ಜೋಹಾನ್ಸ್‌ಬರ್ಗ್‌ ನಲ್ಲಿ ನಡೆದ ಜಿ-20 ನಾಯಕರ ಶೃಂಗಸಭೆಯ ನೇಪಥ್ಯದಲ್ಲಿ ಜಪಾನ್ ಪ್ರಧಾನಮಂತ್ರಿ ಅವರನ್ನು ಭೇಟಿಯಾದ ಪ್ರಧಾನಮಂತ್ರಿ

November 23rd, 09:46 pm

ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ ನಲ್ಲಿ ನಡೆದ ಜಿ-20 ನಾಯಕರ ಶೃಂಗಸಭೆಯ ಸಂದರ್ಭದಲ್ಲಿ ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಜಪಾನ್ ಪ್ರಧಾನಮಂತ್ರಿ ಘನತೆವೆತ್ತ ಸಾನೇ ತಕೈಚಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಅಕ್ಟೋಬರ್ 29, 2025 ರಂದು ದೂರವಾಣಿ ಕರೆ ಮಾಡಿದ ನಂತರ ಪ್ರಧಾನಮಂತ್ರಿ ತಕೈಚಿ ಅವರೊಂದಿಗಿನ ಪ್ರಧಾನಮಂತ್ರಿ ಅವರ ಮೊದಲ ಮುಖಾಮುಖಿ ಸಭೆ ಇದಾಗಿದೆ.

ಜಪಾನ್ ಪ್ರಧಾನಮಂತ್ರಿ ಗೌರವಾನ್ವಿತ ಸನೇ ತಕೈಚಿ ಅವರನ್ನು ಅಭಿನಂದಿಸಿದ ಪ್ರಧಾನಮಂತ್ರಿ; ಭಾರತ-ಜಪಾನ್ ವಿಶೇಷ ಕಾರ್ಯತಾಂತ್ರಿಕ ಮತ್ತು ಜಾಗತಿಕ ಸಹಭಾಗಿತ್ವ ಮತ್ತಷ್ಟು ಮುಂದುವರಿಸುವ ಬಗ್ಗೆ ಚರ್ಚೆ

October 29th, 01:14 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಜಪಾನ್ ಪ್ರಧಾನಮಂತ್ರಿ ಗೌರವಾನ್ವಿತ ಸನೇ ತಕೈಚಿ ಅವರೊಂದಿಗೆ ಆತ್ಮೀಯ ಮಾತುಕತೆ ನಡೆಸಿದರು.

ಜಪಾನ್ ಪ್ರಧಾನಮಂತ್ರಿಯಾಗಿ ಆಯ್ಕೆಯಾದ ಘನತೆವೆತ್ತ ಶ್ರೀಮತಿ ಸನೈ ಟಕೈಚಿ ಅವರನ್ನು ಅಭಿನಂದಿಸಿದ ಪ್ರಧಾನಮಂತ್ರಿ

October 21st, 11:24 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಜಪಾನ್ ಪ್ರಧಾನಮಂತ್ರಿಯಾಗಿ ಆಯ್ಕೆಯಾದ ಘನತೆವೆತ್ತ ಶ್ರೀಮತಿ ಸನೆ ತಕೈಚಿ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಮ್ಮ ಸಂದೇಶದಲ್ಲಿ ಭಾರತ-ಜಪಾನ್ ವಿಶೇಷ ಕಾರ್ಯತಂತ್ರ ಮತ್ತು ಜಾಗತಿಕ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವ ಬದ್ಧತೆಯನ್ನು ವ್ಯಕ್ತಪಡಿಸಿದ್ದಾರೆ.

ಪ್ರಧಾನಮಂತ್ರಿ ಅವರಿಂದ ಅಕ್ಟೋಬರ್ 8ರಂದು 9ನೇ ಆವೃತ್ತಿಯ ಇಂಡಿಯನ್ ಮೊಬೈಲ್ ಕಾಂಗ್ರೆಸ್ ಉದ್ಘಾಟನೆ

October 07th, 10:27 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ನವದೆಹಲಿಯ ಯಶೋಭೂಮಿಯಲ್ಲಿ 2025ರ ಅಕ್ಟೋಬರ್‌ 8ರಂದು ಏಷ್ಯಾದ ಅತಿದೊಡ್ಡ ದೂರಸಂಪರ್ಕ, ಮಾಧ್ಯಮ ಮತ್ತು ತಂತ್ರಜ್ಞಾನ ಕಾರ್ಯಕ್ರಮ ಇಂಡಿಯಾ ಮೊಬೈಲ್ ಕಾಂಗ್ರೆಸ್ (ಐಎಂಸಿ)ಯ 9ನೇ ಆವೃತ್ತಿಯನ್ನು ಉದ್ಘಾಟಿಸಲಿದ್ದಾರೆ.

ನವದೆಹಲಿಯಲ್ಲಿ ಜ್ಞಾನ ಭಾರತಂ ಕುರಿತ ಅಂತಾರಾಷ್ಟ್ರೀಯ ಸಮ್ಮೇಳನವನ್ನುದ್ದೇಶಿಸಿ ಪ್ರಧಾನಮಂತ್ರಿ ಭಾಷಣ

September 12th, 04:54 pm

ಇಂದು ವಿಜ್ಞಾನ ಭವನವು ಭಾರತದ ಸುವರ್ಣ ಗತಕಾಲದ ಪುನರುಜ್ಜೀವನಕ್ಕೆ ಸಾಕ್ಷಿಯಾಗಿದೆ. ಕೆಲವು ದಿನಗಳ ಹಿಂದೆ, ನಾನು ಜ್ಞಾನ ಭಾರತಂ ಮಿಷನ್ ಅನ್ನು ಘೋಷಿಸಿದೆ. ಇಂದು ಇಷ್ಟು ಕಡಿಮೆ ಸಮಯದಲ್ಲಿ ನಾವು ಜ್ಞಾನ ಭಾರತಂ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸುತ್ತಿದ್ದೇವೆ. ಇದಕ್ಕೆ ಸಂಬಂಧಿಸಿದ ಪೋರ್ಟಲ್ ಅನ್ನು ಸಹ ಇತ್ತೀಚೆಗೆ ಪ್ರಾರಂಭಿಸಲಾಗಿದೆ. ಇದು ಸರ್ಕಾರಿ ಅಥವಾ ಶೈಕ್ಷಣಿಕ ಘಟನೆಯಲ್ಲ; ಜ್ಞಾನ ಭಾರತಂ ಆಂದೋಲನ ಭಾರತದ ಸಂಸ್ಕೃತಿ, ಸಾಹಿತ್ಯ ಮತ್ತು ಪ್ರಜ್ಞೆಯ ಘೋಷಣೆಯಾಗಲಿದೆ. ಸಾವಿರಾರು ತಲೆಮಾರುಗಳ ಆಲೋಚನೆಗಳು ಮತ್ತು ಚಿಂತನೆಗಳು, ಭಾರತದ ಮಹಾನ್ ಸಂತರು ಮತ್ತು ವಿದ್ವಾಂಸರ ಬುದ್ಧಿವಂತಿಕೆ ಮತ್ತು ಸಂಶೋಧನೆ, ನಮ್ಮ ಜ್ಞಾನ ಸಂಪ್ರದಾಯಗಳು, ನಮ್ಮ ವೈಜ್ಞಾನಿಕ ಪರಂಪರೆ, ನಾವು ಜ್ಞಾನ ಭಾರತಂ ಮಿಷನ್ ಮೂಲಕ ಅವುಗಳನ್ನು ಡಿಜಿಟಲೀಕರಣಗೊಳಿಸಲಿದ್ದೇವೆ. ಈ ಆಂದೋಲನಕ್ಕಾಗಿ ನಾನು ಎಲ್ಲಾ ದೇಶವಾಸಿಗಳನ್ನು ಅಭಿನಂದಿಸುತ್ತೇನೆ. ಜ್ಞಾನ ಭಾರತಂನ ಇಡೀ ತಂಡಕ್ಕೆ ಮತ್ತು ಸಂಸ್ಕೃತಿ ಸಚಿವಾಲಯಕ್ಕೆ ನಾನು ಶುಭ ಹಾರೈಸುತ್ತೇನೆ.

ನವದೆಹಲಿಯಲ್ಲಿ ನಡೆದ ಜ್ಞಾನ ಭಾರತಂ ಕುರಿತ ಅಂತರರಾಷ್ಟ್ರೀಯ ಸಮ್ಮೇಳನವನ್ನು ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಭಾಷಣ

September 12th, 04:45 pm

ನವದೆಹಲಿಯ ವಿಜ್ಞಾನ ಭವನದಲ್ಲಿ ಇಂದು ನಡೆದ ಜ್ಞಾನ ಭಾರತಂ ಕುರಿತ ಅಂತರರಾಷ್ಟ್ರೀಯ ಸಮ್ಮೇಳನವನ್ನು ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮಾತನಾಡಿದರು. ಈ ಸಂದರ್ಭದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ, ವಿಜ್ಞಾನ ಭವನ ಇಂದು ಭಾರತದ ಸುವರ್ಣ ಗತಕಾಲದ ಪುನರುಜ್ಜೀವನಕ್ಕೆ ಸಾಕ್ಷಿಯಾಗುತ್ತಿದೆ ಎಂದು ಹೇಳಿದರು. ಕೆಲವೇ ದಿನಗಳ ಹಿಂದೆ ತಾವು ಜ್ಞಾನ ಭಾರತಂ ಮಿಷನ್ ಘೋಷಿಸಿದ್ದನ್ನು ಮತ್ತು ಇಷ್ಟು ಕಡಿಮೆ ಅವಧಿಯಲ್ಲಿ ಜ್ಞಾನ ಭಾರತಂ ಅಂತರರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸಲಾಗುತ್ತಿರುವುದನ್ನು ಅವರು ಒತ್ತಿ ಹೇಳಿದರು. ಈ ಮಿಷನ್‌ಗೆ ಸಂಬಂಧಿಸಿದ ಪೋರ್ಟಲ್ ಸಹ ಪ್ರಾರಂಭಿಸಲಾಗಿದೆ ಎಂದು ಶ್ರೀ ಮೋದಿ ಮಾಹಿತಿ ನೀಡಿದರು. ಇದು ಸರ್ಕಾರಿ ಅಥವಾ ಶೈಕ್ಷಣಿಕ ಕಾರ್ಯಕ್ರಮವಲ್ಲ ಎಂದು ಹೇಳಿದ ಪ್ರಧಾನಮಂತ್ರಿ, ಜ್ಞಾನ ಭಾರತಂ ಮಿಷನ್ ಭಾರತದ ಸಂಸ್ಕೃತಿ, ಸಾಹಿತ್ಯ ಮತ್ತು ಪ್ರಜ್ಞೆಯ ಘೋಷಣೆಯಾಗಲಿದೆ ಎಂದೂ ಹೇಳಿದರು. ಸಾವಿರಾರು ತಲೆಮಾರುಗಳ ಚಿಂತನಶೀಲ ಪರಂಪರೆಯನ್ನು ಅವರು ಉಲ್ಲೇಖಿಸಿದರು. ಭಾರತದ ಮಹಾನ್ ಋಷಿಗಳು, ಆಚಾರ್ಯರು ಮತ್ತು ವಿದ್ವಾಂಸರ ಬುದ್ಧಿವಂತಿಕೆ ಮತ್ತು ಸಂಶೋಧನೆಯನ್ನು ಅವರು ಗುರುತಿಸಿದರು, ಭಾರತದ ಜ್ಞಾನ, ಸಂಪ್ರದಾಯಗಳು ಮತ್ತು ವೈಜ್ಞಾನಿಕ ಪರಂಪರೆಯನ್ನು ಒತ್ತಿ ಹೇಳಿದರು. ಜ್ಞಾನ ಭಾರತಂ ಮಿಷನ್ ಮೂಲಕ ಈ ಪರಂಪರೆಗಳನ್ನು ಡಿಜಿಟಲೀಕರಣಗೊಳಿಸಲಾಗುತ್ತಿದೆ ಎಂದು ಶ್ರೀ ಮೋದಿ ಹೇಳಿದರು. ಈ ಕಾರ್ಯಾಚರಣೆಗಾಗಿ ಅವರು ಎಲ್ಲಾ ನಾಗರಿಕರಿಗೆ ಅಭಿನಂದನೆಗಳನ್ನು ಸಲ್ಲಿಸಿದರು ಮತ್ತು ಇಡೀ ಜ್ಞಾನ ಭಾರತಂ ತಂಡ ಮತ್ತು ಸಂಸ್ಕೃತಿ ಸಚಿವಾಲಯಕ್ಕೆ ತಮ್ಮ ಶುಭಾಶಯಗಳನ್ನು ತಿಳಿಸಿದರು.

ಯಶೋಭೂಮಿ, ದೆಹಲಿಯಲ್ಲಿ ನಡೆದ ಸೆಮಿಕಾನ್ ಇಂಡಿಯಾ 2025 ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

September 02nd, 10:40 am

ಕೇಂದ್ರ ಸಂಪುಟದಲ್ಲಿ ನನ್ನ ಸಹೋದ್ಯೋಗಿಯಾಗಿರುವ ಅಶ್ವಿನಿ ವೈಷ್ಣವ್ ಜೀ, ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಜೀ, ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಜೀ, ಕೇಂದ್ರ ರಾಜ್ಯ ಸಚಿವ ಜಿತಿನ್ ಪ್ರಸಾದ್ ಜೀ, SEMI ಸಂಸ್ಥೆಯ ಅಧ್ಯಕ್ಷ ಅಜಿತ್ ಮನೋಚಾ ಜೀ, ಭಾರತ ಮತ್ತು ವಿದೇಶಗಳಿಂದ ಆಗಮಿಸಿರುವ ಸೆಮಿಕಂಡಕ್ಟರ್ ಉದ್ಯಮದ ಸಿಇಒಗಳು ಮತ್ತು ಅವರ ಸಹವರ್ತಿಗಳೇ, ವಿವಿಧ ದೇಶಗಳಿಂದ ಬಂದಿರುವ ನಮ್ಮ ಅತಿಥಿಗಳೇ, ಸ್ಟಾರ್ಟಪ್ ಗಳೊಂದಿಗೆ ಸಂಬಂಧ ಹೊಂದಿರುವ ಉದ್ಯಮಿಗಳೇ, ವಿವಿಧ ರಾಜ್ಯಗಳ ನನ್ನ ಯುವ ವಿದ್ಯಾರ್ಥಿ ಮಿತ್ರರೇ, ಮಹಿಳೆಯರೇ ಮತ್ತು ಮಹನೀಯರೇ!

