ಮಾದಕವಸ್ತು ಮತ್ತು ಅಕ್ರಮ ಕಳ್ಳಸಾಗಣೆ ನಿಯಂತ್ರಣದ ಅಂತಾರಾಷ್ಟ್ರೀಯ ದಿನ; ಪ್ರಧಾನ ಮಂತ್ರಿ ಸಂದೇಶ

June 26th, 11:37 am

ವಿಶ್ವಾದ್ಯಂತ ಇಂದು ಮಾದಕವಸ್ತು ಮತ್ತು ಅಕ್ರಮ ಕಳ್ಳ ಸಾಗಣೆ ನಿಯಂತ್ರಣದ ಅಂತಾರಾಷ್ಟ್ರೀಯ ದಿನ ಆಚರಿಸಲಾಗುತ್ತಿದೆ. ನಮ್ಮ ಸಮಾಜದಲ್ಲಿರುವ ಮಾದಕ ವಸ್ತುಗಳ ಅಕ್ರಮ ಮಾರಾಟ ಮತ್ತು ಸೇವನೆಯ ಹಾವಳಿ ನಿರ್ಮೂಲನೆ ಮಾಡಲು ಹಗಲಿರುಳು ಕೆಲಸ ಮಾಡುತ್ತಿರುವ ಎಲ್ಲರನ್ನು ನಾನಿಂದು ಶ್ಲಾಘಿಸುತ್ತೇನೆ. ಮುಗ್ಧ ಜೀವಗಳನ್ನು ಉಳಿಸಲು ಇಂತಹ ಪ್ರತಿ ಪ್ರಯತ್ನವೂ ಅಗತ್ಯ. ಮಾದಕವಸ್ತುಗಳು ಮನುಷ್ಯನ ಬದುಕಿನಲ್ಲಿ ಕಗ್ಗತ್ತಲೆ, ವಿನಾಶ ಮತ್ತು ಸರ್ವನಾಶವನ್ನೇ ತಂದಿಡುತ್ತವೆ.