ಬಿಹಾರದಲ್ಲಿ ಒಟ್ಟು 3590.73 ಕೋಟಿ ರೂ.ಗಳ ಬಂಡವಾಳ ವೆಚ್ಚದಲ್ಲಿ ಎನ್ ಎಚ್-22ರ ಮುಜಫರ್ಪುರ್-ಸೀತಾಮರ್ಹಿ-ಸೋನ್‌ಬಾರ್ಸಾ ವಿಭಾಗವನ್ನು ಹೈಬ್ರಿಡ್ ಅನ್ಯುಟಿ ಮೋಡ್ (ಎಚ್ ಎ ಎಂ) ನಲ್ಲಿ 4-ಪಥಕ್ಕೆ ಮೇಲ್ದರ್ಜೆಗೇರಿಸಲು ಕೇಂದ್ರ ಸಂಪುಟ ಅನುಮೋದನೆ
August 19th, 03:22 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಆರ್ಥಿಕ ವ್ಯವಹಾರಗಳ ಸಚಿವ ಸಂಪುಟ ಸಮಿತಿಯು (ಸಿಸಿಇಎ) ಬಿಹಾರದಲ್ಲಿ ಎನ್ ಎಚ್-22ರ ಮುಜಫರ್ಪುರ್-ಸೀತಾಮರ್ಹಿ-ಸೋನ್‌ಬಾರ್ಸಾ ವಿಭಾಗವನ್ನು ನಾಲ್ಕು-ಪಥದ ಮಾನದಂಡಕ್ಕೆ ಮೇಲ್ದರ್ಜೆಗೇರಿಸಲು ಅನುಮೋದನೆ ನೀಡಿದೆ. ಈ ಯೋಜನೆಯನ್ನು ಹೈಬ್ರಿಡ್ ಅನ್ಯುಟಿ ಮೋಡ್ (ಎಚ್ ಎ ಎಂ) ನಲ್ಲಿ ಒಟ್ಟು 82.578 ಕಿ.ಮೀ.ಗಳನ್ನು 3590.73 ಕೋಟಿ ರೂಪಾಯಿ ಬಂಡವಾಳ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು.80ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು ಕೆಂಪು ಕೋಟೆಯ ವೇದಿಕೆಯಿಂದ ಮಾಡಿದ ಭಾಷಣದ ಪ್ರಮುಖ ಮುಖ್ಯಾಂಶಗಳು
August 15th, 04:44 pm
80ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಇಂದು ಕೆಂಪು ಕೋಟೆಯ ವೇದಿಕೆಯಿಂದ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದರು. ತಮ್ಮ ಭಾಷಣದಲ್ಲಿ, ಕಳೆದ 12 ವರ್ಷಗಳಲ್ಲಿ ಉತ್ಪಾದನೆ, ಡಿಜಿಟಲ್ ಬೆಳವಣಿಗೆ ಮತ್ತು ನಾಗರಿಕ ವಿತರಣೆಯಲ್ಲಿ ಭಾರತದ ಪ್ರಗತಿಯ ವಿವರವಾದ ವರದಿ ಕಾರ್ಡ್ ಅನ್ನು ಅವರು ಪ್ರಸ್ತುತಪಡಿಸಿದರು. ರಾಷ್ಟ್ರೀಯ ಮಹತ್ವಾಕಾಂಕ್ಷೆಗಳನ್ನು ಸಾಧಿಸಲು ಏಳು ಪ್ರಮುಖ ವಲಯಗಳನ್ನು ಒಳಗೊಂಡಿರುವ ಪರಿವರ್ತಕ ಸಪ್ತ ಧಾರವನ್ನು ಸಹ ಅವರು ಅನಾವರಣಗೊಳಿಸಿದರು.12 ವರ್ಷಗಳ ಪರಿವರ್ತನೆ: ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ಭಾರತದ ಪ್ರಗತಿಯನ್ನು ಉಲ್ಲೇಖಿಸಿದ ಪ್ರಧಾನಮಂತ್ರಿ ಮೋದಿ
August 15th, 01:18 pm
ತಮ್ಮ ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಕಳೆದ 12 ವರ್ಷಗಳಲ್ಲಿ ಭಾರತದ ಪರಿವರ್ತನೆಯನ್ನು ಎತ್ತಿಹಿಡಿದರು, ಉತ್ಪಾದನೆ, ಡಿಜಿಟಲ್ ಮೂಲಸೌಕರ್ಯ, ಮೂಲಭೂತ ಸೌಕರ್ಯಗಳು, ಇಂಧನ ಭದ್ರತೆ, ಯುವ ಸಬಲೀಕರಣ, ನಾವೀನ್ಯತೆ, ಸಾಮಾಜಿಕ ಭದ್ರತೆ ಮತ್ತು ಇತರ ಪ್ರಮುಖ ವಲಯಗಳಾದ್ಯಂತ ಸಾಧಿಸಿದ ಪ್ರಗತಿಯನ್ನು ವಿವರಿಸಿದರು.80ನೇ ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ವಿಕಸಿತ ಭಾರತದತ್ತ ಭಾರತದ ಮುಂದಿನ ದಾಪುಗಾಲು ಹಾಕಲು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಸ್ಪಷ್ಟ ಕರೆ