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವದೆಹಲಿಯಲ್ಲಿ ಸೆಮಿಕಾನ್ ಇಂಡಿಯಾ - 2025 ಉದ್ಘಾಟಿಸಿದರು

September 02nd, 10:15 am

ಭಾರತದ ಸೆಮಿಕಂಡಕ್ಟರ್ ಪೂರಕ ವ್ಯವಸ್ಥೆಯನ್ನು ವೇಗಗೊಳಿಸುವ ಗುರಿಯನ್ನು ಹೊಂದಿರುವ 'ಸೆಮಿಕಾನ್ ಇಂಡಿಯಾ-2025' ಕಾರ್ಯಕ್ರಮವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯ ಯಶೋಭೂಮಿಯಲ್ಲಿ ಉದ್ಘಾಟಿಸಿದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ, ಭಾರತ ಮತ್ತು ವಿದೇಶಗಳ ಸೆಮಿಕಂಡಕ್ಟರ್ ಉದ್ಯಮದ ಸಿ.ಇ.ಒಗಳು ಮತ್ತು ಸಹವರ್ತಿಗಳ ಉಪಸ್ಥಿತಿಗೆ ಧನ್ಯವಾದ ತಿಳಿಸಿದರು. ವಿವಿಧ ದೇಶಗಳ ಗಣ್ಯ ಅತಿಥಿಗಳು, ನವೋದ್ಯಮಗಳ ಉದ್ಯಮಿಗಳು ಮತ್ತು ದೇಶಾದ್ಯಂತದ ವಿವಿಧ ರಾಜ್ಯಗಳ ಯುವ ವಿದ್ಯಾರ್ಥಿಗಳನ್ನು ಅವರು ಸ್ವಾಗತಿಸಿದರು.

ಮಿಯಾಗಿ ಪ್ರಾಂತ್ಯದ ಸೆಂಡೈನಲ್ಲಿರುವ ಅರೆವಾಹಕ (ಸೆಮಿಕಂಡಕ್ಟರ್) ಸೌಲಭ್ಯಕ್ಕೆ ಪ್ರಧಾನಮಂತ್ರಿ ಭೇಟಿ

August 30th, 11:52 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜಪಾನ್ ಪ್ರಧಾನಿ ಘನತೆವೆತ್ತ ಶ್ರೀ ಶಿಗೆರು ಇಶಿಬಾ ಅವರೊಂದಿಗೆ ಇಂದು ಮಿಯಾಗಿ ಪ್ರಾಂತ್ಯದ ಸೆಂಡೈಗೆ ಪ್ರಯಾಣ ಬೆಳೆಸಿದರು. ಸೆಂಡೈನಲ್ಲಿ, ಉಭಯ ನಾಯಕರು ಅರೆವಾಹಕ (ಸೆಮಿಕಂಡಕ್ಟರ್) ವಲಯದಲ್ಲಿ ಜಪಾನಿನ ಪ್ರಮುಖ ಕಂಪನಿಯಾದ ಟೋಕಿಯೊ ಎಲೆಕ್ಟ್ರಾನ್ ಮಿಯಾಗಿ ಲಿಮಿಟೆಡ್ (ಟಿಇಎಲ್ ಮಿಯಾಗಿ) ಗೆ ಭೇಟಿ ನೀಡಿದರು. ಜಾಗತಿಕ ಅರೆವಾಹಕ ಮೌಲ್ಯ ಸರಪಳಿಯಲ್ಲಿ ಟೆಲ್ ನ ಪಾತ್ರ, ಅದರ ಸುಧಾರಿತ ಉತ್ಪಾದನಾ ಸಾಮರ್ಥ್ಯಗಳು ಮತ್ತು ಭಾರತದೊಂದಿಗೆ ನಡೆಯುತ್ತಿರುವ ಮತ್ತು ಯೋಜಿತ ಸಹಯೋಗಗಳ ಬಗ್ಗೆ ಪ್ರಧಾನಮಂತ್ರಿಯವರಿಗೆ ವಿವರಿಸಲಾಯಿತು. ಕಾರ್ಖಾನೆ ಭೇಟಿಯು ಸೆಮಿಕಂಡಕ್ಟರ್ ಪೂರೈಕೆ ಸರಪಳಿ, ಫ್ಯಾಬ್ರಿಕೇಷನ್ ಮತ್ತು ಪರೀಕ್ಷೆ ಕ್ಷೇತ್ರದಲ್ಲಿ ಸಹಯೋಗವನ್ನು ರೂಪಿಸಲು ಉಭಯ ದೇಶಗಳ ನಡುವೆ ಇರುವ ಅವಕಾಶಗಳ ಬಗ್ಗೆ ಪ್ರಾಯೋಗಿಕ ತಿಳುವಳಿಕೆಯನ್ನು ನಾಯಕರಿಗೆ ನೀಡಿತು.

ಜಪಾನಿನ ಪ್ರಾಂತ್ಯಗಳ ರಾಜ್ಯಪಾಲರೊಂದಿಗೆ ನಡೆಸಿದ ಸಂವಾದ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಭಾಷಣ

August 30th, 08:00 am

ನಾನು ಈ ಸಭಾಂಗಣದಲ್ಲಿ ಸೈತಾಮಾದ ವೇಗ, ಮಿಯಾಗಿಯ ಚೇತರಿಕೆ, ಫುಕುವೋಕಾದ ಚೈತನ್ಯ ಮತ್ತು ನಾರಾದ ಪರಂಪರೆಯನ್ನು ಅನುಭವಿಸಬಲ್ಲೆ. ನಿಮ್ಮೆಲ್ಲರಲ್ಲೂ ಕುಮಾಮೊಟೊದ ಉಷ್ಣತೆ, ನಾಗಾನೊದ ತಾಜಾತನ, ಶಿಜುವೋಕಾದ ಸೌಂದರ್ಯ ಮತ್ತು ನಾಗಸಾಕಿಯ ನಾಡಿಮಿಡಿತವಿದೆ. ನೀವೆಲ್ಲರೂ ಫ್ಯೂಜಿ ಪರ್ವತದ ಶಕ್ತಿ ಮತ್ತು ಸಕುರಾದ ಚೈತನ್ಯವನ್ನು ಸಾಕಾರಗೊಳಿಸುತ್ತೀರಿ. ಒಟ್ಟಾಗಿ, ನೀವು ಜಪಾನ್ ದೇಶವನ್ನು ಕಾಲಾತೀತವಾಗಿಸುತ್ತೀರಿ.

ಜಪಾನಿನ ವಿವಿಧ ಪ್ರಾಂತ್ಯಗಳ ರಾಜ್ಯಪಾಲರೊಂದಿಗೆ ಪ್ರಧಾನಮಂತ್ರಿ ಸಂವಾದ

August 30th, 07:34 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಜಪಾನ್‌ನ ವಿವಿಧ ಪ್ರಾಂತ್ಯಗಳ ರಾಜ್ಯಪಾಲರನ್ನು ಭೇಟಿಯಾದರು. ಸಂವಾದದಲ್ಲಿ ಹದಿನಾರು ರಾಜ್ಯಪಾಲರು ಭಾಗವಹಿಸಿದ್ದರು.

ವಾಸ್ತವಾಂಶ ಪತ್ರ (ಫ್ಯಾಕ್ಟ್ ಶೀಟ್) : ಭಾರತ-ಜಪಾನ್ ಆರ್ಥಿಕ ಭದ್ರತಾ ಸಹಕಾರ

August 29th, 08:12 pm

ಎರಡು ಚೈತನ್ಯಶೀಲ ಅಥವಾ ರೋಮಾಂಚನಾಕಾರಿ ಪ್ರಜಾಪ್ರಭುತ್ವಗಳಾಗಿ ಮತ್ತು ಮುಕ್ತ ಮಾರುಕಟ್ಟೆ ಆರ್ಥಿಕತೆಗಳಾಗಿ, ಭಾರತ ಮತ್ತು ಜಪಾನ್ ನಮ್ಮ ರಾಜಕೀಯ ನಂಬಿಕೆ, ಆರ್ಥಿಕ ಚೈತನ್ಯ ಮತ್ತು ನೈಸರ್ಗಿಕ ಪೂರಕತೆಯ ಆಧಾರದ ಮೇಲೆ ನಿರ್ಣಾಯಕ ಮತ್ತು ಉದಯೋನ್ಮುಖ ವಲಯಗಳಲ್ಲಿ ತಮ್ಮ ಪಾಲುದಾರಿಕೆಯನ್ನು ವೇಗಗೊಳಿಸಲು ಬದ್ಧವಾಗಿವೆ.

ಭಾರತ ಮತ್ತು ಜಪಾನ್‌ ನಡುವೆ ಭದ್ರತಾ ಸಹಕಾರ ಕುರಿತು ಜಂಟಿ ಘೋಷಣೆ

August 29th, 07:43 pm

ಸಾಮಾನ್ಯ ಹಿತಾಸಕ್ತಿ ಮತ್ತು ಮೌಲ್ಯಗಳ ಆಧಾರದ ಮೇಲೆ ಭಾರತ ಮತ್ತು ಜಪಾನ್‌ನ ವಿಶೇಷ ಕಾರ್ಯತಂತ್ರಗಳು ಮತ್ತು ಜಾಗತಿಕ ಸಹಭಾಗಿತ್ವದ ರಾಜಕೀಯ ಮುನ್ನೋಟ ಮತ್ತು ಉದ್ದೇಶಗಳು ಮತ್ತೊಮ್ಮೆ ಮುನ್ನೆಲೆಗೆ ಬಂದಿವೆ.

ಮುಂದಿನ ದಶಕದ ಭಾರತ - ಜಪಾನ್ ಜಂಟಿ ಮುನ್ನೋಟ: ವಿಶೇಷ ಕಾರ್ಯತಂತ್ರ ಮತ್ತು ಜಾಗತಿಕ ಪಾಲುದಾರಿಕೆಯನ್ನು ಮುನ್ನಡೆಸಲು ಎಂಟು ಮಾರ್ಗಗಳು

August 29th, 07:11 pm

ಕಾನೂನುಬದ್ಧ ಆಳ್ವಿಕೆಯ ಆಧಾರದ ಮೇಲೆ ಮುಕ್ತ, ತೆರೆದ, ಶಾಂತಿಯುತ, ಸಮೃದ್ಧ ಮತ್ತು ಸಂಘರ್ಷ-ಮುಕ್ತ ಇಂಡೋ-ಪೆಸಿಫಿಕ್ ಪ್ರದೇಶದ ಸಾಮಾನ್ಯ ದೃಷ್ಟಿಕೋನವನ್ನು ಹೊಂದಿರುವ ಎರಡು ದೇಶಗಳಾಗಿ, ಪೂರಕ ಸಂಪನ್ಮೂಲ ದತ್ತಿ, ತಾಂತ್ರಿಕ ಸಾಮರ್ಥ್ಯಗಳು ಮತ್ತು ವೆಚ್ಚ ಸ್ಪರ್ಧಾತ್ಮಕತೆಯನ್ನು ಹೊಂದಿರುವ ಎರಡು ಆರ್ಥಿಕತೆಗಳು ಮತ್ತು ಸ್ನೇಹ ಮತ್ತು ಪರಸ್ಪರ ಸದ್ಭಾವನೆಯ ದೀರ್ಘ ಸಂಪ್ರದಾಯವನ್ನು ಹೊಂದಿರುವ ಎರಡು ರಾಷ್ಟ್ರಗಳಾಗಿ, ಮುಂದಿನ ದಶಕದಲ್ಲಿ ನಮ್ಮ ದೇಶಗಳಲ್ಲಿ ಮತ್ತು ಪ್ರಪಂಚದಲ್ಲಿ ಒಟ್ಟಾರೆಯಾಗಿ ಬದಲಾವಣೆಗಳು ಮತ್ತು ಅವಕಾಶಗಳನ್ನು ಜಂಟಿಯಾಗಿ ನಿಭಾಯಿಸುವ ಉದ್ದೇಶವನ್ನು ಭಾರತ ಮತ್ತು ಜಪಾನ್ ವ್ಯಕ್ತಪಡಿಸುತ್ತವೆ, ನಮ್ಮ ಆಯಾ ದೇಶೀಯ ಗುರಿಗಳನ್ನು ಸಾಧಿಸಲು ಸಹಾಯ ಮಾಡುತ್ತವೆ ಮತ್ತು ನಮ್ಮ ದೇಶಗಳು ಹಾಗು ಮುಂದಿನ ಪೀಳಿಗೆಯ ಜನರನ್ನು ಹಿಂದೆಂದಿಗಿಂತಲೂ ಹೆಚ್ಚು ನಿಕಟವಾಗಿಸುತ್ತವೆ.

15ನೇ ಭಾರತ-ಜಪಾನ್ ವಾರ್ಷಿಕ ಶೃಂಗಸಭೆಯ ಜಂಟಿ ಹೇಳಿಕೆ: ನಮ್ಮ ಮುಂದಿನ ಪೀಳಿಗೆಯ ಭದ್ರತೆ ಮತ್ತು ಸಮೃದ್ಧಿಗಾಗಿ ಸಹಭಾಗಿತ್ವ

