ನವದೆಹಲಿಯಲ್ಲಿ ನಡೆದ 6ನೇ ರಾಮನಾಥ ಗೋಯೆಂಕಾ ಉಪನ್ಯಾಸ ಕಾರ್ಯಕ್ರಮ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
November 17th, 08:30 pm
ಭಾರತೀಯ ಪ್ರಜಾಪ್ರಭುತ್ವದಲ್ಲಿ ಪತ್ರಿಕೋದ್ಯಮ, ಅಭಿವ್ಯಕ್ತಿ ಮತ್ತು ಸಾರ್ವಜನಿಕ ಚಳುವಳಿಗಳ ಶಕ್ತಿಗೆ ಹೊಸ ಎತ್ತರ ನೀಡಿದ ವ್ಯಕ್ತಿತ್ವವನ್ನು ಗೌರವಿಸಲು ಇಂದು ನಾವೆಲ್ಲರೂ ಇಲ್ಲಿ ಒಟ್ಟುಗೂಡಿದ್ದೇವೆ. ಒಬ್ಬ ದಾರ್ಶನಿಕನಾಗಿ, ಸಂಸ್ಥೆಯ ನಿರ್ಮಾತೃವಾಗಿ, ರಾಷ್ಟ್ರೀಯವಾದಿಯಾಗಿ ಮತ್ತು ಮಾಧ್ಯಮ ನಾಯಕನಾಗಿ, ರಾಮನಾಥ್ ಜಿ ಅವರು ಇಂಡಿಯನ್ ಎಕ್ಸ್‌ಪ್ರೆಸ್ ಸಮೂಹವನ್ನು ಕೇವಲ ಪತ್ರಿಕೆಯಾಗಿ ಮಾತ್ರವಲ್ಲದೆ, ಭಾರತದ ಜನರ ಒಂದು ಧ್ಯೇಯವಾಗಿ ಸ್ಥಾಪಿಸಿದರು. ಅವರ ನಾಯಕತ್ವದಲ್ಲಿ, ಈ ಸಮೂಹವು ಭಾರತದ ಪ್ರಜಾಪ್ರಭುತ್ವ ಮೌಲ್ಯಗಳು ಮತ್ತು ರಾಷ್ಟ್ರೀಯ ಹಿತಾಸಕ್ತಿಗಳ ಧ್ವನಿಯಾಯಿತು. ಆದ್ದರಿಂದ 21ನೇ ಶತಮಾನದ ಈ ಯುಗದಲ್ಲಿ ಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವ ಸಂಕಲ್ಪದೊಂದಿಗೆ ಮುಂದುವರಿಯುತ್ತಿರುವಾಗ, ರಾಮನಾಥ್ ಜಿ ಅವರ ಬದ್ಧತೆ, ಅವರ ಪ್ರಯತ್ನಗಳು ಮತ್ತು ಅವರ ದೃಷ್ಟಿಕೋನವು ನಮಗೆ ಸ್ಫೂರ್ತಿಯ ದೊಡ್ಡ ಸೆಲೆಯಾಗಿದೆ. ಈ ಉಪನ್ಯಾಸಕ್ಕೆ ನನ್ನನ್ನು ಆಹ್ವಾನಿಸಿದ್ದಕ್ಕಾಗಿ ಇಂಡಿಯನ್ ಎಕ್ಸ್‌ಪ್ರೆಸ್ ಗ್ರೂಪ್‌ಗೆ ನಾನು ನನ್ನ ಕೃತಜ್ಞತೆಯನ್ನು ಸಲ್ಲಿಸುತ್ತೇನೆ, ನಿಮ್ಮೆಲ್ಲರನ್ನು ನಾನು ಅಭಿನಂದಿಸುತ್ತೇನೆ.ಆರನೇ ರಾಮನಾಥ ಗೋಯೆಂಕಾ ಉಪನ್ಯಾಸ ನೀಡಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ
November 17th, 08:15 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಹೊಸದಿಲ್ಲಿಯಲ್ಲಿ ಇಂಡಿಯನ್ ಎಕ್ಸ್‌ಪ್ರೆಸ್ ಆಯೋಜಿಸಿದ್ದ ಆರನೇ ರಾಮನಾಥ ಗೋಯೆಂಕಾ ಉಪನ್ಯಾಸ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು. ಭಾರತದಲ್ಲಿ ಪ್ರಜಾಪ್ರಭುತ್ವ, ಪತ್ರಿಕೋದ್ಯಮ, ಅಭಿವ್ಯಕ್ತಿ ಮತ್ತು ಸಾರ್ವಜನಿಕ ಚಳುವಳಿಗಳ ಶಕ್ತಿಯನ್ನು ಉನ್ನತೀಕರಿಸಿದ ವಿಶಿಷ್ಟ ವ್ಯಕ್ತಿತ್ವವನ್ನು ಗೌರವಿಸಲು ನಾವು ಇಂದು ಒಟ್ಟುಗೂಡಿದ್ದೇವೆ ಎಂದು ಶ್ರೀ ಮೋದಿ ಹೇಳಿದರು. ಶ್ರೀ ರಾಮನಾಥ್ ಗೋಯೆಂಕಾ ಅವರು ದಾರ್ಶನಿಕರಾಗಿ, ಸಂಸ್ಥೆ ನಿರ್ಮಾತೃರಾಗಿ, ರಾಷ್ಟ್ರೀಯತಾವಾದಿಯಾಗಿ ಮತ್ತು ಮಾಧ್ಯಮ ನಾಯಕರಾಗಿ ಇಂಡಿಯನ್ ಎಕ್ಸ್‌ಪ್ರೆಸ್ ಗ್ರೂಪ್ ಅನ್ನು ಕೇವಲ ಪತ್ರಿಕೆಯಾಗಿ ಮಾತ್ರವಲ್ಲದೆ ಭಾರತದ ಜನರಲ್ಲಿ ಒಂದು ಧ್ಯೇಯವಾಗಿ ಸ್ಥಾಪಿಸಿದರು ಎಂಬುದನ್ನು ಅವರು ಎತ್ತಿ ತೋರಿಸಿದರು. ಅವರ ನಾಯಕತ್ವದಲ್ಲಿ, ಈ ಗುಂಪು ಭಾರತದ ಪ್ರಜಾಪ್ರಭುತ್ವ ಮೌಲ್ಯಗಳು ಮತ್ತು ರಾಷ್ಟ್ರೀಯ ಹಿತಾಸಕ್ತಿಗಳಿಗೆ ಧ್ವನಿಯಾಯಿತು ಎಂಬುದರತ್ತ ಪ್ರಧಾನಿ ಗಮನ ಸೆಳೆದರು. 21ನೇ ಶತಮಾನದ ಈ ಯುಗದಲ್ಲಿ, ಭಾರತವು ಅಭಿವೃದ್ಧಿ ಹೊಂದುವ ಸಂಕಲ್ಪದೊಂದಿಗೆ ಮುಂದುವರಿಯುತ್ತಿರುವಾಗ, ಶ್ರೀ ರಾಮನಾಥ್ ಗೋಯೆಂಕಾ ಅವರ ಬದ್ಧತೆ, ಪ್ರಯತ್ನಗಳು ಮತ್ತು ದೃಷ್ಟಿಕೋನವು ಸ್ಫೂರ್ತಿಯ ದೊಡ್ಡ ಮೂಲವಾಗಿದೆ ಎಂದು ಅವರು ಒತ್ತಿ ಹೇಳಿದರು. ಈ ಉಪನ್ಯಾಸ ನೀಡಲು ತಮ್ಮನ್ನು ಆಹ್ವಾನಿಸಿದ್ದಕ್ಕಾಗಿ ಇಂಡಿಯನ್ ಎಕ್ಸ್‌ಪ್ರೆಸ್ ಗ್ರೂಪ್‌ಗೆ ಪ್ರಧಾನಿ ಕೃತಜ್ಞತೆ ಸಲ್ಲಿಸಿದರು ಮತ್ತು ಹಾಜರಿದ್ದ ಎಲ್ಲರಿಗೂ ತಮ್ಮ ಶುಭಾಶಯಗಳನ್ನು ತಿಳಿಸಿದರು.RJD and Congress are pushing Bihar’s youth towards crime and ‘rangdari’: PM Modi in Bettiah, Bihar
