Prime Minister welcomes President of Russia

December 05th, 10:30 am

The Prime Minister, Shri Narendra Modi has welcomed President of Russia, Vladimir Putin to India.

1893 ರಲ್ಲಿ ಚಿಕಾಗೋದಲ್ಲಿ ನಡೆದ ವಿಶ್ವ ಧಾರ್ಮಿಕ ಸಮ್ಮೇಳನದಲ್ಲಿ ಸ್ವಾಮಿ ವಿವೇಕಾನಂದರ ಐತಿಹಾಸಿಕ ಭಾಷಣವನ್ನು ಹಂಚಿಕೊಂಡ ಪ್ರಧಾನಮಂತ್ರಿ

September 11th, 08:49 am

ಸ್ವಾಮಿ ವಿವೇಕಾನಂದರು ಚಿಕಾಗೋದಲ್ಲಿ ನಡೆದ ವಿಶ್ವ ಧರ್ಮ ಸಮ್ಮೇಳನದಲ್ಲಿ ಮಾಡಿದ ಐತಿಹಾಸಿಕ ಭಾಷಣದ 132ನೇ ವಾರ್ಷಿಕೋತ್ಸವದ ಶುಭ ಸಂದರ್ಭವನ್ನು ಮೆಲುಕುಹಾಕಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಇದು ಸಾಮರಸ್ಯ ಮತ್ತು ಸಾರ್ವತ್ರಿಕ ಸಹೋದರತ್ವವನ್ನು ಒತ್ತಿಹೇಳುವ ಅವಿಸ್ಮರಣೀಯ ಕ್ಷಣವಾಗಿದೆ ಎಂದು ಹೇಳಿದ್ದಾರೆ. ಈ ಭಾಷಣವು ನಿಜವಾಗಿಯೂ ನಮ್ಮ ಇತಿಹಾಸದಲ್ಲಿ ಅತ್ಯಂತ ಅವಿಸ್ಮರಣೀಯ ಮತ್ತು ಸ್ಪೂರ್ತಿದಾಯಕ ಕ್ಷಣಗಳಲ್ಲಿ ಒಂದಾಗಿದೆ ಎಂದು ಶ್ರೀ ನರೇಂದ್ರ ಮೋದಿ ಅವರು ಹೇಳಿದ್ದಾರೆ.

ಶ್ರೀ ನಾರಾಯಣ ಗುರುಗಳ ಜನ್ಮ ದಿನಾಚರಣೆಯಂದು ಸ್ಮರಿಸಿಕೊಂಡ ಪ್ರಧಾನಮಂತ್ರಿ

September 07th, 04:37 pm

ಹಿಂದೂ ಸಂತ ಹಾಗೂ ಸಮಾಜ ಸುಧಾರಕ ಶ್ರೀ ನಾರಾಯಣ ಗುರುಗಳ ಜನ್ಮ ದಿನಾಚರಣೆಯಂದು ಸಾಮಾಜಿಕ ಮತ್ತು ಆಧ್ಯಾತ್ಮಿಕ ಭೂದೃಶ್ಯದ ಮೇಲೆ ಅವರ ದೃಷ್ಟಿಕೋನದ ಪ್ರಭಾವವನ್ನು ಸ್ಮರಿಸಿದ್ದಾರೆ. ನಾರಾಯಣ ಗುರುಗಳ ಸಮಾನತೆ, ಕರುಣೆ ಮತ್ತು ಸಾರ್ವತ್ರಿಕ ಸಹೋದರತ್ವದ ಬೋಧನೆಗಳು ವ್ಯಾಪಕವಾಗಿ ಪ್ರತಿಧ್ವನಿಸುತ್ತವೆ ಎಂದು ಪ್ರಧಾನಮಂತ್ರಿ ಮೋದಿ ಹೇಳಿದ್ದಾರೆ.

ಶ್ರೀಮತಿ ಪ್ರಮಿಳಾ ತಾಯಿ ಮೆಢೆ ಅವರ ನಿಧನಕ್ಕೆ ಪ್ರಧಾನಮಂತ್ರಿ ಸಂತಾಪ

July 31st, 07:28 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ರಾಷ್ಟ್ರ ಸೇವಿಕಾ ಸಮಿತಿಯ ಪ್ರಮುಖ ಸಂಚಾಲಿಕಾ ಶ್ರೀಮತಿ ಪ್ರಮಿಳಾ ತಾಯಿ ಮೆಢೆ ಅವರ ನಿಧನಕ್ಕೆ ಸಂತಾಪ ಸೂಚಿಸಿದರು. ಅವರ ಅನುಕರಣೀಯ ಜೀವನವು ಮುಂಬರುವ ಪೀಳಿಗೆಗೆ, ವಿಶೇಷವಾಗಿ ಸಮಗ್ರ ಸಾಮಾಜಿಕ ಅಭಿವೃದ್ಧಿ ಮತ್ತು ಮಹಿಳಾ ಸಬಲೀಕರಣದ ಅನ್ವೇಷಣೆಯಲ್ಲಿ ಸ್ಫೂರ್ತಿಯ ದಾರಿದೀಪವಾಗಿದೆ ಎಂದು ಪ್ರಧಾನಮಂತ್ರಿ ಅವರು ಉಲ್ಲೇಖಿಸಿದರು.

2047 ರಲ್ಲಿ ಅಭಿವೃದ್ಧಿ ಹೊಂದಿದ ಭಾರತದ ಹಾದಿ ಸ್ವಾವಲಂಬನೆಯ ಮೂಲಕ ಸಾಗುತ್ತದೆ: ಮನ್ ಕಿ ಬಾತ್‌ನಲ್ಲಿ ಪ್ರಧಾನಿ ಮೋದಿ

July 27th, 11:30 am

‘ಮನದ ಮಾತಿನಲ್ಲಿ’ ಮತ್ತೊಮ್ಮೆ ನಾವು ದೇಶದ ಯಶಸ್ಸಿನ ಬಗ್ಗೆ, ದೇಶವಾಸಿಗಳ ಸಾಧನೆಗಳ ಬಗ್ಗೆ ಮಾತನಾಡಲಿದ್ದೇವೆ. ಕ್ರೀಡೆಯಾಗಿರಲಿ, ವಿಜ್ಞಾನವಾಗಿರಲಿ ಅಥವಾ ಸಂಸ್ಕೃತಿಯಾಗಿರಲಿ ಎಲ್ಲ ಕ್ಷೇತ್ರಗಳಲ್ಲಿ ಕಳೆದ ಕೆಲವು ವಾರಗಳಲ್ಲಿ, ಪ್ರತಿಯೊಬ್ಬ ಭಾರತೀಯನು ಹೆಮ್ಮೆಪಡುವಂತಹ ಘಟನೆಗಳು ನಡೆದಿವೆ. ಇತ್ತೀಚೆಗೆ, ಬಾಹ್ಯಾಕಾಶದಿಂದ ಶುಭಾಂಶು ಶುಕ್ಲಾ ಹಿಂದಿರುಗಿದ ಕುರಿತು ದೇಶದಲ್ಲಿ ಬಹಳಷ್ಟು ಚರ್ಚೆಗಳು ನಡೆದಿವೆ. ಶುಭಾಂಶು ಭೂಮಿಗೆ ಸುರಕ್ಷಿತವಾಗಿ ಬಂದಿಳಿದ ತಕ್ಷಣ, ಜನರು ಸಂತೋಷದಿಂದ ಕುಣಿದು ಕುಪ್ಪಳಿಸಿದರು, ಪ್ರತಿಯೊಬ್ಬರ ಹೃದಯದಲ್ಲೂ ಸಂತಸದ ಅಲೆ ಹರಿದಾಡಿತು. ಇಡೀ ದೇಶ ಹೆಮ್ಮೆಯಿಂದ ಬೀಗಿತು. ಆಗಸ್ಟ್ 2023 ರಲ್ಲಿ ಚಂದ್ರಯಾನ-3 ರ ಯಶಸ್ವಿ ಲ್ಯಾಂಡಿಂಗ್ ಆದಾಗ, ದೇಶದಲ್ಲಿ ಹೊಸ ವಾತಾವರಣವೇ ಸೃಷ್ಟಿಯಾಗಿದ್ದು ನನಗೆ ನೆನಪಿದೆ. ವಿಜ್ಞಾನ ಮತ್ತು ಬಾಹ್ಯಾಕಾಶದ ಬಗ್ಗೆ ಮಕ್ಕಳಲ್ಲಿ ಹೊಸ ಕುತೂಹಲವೂ ಅರಳಿತು. ಈಗ ಚಿಕ್ಕ ಚಿಕ್ಕ ಮಕ್ಕಳು ಕೂಡ ನಾವು ಬಾಹ್ಯಾಕಾಶಕ್ಕೆ ಹೋಗುತ್ತೇವೆ, ಚಂದ್ರನ ಮೇಲೆ ಇಳಿಯುತ್ತೇವೆ - ನಾವು ಬಾಹ್ಯಾಕಾಶ ವಿಜ್ಞಾನಿಗಳಾಗುತ್ತೇವೆ ಎಂದು ಹೇಳುತ್ತಾರೆ.

