ಪ್ರಧಾನಮಂತ್ರಿ ಮೋದಿ ಅವರಿಂದ ಇಸ್ರೇಲ್ ಅಧ್ಯಕ್ಷರ ಭೇಟಿ

February 26th, 09:00 pm

ಪ್ರಧಾನಮಂತ್ರಿಗಳು 2017 ರಲ್ಲಿನ ತಮ್ಮ ಇಸ್ರೇಲ್ ಭೇಟಿಯ ಸಮಯದಲ್ಲಿ ಮತ್ತು 2023ರಲ್ಲಿ ದುಬೈನಲ್ಲಿ ಅಧ್ಯಕ್ಷ ಹರ್ಜೋಗ್ ಅವರೊಂದಿಗಿನ ತಮ್ಮ ಹಿಂದಿನ ಭೇಟಿಯನ್ನು ಆತ್ಮೀಯವಾಗಿ ನೆನಪು ಮಾಡಿಕೊಂಡರು. ಭಾರತ-ಇಸ್ರೇಲ್ ಬಾಂಧವ್ಯವನ್ನು ಶಾಂತಿ, ನಾವೀನ್ಯತೆ ಮತ್ತು ಸಮೃದ್ಧಿಗಾಗಿ ವಿಶೇಷ ಕಾರ್ಯತಂತ್ರದ ಪಾಲುದಾರಿಕೆ ಯ ಮಟ್ಟಕ್ಕೆ ಹೆಚ್ಚಿಸಿರುವುದು ದ್ವಿಪಕ್ಷೀಯ ಸಂಬಂಧಗಳಲ್ಲಿ ಹೊಸ ಆರಂಭವನ್ನು ಸೂಚಿಸುತ್ತದೆ ಮತ್ತು ಇದು ಎರಡೂ ದೇಶಗಳ ನಡುವಿನ ಆಳವಾದ ನಂಬಿಕೆ, ಹಂಚಿತ ಪ್ರಜಾಪ್ರಭುತ್ವ ಮೌಲ್ಯಗಳು ಮತ್ತು ವಿಶೇಷ ಮೈತ್ರಿಯನ್ನು ಪ್ರತಿಬಿಂಬಿಸುತ್ತದೆ ಎಂದು ಇಬ್ಬರೂ ನಾಯಕರು ಹೇಳಿದ್ದಾರೆ. ಭಯೋತ್ಪಾದನೆ ನಿಗ್ರಹ ಸೇರಿದಂತೆ ವ್ಯಾಪಾರ ಮತ್ತು ತಂತ್ರಜ್ಞಾನ, ನಾವೀನ್ಯತೆ ಮತ್ತು ಉದ್ಯಮ, ರಕ್ಷಣೆ ಮತ್ತು ಭದ್ರತೆ ವಲಯಗಳಲ್ಲಿನ ಪ್ರಸ್ತುತದ ಸಹಕಾರದ ಬಗ್ಗೆ ಇಬ್ಬರೂ ನಾಯಕರು ತೃಪ್ತಿ ವ್ಯಕ್ತಪಡಿಸಿದರು.

ಇಸ್ರೇಲ್ ಭೇಟಿಗೆ ಮುನ್ನ ಪ್ರಧಾನಮಂತ್ರಿ ಅವರ ನಿರ್ಗಮನ ಹೇಳಿಕೆ

February 25th, 08:28 am

ನನ್ನ ಆತ್ಮೀಯ ಸ್ನೇಹಿತ ಪ್ರಧಾನಮಂತ್ರಿ ಬೆಂಜಮಿನ್ ನೆತನ್ಯಾಹು ಅವರ ಆಹ್ವಾನದ ಮೇರೆಗೆ ನಾನು 2026ರ ಫೆಬ್ರವರಿ 25ರಿಂದ 26ರವರೆಗೆ ಇಸ್ರೇಲ್‌ಗೆ ಅಧಿಕೃತ ಭೇಟಿ ನೀಡಲಿದ್ದೇನೆ.

ಪ್ರಧಾನಮಂತ್ರಿ ಇದೇ 25-26ರಂದು ಇಸ್ರೇಲ್‌ಗೆ ಭೇಟಿ

February 24th, 05:34 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಸ್ರೇಲ್ ಪ್ರಧಾನಮಂತ್ರಿ ಗೌರವಾನ್ವಿತ ಶ್ರೀ ಬೆಂಜಮಿನ್ ನೆತನ್ಯಾಹು ಅವರ ಆಹ್ವಾನದ ಮೇರೆಗೆ 2026ರ ಫೆಬ್ರವರಿ 25-26ರಂದು ಇಸ್ರೇಲ್‌ಗೆ ಅಧಿಕೃತ ಭೇಟಿ ನೀಡಲಿದ್ದಾರೆ. ಇದು ಇಸ್ರೇಲ್ ಗೆ ಪ್ರಧಾನಮಂತ್ರಿ ಅವರ ಎರಡನೇ ಭೇಟಿಯಾಗಲಿದೆ.

ಜೆನೆಸೆಟ್ ಐಸಾಕ್ ಹೆರ್ಜಾಗ್ ಪ್ರತಿಪಕ್ಷದ ನಾಯಕ ಜೆರುಸಲೆಮ್ ನಲ್ಲಿ ಪ್ರಧಾನಿಯವರನ್ನು ಭೇಟಿ ಮಾಡಿದರು

July 05th, 07:32 pm

ಜೆನೆಸೆಟ್ ಐಸಾಕ್ ಹೆರ್ಜಾಗ್ ಪ್ರತಿಪಕ್ಷದ ನಾಯಕ ಇಸ್ರೇಲ್ ನ ಜೆರುಸಲೆಮ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದರು.