
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಮಾರಿಷಸ್ ಪ್ರಧಾನಮಂತ್ರಿ ಶ್ರೀ ನವೀನಚಂದ್ರ ರಾಮಗೂಲಮ್ ಅವರು ಮಾರಿಷಸ್ ನಲ್ಲಿ ಅಟಲ್ ಬಿಹಾರಿ ವಾಜಪೇಯಿ ಸಾರ್ವಜನಿಕ ಸೇವೆ ಮತ್ತು ನಾವೀನ್ಯತೆ ಸಂಸ್ಥೆಯನ್ನು ಜಂಟಿಯಾಗಿ ಉದ್ಘಾಟಿಸಿದರು
March 12th, 03:13 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಮಾರಿಷಸ್ ಪ್ರಧಾನಿ ಶ್ರೀ ನವೀನಚಂದ್ರ ರಾಮಗೂಲಮ್ ಅವರು ಇಂದು ಮಾರಿಷಸ್ ನ ರೆಡ್ಯೂಟ್ ನಲ್ಲಿ ಅಟಲ್ ಬಿಹಾರಿ ವಾಜಪೇಯಿ ಸಾರ್ವಜನಿಕ ಸೇವೆ ಮತ್ತು ನಾವೀನ್ಯತೆ ಸಂಸ್ಥೆಯನ್ನು ಜಂಟಿಯಾಗಿ ಉದ್ಘಾಟಿಸಿದರು. ಭಾರತ-ಮಾರಿಷಸ್ ಅಭಿವೃದ್ಧಿ ಸಹಭಾಗಿತ್ವದ ಅಡಿಯಲ್ಲಿ ಜಾರಿಗೆ ತರಲಾದ ಈ ಮಹತ್ವದ ಯೋಜನೆಯು ಸಾಮರ್ಥ್ಯ ವೃದ್ಧಿಗೆ ಭಾರತದ ಬದ್ಧತೆಯನ್ನು ಒತ್ತಿಹೇಳುತ್ತದೆ.