ವನ ಮಹೋತ್ಸವ ಕಾರ್ಯಕ್ರಮದಲ್ಲಿ ಗೌರವಾನ್ವಿತ ನ್ಯಾಯಾಧೀಶರ ಅತ್ಯುತ್ಸಾಹದ ಪಾಲ್ಗೊಳ್ಳುವಿಕೆಗೆ ಪ್ರಧಾನಮಂತ್ರಿ ಶ್ಲಾಘನೆ

July 19th, 07:02 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವನಮಹೋತ್ಸವ ಕಾರ್ಯಕ್ರಮದಲ್ಲಿ ಗೌರವಾನ್ವಿತ ನ್ಯಾಯಾಧೀಶರ ಉತ್ಸಾಹಭರಿತ ಭಾಗವಹಿಸುವಿಕೆಯನ್ನು ಇಂದು ಶ್ಲಾಘಿಸಿದ್ದಾರೆ. ಪರಿಸರದ ಬಗ್ಗೆ ನಾಗರಿಕರಲ್ಲಿ ಜವಾಬ್ದಾರಿ ಪ್ರೇರೇಪಿಸುವಲ್ಲಿ ಅವರ ಪಾತ್ರವನ್ನು ವಿವರಿಸಿದ್ದಾರೆ.

ಹಜರತ್ ಇಮಾಮ್ ಹುಸೇನ್ (ಎಎಸ್) ಅವರ ತ್ಯಾಗವು ಸದಾಚಾರಕ್ಕೆ ಅವರ ಬದ್ಧತೆಯ ಪ್ರತೀಕ: ಪ್ರಧಾನಮಂತ್ರಿ

July 06th, 08:10 am

ಹಜರತ್ ಇಮಾಮ್ ಹುಸೇನ್ (ಎಎಸ್) ಅವರ ತ್ಯಾಗಗಳು ನೈತಿಕವಾದ/ ಸದಾಚಾರಕ್ಕೆ ಅವರ ಬದ್ಧತೆಯನ್ನು ಒತ್ತಿ ಹೇಳುತ್ತವೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಹೇಳಿದ್ದಾರೆ. ಪ್ರತಿಕೂಲ ಪರಿಸ್ಥಿತಿಯಲ್ಲೂ ಸತ್ಯವನ್ನು ಎತ್ತಿಹಿಡಿಯಲು ಅವರು ಜನರನ್ನು ಪ್ರೇರೇಪಿಸಿದ್ದರು ಎಂದು ಶ್ರೀ ಮೋದಿ ಅವರು ಸ್ಮರಿಸಿದ್ದಾರೆ.

