'ಮನ್ ಕಿ ಬಾತ್' ಜನರ ಸಾಮೂಹಿಕ ಪ್ರಯತ್ನಗಳನ್ನು ಸಾರ್ವಜನಿಕರಿಗೆ ತಿಳಿಸಲು ಅತ್ಯುತ್ತಮ ವೇದಿಕೆಯಾಗಿದೆ: ಪ್ರಧಾನಿ ಮೋದಿ

November 30th, 11:30 am

ಈ ತಿಂಗಳ ಮನ್ ಕಿ ಬಾತ್ ನಲ್ಲಿ, ಪ್ರಧಾನಿ ಮೋದಿ ಅವರು ಸಂವಿಧಾನ ದಿನಾಚರಣೆ, ವಂದೇ ಮಾತರಂನ 150 ನೇ ವಾರ್ಷಿಕೋತ್ಸವ, ಅಯೋಧ್ಯೆಯಲ್ಲಿ ಧರ್ಮ ಧ್ವಜಾರೋಹಣ, ಐಎನ್ಎಸ್ 'ಮಹೆ' ಸೇರ್ಪಡೆ ಮತ್ತು ಕುರುಕ್ಷೇತ್ರದಲ್ಲಿ ಅಂತರರಾಷ್ಟ್ರೀಯ ಗೀತಾ ಮಹೋತ್ಸವ ಸೇರಿದಂತೆ ನವೆಂಬರ್ ತಿಂಗಳ ಪ್ರಮುಖ ಘಟನೆಗಳನ್ನು ಹೈಲೈಟ್ ಮಾಡಿದರು. ದಾಖಲೆಯ ಆಹಾರ ಧಾನ್ಯ ಮತ್ತು ಜೇನುತುಪ್ಪ ಉತ್ಪಾದನೆ, ಭಾರತದ ಕ್ರೀಡಾ ಯಶಸ್ಸುಗಳು, ವಸ್ತು ಸಂಗ್ರಹಾಲಯಗಳು ಮತ್ತು ನೈಸರ್ಗಿಕ ಕೃಷಿಯಂತಹ ಹಲವಾರು ಪ್ರಮುಖ ವಿಷಯಗಳನ್ನು ಸಹ ಅವರು ಸ್ಪರ್ಶಿಸಿದರು. ಎಲ್ಲರೂ ಕಾಶಿ-ತಮಿಳು ಸಂಗಮದ ಭಾಗವಾಗಬೇಕೆಂದು ಪ್ರಧಾನಿ ಒತ್ತಾಯಿಸಿದರು.

ಸ್ಕೈರೂಟ್‌ನ ಇನ್ಫಿನಿಟಿ ಕ್ಯಾಂಪಸ್ ಉದ್ಘಾಟನಾ ಸಮಾರಂಭದಲ್ಲಿ ವಿಸಿ ಮೂಲಕ ಪ್ರಧಾನಮಂತ್ರಿ ಅವರು ಮಾಡಿದ ಭಾಷಣದ ಕನ್ನಡ ಅವತರಣಿಕೆ

November 27th, 11:01 am

ನನ್ನ ಸಚಿವ ಸಂಪುಟದ ಸಹೋದ್ಯೋಗಿಗಳಾದ ಶ್ರೀ ಜಿ. ಕಿಶನ್ ರೆಡ್ಡಿ ಜೀ; ಆಂಧ್ರಪ್ರದೇಶದ ಕೈಗಾರಿಕಾ ಸಚಿವರಾದ ಶ್ರೀ ಟಿ. ಜಿ. ಭರತ್ ಜೀ; ಇನ್ ಸ್ಪೇಸ್ ಅಧ್ಯಕ್ಷರಾದ ಶ್ರೀ ಪವನ್ ಗೋಯೆಂಕಾ ಜೀ; ಸ್ಕೈರೂಟ್ ತಂಡ; ಇತರ ಗಣ್ಯರು; ಮಹಿಳೆಯರೇ ಮತ್ತು ಮಹನೀಯರೇ!

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಹೈದರಾಬಾದ್‌ನ ಸ್ಕೈರೂಟ್‌ನ ಇನ್ಫಿನಿಟಿ ಕ್ಯಾಂಪಸ್ ಉದ್ಘಾಟನೆ

November 27th, 11:00 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ತೆಲಂಗಾಣದ ಹೈದರಾಬಾದ್‌ನಲ್ಲಿರುವ ಸ್ಕೈರೂಟ್‌ನ ಇನ್ಫಿನಿಟಿ ಕ್ಯಾಂಪಸ್ ಅನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ, ಇಂದು ದೇಶವು ಬಾಹ್ಯಾಕಾಶ ಕ್ಷೇತ್ರದಲ್ಲಿ ಅಭೂತಪೂರ್ವ ಅವಕಾಶವನ್ನು ಕಾಣುತ್ತಿದೆ ಎಂದು ಹೇಳಿದರು. ಮತ್ತು ಖಾಸಗಿ ವಲಯವು ಎತ್ತರಕ್ಕೆ ಹಾರಾಡುತ್ತಿರುವುದರಿಂದ ಭಾರತದ ಬಾಹ್ಯಾಕಾಶ ಪೂರಕ ವ್ಯವಸ್ಥೆಯು ಭಾರಿ ಏರಿಕೆಯನ್ನು ಕಂಡಿದೆ ಎಂದು ಪ್ರಮುಖವಾಗಿ ಪ್ರಸ್ತಾಪಿಸಿದರು. ಸ್ಕೈರೂಟ್‌ನ ಇನ್ಫಿನಿಟಿ ಕ್ಯಾಂಪಸ್ ಭಾರತದ ಹೊಸ ಚಿಂತನೆ, ನಾವೀನ್ಯತೆ ಮತ್ತು ಯುವ ಶಕ್ತಿಯನ್ನು ಪ್ರತಿಬಿಂಬಿಸುತ್ತದೆ ಮತ್ತು ದೇಶದ ಯುವಕರ ನಾವೀನ್ಯತೆ, ಅಪಾಯ ಎದುರಿಸುವ ಸಾಮರ್ಥ್ಯ ಮತ್ತು ಉದ್ಯಮಶೀಲತೆ ಹೊಸ ಎತ್ತರವನ್ನು ತಲುಪುತ್ತಿದೆ ಎಂದು ಅವರು ಒತ್ತಿ ಹೇಳಿದರು.

ಐಸಿಸಿ ಮಹಿಳಾ ವಿಶ್ವಕಪ್ ಚಾಂಪಿಯನ್‌ಗಳೊಂದಿಗೆ ಪ್ರಧಾನಮಂತ್ರಿ ಅವರ ಸಂವಾದ

November 06th, 10:15 am

ಗೌರವಾನ್ವಿತ ಪ್ರಧಾನಮಂತ್ರಿಗಳೇ, ತುಂಬು ಧನ್ಯವಾದಗಳು. ನಾವು ಇಲ್ಲಿರುವುದಕ್ಕೆ ನಮಗೆ ಅಪಾರ ಗೌರವ ಮತ್ತು ಸೌಭಾಗ್ಯ ತಂದಿದೆ ಎಂದು ನಾನು ಭಾವಿಸುತ್ತೇನೆ. ನಾನು ನಿಮಗೆ ಒಂದು ಅಭಿಯಾನದ ಬಗ್ಗೆ ಹೇಳಲು ಬಯಸುತ್ತೇನೆ. ಈ ಹೆಣ್ಣು ಮಕ್ಕಳು ಅದ್ಭುತಗಳನ್ನೇ ಮಾಡಿದ್ದಾರೆ, ನಿಜವಾಗಿಯೂ ಅದ್ಭುತ. ಕಳೆದ 2 ವರ್ಷಗಳಿಂದ, ಅವರು ತುಂಬಾ ಶ್ರಮ ಹಾಕಿದ್ದಾರೆ. ಅಪಾರ ಪ್ರಯತ್ನವನ್ನು ತೋರಿಸಿದ್ದಾರೆ. ಪ್ರತಿ ಅಭ್ಯಾಸ ಅವಧಿಯಲ್ಲೂ, ಅವರು ಪೂರ್ಣ ಗಮನ ಮತ್ತು ಶಕ್ತಿ ಹಾಕಿ ಆಡಿದರು. ಅವರ ಕಠಿಣ ಪರಿಶ್ರಮ ನಿಜವಾಗಿಯೂ ಫಲ ನೀಡಿದೆ ಎಂದು ನಾನು ಹೇಳುತ್ತೇನೆ.

ಐಸಿಸಿ ಮಹಿಳಾ ವಿಶ್ವಕಪ್ 2025 ಚಾಂಪಿಯನ್‌ಗಳೊಂದಿಗೆ ಪ್ರಧಾನಮಂತ್ರಿ ಸಂವಾದ

November 06th, 10:00 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವದೆಹಲಿಯ ಲೋಕ ಕಲ್ಯಾಣ ಮಾರ್ಗದ ನಂಬರ್‌ 7ರಲ್ಲಿ ಐಸಿಸಿ ಮಹಿಳಾ ವಿಶ್ವಕಪ್‌ 2025 ಚಾಂಪಿಯನ್ ಗಳೊಂದಿಗೆ ಸಂವಾದ ನಡೆಸಿದರು. 2025ರ ನವೆಂಬರ್ 2ರಂದು ರಾತ್ರಿ ನಡೆದ ಫೈನಲ್ಸ್‌ ನಲ್ಲಿ ಭಾರತ ತಂಡ ದಕ್ಷಿಣಾ ಆಫ್ರಿಕಾ ವಿರುದ್ಧ ಗೆಲುವು ಸಾಧಿಸಿತು. ದೇವ ದೀಪಾವಳಿ ಮತ್ತು ಗುರುಪುರಬ್ ಎರಡನ್ನೂ ಗುರುತಿಸುವ ಈ ದಿನವು ಬಹಳ ಮಹತ್ವದ ದಿನವಾಗಿದೆ ಎಂದು ಪ್ರಧಾನಮಂತ್ರಿಹೇಳಿದರು ಮತ್ತು ಹಾಜರಿದ್ದ ಎಲ್ಲಾ ಆಟಗಾರ್ತಿಯರಿಗೂ ಶುಭ ಕೋರಿದರು.

ಉದಯೋನ್ಮುಖ ವಿಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆ ಸಮಾವೇಶ-2025 ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ

November 03rd, 11:00 am

ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಡಾ. ಜಿತೇಂದ್ರ ಸಿಂಗ್ ಜಿ, ಪ್ರಧಾನ ವೈಜ್ಞಾನಿಕ ಸಲಹೆಗಾರ ಅಜಯ್ ಕುಮಾರ್ ಸೂದ್, ನೊಬೆಲ್ ಪ್ರಶಸ್ತಿ ವಿಜೇತ ಸರ್ ಆಂಡ್ರೆ ಗೀಮ್ ಅವರು ನಮ್ಮೊಂದಿಗೆ ಉಪಸ್ಥಿತರಿದ್ದಾರೆ, ಇಲ್ಲಿರುವ ಎಲ್ಲಾ ವಿಜ್ಞಾನಿಗಳೆ, ಅನುಶೋಧಕರೆ, ಶೈಕ್ಷಣಿಕ ಕ್ಷೇತ್ರದ ಗಣ್ಯರೆ, ಭಾರತ ಮತ್ತು ವಿದೇಶಗಳಿಂದ ಆಗಮಿಸಿರುವ ಗಣ್ಯರೆ, ಮಹಿಳೆಯರೆ ಮತ್ತು ಮಹನೀಯರೆ!

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 'ಉದಯೋನ್ಮುಖ ವಿಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆ ಸಮಾವೇಶ 2025' ಅನ್ನು ಉದ್ದೇಶಿಸಿ ಮಾತನಾಡಿದರು

November 03rd, 10:30 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯ ಭಾರತ್ ಮಂಟಪದಲ್ಲಿ ನಡೆದ 'ಉದಯೋನ್ಮುಖ ವಿಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆ ಸಮಾವೇಶ (ESTIC) 2025' ಅನ್ನು ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿಯವರು, ಭಾರತ ಮತ್ತು ವಿದೇಶಗಳ ವಿಜ್ಞಾನಿಗಳು, ನಾವೀನ್ಯಕಾರರು (innovators), ಶಿಕ್ಷಣ ತಜ್ಞರು ಮತ್ತು ಇತರ ಗಣ್ಯ ಅತಿಥಿಗಳನ್ನು ಸ್ವಾಗತಿಸಿದರು. ಐಸಿಸಿ ಮಹಿಳಾ ವಿಶ್ವಕಪ್ 2025 ರಲ್ಲಿ ಭಾರತ ಗಳಿಸಿದ ಗಮನಾರ್ಹ ವಿಜಯದ ಬಗ್ಗೆ ಮಾತನಾಡಿದ ಶ್ರೀ ಮೋದಿಯವರು, ಭಾರತೀಯ ಕ್ರಿಕೆಟ್ ತಂಡದ ಯಶಸ್ಸಿನಿಂದ ಇಡೀ ರಾಷ್ಟ್ರವೇ ಹರ್ಷಗೊಂಡಿದೆ ಎಂದು ಪ್ರಸ್ತಾಪಿಸಿದರು. ಇದು ಭಾರತದ ಮೊದಲ ಮಹಿಳಾ ವಿಶ್ವಕಪ್ ಗೆಲುವು ಎಂಬುದನ್ನು ಒತ್ತಿ ಹೇಳಿದ ಅವರು, ಮಹಿಳಾ ಕ್ರಿಕೆಟ್ ತಂಡಕ್ಕೆ ತಮ್ಮ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದರು. ರಾಷ್ಟ್ರವು ಅವರ ಬಗ್ಗೆ ಹೆಮ್ಮೆಪಡುತ್ತದೆ ಎಂದು ಹೇಳಿದ ಪ್ರಧಾನಿಯವರು, ಅವರ ಈ ಸಾಧನೆಯು ದೇಶಾದ್ಯಂತ ಲಕ್ಷಾಂತರ ಯುವಜನರಿಗೆ ಸ್ಫೂರ್ತಿ ನೀಡುತ್ತದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

ಇಸ್ರೋದಿಂದ ಭಾರತದ ಅತ್ಯಂತ ಭಾರವಾದ ಸಂವಹನ ಉಪಗ್ರಹ CMS-03ರ ಯಶಸ್ವಿ ಉಡಾವಣೆಗೆ ಪ್ರಧಾನಮಂತ್ರಿ ಅಭಿನಂದನೆ

November 02nd, 07:22 pm

ಭಾರತದ ಅತ್ಯಂತ ಭಾರವಾದ ಸಂವಹನ ಉಪಗ್ರಹ CMS-03ರ ಯಶಸ್ವಿ ಉಡಾವಣೆಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಗೆ ಅಭಿನಂದನೆ ಸಲ್ಲಿಸಿದ್ದಾರೆ.

ಅಕ್ಟೋಬರ್ 4ರಂದು 62,000 ಕೋಟಿ ರೂ.ಗೂ ಹೆಚ್ಚು ಮೌಲ್ಯದ ವಿವಿಧ ಯುವ ಕೇಂದ್ರಿತ ಉಪಕ್ರಮಗಳನ್ನು ಅನಾವರಣಗೊಳಿಸಲಿರುವ ಪ್ರಧಾನಮಂತ್ರಿ

October 03rd, 03:54 pm

ಯುವ ಅಭಿವೃದ್ಧಿಗಾಗಿ ಐತಿಹಾಸಿಕ ಉಪಕ್ರಮವೊಂದರಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವದೆಹಲಿಯ ವಿಜ್ಞಾನ ಭವನದಲ್ಲಿ ಬೆಳಗ್ಗೆ 11 ಗಂಟೆಗೆ 62,000 ಕೋಟಿ ರೂ.ಗೂ ಹೆಚ್ಚು ಮೌಲ್ಯದ ವಿವಿಧ ಯುವ ಕೇಂದ್ರಿತ ಉಪಕ್ರಮಗಳನ್ನು ಅನಾವರಣಗೊಳಿಸಲಿದ್ದಾರೆ. ಇದು ದೇಶಾದ್ಯಂತ ಶಿಕ್ಷಣ, ಕೌಶಲ್ಯ ಮತ್ತು ಉದ್ಯಮಶೀಲತೆಗೆ ನಿರ್ಣಾಯಕ ಉತ್ತೇಜನ ನೀಡುತ್ತದೆ. ಈ ಕಾರ್ಯಕ್ರಮವು ಪ್ರಧಾನಮಂತ್ರಿ ಅವರ ದೂರದೃಷ್ಟಿಗೆ ಅನುಗುಣವಾಗಿ ಆಯೋಜಿಸಲಾದ ರಾಷ್ಟ್ರೀಯ ಕೌಶಲ್ಯ ಘಟಿಕೋತ್ಸವದ ನಾಲ್ಕನೇ ಆವೃತ್ತಿಯಾದ ಕೌಶಲ್ ದೀಕ್ಷಾಂತ್ ಸಮಾರೋಹ್ ಅನ್ನು ಸಹ ಒಳಗೊಂಡಿರುತ್ತದೆ. ಅಲ್ಲಿ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯದ ಅಡಿಯಲ್ಲಿ ಬರುವ ಕೈಗಾರಿಕಾ ತರಬೇತಿ ಸಂಸ್ಥೆಗಳ 46 ಅಖಿಲ ಭಾರತ ಟಾಪರ್ ಗಳನ್ನು ಸನ್ಮಾನಿಸಲಾಗುವುದು.

ಜಪಾನ್ ಪ್ರಧಾನಮಂತ್ರಿ ಅವರೊಂದಿಗಿನ ಜಂಟಿ ಪತ್ರಿಕಾ ಹೇಳಿಕೆಯ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರ ಪತ್ರಿಕಾ ಹೇಳಿಕೆ

August 29th, 03:59 pm

ಇಂದಿನ ನಮ್ಮ ಚರ್ಚೆಯು ಫಲಪ್ರದ ಮತ್ತು ನಿರ್ದಿಷ್ಟ ಉದ್ದೇಶಗಳನ್ನು ಒಳಗೊಂಡಿತ್ತು. ಎರಡು ಪ್ರಮುಖ ಆರ್ಥಿಕತೆಗಳು ಮತ್ತು ಚೈತನ್ಯಶೀಲ ಪ್ರಜಾಪ್ರಭುತ್ವಗಳಾಗಿ, ನಮ್ಮ ಪಾಲುದಾರಿಕೆಯು ನಮ್ಮ ಎರಡೂ ದೇಶಗಳಿಗೆ ಮಾತ್ರವಲ್ಲದೆ ಜಾಗತಿಕ ಶಾಂತಿ ಮತ್ತು ಸ್ಥಿರತೆಗೂ ಬಹಳ ಮುಖ್ಯವಾಗಿದೆ ಎಂಬುದನ್ನು ನಾವಿಬ್ಬರೂ ಒಪ್ಪುತ್ತೇವೆ.

ಐತಿಹಾಸಿಕ ಬಾಹ್ಯಾಕಾಶ ಯಾನದಿಂದ ಭೂಮಿಗೆ ಮರಳಿರುವ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರಿಗೆ ಪ್ರಧಾನಮಂತ್ರಿ ಸ್ವಾಗತ

July 15th, 03:36 pm

ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ಐ ಎಸ್ ಎಸ್) ದಲ್ಲಿನ ತಮ್ಮ ಐತಿಹಾಸಿಕ ಕಾರ್ಯಾಚರಣೆಯ ಬಳಿಕ ಭೂಮಿಗೆ ಮರಳಿರುವ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ಸ್ವಾಗತ ಕೋರಿದ್ದಾರೆ. ಐ ಎಸ್ ಎಸ್ ಗೆ ಪಯಣಿಸಿದ ಭಾರತದ ಮೊದಲ ಗಗನಯಾತ್ರಿಯಾಗಿ, ಗ್ರೂಪ್ ಕ್ಯಾಪ್ಟನ್ ಶುಕ್ಲಾ ಅವರ ಸಾಧನೆಯು ದೇಶದ ಬಾಹ್ಯಾಕಾಶ ಅನ್ವೇಷಣಾ ಪಯಣದಲ್ಲಿ ನಿರ್ಣಾಯಕ ಕ್ಷಣವಾಗಿದೆ ಎಂದು ಅವರು ಬಣ್ಣಿಸಿದ್ದಾರೆ.

ಜಾಗತಿಕ ಬಾಹ್ಯಾಕಾಶ ಪರಿಶೋಧನೆ ಸಮ್ಮೇಳನ ಉದ್ದೇಶಿಸಿ ಪ್ರಧಾನಮಂತ್ರಿ ವೀಡಿಯೊ ಕಾನ್ಫರೆನ್ಸ್ ಭಾಷಣ

May 07th, 12:00 pm

ಗೌರವಾನ್ವಿತ ಪ್ರತಿನಿಧಿಗಳೆ, ಗೌರವಾನ್ವಿತ ವಿಜ್ಞಾನಿಗಳೆ, ಅನುಶೋಧಕರೆ, ಗಗನಯಾತ್ರಿಗಳೆ ಮತ್ತು ವಿಶ್ವದೆಲ್ಲೆಡೆಯಿಂದ ಆಗಮಿಸಿರುವ ಸ್ನೇಹಿತರೆ,

ಬಾಹ್ಯಾಕಾಶ ಅನ್ವೇಷಣೆ ಕುರಿತ ಜಾಗತಿಕ ಸಮ್ಮೇಳನ (ಜಿಎಲ್ಇಎಕ್ಸ್) 2025 ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಭಾಷಣ

May 07th, 11:30 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಬಾಹ್ಯಾಕಾಶ ಅನ್ವೇಷಣೆ ಕುರಿತ ಜಾಗತಿಕ ಸಮ್ಮೇಳನ (ಜಿಎಲ್ಇಎಕ್ಸ್) 2025ನ್ನು ಉದ್ದೇಶಿಸಿ ಭಾಷಣ ಮಾಡಿದರು. ವಿಶ್ವದಾದ್ಯಂತದ ಗೌರವಾನ್ವಿತ ಪ್ರತಿನಿಧಿಗಳು, ವಿಜ್ಞಾನಿಗಳು ಮತ್ತು ಗಗನಯಾತ್ರಿಗಳನ್ನು ಸ್ವಾಗತಿಸಿದ ಅವರು, ಜಿಎಲ್ಇಎಕ್ಸ್ 2025ರಲ್ಲಿ ಭಾರತದ ಗಮನಾರ್ಹ ಬಾಹ್ಯಾಕಾಶ ಪ್ರಯಾಣವನ್ನು ಪ್ರಸ್ತಾಪಿಸಿದ ಅವರು ಬಾಹ್ಯಾಕಾಶವು ಕೇವಲ ಒಂದು ಗಮ್ಯಸ್ಥಾನವಲ್ಲ ಜೊತೆಗೆ ಅದು ಕುತೂಹಲ, ಧೈರ್ಯ ಮತ್ತು ಸಾಮೂಹಿಕ ಪ್ರಗತಿಯ ಘೋಷಣೆಯಾಗಿದೆ ಎಂದು ಹೇಳಿದರು. 1963ರಲ್ಲಿ ಸಣ್ಣ ರಾಕೆಟ್ ಉಡಾವಣೆಯಿಂದ ಹಿಡಿದು ಚಂದ್ರನ ದಕ್ಷಿಣ ಧ್ರುವದ ಬಳಿ ಇಳಿದ ಮೊದಲ ರಾಷ್ಟ್ರವಾಗುವವರೆಗೆ ಭಾರತದ ಬಾಹ್ಯಾಕಾಶ ಸಾಧನೆಗಳು ಈ ಸ್ಫೂರ್ತಿಯನ್ನು ಪ್ರತಿಬಿಂಬಿಸುತ್ತವೆ ಎಂದು ಅವರು ಒತ್ತಿ ಹೇಳಿದರು. ಭಾರತೀಯ ರಾಕೆಟ್ ಗಳು ಪೇಲೋಡ್ ಗಳಿಗಿಂತ (ಸಾಮರ್ಥ್ಯಕ್ಕಿಂತ) ಹೆಚ್ಚಿನದನ್ನು ಸಾಗಿಸುತ್ತವೆ - ಅವು 1.4 ಬಿಲಿಯನ್ ಭಾರತೀಯರ ಕನಸುಗಳನ್ನು ಹೊತ್ತೊಯ್ಯುತ್ತವೆ ಎಂದು ಅವರು ಹೇಳಿದರು, ಭಾರತದ ಬಾಹ್ಯಾಕಾಶ ಪ್ರಗತಿಗಳು ಗಮನಾರ್ಹ ವೈಜ್ಞಾನಿಕ ಮೈಲಿಗಲ್ಲುಗಳಾಗಿವೆ ಮತ್ತು ಮಾನವ ಚೈತನ್ಯವು ಗುರುತ್ವಾಕರ್ಷಣೆಯನ್ನು ಮೀರಬಲ್ಲದು ಎಂಬುದಕ್ಕೆ ಪುರಾವೆಯಾಗಿದೆ ಎಂದು ಹೇಳಿದರು. 2014 ರಲ್ಲಿ ಮೊದಲ ಪ್ರಯತ್ನದಲ್ಲೇ ಮಂಗಳ ಗ್ರಹವನ್ನು ತಲುಪಿದ ಭಾರತದ ಐತಿಹಾಸಿಕ ಸಾಧನೆಯನ್ನು ಅವರು ಸ್ಮರಿಸಿದರು. ಚಂದ್ರಯಾನ -1 ಚಂದ್ರನ ಮೇಲ್ಮೈಯಲ್ಲಿ ನೀರನ್ನು ಕಂಡುಹಿಡಿಯಲು ಸಹಾಯ ಮಾಡಿತು, ಚಂದ್ರಯಾನ -2 ಚಂದ್ರನ ಮೇಲ್ಮೈಯ ಅತಿ ಹೆಚ್ಚು ರೆಸಲ್ಯೂಶನ್ (ಸ್ಪಷ್ಟ) ಚಿತ್ರಗಳನ್ನು ಒದಗಿಸಿತು ಮತ್ತು ಚಂದ್ರಯಾನ -3 ಚಂದ್ರನ ದಕ್ಷಿಣ ಧ್ರುವದ ತಿಳುವಳಿಕೆಯನ್ನು ಹೆಚ್ಚಿಸಿತು ಎಂದು ಅವರು ಒತ್ತಿ ಹೇಳಿದರು. ಭಾರತವು ದಾಖಲೆಯ ಸಮಯದಲ್ಲಿ ಕ್ರಯೋಜೆನಿಕ್ ಎಂಜಿನ್ ಗಳನ್ನು ಅಭಿವೃದ್ಧಿಪಡಿಸಿದೆ, ಒಂದೇ ಕಾರ್ಯಾಚರಣೆಯಲ್ಲಿ 100 ಉಪಗ್ರಹಗಳನ್ನು ಉಡಾವಣೆ ಮಾಡಿದೆ ಮತ್ತು ಭಾರತೀಯ ಉಡಾವಣಾ ವಾಹನಗಳನ್ನು ಬಳಸಿಕೊಂಡು 34 ದೇಶಗಳಿಗೆ 400 ಕ್ಕೂ ಹೆಚ್ಚು ಉಪಗ್ರಹಗಳನ್ನು ಯಶಸ್ವಿಯಾಗಿ ನಿಯೋಜಿಸಿದೆ ಎಂಬುದರತ್ತ ಅವರು ಗಮನಸೆಳೆದರು. ಭಾರತದ ಇತ್ತೀಚಿನ ಸಾಧನೆಗಳತ್ತ ಬೆಟ್ಟು ಮಾಡಿದ ಅವರು ಈ ವರ್ಷ ಎರಡು ಉಪಗ್ರಹಗಳನ್ನು ಬಾಹ್ಯಾಕಾಶದಲ್ಲಿ ಸ್ಥಾಪಿಸಿರುವುದು ಬಾಹ್ಯಾಕಾಶ ಅನ್ವೇಷನೆಯತ್ತ ಪ್ರಮುಖ ಹೆಜ್ಜೆಯಾಗಿದೆ ಎಂದರು.

ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ

April 27th, 11:30 am

ನನ್ನ ಪ್ರಿಯ ದೇಶವಾಸಿಗಳೇ, ನಮಸ್ಕಾರ. ಇಂದು ನಿಮ್ಮೊಂದಿಗೆ ನಾನು 'ಮನದ ಮಾತು' ಆಡುತ್ತಿರುವಾಗ, ನನ್ನ ಹೃದಯ ನೋವಿನಿಂದ ಭಾರವಾಗಿದೆ. ಪಹಲ್ಗಾಮ್‌ನಲ್ಲಿ ಏಪ್ರಿಲ್ 22 ರಂದು ನಡೆದ ಭಯೋತ್ಪಾದಕ ಘಟನೆ ದೇಶದ ಪ್ರತಿಯೊಬ್ಬ ನಾಗರಿಕನನ್ನು ದುಃಖದ ಮಡುವಿನಲ್ಲಿ ಮುಳುಗಿಸಿದೆ. ಸಂತ್ರಸ್ತ ಕುಟುಂಬಗಳ ಬಗ್ಗೆ ಪ್ರತಿ ಭಾರತೀಯನಲ್ಲೂ ಅಪಾರ ಸಹಾನುಭೂತಿಯಿದೆ. ರಾಜ್ಯ, ಭಾಷೆಯನ್ನು ಮೀರಿ ಎಲ್ಲ ಜನರು ಈ ದಾಳಿಯಲ್ಲಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರ ನೋವನ್ನು ಸ್ವತಃ ಅನುಭವಿಸುತ್ತಿದ್ದಾರೆ. ಭಯೋತ್ಪಾದಕ ದಾಳಿಯ ಚಿತ್ರಗಳನ್ನು ನೋಡಿದ ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ ಎಂದು ನನಗೆ ಅನಿಸುತ್ತದೆ. ಪಹಲ್ಗಾಮ್‌ನಲ್ಲಿ ನಡೆದ ಈ ದಾಳಿಯು ಭಯೋತ್ಪಾದನೆಗೆ ಉತ್ತೇಜನ ನೀಡುವವರ ಹತಾಶೆಯನ್ನು ತೋರಿಸುತ್ತದೆ ಮತ್ತು ಅವರ ಹೇಡಿತನವನ್ನು ಪ್ರದರ್ಶಿಸುತ್ತದೆ. ಶಾಲಾ ಕಾಲೇಜುಗಳಲ್ಲಿ ಹುರುಪು ತುಂಬಿರುವಂತಹ ಕಾಲದಲ್ಲಿ, ನಿರ್ಮಾಣ ಕಾರ್ಯಗಳು ಅಭೂತಪೂರ್ವ ವೇಗವನ್ನು ಪಡೆದುಕೊಂಡಿರುವಾಗ, ಕಾಶ್ಮೀರದಲ್ಲಿ ಶಾಂತಿ ಮರುಕಳಿಸುತ್ತಿರುವ ಇಂತಹ ಸಮಯದಲ್ಲಿ, ಪ್ರಜಾಪ್ರಭುತ್ವ ಬಲಿಷ್ಠಗೊಳ್ಳುತ್ತಿರುವಾಗ, ಪ್ರವಾಸಿಗರ ಸಂಖ್ಯೆಯಲ್ಲಿ ದಾಖಲೆಯ ಏರಿಕೆ ಕಂಡುಬರುತ್ತಿರುವಾಗ, ಜನರ ಆದಾಯ ಹೆಚ್ಚುತ್ತಿರುವಾಗ, ಯುವಕರಿಗೆ ಹೊಸ ಅವಕಾಶಗಳು ಸೃಷ್ಟಿಯಾಗುತ್ತಿದ್ದಾಗ, ದೇಶದ ಶತ್ರುಗಳು, ಜಮ್ಮು ಮತ್ತು ಕಾಶ್ಮೀರದ ವೈರಿಗಳಿಗೆ ಇದನ್ನು ಸಹಿಸಲಾಗಲಿಲ್ಲ. ಭಯೋತ್ಪಾದಕರು ಮತ್ತಷ್ಟು ಭಯೋತ್ಪಾದನೆ ಹೆಚ್ಚಿಸಲು ಬಯಸುತ್ತಿದ್ದಾರೆ. ಕಾಶ್ಮೀರವನ್ನು ಮತ್ತೆ ನಾಶಮಾಡಲು ಹುನ್ನಾರದಿಂದ ಇಷ್ಟು ದೊಡ್ಡ ಘಟನೆ ನಡೆಯುವಂತೆ ಪಿತೂರಿ ನಡೆಸಿದರು. ದೇಶದ ಏಕತೆ, 140 ಕೋಟಿ ಭಾರತೀಯರ ಒಗ್ಗಟ್ಟು, ಭಯೋತ್ಪಾದನೆಯ ವಿರುದ್ಧದ ಈ ಯುದ್ಧದಲ್ಲಿ ನಮ್ಮ ದೊಡ್ಡ ಶಕ್ತಿಯಾಗಿದೆ. ಈ ಒಗ್ಗಟ್ಟೆ ಭಯೋತ್ಪಾದನೆಯ ವಿರುದ್ಧದ ನಮ್ಮ ಹೋರಾಟದಲ್ಲಿ ನಿರ್ಣಾಯಕ ಪಾತ್ರವಾಹಿಸಲಿದೆ. ದೇಶ ಎದುರಿಸುತ್ತಿರುವ ಈ ಸವಾಲನ್ನು ಎದುರಿಸಲು ನಾವು ನಮ್ಮ ಸಂಕಲ್ಪವನ್ನು ಬಲಪಡಿಸಿಕೊಳ್ಳಬೇಕು. ಒಂದು ರಾಷ್ಟ್ರ ರೂಪದಲ್ಲಿ ಬಲವಾದ ಇಚ್ಛಾಶಕ್ತಿಯನ್ನು ಪ್ರದರ್ಶಿಸಬೇಕು. ಈ ಭಯೋತ್ಪಾದಕ ದಾಳಿಯ ನಂತರ ಸಂಪೂರ್ಣ ದೇಶ ಒಕ್ಕೊರಲಿನಿಂದ ಧ್ವನಿಯೆತ್ತಿರುವುದನ್ನು ಇಂದು ಜಗತ್ತೇ ನೋಡುತ್ತಿದೆ.

ಡಾ. ಕೆ. ಕಸ್ತೂರಿರಂಗನ್ ಅವರ ನಿಧನಕ್ಕೆ ಪ್ರಧಾನಮಂತ್ರಿ ಸಂತಾಪ

April 25th, 02:34 pm

ಭಾರತದ ವೈಜ್ಞಾನಿಕ ಮತ್ತು ಶೈಕ್ಷಣಿಕ ವಲಯದ ಅಗ್ರಮಾನ್ಯರಾದ ಡಾ. ಕೆ.ಕಸ್ತೂರಿರಂಗನ್ ಅವರ ನಿಧನಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಸಂತಾಪ ಸೂಚಿಸಿದ್ದಾರೆ. ಡಾ. ಕೆ. ಕಸ್ತೂರಿರಂಗನ್ ಅವರು ಇಸ್ರೋಗೆ ಅತ್ಯಂತ ಶ್ರದ್ಧೆಯಿಂದ ಸೇವೆ ಸಲ್ಲಿಸಿದ್ದರು, ಭಾರತದ ಬಾಹ್ಯಾಕಾಶ ಕಾರ್ಯಕ್ರಮವನ್ನು ಹೊಸ ಎತ್ತರಕ್ಕೆ ಮುನ್ನಡೆಸಿದ್ದರು ಎಂದು ಶ್ರೀ ಮೋದಿ ಅವರು ಹೇಳಿದ್ದಾರೆ. ರಾಷ್ಟ್ರೀಯ ಶಿಕ್ಷಣ ನೀತಿಯ (NEP) ಕರಡು ರಚನೆಯ ಪ್ರಕ್ರಿಯೆಯಲ್ಲಿ ಹಾಗೂ ಭಾರತದಲ್ಲಿ ಕಲಿಕೆಯನ್ನು ಹೆಚ್ಚು ಸಮಗ್ರವಾಗಿಸಲು ಮತ್ತು ಮುನ್ನಡೆಸಲು ಡಾ. ಕಸ್ತೂರಿರಂಗನ್ ಅವರ ಪ್ರಯತ್ನಗಳಿಗಾಗಿ ಭಾರತ ಅವರಿಗೆ ಸದಾ ಚಿರ ಋಣಿಯಾಗಿರಲಿದೆ. ಅವರು ಅನೇಕ ಯುವ ವಿಜ್ಞಾನಿಗಳು ಮತ್ತು ಸಂಶೋಧಕರಿಗೆ ಅತ್ಯುತ್ತಮ ಮಾರ್ಗದರ್ಶಕರಾಗಿದ್ದರು ಎಂದು ಶ್ರೀ ಮೋದಿ ಅವರು ಬಣ್ಣಿಸಿದ್ದಾರೆ.

