಪಕ್ಷೀಯ ಭೇಟಿಯಾಗಿದೆ. ಭಾರತದಿಂದ ಘಾನಾಕ್ಕೆ ಪ್ರಧಾನಮಂತ್ರಿ ಅವರ ಈ ಭೇಟಿ ಮೂರು ದಶಕಗಳ ನಂತರ ನಡೆಯುತ್ತಿದೆ. ಈ ಭೇಟಿಯ ಸಮಯದಲ್ಲಿ, ಪ್ರಧಾನಮಂತ್ರಿ ಅವರು ಘಾನಾ ಅಧ್ಯಕ್ಷರೊಂದಿಗೆ ಬಲವಾದ ದ್ವಿಪಕ್ಷೀಯ ಪಾಲುದಾರಿಕೆಯನ್ನು ಪರಿಶೀಲಿಸಲು ಮತ್ತು ಆರ್ಥಿಕ, ಇಂಧನ ಮತ್ತು ರಕ್ಷಣಾ ಸಹಯೋಗ ಮತ್ತು ಅಭಿವೃದ್ಧಿ ಸಹಕಾರ ಪಾಲುದಾರಿಕೆಯ ಮೂಲಕ ಅದನ್ನು ಹೆಚ್ಚಿಸಲು ಹೆಚ್ಚಿನ ಮಾರ್ಗಗಳ ಬಗ್ಗೆ ಚರ್ಚಿಸಲು ಮಾತುಕತೆ ನಡೆಸಲಿದ್ದಾರೆ. ಈ ಭೇಟಿಯು ದ್ವಿಪಕ್ಷೀಯ ಸಂಬಂಧಗಳನ್ನು ಆಳಗೊಳಿಸಲು ಮತ್ತು ಇಕೋವಾಸ್ (ಪಶ್ಚಿಮ ಆಫ್ರಿಕಾ ರಾಜ್ಯಗಳ ಆರ್ಥಿಕ ಸಮುದಾಯ) ಮತ್ತು ಆಫ್ರಿಕನ್ ಒಕ್ಕೂಟದೊಂದಿಗೆ ಭಾರತದ ಸಂಬಂಧವನ್ನು ಬಲಪಡಿಸಲು ಉಭಯ ದೇಶಗಳ ಹಂಚಿಕೆಯ ಬದ್ಧತೆಯನ್ನು ಪುನರುಚ್ಚರಿಸುತ್ತದೆ.ಪ್ರಧಾನಮಂತ್ರಿ ಅವರಿಂದ ಅರ್ಜೆಂಟೀನಾ ಅಧ್ಯಕ್ಷರ ಭೇಟಿ
November 20th, 08:09 pm
ಇದು ಉಭಯ ನಾಯಕರ ನಡುವಿನ ಮೊದಲ ದ್ವಿಪಕ್ಷೀಯ ಸಭೆಯಾಗಿತ್ತು. ಐತಿಹಾಸಿಕ ಮೂರನೇ ಅವಧಿಯ ಅಧಿಕಾರಕ್ಕಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಅಧ್ಯಕ್ಷ ಮಿಲೀ ಅವರು ಅಭಿನಂದಿಸಿದರು. ಪ್ರಧಾನಮಂತ್ರಿ ಸಹ ಅಧ್ಯಕ್ಷ ಮೈಲಿ ಅವರು ಅಧಿಕಾರ ವಹಿಸಿಕೊಂಡಿರುವುದಕ್ಕೆ ಶುಭ ಕೋರಿದರು.ಅರ್ಜೆಂಟೀನಾ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಜೆವಿಯರ್ ಮಿಲೈ ಅವರನ್ನು ಅಭಿನಂದಿಸಿದ ಪ್ರಧಾನಮಂತ್ರಿ
November 20th, 05:00 pm
ಅರ್ಜೆಂಟೀನಾ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಜೆವಿಯರ್ ಮಿಲೈ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ.