ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದಿನಾಂಕ 28.06.2026 ರಂದು ಮಾಡಿದ ‘ಮನ್ ಕಿ ಬಾತ್’ – 135ನೇ ಸಂಚಿಕೆಯ ಕನ್ನಡ ಅವತರಣಿಕೆ
June 28th, 11:30 am
‘ಮನದ ಮಾತು’ ಮೂಲಕ ನಿಮ್ಮೆಲ್ಲರೊಂದಿಗೆ ಮತ್ತೆ ಮಾತನಾಡಲು ಅವಕಾಶ ಸಿಕ್ಕಿರುವುದು ನನಗೆ ಅಪಾರ ಸಂತೋಷವಾಗುತ್ತಿದೆ. 2026 ನೇ ವರ್ಷದ ಅರ್ಧ ಭಾಗವು ಮುಗಿಯಲಿದೆ. ಈ ಆರು ತಿಂಗಳುಗಳಲ್ಲಿ, ಈ ಕಾರ್ಯಕ್ರಮದಲ್ಲಿ ನಮ್ಮ ದೇಶದ ನಾಗರಿಕರ ಹಲವಾರು ಸಾಧನೆಗಳ ಬಗ್ಗೆ ನಾವು ಚರ್ಚಿಸಿದ್ದೇವೆ. ಜೂನ್ನಲ್ಲಿಯೂ ಸಹ, ಪ್ರತಿಯೊಬ್ಬ ನಾಗರಿಕನು ಹೆಮ್ಮೆ ಪಡುವಂತಹ ಸಾಧನೆಗಳನ್ನು ರಾಷ್ಟ್ರವು ಸಾಧಿಸಿದೆ. ಈ ಯಶಸ್ಸು ದೇಶದ ಭದ್ರತೆ ಮತ್ತು ಸ್ವಾವಲಂಬನೆಗೆ ಸಂಬಂಧಿಸಿದ್ದಾಗಿವೆ. ಇತ್ತೀಚೆಗೆ ನನಗೆ ಕೋಲ್ಕತ್ತಾದಲ್ಲಿ ನೌಕಾಪಡೆಯ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಅವಕಾಶ ಸಿಕ್ಕಿತು. ಅಲ್ಲಿ, ಐಎನ್ಎಸ್ ದೂನಗಿರಿ, ಐಎನ್ಎಸ್ ಸಂಶೋಧಕ್ ಮತ್ತು ಐಎನ್ಎಸ್ ಅಗ್ರಯಗಳನ್ನು ಭಾರತೀಯ ನೌಕಾಪಡೆಗೆ ಸೇರ್ಪಡೆಗೊಳಿಸಲಾಯಿತು. ವಿನ್ಯಾಸದಿಂದ ಹಿಡಿದು ಈ ಹಡಗುಗಳ ತಯಾರಿಕೆಯವರೆಗೆ ಎಲ್ಲವೂ ಸ್ವದೇಶದಲ್ಲೇ ಸಿದ್ಧಪಡಿಸಲಾಗಿದೆ.ಕೋಲ್ಕತ್ತಾದಲ್ಲಿ ನಡೆದ ಐ.ಎನ್.ಎಸ್. ಅಗ್ರೇ, ಐ.ಎನ್.ಎಸ್. ದುನಾಗಿರಿ ಮತ್ತು ಐ.ಎನ್.ಎಸ್. ಸಂಶೋಧಕ್ ತ್ರಿವಳಿ ನೌಕಾದಳ ಹಡಗು ಕಾರ್ಯಾರಂಭ ಸಮಾರಂಭದಲ್ಲಿ ಪ್ರಧಾನಮಂತ್ರಿ ಅವರ ಭಾಷಣದ ಕನ್ನಡ ಅವತರಣಿಕೆ
June 21st, 12:51 pm