ಯೋಗಕ್ಷೇಮ, ಸ್ವಾಸ್ಥ್ಯ ಮತ್ತು ಮಾನಸಿಕ ಶಾಂತಿಯ ವಿಷಯಗಳು ಬಂದಾಗ, ಸದ್ಗುರು ಜಗ್ಗಿ ವಾಸುದೇವ್ ಅವರು ಯಾವಾಗಲೂ ಅತ್ಯಂತ ಸ್ಪೂರ್ತಿದಾಯಕ ವ್ಯಕ್ತಿಗಳಲ್ಲಿ ಒಬ್ಬರಾಗಿರುತ್ತಾರೆ: ಪ್ರಧಾನಮಂತ್ರಿ

February 14th, 08:15 pm

ಸದ್ಗುರು ಜಗ್ಗಿ ವಾಸುದೇವ್ ಅವರು ಕ್ಷೇಮ ಮತ್ತು ಮಾನಸಿಕ ಶಾಂತಿಯ ವಿಚಾರದಲ್ಲಿ ಸದಾ ಸ್ಪೂರ್ತಿದಾಯಕ ವ್ಯಕ್ತಿಗಳಲ್ಲೊಬ್ಬರು ಎಂದು ಹೇಳಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ನಾಳೆಯ ಪರೀಕ್ಷಾ ಪೇ ಚರ್ಚಾದ 4ನೇ ಸಂಚಿಕೆಯನ್ನು ಎಲ್ಲರೂ ವೀಕ್ಷಿಸುವಂತೆ ಕರೆ ನೀಡಿದರು.

India is a powerhouse of talent: PM Modi

December 31st, 08:21 pm

The Prime Minister Shri Narendra Modi today remarked that India was a powerhouse of talent, filled with innumerable inspiring life journeys showcasing innovation and courage. Citing an example of the Green Army, he lauded their pioneering work as insipiring.

ನಮ್ಮ ಜನರ ಸ್ಥಿತಿಸ್ಥಾಪಕತ್ವದ ಬಗ್ಗೆ ಹೆಮ್ಮೆ ಇದೆ: ಪ್ರಧಾನಮಂತ್ರಿ

October 03rd, 08:54 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಭಾರತೀಯರ ಸ್ಥಿತಿಸ್ಥಾಪಕತ್ವವನ್ನು ಶ್ಲಾಘಿಸಿದರು. ನಮ್ಮ ದೇಶದ ಜನರ ಧೈರ್ಯ ಮತ್ತು ಉತ್ಸಾಹ ನಮ್ಮೆಲ್ಲರಿಗೂ ಸ್ಫೂರ್ತಿ ನೀಡುತ್ತದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.

ಚೆಸ್ ಒಲಿಂಪಿಯಾಡ್ ವಿಜೇತರೊಂದಿಗೆ ಪ್ರಧಾನಮಂತ್ರಿಯವರ ಸಂವಾದದ ಇಂಗ್ಲಿಷ್ ಅವತರಣಿಕೆ

September 26th, 12:15 pm

ಸರ್, ಭಾರತವು ಎರಡೂ ಚಿನ್ನದ ಪದಕಗಳನ್ನು ಗೆದ್ದಿರುವುದು ಇದೇ ಮೊದಲು, ಮತ್ತು ತಂಡದ ಪ್ರದರ್ಶನ ಗಮನಾರ್ಹವಾಗಿದೆ. ಬಾಲಕರು 22 ರಲ್ಲಿ 21 ಅಂಕಗಳನ್ನು ಗಳಿಸಿದರೆ, ಬಾಲಕಿಯರು 22 ರಲ್ಲಿ 19 ಅಂಕಗಳನ್ನು ಗಳಿಸಿದರು. ಒಟ್ಟಾರೆಯಾಗಿ, ನಾವು 44 ರಲ್ಲಿ 40 ಅಂಕಗಳನ್ನು ಗಳಿಸಿದ್ದೇವೆ. ಇಷ್ಟು ದೊಡ್ಡ ಮತ್ತು ಪ್ರಭಾವಶಾಲಿ ಪ್ರದರ್ಶನವು ಹಿಂದೆಂದೂ ಆಗಿಲ್ಲ.

ಪ್ರಧಾನಿ ಮೋದಿಯವರು ನಮ್ಮ ಚೆಸ್ ಚಾಂಪಿಯನ್‌ಗಳನ್ನು ಭೇಟಿಯಾಗಿ ಪ್ರೋತ್ಸಾಹಿಸುತ್ತಾರೆ

September 26th, 12:00 pm

ಭಾರತದ ಚೆಸ್‌ ತಂಡ ಐತಿಹಾಸಿಕ ಉಭಯ ಚಿನ್ನ ಗೆದ್ದ ನಂತರ ಪ್ರಧಾನಿ ಮೋದಿ ಅವರೊಂದಿಗೆ ಮಾತನಾಡಿದರು. ಚರ್ಚೆಯು ಅವರ ಕಠಿಣ ಪರಿಶ್ರಮ, ಚೆಸ್‌ನ ಹೆಚ್ಚುತ್ತಿರುವ ಜನಪ್ರಿಯತೆ, ಆಟದ ಮೇಲೆ AI ಪ್ರಭಾವ ಮತ್ತು ಯಶಸ್ಸನ್ನು ಸಾಧಿಸುವಲ್ಲಿ ನಿರ್ಣಯ ಮತ್ತು ತಂಡದ ಕೆಲಸಗಳ ಪ್ರಾಮುಖ್ಯತೆಯನ್ನು ಎತ್ತಿ ತೋರಿಸಿತು.

ಪ್ಯಾರಿಸ್ ಒಲಿಂಪಿಕ್ಸ್: ಭಾರತೀಯ ಅಥ್ಲೀಟ್ ಗಳಿಗೆ ಶುಭ ಕೋರಿದ ಪ್ರಧಾನಮಂತ್ರಿ

July 26th, 10:50 pm

ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಭಾಗವಹಿಸುತ್ತಿರುವ ಭಾರತೀಯ ತಂಡದ ಎಲ್ಲಾ ಅಥ್ಲೀಟ್ ಗಳಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಹಾರ್ದಿಕ ಶುಭಾಶಯಗಳನ್ನು ಕೋರಿದ್ದಾರೆ.

ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಸಂದೇಶ

January 12th, 11:00 am

ಇಂದು ಎಲ್ಲಾ ಭಾರತೀಯರಿಗೆ ಮತ್ತು ವಿಶ್ವಾದ್ಯಂತ ಹರಡಿರುವ ಭಗವಾನ್ ರಾಮನ ಭಕ್ತರಿಗೆ ಇದು ಪವಿತ್ರ ಸಂದರ್ಭವಾಗಿದೆ! ಎಲ್ಲೆಲ್ಲೂ ರಾಮನ ಭಕ್ತಿಯ ಮೋಹಕ ವಾತಾವರಣ! ರಾಮನ ಸುಮಧುರ ಕೀರ್ತನೆಗಳು, ಎಲ್ಲಾ ದಿಕ್ಕುಗಳಲ್ಲಿಯೂ ರಾಮ ಭಜನೆಗಳ ಸೊಗಸಾದ ಸೌಂದರ್ಯ! ಜನವರಿ 22ರ ಆ ಐತಿಹಾಸಿಕ ಪವಿತ್ರ ಕ್ಷಣಕ್ಕಾಗಿ ಎಲ್ಲರೂ ಕಾತರದಿಂದ ಕಾಯುತ್ತಿದ್ದಾರೆ. ಅಯೋಧ್ಯೆಯಲ್ಲಿ ರಾಮ ಮೂರ್ತಿ ಪ್ರತಿಷ್ಠಾಪನೆಗೆ ಇನ್ನು ಕೇವಲ 11 ದಿನಗಳು ಮಾತ್ರ ಬಾಕಿ ಉಳಿದಿವೆ. ಈ ಶುಭ ಸಂದರ್ಭಕ್ಕೆ ಸಾಕ್ಷಿಯಾಗಲು ನಾನು ಅದೃಷ್ಟಶಾಲಿ ಎಂದು ಭಾವಿಸುತ್ತೇನೆ. ಕಲ್ಪನೆಗೂ ಮೀರಿದ ಕ್ಷಣಗಳನ್ನು ಅನುಭವಿಸುವ ಸಮಯ ಇದು.