August 15th, 12:51 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕೆಂಪು ಕೋಟೆಯಿಂದ ಮಾಡಿದ ತಮ್ಮ 80 ನೇ ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ, 2047ರ ವೇಳೆಗೆ ವಿಕಸಿತ ಭಾರತದತ್ತ ಭಾರತದ ಪ್ರಯಾಣವನ್ನು ವೇಗಗೊಳಿಸುವ ಗುರಿಯನ್ನು ಹೊಂದಿರುವ ಹಲವಾರು ಸ್ಪಷ್ಟ ಕರೆಗಳನ್ನು ನೀಡಿದರು. ದೇಶದ ಕೆಲಸದ ಸಂಸ್ಕೃತಿ, ಚಿಂತನೆ ಮತ್ತು ಮಹತ್ವಾಕಾಂಕ್ಷೆಯ ಪ್ರಮಾಣದಲ್ಲಿ ಬದಲಾವಣೆಗೆ ಕರೆ ನೀಡಿದ ಪ್ರಧಾನಮಂತ್ರಿಯವರು, ನಾಗರಿಕರು, ಸರ್ಕಾರಗಳು, ಉದ್ಯಮ, ರೈತರು, ಯುವಜನರು ಮತ್ತು ಸಮಾಜದ ಇತರ ವರ್ಗಗಳ ಸಾಮೂಹಿಕ ಕ್ರಮದ ಅಗತ್ಯವನ್ನು ಒತ್ತಿ ಹೇಳಿದರು.ಐಐಟಿ ದೆಹಲಿಯ 57ನೇ ಘಟಿಕೋತ್ಸವ ಸಮಾರಂಭ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ
August 08th, 11:15 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಐಐಟಿ ದೆಹಲಿಯ 57ನೇ ಘಟಿಕೋತ್ಸವ ಸಮಾರಂಭವನ್ನುದ್ದೇಶಿಸಿ ಭಾಷಣ ಮಾಡಿದರು. ಸಮಾರಂಭದ ಆಳವಾದ ಭಾವನಾತ್ಮಕ ಪ್ರತಿಸ್ಪಂದನವನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಕ್ಯಾಂಪಸ್ ನ ರೋಮಾಂಚಕ, ಕನಸು ತುಂಬಿದ ವಾತಾವರಣವನ್ನು ಪ್ರಮುಖವಾಗಿ ಉಲ್ಲೇಖಿಸಿದರು. ಕೋವಿಡ್ ಜಾಗತಿಕ ಸಾಂಕ್ರಾಮಿಕ ಸಮಯದಲ್ಲಿ ತಮ್ಮ ಹಿಂದಿನ ವರ್ಚುವಲ್ ಹಾಜರಾತಿಯನ್ನು ನೆನಪಿಸಿಕೊಂಡ ಅವರು, ಪದವಿ ಪಡೆಯುತ್ತಿರುವ ವರ್ಗದ ನಡುವೆ ಭೌತಿಕವಾಗಿ ಹಾಜರಿರುವುದಕ್ಕೆ ತಮ್ಮ ವೈಯಕ್ತಿಕ ತೃಪ್ತಿಯನ್ನು ವ್ಯಕ್ತಪಡಿಸಿದರು. ಈ ಅದ್ಭುತ ಅನುಭವವನ್ನು ಇಂದು ಈ ಕ್ಯಾಂಪಸ್ ನಲ್ಲಿ ನಿಮ್ಮೊಂದಿಗೆ ಹಂಚಿಕೊಳ್ಳುವುದು ನನಗೂ ತುಂಬಾ ವಿಶೇಷ ಸಂಗತಿಯಾಗಿದೆ ಎಂದು ಶ್ರೀ ಮೋದಿ ಹೇಳಿದರು.ಐಐಟಿ ದೆಹಲಿಯ 57ನೇ ಘಟಿಕೋತ್ಸವ ಸಮಾರಂಭವನ್ನುದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಭಾಷಣ
August 08th, 11:00 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಐಐಟಿ ದೆಹಲಿಯ 57ನೇ ಘಟಿಕೋತ್ಸವ ಸಮಾರಂಭವನ್ನುದ್ದೇಶಿಸಿ ಭಾಷಣ ಮಾಡಿದರು. ಸಮಾರಂಭದ ಆಳವಾದ ಭಾವನಾತ್ಮಕ ಪ್ರತಿಸ್ಪಂದನವನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಕ್ಯಾಂಪಸ್ ನ ರೋಮಾಂಚಕ, ಕನಸು ತುಂಬಿದ ವಾತಾವರಣವನ್ನು ಪ್ರಮುಖವಾಗಿ ಉಲ್ಲೇಖಿಸಿದರು. ಕೋವಿಡ್ ಜಾಗತಿಕ ಸಾಂಕ್ರಾಮಿಕ ಸಮಯದಲ್ಲಿ ತಮ್ಮ ಹಿಂದಿನ ವರ್ಚುವಲ್ ಹಾಜರಾತಿಯನ್ನು ನೆನಪಿಸಿಕೊಂಡ ಅವರು, ಪದವಿ ಪಡೆಯುತ್ತಿರುವ ವರ್ಗದ ನಡುವೆ ಭೌತಿಕವಾಗಿ ಹಾಜರಿರುವುದಕ್ಕೆ ತಮ್ಮ ವೈಯಕ್ತಿಕ ತೃಪ್ತಿಯನ್ನು ವ್ಯಕ್ತಪಡಿಸಿದರು. ಈ ಅದ್ಭುತ ಅನುಭವವನ್ನು ಇಂದು ಈ ಕ್ಯಾಂಪಸ್ ನಲ್ಲಿ ನಿಮ್ಮೊಂದಿಗೆ ಹಂಚಿಕೊಳ್ಳುವುದು ನನಗೂ ತುಂಬಾ ವಿಶೇಷ ಸಂಗತಿಯಾಗಿದೆ ಎಂದು ಶ್ರೀ ಮೋದಿ ಹೇಳಿದರು.Prime Minister Narendra Modi Chairs Second High-Level Meeting with Secretaries of Government of India
July 28th, 08:48 pm
PM Modi chaired the second high-level meeting with Secretaries to the Government of India. The sectors discussed included Finance and Economy, Commerce and Industry and Technology. He stressed the need to reform processes, improve work culture and strengthen institutional efficiency, while also calling for greater participation of young innovators and entrepreneurs in the cybersecurity ecosystem.Cabinet approves scheme of Chemical Parks “Bharat Audyogik Vikas Yojana Rasayan (BHAVYA Rasayan)
July 24th, 04:12 pm
The Union Cabinet, chaired by PM Modi, has approved the BHAVYA - Rasayan Scheme for establishing three dedicated Chemical Parks at a cost of ₹3,030 crore. The scheme, which will run for five years from FY 2026-27 to FY 2030-31, will lead to a cascading effect through enhanced development of downstream sectors of the economy, thereby generating higher employment and promoting greater economic growth, helping achieve the goal of Viksit Bharat @ 2047.ಪ್ರಧಾನಮಂತ್ರಿ ಅವರನ್ನು ಭೇಟಿ ಮಾಡಿದ ಖ್ಯಾತ ಕೈಗಾರಿಕೋದ್ಯಮಿ ಶ್ರೀ ರವಿಕಾಂತ್