November 08th, 11:30 am
Addressing a massive rally in Bettiah, PM Modi accused the RJD and Congress of pushing the state’s youth towards crime and ‘rangdari’. Speaking about the GST Bachat Utsav, the PM highlighted that today, essential items carry either zero or minimal GST, making everyday goods much more affordable. Urging the crowd to take out their phones and switch on the flashlight, he said, “This light in your hands shows the path to a Viksit Bihar.”Unstoppable wave of support as PM Modi addresses rallies in Sitamarhi and Bettiah, Bihar
November 08th, 11:00 am
PM Modi today addressed large and enthusiastic gatherings in Sitamarhi and Bettiah, Bihar, seeking blessings in the sacred land of Mata Sita and highlighting the deep connection between faith and nation-building. Recalling the events of November 8, 2019, when he had prayed for a favourable Ayodhya verdict before heading for an inauguration the following day, he said he had now come to Sitamarhi to seek the people’s blessings for a Viksit Bihar.ನವ ರಾಯ್‌ಪುರದಲ್ಲಿ ಛತ್ತೀಸ್‌ಗಢ ವಿಧಾನಸಭಾ ನೂತನ ಕಟ್ಟಡ ಉದ್ಘಾಟನಾ ಸಮಾರಂಭ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ
November 01st, 01:30 pm
ಛತ್ತೀಸ್‌ಗಢದ ಅಭಿವೃದ್ಧಿಯ ಪಯಣಕ್ಕೆ ಇಂದು ಸುವರ್ಣ ಆರಂಭವಾಗಿದೆ. ವೈಯಕ್ತಿಕವಾಗಿ ಇದು ನನಗೆ ತುಂಬಾ ವಿಶೇಷ ಮತ್ತು ಸಂತೋಷದ ದಿನವಾಗಿದೆ. ಹಲವಾರು ದಶಕಗಳಿಂದ ನಾನು ಈ ಭೂಮಿಯೊಂದಿಗೆ ಸುದೀರ್ಘ ಭಾವನಾತ್ಮಕ ಬಾಂಧವ್ಯ ಹೊಂದಿದ್ದೇನೆ. ಒಬ್ಬ ಕೆಲಸಗಾರನಾಗಿ, ನಾನು ಛತ್ತೀಸ್‌ಗಢದಲ್ಲಿ ಸಾಕಷ್ಟು ಸಮಯ ಕಳೆದಿದ್ದೇನೆ, ಈ ಸ್ಥಳದಿಂದ ನಾನು ಬಹಳಷ್ಟು ಕಲಿತಿದ್ದೇನೆ. ಛತ್ತೀಸ್‌ಗಢದ ಜನರು ಮತ್ತು ಮಣ್ಣು ನನ್ನ ಜೀವನವನ್ನು ಬಹಳ ಆಶೀರ್ವದಿಸಿದೆ ಮತ್ತು ರೂಪಿಸಿದೆ. ಛತ್ತೀಸ್‌ಗಢದ ಕಲ್ಪನೆ ಮತ್ತು ಪರಿಕಲ್ಪನೆಯಿಂದ, ಅದರ ರಚನೆಗೆ ಕಾರಣವಾದ ಸಂಕಲ್ಪದವರೆಗೆ ಮತ್ತು ಆ ಕನಸಿನ ಸಾಕಾರದವರೆಗೆ, ರಾಜ್ಯದ ರೂಪಾಂತರದ ಪ್ರತಿಯೊಂದು ಹಂತಕ್ಕೂ ನಾನು ಸಾಕ್ಷಿಯಾಗಿದ್ದೇನೆ. ಇಂದು ಛತ್ತೀಸ್‌ಗಢವು ತನ್ನ 25 ವರ್ಷಗಳ ಪ್ರಯಾಣದಲ್ಲಿ ಮಹತ್ವದ ಮೈಲಿಗಲ್ಲು ತಲುಪುತ್ತಿರುವಾಗ, ಈ ಐತಿಹಾಸಿಕ ಕ್ಷಣದ ಭಾಗವಾಗಲು ನನಗೆ ಮತ್ತೊಮ್ಮೆ ಗೌರವ ದೊರೆತಿದೆ. ಈ ಬೆಳ್ಳಿ ಮಹೋತ್ಸವ ಆಚರಣೆ ಗುರುತಿಸಲು ರಾಜ್ಯದ ಜನರಿಗಾಗಿ ಈ ಹೊಸ ಶಾಸಕಾಂಗ ಕಟ್ಟಡವನ್ನು ಉದ್ಘಾಟಿಸಲು ನಾನು ಅದೃಷ್ಟಶಾಲಿಯಾಗಿದ್ದೇನೆ. ಈ ಶುಭ ಸಂದರ್ಭದಲ್ಲಿ ಛತ್ತೀಸ್‌ಗಢದ ಜನರಿಗೆ ಮತ್ತು ರಾಜ್ಯ ಸರ್ಕಾರಕ್ಕೆ ನನ್ನ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಶುಭಾಶಯಗಳನ್ನು ಸಲ್ಲಿಸುತ್ತೇನೆ.