ಜಪಾನ್ ಓಪನ್ 2026 ಪ್ರಶಸ್ತಿ ಗೆದ್ದ ಪಿ.ವಿ. ಸಿಂಧು ಅವರನ್ನು ಅಭಿನಂದಿಸಿದ ಪ್ರಧಾನಮಂತ್ರಿ

July 19th, 07:13 pm

ಜಪಾನ್ ಓಪನ್ 2026 ಪ್ರಶಸ್ತಿಯನ್ನು ಗೆದ್ದ ಭಾರತದ ಖ್ಯಾತ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದರು. ಈ ಐತಿಹಾಸಿಕ ಸಾಧನೆ ಮಾಡಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಪಿ.ವಿ. ಸಿಂಧು ಅವರ ದೃಢ ಸಂಕಲ್ಪ ಮತ್ತು ಅಸಾಧಾರಣ ಕೌಶಲ್ಯಗಳು ಪಂದ್ಯಾವಳಿಯುದ್ದಕ್ಕೂ ಪೂರ್ಣಮಟ್ಟದಲ್ಲಿ ಪ್ರದರ್ಶನಗೊಂಡವು. ಅವರು ದೇಶಾದ್ಯಂತ ಅಸಂಖ್ಯಾತ ಯುವ ಕ್ರೀಡಾಪಟುಗಳನ್ನು ಆಡಲು ಮತ್ತು ಮಿಂಚಲು ಪ್ರೇರೇಪಿಸುತ್ತಾರೆ ಎಂದು ಶ್ರೀ ಮೋದಿ ಹೇಳಿದರು.