ಡಾ. ಆಂಡ್ರ್ಯೂ ಹೋಲ್ನೆಸ್ ಅವರನ್ನು ಅಭಿನಂದಿಸಿದ ಪ್ರಧಾನಮಂತ್ರಿ

September 05th, 10:52 pm

ಜಮೈಕಾ ಪಕ್ಷವನ್ನು ಸತತ ಮೂರನೇ ಬಾರಿಗೆ ಗೆಲುವಿನತ್ತ ಮುನ್ನಡೆಸಿದ ಡಾ. ಆಂಡ್ರ್ಯೂ ಹೋಲ್ನೆಸ್ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ. ಭಾರತ-ಜಮೈಕಾ ಸ್ನೇಹ ಸಂಬಂಧಗಳನ್ನು ಇನ್ನಷ್ಟು ಬಲಪಡಿಸಿ ನಮ್ಮ ಎರಡೂ ದೇಶಗಳ ನಡುವಿನ ಸಹಕಾರವನ್ನು ಮತ್ತಷ್ಟು ಬಲಪಡಿಸಲು ಸದಾ ಸಿದ್ದರಾಗಿದ್ದೇವೆ ಎಂದು ಶ್ರೀ ಮೋದಿ ಅವರು ಹೇಳಿದರು.

ಜಮೈಕಾದ ಪ್ರಧಾನಮಂತ್ರಿ ಘನತೆವೆತ್ತ ಡಾ. ಆಂಡ್ರ್ಯೂ ಹೋಲ್ನೆಸ್ ಅವರ ಭಾರತ ಭೇಟಿ (ಸೆಪ್ಟೆಂಬರ್ 30 - ಅಕ್ಟೋಬರ್ 3, 2024)ಯ ಫಲಿತಾಂಶಗಳು

October 01st, 12:30 pm

ಹಣಕಾಸಿನ ಸೇರ್ಪಡೆ ಮತ್ತು ಸಾಮಾಜಿಕ ಮತ್ತು ಆರ್ಥಿಕ ಪರಿವರ್ತನೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿರುವ ಯಶಸ್ವಿ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಕ್ಷೇತ್ರದಲ್ಲಿ ಭಾರತ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಮತ್ತು ಜಮೈಕಾದ ಪ್ರಧಾನ ಮಂತ್ರಿಯವರ ಕಚೇರಿಯ ನಡುವವಿನ ಸಹಕಾರ ಒಪ್ಪಂದ

ಜಮೈಕಾದ ಪ್ರಧಾನಮಂತ್ರಿ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಪತ್ರಿಕಾ ಹೇಳಿಕೆ

October 01st, 12:00 pm

ಪ್ರಧಾನ ಮಂತ್ರಿ ಹೋಲ್ನೆಸ್ ಮತ್ತು ಅವರ ನಿಯೋಗವನ್ನು ಭಾರತಕ್ಕೆ ಸ್ವಾಗತಿಸಲು ನನಗೆ ಸಂತೋಷವಾಗಿದೆ. ಇದು ಪ್ರಧಾನಮಂತ್ರಿ ಹೋಲ್ನೆಸ್ ಅವರ ಮೊದಲ ದ್ವಿಪಕ್ಷೀಯ ಭಾರತ ಭೇಟಿಯಾಗಿದೆ. ಅದಕ್ಕಾಗಿಯೇ ನಾವು ಈ ಭೇಟಿಗೆ ವಿಶೇಷ ಪ್ರಾಮುಖ್ಯತೆ ನೀಡುತ್ತೇವೆ.ಪ್ರಧಾನ ಮಂತ್ರಿ ಹೋಲ್ನೆಸ್ ಅವರು ಬಹಳ ಹಿಂದಿನಿಂದಲೂ ಭಾರತದ ಸ್ನೇಹಿತರಾಗಿದ್ದಾರೆ. ಹಲವಾರು ಬಾರಿ ಅವರನ್ನು ಭೇಟಿಯಾಗುವ ಅವಕಾಶ ನನಗೆ ದೊರೆತಿದೆ. ಮತ್ತು ಪ್ರತಿ ಬಾರಿಯೂ, ಭಾರತದೊಂದಿಗಿನ ಸಂಬಂಧವನ್ನು ಬಲಪಡಿಸುವ ಅವರ ಆಲೋಚನೆಗಳಲ್ಲಿ ಅವರ ಬದ್ಧತೆಯನ್ನು ನಾನು ಅರಿತುಕೊಂಡಿದ್ದೇನೆ. ಅವರ ಭೇಟಿಯು ನಮ್ಮ ದ್ವಿಪಕ್ಷೀಯ ಸಂಬಂಧಗಳಿಗೆ ಉತ್ತೇಜನ ನೀಡುವುದರ ಜೊತೆಗೆ ಇಡೀ ಕೆರಿಬಿಯನ್ ಪ್ರದೇಶದೊಂದಿಗಿನ ನಮ್ಮ ಬಾಂಧವ್ಯವನ್ನು ವರ್ಧಿಸುತ್ತದೆ ಎಂದು ನನಗೆ ವಿಶ್ವಾಸವಿದೆ.

ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರನ್ನು ಅಭಿನಂದಿಸಿದ ಜಮೈಕಾ ಪ್ರಧಾನಿ

July 04th, 08:14 pm

ಜಮೈಕಾದ ಪ್ರಧಾನಮಂತ್ರಿ ಗೌರವಾನ್ವಿತ ಶ್ರೀ ಅಂಡ್ರ್ಯೂ ಮೈಕೆಲ್ ಹೊಲ್ನೆಸ್ ಅವರು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರೊಂದಿಗೆ ದೂರವಾಣಿ ಮೂಲಕ ಸಮಾಲೋಚಿಸಿ, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಐತಿಹಾಸಿಕ ಜಯ ಸಾಧಿಸಿದ್ದಕ್ಕಾಗಿ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರನ್ನು ಅಭಿನಂದಿಸಿದರು.