ಛತ್ತೀಸ್‌ಗಢದ ನವ ರಾಯ್‌ಪುರದಲ್ಲಿ ಛತ್ತೀಸ್‌ಗಢ ವಿಧಾನಸಭಾ ನೂತನ ಕಟ್ಟಡವನ್ನು ಉದ್ಘಾಟಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ
November 01st, 01:00 pm
ಛತ್ತೀಸ್‌ಗಢದ ನವ ರಾಯ್‌ಪುರದಲ್ಲಿ ಇಂದು ಛತ್ತೀಸ್‌ಗಢ ವಿಧಾನಸಭೆಯ ಹೊಸ ಕಟ್ಟಡವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ, ಛತ್ತೀಸ್‌ಗಢದ ಅಭಿವೃದ್ಧಿ ಪ್ರಯಾಣಕ್ಕೆ ಇಂದಿನ ದಿನ ಸುವರ್ಣ ಆರಂಭ ಎಂದು ಹೇಳಿದರು. ವೈಯಕ್ತಿಕವಾಗಿ, ಇದು ತಮಗೆ ಬಹಳ ಸಂತೋಷದಾಯಕ ಮತ್ತು ಮಹತ್ವದ ದಿನ ಎಂದು ಅವರು ಹೇಳಿದರು. ಹಲವಾರು ದಶಕಗಳಿಂದ ಪೋಷಿಸಲ್ಪಟ್ಟ ಈ ಭೂಮಿಯೊಂದಿಗಿನ ತಮ್ಮ ಆಳವಾದ ಭಾವನಾತ್ಮಕ ಬಾಂಧವ್ಯವನ್ನು ಅವರು ಉಲ್ಲೇಖಿಸಿದರು. ಪಕ್ಷದ ಕಾರ್ಯಕರ್ತನಾಗಿ ತಾವಿಲ್ಲಿದ್ದ ಸಮಯವನ್ನು ನೆನಪಿಸಿಕೊಳ್ಳುತ್ತಾ, ಶ್ರೀ ಮೋದಿ ಅವರು ಛತ್ತೀಸ್‌ಗಢದಲ್ಲಿ ತಾವು ಸಾಕಷ್ಟು ಸಮಯವನ್ನು ಕಳೆದಿದ್ದನ್ನು ಮತ್ತು ಬಹಳಷ್ಟು ಕಲಿತುದನ್ನು ಹೇಳಿದರು. ಛತ್ತೀಸ್‌ಗಢದ ದೃಷ್ಟಿಕೋನ, ಅದರ ಸೃಷ್ಟಿಗಾಗಿನ ಸಂಕಲ್ಪ ಮತ್ತು ಆ ಸಂಕಲ್ಪದ ನೆರವೇರಿಕೆಯನ್ನು ಅವರು ನೆನಪಿಸಿಕೊಂಡರು, ಛತ್ತೀಸ್‌ಗಢದ ರೂಪಾಂತರದ ಪ್ರತಿ ಕ್ಷಣಕ್ಕೂ ತಾವು ಸಾಕ್ಷಿಯಾಗಿರುವುದನ್ನು ಅವರು ಉಲ್ಲೇಖಿಸಿದರು. ರಾಜ್ಯವು ತನ್ನ 25 ವರ್ಷಗಳ ಪ್ರಯಾಣದಲ್ಲಿ ಪ್ರಮುಖ ಮೈಲಿಗಲ್ಲನ್ನು ತಲುಪುತ್ತಿರುವಾಗ, ಈ ಕ್ಷಣದ ಭಾಗವಾಗಲು ಅವಕಾಶ ನೀಡಿದ್ದಕ್ಕಾಗಿ ಅವರು ಕೃತಜ್ಞತೆಯನ್ನು ವ್ಯಕ್ತಪಡಿಸಿದರು. ಬೆಳ್ಳಿ ಮಹೋತ್ಸವ ಆಚರಣೆಯ ಸಂದರ್ಭದಲ್ಲಿ, ರಾಜ್ಯದ ಜನತೆಗಾಗಿ ಹೊಸ ವಿಧಾನಸಭಾ ಕಟ್ಟಡವನ್ನು ಉದ್ಘಾಟಿಸುವ ಸೌಭಾಗ್ಯ ತಮಗೆ ಸಿಕ್ಕಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಈ ಸಂದರ್ಭದಲ್ಲಿ ಛತ್ತೀಸ್‌ಗಢದ ಜನರಿಗೆ ಮತ್ತು ರಾಜ್ಯ ಸರ್ಕಾರಕ್ಕೆ ಅವರು ತಮ್ಮ ಶುಭಾಶಯಗಳು ಮತ್ತು ಅಭಿನಂದನೆಗಳನ್ನು ವ್ಯಕ್ತಪಡಿಸಿದರು.ನವದೆಹಲಿಯಲ್ಲಿ ನಡೆದ 2025ರ ಅಂತರರಾಷ್ಟ್ರೀಯ ಆರ್ಯ ಮಹಾಸಮ್ಮೇಳನ 2025ವನ್ನು ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
October 31st, 06:08 pm
ನವದೆಹಲಿಯ ರೋಹಿಣಿಯಲ್ಲಿ ಇಂದು ಅಂತರರಾಷ್ಟ್ರೀಯ ಆರ್ಯ ಮಹಾಸಮ್ಮೇಳನ 2025ನ್ನುದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮಾತನಾಡಿದರು. ಈ ಸಂದರ್ಭದಲ್ಲಿ ಶ್ರೀ ಮೋದಿ, ಈಗಷ್ಟೇ ಕೇಳಿದ ಮಂತ್ರಗಳ ಶಕ್ತಿಯನ್ನು ಎಲ್ಲರೂ ಅನುಭವಿಸಬಹುದು ಎಂದು ಹೇಳಿದರು. ತಾವು ಸಭೆಗೆ ಬಂದಾಗಲೆಲ್ಲಾ ತಮಗೆ ಆಗಿರುವ ಅನುಭವವು ದೈವಿಕ ಮತ್ತು ಅಸಾಮಾನ್ಯವಾದುದು ಎಂದು ಅವರು ಒತ್ತಿ ಹೇಳಿದರು. ಈ ಭಾವನೆಗೆ ಸ್ವಾಮಿ ದಯಾನಂದ ಜೀ ಅವರ ಆಶೀರ್ವಾದ ಕಾರಣವೆಂದೂ ಅವರು ಹೇಳಿದರು. ಸ್ವಾಮಿ ದಯಾನಂದ ಜೀ ಅವರ ಆದರ್ಶಗಳ ಬಗ್ಗೆ ಪ್ರಧಾನಮಂತ್ರಿ ತಮ್ಮ ಆಳವಾದ ಗೌರವವನ್ನು ವ್ಯಕ್ತಪಡಿಸಿದರು. ಹಾಜರಿದ್ದ ಎಲ್ಲಾ ಚಿಂತಕರೊಂದಿಗಿನ ತಮ್ಮ ದಶಕಗಳಷ್ಟು ಹಳೆಯದಾದ ಬಾಂಧವ್ಯವನ್ನು ಅವರು ನೆನೆಪಿಸಿಕೊಂಡರು. ಅದು ತಮಗೆ ಪದೇ ಪದೇ ಅವರ ನಡುವೆ ಇರಲು ಅವಕಾಶವನ್ನು ನೀಡಿದೆ. ಅವರನ್ನು ಭೇಟಿಯಾದಾಗಲೆಲ್ಲಾ ಮತ್ತು ಅವರ ಜೊತೆ ಸಂವಹನ ನಡೆಸಿದಾಗಲೆಲ್ಲಾ ತಾವು ವಿಶಿಷ್ಟ ಶಕ್ತಿ ಮತ್ತು ಅನನ್ಯ ಸ್ಫೂರ್ತಿಯನ್ನು ಪಡೆಯುತ್ತಿರುವುದಾಗಿಯೂ ಅವರು ಹೇಳಿದರು.ಸ್ವಸ್ಥ ಹೆಣ್ಣು, ಸಶಕ್ತ ಕುಟುಂಬ ಅಭಿಯಾನವನ್ನು ಭಾರತದ ನಾರಿ ಶಕ್ತಿಗೆ ಪರಿಣಾಮಕಾರಿಯಾಗಿ ಮತ್ತು ಅನುಕೂಲಕರವಾಗಿ ತಲುಪಿಸಲು ಶ್ರಮಿಸಿದವರಿಗೆ ಪ್ರಧಾನಮಂತ್ರಿ ಶ್ಲಾಘನೆ
October 04th, 03:41 pm
ಭಾರತದ ನಾರಿ ಶಕ್ತಿಗೆ ಸ್ವಸ್ಥ ಸ್ತ್ರೀ, ಸಶಕ್ತ ಕುಟುಂಬ (ಸ್ವಾಸ್ಥ್ಯ ನಾರಿ, ಸಶಕ್ತ್ ಪರಿವಾರ್) ಅಭಿಯಾನವನ್ನು ಪರಿಣಾಮಕಾರಿ ಮತ್ತು ಅನುಕೂಲಕರವಾಗಿ ಮಾಡಲು ಅವಿರತವಾಗಿ ಶ್ರಮಿಸಿದ ಎಲ್ಲರ ಪ್ರಯತ್ನಗಳಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ನವದೆಹಲಿಯಲ್ಲಿ ನಡೆದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಮಾನೋತ್ಸವ ಸಮಾರಂಭ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ
October 01st, 10:45 am
ವೇದಿಕೆಯಲ್ಲಿ ಉಪಸ್ಥಿತರಿರುವ ಗೌರವಾನ್ವಿತ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಧಾನ ಕಾರ್ಯದರ್ಶಿ(ಸರ್ಕಾರ್ಯವ್ಹ) ಶ್ರೀ ದತ್ತಾತ್ರೇಯ ಹೊಸಬಾಳೆ ಜಿ, ಕೇಂದ್ರ ಸಚಿವರಾದ ಶ್ರೀ ಗಜೇಂದ್ರ ಶೇಖಾವತ್ ಜಿ, ದೆಹಲಿಯ ಜನಪ್ರಿಯ ಮುಖ್ಯಮಂತ್ರಿ ರೇಖಾ ಗುಪ್ತಾ ಜಿ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಎಲ್ಲಾ ಸ್ವಯಂಸೇವಕರೆ, ಇತರ ಗಣ್ಯರೆ, ಮಹನೀಯರೆ ಮತ್ತು ಮಹಿಳೆಯರೆ!ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಮಾನೋತ್ಸವ ಸಮಾರಂಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾತನಾಡಿದರು
October 01st, 10:30 am
ನವದೆಹಲಿಯ ಡಾ. ಅಂಬೇಡ್ಕರ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ನಡೆದ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ ಎಸ್ ಎಸ್) ಶತಮಾನೋತ್ಸವ ಸಮಾರಂಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಮೋದಿ ಅವರು, ಎಲ್ಲಾ ನಾಗರಿಕರಿಗೆ ನವರಾತ್ರಿ ಶುಭಾಶಯಗಳನ್ನು ತಿಳಿಸಿದರು, ಇಂದು ಮಹಾ ನವಮಿ ಮತ್ತು ಸಿದ್ಧಿದಾತ್ರಿ ದೇವಿಯ ದಿನವಾಗಿದೆ ಎಂದು ಹೇಳಿದರು. ನಾಳಿನ ವಿಜಯದಶಮಿಯು ಭವ್ಯ ಹಬ್ಬವಾಗಿದ್ದು, ಇದು ಭಾರತೀಯ ಸಂಸ್ಕೃತಿಯ ಅನ್ಯಾಯದ ವಿರುದ್ಧ ನ್ಯಾಯದ ವಿಜಯ, ಸುಳ್ಳಿನ ವಿರುದ್ದ ಸತ್ಯದ ವಿಜಯ ಮತ್ತು ಕತ್ತಲೆಯ ವಿರುದ್ಧ ಬೆಳಕಿನ ವಿಜಯವನ್ನು ಸಂಕೇತಿಸುತ್ತದೆ ಎಂದು ಅವರು ಹೇಳಿದರು. ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ನೂರು ವರ್ಷಗಳ ಹಿಂದೆ ಇಂತಹ ಪವಿತ್ರ ಸಂದರ್ಭದಲ್ಲಿ ಸ್ಥಾಪಿಸಲಾಗಿದ್ದು, ಇದು ಕಾಕತಾಳೀಯವಲ್ಲ ಎಂದು ಪ್ರಧಾನಮಂತ್ರಿಯವರು ಒತ್ತಿ ಹೇಳಿದರು. ಸಾವಿರಾರು ವರ್ಷಗಳ ಹಿಂದಿನ ಪ್ರಾಚೀನ ಪರಂಪರೆಯ ಪುನರುಜ್ಜೀವನ ಇದಾಗಿದ್ದು, ಇದರಲ್ಲಿ ರಾಷ್ಟ್ರೀಯ ಪ್ರಜ್ಞೆಯು ಪ್ರತಿ ಯುಗದ ಸವಾಲುಗಳನ್ನು ಎದುರಿಸಲು ಹೊಸ ರೂಪಗಳಲ್ಲಿ ಪ್ರಕಟವಾಗುತ್ತದೆ ಎಂದು ಅವರು ಹೇಳಿದರು. ಈ ಯುಗದಲ್ಲಿ, ಸಂಘವು ಆ ಶಾಶ್ವತ ರಾಷ್ಟ್ರೀಯ ಪ್ರಜ್ಞೆಯ ಸಾಕಾರವಾಗಿದೆ ಎಂದು ಅವರು ಹೇಳಿದರು.ಅರುಣಾಚಲ ಪ್ರದೇಶದ ಇಟಾನಗರದಲ್ಲಿ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ಸಮಾರಂಭ ಉದ್ದೇಶಿಸಿ ಪ್ರಧಾನ ಮಂತ್ರಿ ಭಾಷಣ
September 22nd, 11:36 am
ಅರುಣಾಚಲ ಪ್ರದೇಶದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಕೆ.ಟಿ. ಪರ್ನಾಯಕ್ ಜಿ, ರಾಜ್ಯದ ಜನಪ್ರಿಯ ಮತ್ತು ಕ್ರಿಯಾಶೀಲ ಮುಖ್ಯಮಂತ್ರಿ ಪೇಮಾ ಖಂಡು ಜಿ, ಕೇಂದ್ರ ಸಚಿವ ಸಂಪುಟದ ನನ್ನ ಸಹೋದ್ಯೋಗಿ ಕಿರಣ್ ರಿಜಿಜು, ರಾಜ್ಯ ಸರ್ಕಾರದ ಸಚಿವರು, ನನ್ನ ಸಹ ಸಂಸದರಾದ ನಬಮ್ ರೆಬಿಯಾ ಜಿ ಮತ್ತು ಟ್ಯಾಪಿರ್ ಗಾವೊ ಜಿ, ಎಲ್ಲಾ ಶಾಸಕರು, ಇತರ ಜನಪ್ರತಿನಿಧಿಗಳೆ ಮತ್ತು ಅರುಣಾಚಲ ಪ್ರದೇಶದ ನನ್ನ ಪ್ರೀತಿಯ ಸಹೋದರ ಸಹೋದರಿಯರೆ,ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಂದ ಅರುಣಾಚಲಪ್ರದೇಶದ ಇಟಾನಗರದಲ್ಲಿ ಸುಮಾರು 5,100 ಕೋಟಿ ರೂ. ಮೌಲ್ಯದ ಹಲವು ಅಭಿವೃದ್ಧಿ ಯೋಜನೆಗಳ ಉದ್ಘಾಟನೆ, ಶಂಕುಸ್ಥಾಪನೆ
September 22nd, 11:00 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅರುಣಾಚಲ ಪ್ರದೇಶದ ಇಟಾನಗರದಲ್ಲಿ ಸುಮಾರು 5,100 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿದರು ಮತ್ತು ಶಂಕುಸ್ಥಾಪನೆ ನೆರವೇರಿಸಿದರು. ಈ ಸಂದರ್ಭದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಸರ್ವಶಕ್ತ ಡೊನ್ಯಿ ಪೊಲೊಗೆ ಗೌರವ ಸಲ್ಲಿಸಿ, ಎಲ್ಲರಿಗೂ ಆಶೀರ್ವಾದ ಮಾಡಬೇಕೆಂದು ಪ್ರಾರ್ಥಿಸಿದರು.ರಾಷ್ಟ್ರವನ್ನು ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ
September 21st, 06:09 pm
ಶಕ್ತಿಯನ್ನು ಆರಾಧಿಸುವ ಹಬ್ಬವಾದ ನವರಾತ್ರಿ ಇಂದಿನಿಂದ ಪ್ರಾರಂಭವಾಗುತ್ತಿದೆ. ನಿಮ್ಮೆಲ್ಲರಿಗೂ ಶುಭಾಶಯಗಳು! ನವರಾತ್ರಿಯ ಮೊದಲ ದಿನದಿಂದ, ದೇಶವು ಸ್ವಾವಲಂಬಿ ಭಾರತ ಅಭಿಯಾನದತ್ತ ಮತ್ತೊಂದು ಪ್ರಮುಖ ಮತ್ತು ದಿಟ್ಟ ಹೆಜ್ಜೆ ಇಡುತ್ತಿದೆ. ಇಂದು, ಸೆಪ್ಟೆಂಬರ್ 22ರಂದು, ನವರಾತ್ರಿಯ ಮೊದಲ ದಿನ ಸೂರ್ಯೋದಯದೊಂದಿಗೆ, ಹೊಸ ಅಥವಾ ಮುಂದಿನ ಪೀಳಿಗೆಯ ಜಿಎಸ್‌ಟಿ ಸುಧಾರಣೆಗಳು ಜಾರಿಗೆ ಬರುತ್ತಿವೆ. ಒಂದು ರೀತಿಯಲ್ಲಿ, ಇಂದಿನಿಂದ ದೇಶದಲ್ಲಿ ಜಿಎಸ್‌ಟಿ ಉಳಿತಾಯ ಹಬ್ಬ ಆರಂಭವಾಗುತ್ತಿದೆ. ಈ ಜಿಎಸ್ಟಿ ಉಳಿತಾಯ ಹಬ್ಬವು ನಿಮ್ಮ ಉಳಿತಾಯವನ್ನು ಹೆಚ್ಚಿಸುತ್ತದೆ, ನೀವು ಬಯಸುವ ವಸ್ತುಗಳನ್ನು ಹೆಚ್ಚು ಸುಲಭವಾಗಿ ಖರೀದಿಸಲು ಸಾಧ್ಯವಾಗುತ್ತದೆ. ಬಡವರು, ಮಧ್ಯಮ ವರ್ಗದ ಜನರು, ನವ ಮಧ್ಯಮ ವರ್ಗ, ಯುವಕರು, ರೈತರು, ಮಹಿಳೆಯರು, ವರ್ತಕರು, ಉದ್ಯಮಶೀಲರು, ನಮ್ಮ ದೇಶದ ಉದ್ಯಮಿಗಳು, ಪ್ರತಿಯೊಬ್ಬರೂ ಈ ಉಳಿತಾಯ ಹಬ್ಬದಿಂದ ಸಾಕಷ್ಟು ಪ್ರಯೋಜನ ಪಡೆಯುತ್ತಾರೆ. ಇದರರ್ಥ ಈ ಹಬ್ಬದ ಸಮಯದಲ್ಲಿ ಎಲ್ಲರಿಗೂ ತಿನ್ನಲು ಸಿಹಿ ಇರುತ್ತದೆ, ದೇಶದ ಪ್ರತಿಯೊಂದು ಕುಟುಂಬವೂ ಆಶೀರ್ವದಿಸಲ್ಪಡುತ್ತದೆ. ಮುಂದಿನ ಪೀಳಿಗೆಯ ಜಿಎಸ್‌ಟಿ ಸುಧಾರಣೆಗಳು ಮತ್ತು ಈ ಉಳಿತಾಯ ಹಬ್ಬಕ್ಕಾಗಿ ದೇಶದ ಕೋಟ್ಯಂತರ ಕುಟುಂಬಗಳಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಶುಭಾಶಯಗಳನ್ನು ಸಲ್ಲಿಸುತ್ತೇನೆ. ಈ ಸುಧಾರಣೆಗಳು ಭಾರತದ ಬೆಳವಣಿಗೆಯ ಯಶೋಗಾಥೆಯನ್ನು ವೇಗಗೊಳಿಸುತ್ತವೆ, ವ್ಯವಹಾರ ಮಾಡುವುದನ್ನು ಸುಲಭಗೊಳಿಸುತ್ತವೆ, ಹೂಡಿಕೆಯನ್ನು ಹೆಚ್ಚು ಆಕರ್ಷಕವಾಗಿಸುತ್ತವೆ ಮತ್ತು ಅಭಿವೃದ್ಧಿಯ ಓಟದಲ್ಲಿ ಪ್ರತಿಯೊಂದು ರಾಜ್ಯವನ್ನು ಸಮಾನ ಪಾಲುದಾರರನ್ನಾಗಿ ಮಾಡುತ್ತವೆ.ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದರು
September 21st, 05:00 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದರು. ಶಕ್ತಿ ಆರಾಧನೆಯ ಹಬ್ಬವಾದ ನವರಾತ್ರಿಯ ಶುಭಾರಂಭದ ಸಂದರ್ಭದಲ್ಲಿ ಎಲ್ಲಾ ನಾಗರಿಕರಿಗೆ ಹೃತ್ಪೂರ್ವಕ ಶುಭಾಶಯಗಳನ್ನು ವ್ಯಕ್ತಪಡಿಸಿದ ಅವರು, ನವರಾತ್ರಿಯ ಮೊದಲ ದಿನದಿಂದಲೇ ರಾಷ್ಟ್ರವು ಆತ್ಮನಿರ್ಭರ ಭಾರತ ಅಭಿಯಾನದತ್ತ ಒಂದು ಪ್ರಮುಖ ಹೆಜ್ಜೆ ಇಡುತ್ತಿದೆ ಎಂದು ಹೇಳಿದರು. ಸೆಪ್ಟೆಂಬರ್ 22 ರ ಸೂರ್ಯೋದಯದಿಂದ ದೇಶವು ಮುಂದಿನ ಪೀಳಿಗೆಯ ಜಿ ಎಸ್ ಟಿ ಸುಧಾರಣೆಗಳನ್ನು ಜಾರಿಗೆ ತರಲಿದೆ. ಇದು ಭಾರತದಾದ್ಯಂತ ಜಿ ಎಸ್ ಟಿ ಉಳಿತಾಯ ಉತ್ಸವದ ಆರಂಭವನ್ನು ಸೂಚಿಸುತ್ತದೆ ಎಂದು ಪ್ರಧಾನಮಂತ್ರಿಯವರು ಹೇಳಿದರು. ಈ ಉತ್ಸವವು ಉಳಿತಾಯವನ್ನು ಹೆಚ್ಚಿಸುತ್ತದೆ ಮತ್ತು ಜನರು ತಮ್ಮ ನೆಚ್ಚಿನ ವಸ್ತುಗಳನ್ನು ಖರೀದಿಸುವುದನ್ನು ಸುಲಭಗೊಳಿಸುತ್ತದೆ ಎಂದು ಅವರು ಒತ್ತಿ ಹೇಳಿದರು. ಈ ಉಳಿತಾಯ ಉತ್ಸವವು ಬಡವರು, ಮಧ್ಯಮ ವರ್ಗ, ನವ-ಮಧ್ಯಮ ವರ್ಗ, ಯುವಜನರು, ರೈತರು, ಮಹಿಳೆಯರು, ಅಂಗಡಿಯವರು, ವ್ಯಾಪಾರಿಗಳು ಮತ್ತು ಉದ್ಯಮಿಗಳು ಸೇರಿದಂತೆ ಎಲ್ಲರಿಗೂ ಪ್ರಯೋಜನವನ್ನು ನೀಡುತ್ತದೆ ಎಂದು ಶ್ರೀ ಮೋದಿ ಹೇಳಿದರು. ಈ ಹಬ್ಬವು ಪ್ರತಿ ಮನೆಗೆ ಸಂತೋಷ ಮತ್ತು ಸಿಹಿಯನ್ನು ತರುತ್ತದೆ ಎಂದು ಅವರು ಹೇಳಿದರು. ದೇಶಾದ್ಯಂತ ಲಕ್ಷಾಂತರ ಕುಟುಂಬಗಳಿಗೆ ಮುಂದಿನ ಪೀಳಿಗೆಯ ಜಿ ಎಸ್ ಟಿ ಸುಧಾರಣೆಗಳು ಮತ್ತು ಜಿ ಎಸ್ ಟಿ ಉಳಿತಾಯ ಉತ್ಸವದ ಶುಭಾಶಯಗಳನ್ನು ಕೋರಿದರು. ಈ ಸುಧಾರಣೆಗಳು ಭಾರತದ ಬೆಳವಣಿಗೆಯ ಕಥೆಯನ್ನು ವೇಗಗೊಳಿಸುತ್ತವೆ, ವ್ಯಾಪಾರ ಕಾರ್ಯಾಚರಣೆಗಳನ್ನು ಸರಳಗೊಳಿಸುತ್ತವೆ, ಹೂಡಿಕೆಗಳನ್ನು ಹೆಚ್ಚು ಆಕರ್ಷಕವಾಗಿಸುತ್ತವೆ ಮತ್ತು ಅಭಿವೃದ್ಧಿಯ ಓಟದಲ್ಲಿ ಪ್ರತಿಯೊಂದು ರಾಜ್ಯವೂ ಸಮಾನ ಪಾಲುದಾರರಾಗುವುದನ್ನು ಖಚಿತಪಡಿಸುತ್ತವೆ ಎಂದು ಅವರು ಒತ್ತಿ ಹೇಳಿದರು.ಬಿಹಾರದ ಗಯಾಜಿಯಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನಾ ಸಮಾರಂಭ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ
August 22nd, 12:00 pm
