ಹುಟ್ಟುಹಬ್ಬದ ನಿಮಿತ್ತ ಹರಿದು ಬಂದ ಅಸಂಖ್ಯಾತ ಶುಭಾಶಯಗಳು ಮತ್ತು ಆಶೀರ್ವಾದಗಳಿಗಾಗಿ ಪ್ರಧಾನಮಂತ್ರಿ ಅವರು ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದ್ದಾರೆ

September 17th, 08:27 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಮ್ಮ 75ನೇ ಹುಟ್ಟುಹಬ್ಬದಂದು ದೇಶಾದ್ಯಂತ ಮತ್ತು ವಿದೇಶಗಳಿಂದ ಹರಿದು ಬಂದಿರುವ ಅಸಂಖ್ಯಾತ ಸಂಖ್ಯೆಯ ಶುಭಾಶಯಗಳು, ಆಶೀರ್ವಾದಗಳು ಮತ್ತು ಪ್ರೀತಿಯ ಸಂದೇಶಗಳಿಗಾಗಿ ಸಂಪೂರ್ಣ ಜನಶಕ್ತಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ತಮ್ಮ ಈ ಪ್ರೀತಿ ನನ್ನನ್ನು ಇನ್ನೂ ಬಲಪಡಿಸುತ್ತದೆ ಮತ್ತು ಪ್ರೇರೇಪಿಸುತ್ತದೆ ಎಂದು ಶ್ರೀ ಮೋದಿ ಅವರು ಹೇಳಿದ್ದಾರೆ.