ಶ್ರೀ ರಾಮಲಾಲಾ ಪ್ರಾಣ ಪ್ರತಿಷ್ಠೆಗಾಗಿ 11 ದಿನಗಳ ವಿಶೇಷ ಪೂಜಾ ಆಚರಣೆ ಆರಂಭಿಸಿದ ಪ್ರಧಾನ ಮಂತ್ರಿ

January 12th, 10:31 am

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜನವರಿ 22ರಂದು ಅಯೋಧ್ಯ ಧಾಮ ದೇವಸ್ಥಾನದಲ್ಲಿ ಶ್ರೀ ರಾಮಲಾಲಾ ಅವರ ಪ್ರಾಣ ಪ್ರತಿಷ್ಠೆಯ ಪೂರ್ವಭಾವಿಯಾಗಿ 11 ದಿನಗಳ ವಿಶೇಷ ಪೂಜಾ ಆಚರಣೆ ಆರಂಭಿಸಿದರು. “ಇದೊಂದು ಬಹುದೊಡ್ಡ ಜವಾಬ್ದಾರಿ. ನಮ್ಮ ಧರ್ಮಗ್ರಂಥಗಳಲ್ಲಿ ಹೇಳಿರುವಂತೆ, ಯಾಗ ಮತ್ತು ದೇವರ ಆರಾಧನೆಗಾಗಿ ನಮ್ಮಲ್ಲಿ ದೈವಿಕ ಪ್ರಜ್ಞೆಯನ್ನು ಜಾಗೃತಗೊಳಿಸಬೇಕು. ಇದಕ್ಕಾಗಿ ಧರ್ಮಗ್ರಂಥಗಳಲ್ಲಿ ಉಪವಾಸ ಮತ್ತು ಕಟ್ಟುನಿಟ್ಟಿನ ನಿಯಮಗಳನ್ನು ನಿಗದಿಪಡಿಸಲಾಗಿದೆ, ಅದನ್ನು ಪವಿತ್ರೀಕರಣದ ಮೊದಲು ಅನುಸರಿಸಬೇಕು. ಆದ್ದರಿಂದ, ನಾನು ಕೆಲವು ಪುಣ್ಯಾತ್ಮರು ಮತ್ತು ಆಧ್ಯಾತ್ಮಿಕ ಪ್ರಯಾಣದ ಮಹಾಪುರುಷರಿಂದ ಪಡೆದ ಮಾರ್ಗದರ್ಶನದ ಪ್ರಕಾರ, ಅವರು ಸೂಚಿಸಿದ ‘ಯಮ-ನಿಯಮ’ಗಳ ಪ್ರಕಾರ, ನಾನು ಇಂದಿನಿಂದ 11 ದಿನಗಳ ವಿಶೇಷ ಪೂಜಾ ಆಚರಣೆ ಆರಂಭಿಸುತ್ತಿದ್ದೇನೆ.