ಪಶ್ಚಿಮ ಬಂಗಾಳದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಆರ್.ಎನ್.ರವಿ ಜೀ, ಉತ್ಸಾಹಿ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಜೀ, ನೌಕಾಪಡೆಯ ಮುಖ್ಯಸ್ಥ ಕೃಷ್ಣ ಸ್ವಾಮಿನಾಥನ್ ಜೀ, ಇಲ್ಲಿ ಉಪಸ್ಥಿತರಿರುವ ಗೌರವಾನ್ವಿತ ಮಹಿಳೆಯರೇ ಮತ್ತು ಮಹನೀಯರೇ!ಪಶ್ಚಿಮ ಬಂಗಾಳದ ಕೋಲ್ಕತ್ತಾದ ಶ್ಯಾಮ್ ಪ್ರಸಾದ್ ಮುಖರ್ಜಿ ಬಂದರಿನಲ್ಲಿ ದೇಶೀಯವಾಗಿ ವಿನ್ಯಾಸಗೊಳಿಸಿದ ಮತ್ತು ನಿರ್ಮಿಸಿದ ಮೂರು ನೌಕಾ ಹಡಗುಗಳಾದ ಐಎನ್ಎಸ್ ದುನಗಿರಿ, ಐಎನ್ಎಸ್ ಸಂಶೋಧಕ್ ಮತ್ತು ಐಎನ್ಎಸ್ ಅಗ್ರೇ ಗಳನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕಾರ್ಯಾರಂಭಗೊಳಿಸಿದರು
June 21st, 12:50 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಪಶ್ಚಿಮ ಬಂಗಾಳದ ಕೋಲ್ಕತ್ತಾದ ಶ್ಯಾಮ್ ಪ್ರಸಾದ್ ಮುಖರ್ಜಿ ಬಂದರಿನಲ್ಲಿ ದೇಶೀಯವಾಗಿ ವಿನ್ಯಾಸ ಮಾಡಿ ನಿರ್ಮಿಸಲಾದ ಮೂರು ನೌಕಾ ಹಡಗುಗಳಾದ ಐ.ಎನ್.ಎಸ್. ದುನಾಗಿರಿ, ಸುಧಾರಿತ ರಹಸ್ಯ ಯುದ್ಧ ನೌಕೆ ಅಂದರೆ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಲಾದ ಹಾಗು ವೈರಿಯ ರಾಡಾರ್, ಸೋನಾರ್, ದೃಶ್ಯ ಮತ್ತು ಇನ್ಫ್ರಾರೆಡ್ ಚಕ್ಷುಗಳಿಗೆ ಸುಲಭದಲ್ಲಿ ಗೋಚರಿಸದ ಮಧ್ಯಮ ಗಾತ್ರದ ನೌಕಾ ಯುದ್ದನೌಕೆ ಐ.ಎನ್.ಎಸ್. ಸಂಶೋಧಕ್ ಮತ್ತು ಜಲಾಂತರ್ಗಾಮಿ ನಿರೋಧಕ ಯುದ್ಧ ನೌಕೆ ಐ.ಎನ್.