ರಿಪಬ್ಲಿಕ್ ಸರ್ವಸದಸ್ಯರ ಸಮಾವೇಶ-2025 ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ

March 06th, 08:05 pm

ನೀವೆಲ್ಲರೂ ದಣಿದಿರಬೇಕು, ಅರ್ನಬ್ ಅವರ ಗಟ್ಟಿಯಾದ ಧ್ವನಿಯಿಂದ ನಿಮ್ಮ ಕಿವಿಗಳು ದಣಿದಿರಬೇಕು, ಅರ್ನಬ್ ಕುಳಿತುಕೊಳ್ಳಿ, ಇದು ಚುನಾವಣಾ ಸಮಯವಲ್ಲ. ಮೊದಲನೆಯದಾಗಿ, ಈ ನವೀನ ಪ್ರಯೋಗಕ್ಕಾಗಿ ನಾನು ರಿಪಬ್ಲಿಕ್ ಟಿವಿಯನ್ನು ಅಭಿನಂದಿಸುತ್ತೇನೆ. ನೀವು ಯುವಕರನ್ನು ತಳಮಟ್ಟದಲ್ಲಿ ತೊಡಗಿಸಿಕೊಳ್ಳುವ ಮೂಲಕ, ಇಷ್ಟು ದೊಡ್ಡ ಸ್ಪರ್ಧೆ ಆಯೋಜಿಸಿ ಇಲ್ಲಿಗೆ ಕರೆತಂದಿದ್ದೀರಿ. ದೇಶದ ಯುವಕರು ರಾಷ್ಟ್ರೀಯ ಚರ್ಚೆಯಲ್ಲಿ ತೊಡಗಿಸಿಕೊಂಡಾಗ, ಆಲೋಚನೆಗಳಲ್ಲಿ ಹೊಸತನ ಇರುತ್ತದೆ, ಅದು ಇಡೀ ಪರಿಸರವನ್ನು ಹೊಸ ಶಕ್ತಿಯಿಂದ ತುಂಬುತ್ತದೆ, ಈ ಸಮಯದಲ್ಲಿ ನಾವು ಈ ಹೊಸ ಶಕ್ತಿಯನ್ನು ಅನುಭವಿಸುತ್ತಿದ್ದೇವೆ. ಒಂದು ರೀತಿಯಲ್ಲಿ, ಯುವಕರ ಒಳಗೊಳ್ಳುವಿಕೆಯಿಂದ, ನಾವು ಪ್ರತಿಯೊಂದು ಬಂಧವನ್ನು ಮುರಿಯಲು, ಮಿತಿಗಳನ್ನು ಮೀರಿ ಹೋಗಲು ಸಾಧ್ಯವಾಗುತ್ತದೆ, ಆದರೆ ಸಾಧಿಸಲಾಗದ ಗುರಿ ಇಲ್ಲ. ತಲುಪಲಾಗದ ಯಾವುದೇ ಗಮ್ಯಸ್ಥಾನವಿಲ್ಲ. ಈ ಸಮಾವೇಶ(ಶೃಂಗಸಭೆ)ಕ್ಕಾಗಿ ರಿಪಬ್ಲಿಕ್ ಟಿವಿ ಹೊಸ ಪರಿಕಲ್ಪನೆಯ ಮೇಲೆ ಕೆಲಸ ಮಾಡಿದೆ. ಈ ಶೃಂಗಸಭೆಯ ಯಶಸ್ಸಿಗೆ ನಾನು ನಿಮ್ಮೆಲ್ಲರನ್ನು ಅಭಿನಂದಿಸುತ್ತೇನೆ, ನಾನು ನಿಮ್ಮನ್ನು ಸ್ವಾಗತಿಸುತ್ತೇನೆ. ಸರಿ, ಇದರಲ್ಲಿ ನನ್ನದೂ ಸ್ವಲ್ಪ ಸ್ವಾರ್ಥವಿದೆ, ಒಂದು, ಕಳೆದ ಕೆಲವು ದಿನಗಳಿಂದ ನಾನು 1 ಲಕ್ಷ ಯುವಕರನ್ನು ರಾಜಕೀಯಕ್ಕೆ ತರಬೇಕು, 1 ಲಕ್ಷ ಜನರು ತಮ್ಮ ಕುಟುಂಬಗಳಲ್ಲಿ ಮೊದಲ ಬಾರಿಗೆ ರಾಜಕೀಯಕ್ಕೆ ಬರುವವರು ಎಂದು ಯೋಚಿಸುತ್ತಿದ್ದೇನೆ, ಆದ್ದರಿಂದ ಒಂದು ರೀತಿಯಲ್ಲಿ, ಇಂತಹ ಘಟನೆಗಳು ನನ್ನ ಈ ಗುರಿಗೆ ವೇದಿಕೆಯನ್ನು ಸಿದ್ಧಪಡಿಸುತ್ತಿವೆ. ಎರಡನೆಯದಾಗಿ, ನನ್ನ ವೈಯಕ್ತಿಕ ಲಾಭವಿದೆ, ವೈಯಕ್ತಿಕ ಲಾಭವೆಂದರೆ 2029ರಲ್ಲಿ ಮತ ಚಲಾಯಿಸಲು ಹೋಗುವವರಿಗೆ 2014ಕ್ಕಿಂತ ಮೊದಲು ಪತ್ರಿಕೆಗಳ ಮುಖ್ಯಾಂಶಗಳು ಏನೆಂದು ತಿಳಿದಿರುವುದಿಲ್ಲ, ಅವರಿಗೆ ತಿಳಿದಿಲ್ಲ, 10-10, 12-12 ಲಕ್ಷ ಕೋಟಿ ಹಗರಣಗಳು ಇದ್ದವು, ಅದು ಅವರಿಗೆ ತಿಳಿದಿಲ್ಲ. ಆದರೆ ಅವರು 2029ರಲ್ಲಿ ಮತ ಚಲಾಯಿಸಲು ಹೋಗುವಾಗ, ಹೋಲಿಕೆ ಮಾಡಲು ಅವರ ಮುಂದೆ ಏನೂ ಇರುವುದಿಲ್ಲ. ಆದ್ದರಿಂದ, ನಾನು ಆ ಪರೀಕ್ಷೆಯಲ್ಲಿ ಉತ್ತೀರ್ಣನಾಗಬೇಕು ಮತ್ತು ಈ ವೇದಿಕೆಯು ಆ ಕೆಲಸವನ್ನು ಬಲಪಡಿಸುತ್ತದೆ ಎಂದು ನನಗೆ ಪೂರ್ಣ ನಂಬಿಕೆಯಿದೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರಿಪಬ್ಲಿಕ್ ಸಮಗ್ರ ಶೃಂಗಸಭೆ 2025 ಉದ್ದೇಶಿಸಿ ಭಾಷಣ ಮಾಡಿದರು