ಬಿಹಾರದ ಗೌರವಾನ್ವಿತ ರಾಜ್ಯಪಾಲರಾದ ಆರಿಫ್ ಮೊಹಮ್ಮದ್ ಖಾನ್ ಜಿ, ಜನಪ್ರಿಯ ಮುಖ್ಯಮಂತ್ರಿ ನಿತೀಶ್ ಕುಮಾರ್ ಜಿ, ಕೇಂದ್ರ ಸಚಿವ ಸಂಪುಟದ ನನ್ನ ಸಹೋದ್ಯೋಗಿಗಳಾದ ಜಿತನ್ ರಾಮ್ ಮಾಂಝಿ ಜಿ, ರಾಜೀವ್ ರಂಜನ್ ಸಿಂಗ್, ಚಿರಾಗ್ ಪಾಸ್ವಾನ್ ಜಿ, ರಾಮ್ ನಾಥ್ ಠಾಕೂರ್ ಜಿ, ನಿತ್ಯಾನಂದ ರೈ ಜಿ, ಸತೀಶ್ ಚಂದ್ರ ದುಬೆ ಜಿ, ರಾಜ್ ಭೂಷಣ್ ಚೌಧರಿ ಜಿ, ಉಪಮುಖ್ಯಮಂತ್ರಿಗಳಾದ ಸಮ್ರಾಟ್ ಚೌಧರಿ ಜಿ ಮತ್ತು ವಿಜಯ್ ಕುಮಾರ್ ಸಿನ್ಹಾ ಜಿ, ಬಿಹಾರ ಸರ್ಕಾರದ ಸಚಿವರೆ, ನನ್ನ ಸಂಸದ ಮಿತ್ರರಾದ ಉಪೇಂದ್ರ ಕುಶ್ವಾಹ ಜಿ, ಇಲ್ಲಿರುವ ಇತರ ಸಂಸದರೆ ಮತ್ತು ಬಿಹಾರದ ನನ್ನ ಪ್ರೀತಿಯ ಸಹೋದರ ಸಹೋದರಿಯರೆ!ಬಿಹಾರದ ಗಯಾದಲ್ಲಿ 12,000 ಕೋಟಿ ರೂ. ಮೌಲ್ಯದ ಹಲವಾರು ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶಂಕುಸ್ಥಾಪನೆ, ಉದ್ಘಾಟನೆ ನೆರವೇರಿಸಿದರು
August 22nd, 11:20 am
ಬಿಹಾರದ ಗಯಾದಲ್ಲಿ ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 12,000 ಕೋಟಿ ರೂ. ಮೌಲ್ಯದ ಹಲವಾರು ಅಭಿವೃದ್ಧಿ ಯೋಜನೆಗಳಿಗೆ ಉದ್ಘಾಟನೆ ಮತ್ತು ಶಿಲಾನ್ಯಾಸ ನೆರವೇರಿಸಿದರು. ಜ್ಞಾನ ಮತ್ತು ಮೋಕ್ಷದ ಪವಿತ್ರ ನಗರವಾದ ಗಯಾಕ್ಕೆ ಪ್ರಧಾನಿಯವರು ನಮನ ಸಲ್ಲಿಸಿದರು ಮತ್ತು ವಿಷ್ಣುಪಾದ ಮಂದಿರದ ಅದ್ಭುತ ಭೂಮಿಯಿಂದ ಎಲ್ಲರಿಗೂ ಶುಭಾಶಯಗಳನ್ನು ತಿಳಿಸಿದರು. ಗಯಾ ಆಧ್ಯಾತ್ಮಿಕತೆ ಮತ್ತು ಶಾಂತಿಯ ಭೂಮಿ ಎಂದು ಶ್ರೀ ಮೋದಿ ಹೇಳಿದರು. ಭಗವಾನ್ ಬುದ್ಧ ಜ್ಞಾನೋದಯವನ್ನು ಪಡೆದದ್ದು ಈ ಪುಣ್ಯಭೂಮಿಯಲ್ಲಿ ಎಂದು ಅವರು ಹೇಳಿದರು. ಗಯಾ ಪ್ರಾಚೀನ ಮತ್ತು ಅತ್ಯಂತ ಶ್ರೀಮಂತ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಹೊಂದಿದೆ ಎಂದು ಶ್ರೀ ಮೋದಿ ಹೇಳಿದರು. ಈ ಪ್ರದೇಶದ ಜನರು ನಗರವನ್ನು ಗಯಾ ಎಂದು ಮಾತ್ರ ಕರೆಯಬಾರದು, ಬದಲಿಗೆ ಗೌರವಯುತವಾಗಿ ಗಯಾಜಿ ಎಂದು ಕರೆಯಬೇಕೆಂದು ಬಯಸುತ್ತಾರೆ ಎಂದು ಹೇಳಿದ ಪ್ರಧಾನಿ, ಈ ಭಾವನೆಯನ್ನು ಗೌರವಿಸಿದ್ದಕ್ಕಾಗಿ ಬಿಹಾರ ಸರ್ಕಾರವನ್ನು ಅಭಿನಂದಿಸಿದರು. ಗಯಾದ ತ್ವರಿತ ಅಭಿವೃದ್ಧಿಗಾಗಿ ಕೇಂದ್ರ ಮತ್ತು ಬಿಹಾರದಲ್ಲಿರುವ ತಮ್ಮ ಸರ್ಕಾರಗಳು ನಿರಂತರ ಪ್ರಯತ್ನಗಳನ್ನು ಮಾಡುತ್ತಿರುವುದಕ್ಕೆ ಅವರು ಸಂತೋಷ ವ್ಯಕ್ತಪಡಿಸಿದರು.ಯು.ಇ.ಆರ್-II ಮತ್ತು ದ್ವಾರಕಾ ಎಕ್ಸ್‌ಪ್ರೆಸ್‌ವೇಯ ದೆಹಲಿ ವಿಭಾಗದ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಮಂತ್ರಿ ಅವರ ಭಾಷಣದ ಇಂಗ್ಲೀಷ್ ಅನುವಾದ
August 17th, 12:45 pm
ಕೇಂದ್ರ ಸಚಿವ ಸಂಪುಟದಲ್ಲಿರುವ ನನ್ನ ಸಹೋದ್ಯೋಗಿಗಳಾದ ನಿತಿನ್ ಗಡ್ಕರಿ ಜೀ, ಹರಿಯಾಣ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಜೀ, ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿನಯ್ ಸಕ್ಸೇನಾ ಜೀ, ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಜೀ, ಕೇಂದ್ರ ಸಚಿವ ಸಂಪುಟದಲ್ಲಿರುವ ನನ್ನ ಸಹೋದ್ಯೋಗಿಗಳಾದ ಅಜಯ್ ತಮ್ತಾ ಜೀ, ಹರ್ಷ ಮಲ್ಹೋತ್ರಾ ಜೀ, ದೆಹಲಿ ಮತ್ತು ಹರಿಯಾಣದ ಸಂಸದರು, ಉಪಸ್ಥಿತರಿರುವ ಸಚಿವರು, ಇತರ ಜನಪ್ರತಿನಿಧಿಗಳು ಮತ್ತು ನನ್ನ ಪ್ರೀತಿಯ ಸಹೋದರ ಸಹೋದರಿಯರೇ,ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 11,000 ಕೋಟಿ ರೂಪಾಯಿ ಮೌಲ್ಯದ ಎರಡು ಪ್ರಮುಖ ರಾಷ್ಟ್ರೀಯ ಹೆದ್ದಾರಿ ಯೋಜನೆಗಳನ್ನು ಉದ್ಘಾಟಿಸಿದರು
August 17th, 12:39 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ದೆಹಲಿಯ ರೋಹಿಣಿಯಲ್ಲಿ ಸುಮಾರು 11,000 ಕೋಟಿ ರೂ.ಗಳ ಒಟ್ಟಾರೆ ವೆಚ್ಚದ ಎರಡು ಪ್ರಮುಖ ರಾಷ್ಟ್ರೀಯ ಹೆದ್ದಾರಿ ಯೋಜನೆಗಳನ್ನು ಉದ್ಘಾಟಿಸಿದರು. ಸಭಿಕರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಅವರು ಕಾರ್ಯಕ್ರಮ ನಡೆಯುತ್ತಿರುವ ಸ್ಥಳದ ಮಹತ್ವವನ್ನು ಒತ್ತಿ ಹೇಳಿದರು. ಉದ್ಘಾಟಿಸಲಾದ ʻಎಕ್ಸ್‌ಪ್ರೆಸ್ ಹೆದ್ದಾರಿʼಯ ಹೆಸರು ದ್ವಾರಕಾ ಆಗಿರುವುದು ಮತ್ತು ಕಾರ್ಯಕ್ರಮವನ್ನು ರೋಹಿಣಿಯಲ್ಲಿ ನಡೆಸಲಾಗುತ್ತಿರುವುದು ವಿಶೇಷ ಎಂದು ಹೇಳಿದರು. ಕೃಷ್ಣ ಜನ್ಮಾಷ್ಟಮಿಯ ಹಬ್ಬದ ಉತ್ಸಾಹವನ್ನು ಎತ್ತಿ ತೋರಿದ ಪ್ರಧಾನಮಂತ್ರಿ ಮೋದಿ ಸ್ವತಃ ತಾವು ಸಹ ದ್ವಾರಕಾಧೀಶನ ಭೂಮಿಯಿಂದ ಬಂದವರು ಎಂಬ ಕಾಕತಾಳೀಯತೆಯ ಬಗ್ಗೆ ಗಮನ ಸೆಳೆದರು. ಇಡೀ ವಾತಾವರಣವು ಭಗವಾನ್ ಕೃಷ್ಣನ ಸಾರದಿಂದ ಆಳವಾಗಿ ಆವರಿಸಿದೆ ಎಂದು ಪ್ರಧಾನಮಂತ್ರಿ ಗಮನಿಸಿದರು.ಉತ್ತರ ಪ್ರದೇಶದ ವಾರಾಣಸಿಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ಸಮಾರಂಭ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ
August 02nd, 11:30 am
ನಮಃ ಪಾರ್ವತಿ ಪತಯೇ, ಹರ್ ಹರ್ ಮಹಾದೇವ, ಪವಿತ್ರ ಶ್ರಾವಣ ಮಾಸದ ಇಂದು, ಕಾಶಿಯ ನನ್ನ ಕುಟುಂಬ ಸದಸ್ಯರನ್ನು ಭೇಟಿಯಾಗುವ ಅವಕಾಶ ನನಗೆ ಸಿಕ್ಕಿದೆ. ಕಾಶಿಯ ಪ್ರತಿಯೊಬ್ಬ ಕುಟುಂಬ ಸದಸ್ಯರಿಗೂ ನಾನು ನಮಸ್ಕರಿಸುತ್ತೇನೆ.ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಉತ್ತರ ಪ್ರದೇಶದ ವಾರಾಣಸಿಯಲ್ಲಿ ಸುಮಾರು 2,200 ಕೋಟಿ ರೂ. ಮೌಲ್ಯದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು
August 02nd, 11:00 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಉತ್ತರ ಪ್ರದೇಶದ ವಾರಾಣಸಿಯಲ್ಲಿ ಸುಮಾರು 2,200 ಕೋಟಿ ರೂ. ಮೌಲ್ಯದ ಅಭಿವೃದ್ಧಿ ಕಾಮಗಾರಿಗಳಿಗೆ ಉದ್ಘಾ್ಥಾಪನೆ ನೆರವೇರಿಸಿದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಶ್ರೀ ನರೇಂದ್ರ ಮೋದಿ, ಶ್ರಾವಣ ಮಾಸದ ಶುಭಸಂದರ್ಭದಲ್ಲಿ ವಾರಾಣಸಿಯ ಜನರನ್ನು ಭೇಟಿಯಾಗುತ್ತಿರುವ ಬಗ್ಗೆ ತಮ್ಮ ಹೃತ್ಪೂರ್ವಕ ಭಾವನೆಗಳನ್ನು ವ್ಯಕ್ತಪಡಿಸಿದರು. ವಾರಾಣಸಿಯ ಜನರೊಂದಿಗಿನ ತಮ್ಮ ಗಾಢವಾದ ಭಾವನಾತ್ಮಕ ಬಾಂಧವ್ಯವನ್ನು ಎತ್ತಿ ತೋರಿಸಿದ ಶ್ರೀ ಮೋದಿ, ನಗರದ ಪ್ರತಿಯೊಂದು ಕುಟುಂಬದ ಸದಸ್ಯರಿಗೂ ಗೌರವಯುತ ಶುಭಾಶಯಗಳನ್ನು ತಿಳಿಸಿದರು. ಶ್ರಾವಣ ಮಾಸದ ಶುಭ ಸಂದರ್ಭದಲ್ಲಿ ದೇಶಾದ್ಯಂತದ ರೈತರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂಪರ್ಕ ಸಾಧಿಸಿದ್ದಕ್ಕೆ ಶ್ರೀ ಮೋದಿ ತೃಪ್ತಿ ವ್ಯಕ್ತಪಡಿಸಿದರು.