August 29th, 07:06 pm

ಜಪಾನ್ ಪ್ರಧಾನಮಂತ್ರಿ ಗೌರವಾನ್ವಿತ ಶ್ರೀ ಇಶಿಬಾ ಶಿಗೇರು ಅವರ ಆಹ್ವಾನದ ಮೇರೆಗೆ, ಭಾರತದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2025ರ ಆಗಸ್ಟ್ 29-30, ರಂದು 15ನೇ ಭಾರತ-ಜಪಾನ್ ವಾರ್ಷಿಕ ಶೃಂಗಸಭೆಗಾಗಿ ಜಪಾನ್‌ಗೆ ಅಧಿಕೃತ ಭೇಟಿ ನೀಡಿದರು. 2025 ರ ಆಗಸ್ಟ್ 29 ರಂದು ಸಂಜೆ ಪ್ರಧಾನಮಂತ್ರಿ ಮೋದಿ ಅವರನ್ನು ಪ್ರಧಾನಮಂತ್ರಿ ಇಶಿಬಾ ಅವರು ಪ್ರಧಾನಮಂತ್ರಿ ಕಚೇರಿಯಲ್ಲಿ (ಕಾಂಟೆ) ಬರಮಾಡಿಕೊಂಡರು, ಅಲ್ಲಿ ಅವರಿಗೆ ವಿಧ್ಯುಕ್ತ ಗೌರವ ರಕ್ಷೆಯನ್ನು ನೀಡಲಾಯಿತು. ಇಬ್ಬರು ಪ್ರಧಾನಮಂತ್ರಿಗಳು ನಿಯೋಗ ಮಟ್ಟದ ಮಾತುಕತೆಗಳನ್ನು ನಡೆಸಿದರು, ಈ ಸಂದರ್ಭದಲ್ಲಿ ಅವರು ನಾಗರಿಕ ಸಂಬಂಧಗಳು, ಹಂಚಿಕೆಯ ಮೌಲ್ಯಗಳು ಮತ್ತು ಆಸಕ್ತಿಗಳು, ಸಾಮಾನ್ಯ ಕಾರ್ಯತಂತ್ರದ ದೃಷ್ಟಿಕೋನ ಮತ್ತು ಪರಸ್ಪರ ಗೌರವದಲ್ಲಿ ಬೇರೂರಿರುವ ಭಾರತ ಮತ್ತು ಜಪಾನ್ ನಡುವಿನ ದೀರ್ಘಕಾಲದ ಸ್ನೇಹವನ್ನು ನೆನಪಿಸಿಕೊಂಡರು. ಕಳೆದ ದಶಕದಲ್ಲಿ ಭಾರತ-ಜಪಾನ್ ಪಾಲುದಾರಿಕೆಯು ಮಾಡಿದ ಮಹತ್ವದ ಪ್ರಗತಿಯನ್ನು ಇಬ್ಬರೂ ಪ್ರಧಾನಮಂತ್ರಿಗಳು ಶ್ಲಾಘಿಸಿದರು ಮತ್ತು ಮುಂಬರುವ ದಶಕಗಳಲ್ಲಿ ಪರಸ್ಪರ ಭದ್ರತೆ ಮತ್ತು ಸಮೃದ್ಧಿಯನ್ನು ಸಾಧಿಸಲು ಕಾರ್ಯತಂತ್ರದ ಮತ್ತು ಭವಿಷ್ಯತ್ತಿನ ಪಾಲುದಾರಿಕೆಯನ್ನು ಬಲಪಡಿಸುವ ಮಾರ್ಗಗಳ ಕುರಿತು ರಚನಾತ್ಮಕ ಚರ್ಚೆ ನಡೆಸಿದರು.

ಭಾರತಕ್ಕಾಗಿ ಕ್ರಿಯಾ ಯೋಜನೆ - ಜಪಾನ್ ಮಾನವ ಸಂಪನ್ಮೂಲ ವಿನಿಮಯ ಮತ್ತು ಸಹಯೋಗ

August 29th, 06:54 pm

2025ರ ಭಾರತ-ಜಪಾನ್ ವಾರ್ಷಿಕ ಶೃಂಗಸಭೆಯ ಸಮಯದಲ್ಲಿ, ಭಾರತ ಮತ್ತು ಜಪಾನ್ನ ಪ್ರಧಾನ ಮಂತ್ರಿಗಳು ಭೇಟಿ ನೀಡುವುದು ಮತ್ತು ವಿನಿಮಯಗಳ ಮೂಲಕ ತಮ್ಮ ನಾಗರಿಕರ ನಡುವೆ ಆಳವಾದ ತಿಳುವಳಿಕೆಯನ್ನು ಹೆಚ್ಚಿಸುವ ಅಗತ್ಯವನ್ನು ಮನಗಂಡರು ಮತ್ತು ಮೌಲ್ಯಗಳನ್ನು ಜೊತೆಯಾಗಿ ಸೃಷ್ಟಿಸಲು ಮತ್ತು ಸಂಬಂಧಿತ ದೇಶದ ಆದ್ಯತೆಗಳಿಗೆ ಪರಿಹಾರ ಮತ್ತು ತಮ್ಮ ಮಾನವ ಸಂಪನ್ಮೂಲಗಳಿಗೆ ಸಹಯೋಗದ ಮಾರ್ಗಗಳನ್ನು ಕಂಡುಕೊಳ್ಳುತ್ತಾರೆ.

ಪ್ರಧಾನಮಂತ್ರಿ ಅವರ ಜಪಾನ್ ಭೇಟಿ: ಫಲಪ್ರದ ಒಪ್ಪಂದಗಳ ಫಲಿತಾಂಶಗಳ ಪಟ್ಟಿ

August 29th, 06:23 pm

ಆರ್ಥಿಕ ಪಾಲುದಾರಿಕೆ, ಆರ್ಥಿಕ ಭದ್ರತೆ, ಚಲನಶೀಲತೆ, ಪರಿಸರ ಸುಸ್ಥಿರತೆ, ತಂತ್ರಜ್ಞಾನ ಮತ್ತು ನಾವೀನ್ಯತೆ, ಆರೋಗ್ಯ, ಜನರಿಂದ ಜನರಿಗೆ ಮತ್ತು ರಾಜ್ಯ-ಪ್ರಾಂತ್ಯದ ನಿಶ್ಚಿತಾರ್ಥಗಳಲ್ಲಿ ಎಂಟು ಮಾರ್ಗಗಳಲ್ಲಿ ಆರ್ಥಿಕ ಮತ್ತು ಕ್ರಿಯಾತ್ಮಕ ಸಹಕಾರಕ್ಕಾಗಿ 10 ವರ್ಷಗಳ ಕಾರ್ಯತಂತ್ರದ ಆದ್ಯತೆ