March 06th, 08:00 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯ ಭಾರತ್ ಮಂಡಪಂನಲ್ಲಿ ನಡೆದ ರಿಪಬ್ಲಿಕ್ ಪ್ಲೀನರಿ ಶೃಂಗಸಭೆ 2025ರಲ್ಲಿ ಭಾಗವಹಿಸಿದ್ದರು. ಸಭಿಕರನ್ನುದ್ದೇಶಿಸಿ ಮಾತನಾಡಿದ ಅವರು, ತಳಮಟ್ಟದಲ್ಲಿ ಯುವಕರನ್ನು ತೊಡಗಿಸಿಕೊಳ್ಳುವ ಮತ್ತು ಮಹತ್ವದ ಹ್ಯಾಕಥಾನ್ ಸ್ಪರ್ಧೆಯನ್ನು ಆಯೋಜಿಸುವ ನವೀನ ವಿಧಾನಕ್ಕಾಗಿ ರಿಪಬ್ಲಿಕ್ ಟಿವಿಯನ್ನು ಅಭಿನಂದಿಸಿದರು. ರಾಷ್ಟ್ರದ ಯುವಕರು ರಾಷ್ಟ್ರೀಯ ಸಂವಾದದಲ್ಲಿ ತೊಡಗಿಸಿಕೊಂಡಾಗ, ಅದು ಆಲೋಚನೆಗಳಿಗೆ ಹೊಸತನವನ್ನು ತರುತ್ತದೆ ಮತ್ತು ಅವರ ಶಕ್ತಿಯಿಂದ ಇಡೀ ಪರಿಸರವನ್ನು ತುಂಬುತ್ತದೆ ಎಂದು ಅವರು ಹೇಳಿದರು. ಈ ಶಕ್ತಿಯನ್ನು ಶೃಂಗಸಭೆಯಲ್ಲಿ ಅನುಭವಿಸಲಾಗುತ್ತಿದೆ ಎಂದು ಅವರು ಒತ್ತಿ ಹೇಳಿದರು. ಯುವಕರ ಪಾಲ್ಗೊಳ್ಳುವಿಕೆಯು ಎಲ್ಲಾ ಅಡೆತಡೆಗಳನ್ನು ಮುರಿಯಲು ಮತ್ತು ಗಡಿಗಳನ್ನು ಮೀರಿ ಹೋಗಲು ಸಹಾಯ ಮಾಡುತ್ತದೆ, ಪ್ರತಿ ಗುರಿಯನ್ನು ಸಾಧಿಸಬಹುದು ಮತ್ತು ಪ್ರತಿ ಗಮ್ಯಸ್ಥಾನವನ್ನು ತಲುಪಬಹುದು ಎಂದು ಅವರು ಹೇಳಿದರು. ಈ ಶೃಂಗಸಭೆಗಾಗಿ ಹೊಸ ಪರಿಕಲ್ಪನೆಯ ಮೇಲೆ ಕೆಲಸ ಮಾಡಿದ್ದಕ್ಕಾಗಿ ರಿಪಬ್ಲಿಕ್ ಟಿವಿಯನ್ನು ಅವರು ಶ್ಲಾಘಿಸಿದರು ಮತ್ತು ಅದರ ಯಶಸ್ಸಿಗೆ ಶುಭ ಹಾರೈಸಿದರು. ಯಾವುದೇ ರಾಜಕೀಯ ಹಿನ್ನೆಲೆಯಿಲ್ಲದ ಒಂದು ಲಕ್ಷ ಯುವಕರನ್ನು ಭಾರತದ ರಾಜಕೀಯಕ್ಕೆ ಕರೆತರುವ ತಮ್ಮ ಕಲ್ಪನೆಯನ್ನು ಶ್ರೀ ಮೋದಿ ಪುನರುಚ್ಚರಿಸಿದರು.

'ಮನ್ ಕಿ ಬಾತ್' (119ನೇ ಸಂಚಿಕೆ) ಪ್ರಸಾರ ದಿನಾಂಕ: 23.02.2025

February 23rd, 11:30 am

എന്റെ പ്രിയപ്പെട്ട നാട്ടുകാരേ, നമസ്‌കാരം. നിങ്ങളെയെല്ലാം 'മൻ കി ബാത്തിലേക്ക്' സ്വാഗതം ചെയ്യുന്നു. ചാമ്പ്യൻസ് ട്രോഫി ഇപ്പോൾ നടന്നുകൊണ്ടിരിക്കുകയാണ്. എല്ലാം ക്രിക്കറ്റ് മയമാണ്. ക്രിക്കറ്റിൽ ഒരു സെഞ്ചുറിയുടെ ആവേശം എന്താണെന്ന് നമുക്കെല്ലാവർക്കും നന്നായി അറിയാം, പക്ഷേ ഇന്ന് ഞാൻ നിങ്ങളോട് ക്രിക്കറ്റിനെക്കുറിച്ചല്ല, മറിച്ച് ഭാരതം ബഹിരാകാശത്ത് നേടിയ അത്ഭുതകരമായ സെഞ്ചുറിയെക്കുറിച്ചാണ് സംസാരിക്കുന്നത്. കഴിഞ്ഞ മാസം, ഐഎസ്ആർഒയുടെ നൂറാമത്തെ റോക്കറ്റിന്റെ വിക്ഷേപണത്തിന് രാജ്യം സാക്ഷ്യം വഹിച്ചു. ഇത് വെറുമൊരു അക്കമല്ല, ബഹിരാകാശ ശാസ്ത്രത്തിൽ പുതിയ ഉയരങ്ങൾ കീഴടക്കാനുള്ള നമ്മുടെ ദൃഢനിശ്ചയത്തിന്റെ പ്രതിഫലനമാണ്. നമ്മുടെ ബഹിരാകാശ യാത്ര വളരെ സാധാരണമായ രീതിയിലാണ് ആരംഭിച്ചത്. ഓരോ ഘട്ടത്തിലും വെല്ലുവിളികൾ ഉണ്ടായിരുന്നു, പക്ഷേ നമ്മുടെ ശാസ്ത്രജ്ഞർ വിജയികളായി മുന്നേറിക്കൊണ്ടിരുന്നു. കാലക്രമേണ, ബഹിരാകാശ മേഖലയിലെ നമ്മുടെ വിജയങ്ങളുടെ പട്ടിക വളരെ നീണ്ടതായി. വിക്ഷേപണ വാഹന നിർമ്മാണമായാലും, ചന്ദ്രയാൻ, മംഗൾയാൻ, ആദിത്യ എൽ-1 എന്നിവയുടെ വിജയമായാലും, ഒറ്റ റോക്കറ്റ് ഉപയോഗിച്ച് 104 ഉപഗ്രഹങ്ങളെ ഒറ്റയടിക്ക് ബഹിരാകാശത്തേക്ക് അയയ്ക്കുക എന്ന അഭൂതപൂർവമായ ദൗത്യമായാലും - ഇസ്രോയുടെ വിജയങ്ങളുടെ വ്യാപ്തി വളരെ വലുതാണ്. കഴിഞ്ഞ 10 വർഷത്തിനുള്ളിൽ മാത്രം ഏകദേശം 460 ഉപഗ്രഹങ്ങൾ വിക്ഷേപിച്ചു, ഇതിൽ മറ്റ് രാജ്യങ്ങളുടെ നിരവധി ഉപഗ്രഹങ്ങളും ഉൾപ്പെടുന്നു. സമീപ വർഷങ്ങളിലെ ഒരു പ്രധാന കാര്യം നമ്മുടെ ബഹിരാകാശ ശാസ്ത്രജ്ഞരുടെ സംഘത്തിൽ സ്ത്രീശക്തിയുടെ പങ്കാളിത്തം തുടർച്ചയായി വർദ്ധിച്ചുകൊണ്ടിരിക്കുകയാണ് എന്നതാണ്. ഇന്ന് നമ്മുടെ യുവാക്കൾക്ക് ബഹിരാകാശ മേഖല പ്രിയപ്പെട്ടതായി മാറിയതിൽ എനിക്ക് വളരെ സന്തോഷമുണ്ട്. ഈ മേഖലയിലെ സ്റ്റാർട്ടപ്പുകളുടെയും സ്വകാര്യ മേഖലയിലെ ബഹിരാകാശ കമ്പനികളുടെയും എണ്ണം നൂറുകണക്കിന് എത്തുമെന്ന് കുറച്ച് വർഷങ്ങൾക്ക് മുമ്പുവരെ ആരാണ് കരുതിയിരുന്നത്! ജീവിതത്തിൽ ഉൾപുളകം ഉണ്ടാക്കുന്നതും ആവേശകരവുമായ എന്തെങ്കിലും ചെയ്യാൻ ആഗ്രഹിക്കുന്ന നമ്മുടെ യുവാക്കൾക്ക്, ബഹിരാകാശ മേഖല ഒരു മികച്ച ഓപ്ഷനായി മാറുകയാണ്.