ಎಸ್. ಅಗ್ರೇ ಇವುಗಳನ್ನು ಕಾರ್ಯಾರಂಭಗೊಳಿಸಿದರು. ಈ ಸೇರ್ಪಡೆಗಳು ರಾಷ್ಟ್ರದ ಕಾರ್ಯಾಚರಣೆಯ ಸಾಮರ್ಥ್ಯಗಳನ್ನು ಗಮನಾರ್ಹವಾಗಿ ಹೆಚ್ಚಿಸುತ್ತವೆ, ಕಡಲ ಕ್ಷೇತ್ರದ ಜಾಗೃತಿಯನ್ನು ಹೆಚ್ಚಿಸುತ್ತವೆ ಮತ್ತು ಭೌಗೋಳಿಕ ರಾಜಕೀಯ ಬೆದರಿಕೆಗಳ ವಿರುದ್ಧ ನಮ್ಮ ಕರಾವಳಿ ನೀರಿನ ಭದ್ರತೆಯನ್ನು ಬಲಪಡಿಸುತ್ತವೆ. ಎಲ್ಲಾ ಮೂರು ಹಡಗುಗಳನ್ನು ಭಾರತೀಯ ನೌಕಾಪಡೆಯ ಯುದ್ಧನೌಕೆ ವಿನ್ಯಾಸ ಬ್ಯೂರೋ ವಿನ್ಯಾಸಗೊಳಿಸಿದೆ ಮತ್ತು 200ಕ್ಕೂ ಹೆಚ್ಚು ಎಂಎಸ್ಎಂಇಗಳು ಸೇರಿದಂತೆ ಭಾರತೀಯ ಉದ್ಯಮದ ವ್ಯಾಪಕ ಭಾಗವಹಿಸುವಿಕೆಯೊಂದಿಗೆ ಗಾರ್ಡನ್ ರೀಚ್ ಶಿಪ್ ಬಿಲ್ಡರ್ಸ್ ಮತ್ತು ಎಂಜಿನಿಯರ್ಸ್ (ಜಿಆರ್ಎಸ್ಇ) ಕೋಲ್ಕತ್ತಾದಲ್ಲಿ ನಿರ್ಮಿಸಿದೆ. ಶೇಕಡಾ 75 ಕ್ಕಿಂತ ಹೆಚ್ಚು ಸ್ಥಳೀಯ ಸಾಮಗ್ರಿಗಳೊಂದಿಗೆ, ಈ ಹಡಗುಗಳು ಆತ್ಮನಿರ್ಭರತೆಗೆ ಭಾರತದ ಬದ್ಧತೆಗೆ ಸಾಕ್ಷಿಯಾಗಿವೆ.ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪಶ್ಚಿಮ ಬಂಗಾಳದ ಹೂಗ್ಲಿಯಲ್ಲಿ ನಡೆದ 'ಪಶ್ಚಿಮ ಬಂಗಾ ದಿವಸ' ಆಚರಣೆಯಲ್ಲಿ ಭಾಗವಹಿಸಿದರು
June 19th, 11:54 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಪಶ್ಚಿಮ ಬಂಗಾಳ ದಿವಸ (ಪಶ್ಚಿಮ ಬಂಗಾಳ ದಿನ) ಸಂಭ್ರಮಾಚರಣೆಯಲ್ಲಿ ಭಾಗವಹಿಸಿದರು. ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಅವರೊಂದಿಗೆ ನಂಟು ಹೊಂದಿರುವ ಐತಿಹಾಸಿಕ ಮಹತ್ವದ ಸ್ಥಳವಾದ ಹೂಗ್ಲಿಯ ತಾರಕೇಶ್ವರದಲ್ಲಿ ರಾಜ್ಯ ಮಟ್ಟದ ಆಚರಣೆಗಳನ್ನು ಆಯೋಜಿಸಲಾಗಿದೆ. ಈ ವರ್ಷದ ಪಶ್ಚಿಮ ಬಂಗಾಳ ದಿನಾಚರಣೆಯ ವಿಷಯವಾದ ಪಶ್ಚಿಮ ಬಂಗಾಳ: ಪರಂಪರೆ, ಸಾಮರಸ್ಯ ಮತ್ತು ಅಭಿವೃದ್ಧಿ ಎಂಬುದು ರಾಜ್ಯದ ಸಾಂಸ್ಕೃತಿಕ ಶ್ರೀಮಂತಿಕೆ, ಸಾಮಾಜಿಕ ಸಾಮರಸ್ಯ ಮತ್ತು ಅಭಿವೃದ್ಧಿಯ ಆಕಾಂಕ್ಷೆಗಳನ್ನು ಪ್ರತಿಬಿಂಬಿಸುತ್ತದೆ.