ಪ್ರಧಾನಮಂತ್ರಿ ಅವರು ಶೋರಿಂಜಾನ್‌ ದಾರುಮಾ-ಜಿ ದೇವಾಲಯದ ಪ್ರಧಾನ ಅರ್ಚಕ ರೆವರೆಂಡ್‌ ಸೀಶಿ ಹಿರೋಸ್‌ ಅವರಿಂದ ದಾರುಮಾ ಗೊಂಬೆಯನ್ನು ಸ್ವೀಕರಿಸಿದರು

August 29th, 04:29 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ಇಂದು ತಕಾಸಾಕಿ-ಗುನ್ಮಾದ ಶೋರಿಂಜಾನ್‌ ದಾರುಮಾ-ಜಿ ದೇವಾಲಯದ ಪ್ರಧಾನ ಅರ್ಚಕ ರೆವರೆಂಡ್‌ ಸೀಶಿ ಹಿರೋಸ್‌ ಅವರು ದಾರುಮಾ ಗೊಂಬೆಯನ್ನು ಉಡುಗೊರೆಯಾಗಿ ನೀಡಿದರು. ಈ ವಿಶೇಷ ಸನ್ನೆಯು ಭಾರತ ಮತ್ತು ಜಪಾನ್‌ ನಡುವಿನ ನಿಕಟ ನಾಗರಿಕ ಮತ್ತು ಆಧ್ಯಾತ್ಮಿಕ ಸಂಬಂಧಗಳನ್ನು ಪುನರುಚ್ಚರಿಸುತ್ತದೆ.

ಜಪಾನ್ ಪ್ರಧಾನಮಂತ್ರಿ ಅವರೊಂದಿಗಿನ ಜಂಟಿ ಪತ್ರಿಕಾ ಹೇಳಿಕೆಯ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರ ಪತ್ರಿಕಾ ಹೇಳಿಕೆ

August 29th, 03:59 pm

ಇಂದಿನ ನಮ್ಮ ಚರ್ಚೆಯು ಫಲಪ್ರದ ಮತ್ತು ನಿರ್ದಿಷ್ಟ ಉದ್ದೇಶಗಳನ್ನು ಒಳಗೊಂಡಿತ್ತು. ಎರಡು ಪ್ರಮುಖ ಆರ್ಥಿಕತೆಗಳು ಮತ್ತು ಚೈತನ್ಯಶೀಲ ಪ್ರಜಾಪ್ರಭುತ್ವಗಳಾಗಿ, ನಮ್ಮ ಪಾಲುದಾರಿಕೆಯು ನಮ್ಮ ಎರಡೂ ದೇಶಗಳಿಗೆ ಮಾತ್ರವಲ್ಲದೆ ಜಾಗತಿಕ ಶಾಂತಿ ಮತ್ತು ಸ್ಥಿರತೆಗೂ ಬಹಳ ಮುಖ್ಯವಾಗಿದೆ ಎಂಬುದನ್ನು ನಾವಿಬ್ಬರೂ ಒಪ್ಪುತ್ತೇವೆ.

ಭಾರತ-ಜಪಾನ್ ಆರ್ಥಿಕ ವೇದಿಕೆಯಲ್ಲಿ ಪ್ರಧಾನಮಂತ್ರಿ ಅವರ ಭಾಷಣ

August 29th, 11:20 am

ನಿಮ್ಮಲ್ಲಿ ಅನೇಕರನ್ನು ನಾನು ವೈಯಕ್ತಿಕವಾಗಿ ಬಲ್ಲೆ. ನಾನು ಗುಜರಾತ್ನಲ್ಲಿದ್ದಾಗ ಆಗಿರಬಹುದು, ಅಥವಾ ದೆಹಲಿಗೆ ಬಂದ ನಂತರವೇ ಆಗಿರಬಹುದು, ನಿಮ್ಮಲ್ಲಿ ಅನೇಕರೊಂದಿಗೆ ನನಗೆ ನಿಕಟವಾದ ಸಂಪರ್ಕವಿದೆ. ಇಂದು ನಿಮ್ಮೆಲ್ಲರನ್ನೂ ಭೇಟಿಯಾಗುವ ಈ ಅವಕಾಶ ಸಿಕ್ಕಿದ್ದಕ್ಕೆ ನನಗೆ ನಿಜಕ್ಕೂ ಬಹಳ ಸಂತೋಷವಾಗಿದೆ.