ಭಾರತ - ಅಮೆರಿಕ ಜಂಟಿ ಪತ್ರಿಕಾಗೋಷ್ಠಿಯ ವೇಳೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಪತ್ರಿಕಾ ಹೇಳಿಕೆ

February 14th, 04:57 am

ನಮಸ್ಕಾರ! ಮೊದಲಿಗೆ, ನನ್ನ ಆತ್ಮೀಯ ಸ್ನೇಹಿತ, ಅಧ್ಯಕ್ಷ ಟ್ರಂಪ್ ಅವರು ನೀಡಿದ ಆತ್ಮೀಯ ಸ್ವಾಗತ ಮತ್ತು ಆತಿಥ್ಯಕ್ಕಾಗಿ ನಾನು ಹೃದಯಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸಲು ಬಯಸುತ್ತೇನೆ. ತಮ್ಮ ನಾಯಕತ್ವದ ಮೂಲಕ, ಅಧ್ಯಕ್ಷ ಟ್ರಂಪ್ ಅವರು ಭಾರತ-ಯುಎಸ್ ಸಂಬಂಧವನ್ನು ಪೋಷಿಸಿದ್ದಾರೆ ಮತ್ತು ಪುನರುಜ್ಜೀವನಗೊಳಿಸಿದ್ದಾರೆ.

ಭಾರತದ ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಫ್ರಾನ್ಸ್ ಭೇಟಿಯ ಕುರಿತು ಭಾರತ – ಫ್ರಾನ್ಸ್ ಜಂಟಿ ಹೇಳಿಕೆ

February 12th, 03:22 pm

ಫ್ರೆಂಚ್ ಗಣರಾಜ್ಯದ ಅಧ್ಯಕ್ಷರಾದ ಗೌರವಾನ್ವಿತ ಶ್ರೀ ಎಮ್ಯಾನುಯೆಲ್ ಮ್ಯಾಕ್ರೋನ್ ಅವರ ಆಹ್ವಾನದ ಮೇರೆಗೆ ಭಾರತದ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2025 ರ ಫೆಬ್ರವರಿ 10 ರಿಂದ 12 ರವರೆಗೆ ಫ್ರಾನ್ಸ್ ಗೆ ಭೇಟಿ ನೀಡಿದರು. ಬ್ಲೆಚ್ಲಿ ಪಾರ್ಕ್ (ನವೆಂಬರ್ 2023) ಮತ್ತು ಸಿಯೋಲ್ (ಮೇ 2024) ಶೃಂಗಸಭೆಗಳಲ್ಲಿ ಸಾಧಿಸಲಾದ ಪ್ರಮುಖ ಮೈಲಿಗಲ್ಲುಗಳನ್ನು ಆಧರಿಸಿ ಮುಂದಿನ ಹಂತದ ಕಾರ್ಯಕ್ರಮದ ಅಂಗವಾಗಿ, 2025ರ ಫೆಬ್ರವರಿ 10 ಮತ್ತು 11 ರಂದು, ಫ್ರಾನ್ಸ್ ಮತ್ತು ಭಾರತವು ಕೃತಕ ಬುದ್ಧಿಮತ್ತೆ ಕ್ರಿಯಾ ಶೃಂಗಸಭೆಯ ಸಹ-ಅಧ್ಯಕ್ಷತೆ ವಹಿಸಿತು, ಅಂತರರಾಷ್ಟ್ರೀಯ ಸಂಸ್ಥೆಗಳ ಮುಖಂಡರು, ಸಣ್ಣ ಮತ್ತು ದೊಡ್ಡ ಉದ್ಯಮಗಳು, ಶೈಕ್ಷಣಿಕ ಪ್ರತಿನಿಧಿಗಳು, ಸರ್ಕಾರೇತರ ಸಂಸ್ಥೆಗಳು, ಕಲಾವಿದರು ಮತ್ತು ನಾಗರಿಕ ಸಮಾಜದ ಸದಸ್ಯರನ್ನು ಇದರಲ್ಲಿ ಒಟ್ಟುಗೂಡಿಸಲಾಗಿತ್ತು. ಜಾಗತಿಕ ಎಐ (ಕೃತಕ ಬುದ್ಧಿಮತ್ತೆ) ವಲಯವು ಸಾರ್ವಜನಿಕ ಹಿತದೃಷ್ಟಿಯಿಂದ ಪ್ರಯೋಜನಕಾರಿಯಾಗುವುದನ್ನು ಖಾತ್ರಿಪಡಿಸಲು, ಸಾಮಾಜಿಕ, ಆರ್ಥಿಕ ಮತ್ತು ಪರಿಸರ ಫಲಿತಾಂಶಗಳನ್ನು ನೀಡಬಲ್ಲದು ಎಂದು ಖಚಿತಪಡಿಸಿಕೊಳ್ಳಲು ದೃಢವಾದ ಕ್ರಮಗಳನ್ನು ತೆಗೆದುಕೊಳ್ಳುವ ಬದ್ಧತೆಯನ್ನು ಅವರು ಒತ್ತಿಹೇಳಿದರು. ಎಐ ಕ್ರಿಯಾ ಶೃಂಗಸಭೆಯನ್ನು ಯಶಸ್ವಿಯಾಗಿ ಆಯೋಜಿಸಿದ್ದಕ್ಕಾಗಿ ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್ ಅವರನ್ನು ಪ್ರಧಾನಿ ಮೋದಿ ಅಭಿನಂದಿಸಿದರು. ಮುಂದಿನ ಎಐ ಶೃಂಗಸಭೆಯ ಆತಿಥ್ಯವನ್ನು ಭಾರತ ಆಯೋಜಿಸಲಿರುವುದನ್ನು ಫ್ರಾನ್ಸ್ ಸ್ವಾಗತಿಸಿದೆ.