July 18th, 10:25 pm
ಖ್ಯಾತ ಕೈಗಾರಿಕಾ ಉದ್ಯಮಿ ಶ್ರೀ ರವಿ ಕಾಂತ್ ಅವರು ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ, ತಾವು ರಚಿಸಿರುವ 'Leading from the Back – To Achieve the Impossible' ಪುಸ್ತಕದ ಪ್ರತಿಯನ್ನು ಪ್ರಧಾನಮಂತ್ರಿಗಳಿಗೆ ಉಡುಗೊರೆಯಾಗಿ ನೀಡಿದರು.ಪ್ರಧಾನಮಂತ್ರಿ ಅವರು ಜುಲೈ 17 ರಂದು ಹರಿಯಾಣ, ಚಂಡೀಗಢ ಮತ್ತು ಪಂಜಾಬ್ ಗೆ ಭೇಟಿ ನೀಡಲಿದ್ದಾರೆ
July 15th, 06:40 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2026ರ ಜುಲೈ 17ರಂದು ಹರಿಯಾಣ, ಚಂಡೀಗಢ ಮತ್ತು ಪಂಜಾಬ್ ಗೆ ಭೇಟಿ ನೀಡಲಿದ್ದಾರೆ. ಬೆಳಿಗ್ಗೆ ಸುಮಾರು 11 ಗಂಟೆಗೆ ಪ್ರಧಾನಮಂತ್ರಿಯವರು ಜಿಂದ್ ರೈಲು ನಿಲ್ದಾಣದಲ್ಲಿ ಜಿಂದ್ ಮತ್ತು ಸೋನಿಪತ್ ನಡುವಿನ ಭಾರತದ ಮೊದಲ ಹೈಡ್ರೋಜನ್ ರೈಲಿಗೆ ಹಸಿರು ನಿಶಾನೆ ತೋರಲಿದ್ದಾರೆ. ಮಧ್ಯಾಹ್ನ ಸುಮಾರು 11:30 ಗಂಟೆಗೆ ಪ್ರಧಾನಮಂತ್ರಿಯವರು ಜಿಂದ್ ನ ಏಕಲವ್ಯ ಕ್ರೀಡಾಂಗಣದಲ್ಲಿ ಸುಮಾರು ₹14,700 ಕೋಟಿ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಮತ್ತು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಅವರು ಸಾರ್ವಜನಿಕ ಸಮಾವೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ.ಅದ್ಧೂರಿ ಭೋಜನಕೂಟ ಸಭೆ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
July 11th, 12:32 pm
ಕಳೆದ ವರ್ಷ ಪ್ರಧಾನ ಮಂತ್ರಿ ಲಕ್ಸನ್ ಅವರ ಭಾರತ ಭೇಟಿಯು ನಮ್ಮ ದ್ವಿಪಕ್ಷೀಯ ಸಂಬಂಧದ ಪ್ರತಿಯೊಂದು ಅಂಶಕ್ಕೂ ಹೊಸ ಶಕ್ತಿ ತುಂಬಿತು. ಅವರ ನಾಯಕತ್ವ, ಸ್ಪಷ್ಟ ದೃಷ್ಟಿಕೋನ ಮತ್ತು ಬಲವಾದ ಬದ್ಧತೆಯಡಿ, ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಸ್ನೇಹವು ಹೊಸ ಆವೇಗ ಮತ್ತು ಹೊಸ ದಿಕ್ಕನ್ನು ಪಡೆದುಕೊಂಡಿದೆ. 40 ವರ್ಷಗಳಲ್ಲಿ ಭಾರತೀಯ ಪ್ರಧಾನ ಮಂತ್ರಿಯೊಬ್ಬರು ನ್ಯೂಜಿಲೆಂಡ್‌ಗೆ ನೀಡಿದ ಮೊದಲ ಭೇಟಿ ಇದಾಗಿದೆ. ನಾನು ಆಗಾಗ್ಗೆ ಹೇಳುವಂತೆ, ನನಗಿಂತ ಮೊದಲು ಬಂದವರು ನನಗಾಗಿ ಅನೇಕ ಉತ್ತಮ ಕಾರ್ಯಗಳನ್ನು ಬಿಟ್ಟು ಹೋಗಿದ್ದಾ, ಅವುಗಳನ್ನು ಪೂರ್ಣಗೊಳಿಸುವ ಸೌಭಾಗ್ಯ ನನಗಿದೆ. ಸ್ನೇಹಿತರೆ, ಇದು ನಮ್ಮ ದ್ವಿಪಕ್ಷೀಯ ಸಂಬಂಧದಲ್ಲಿ ಹೊಸ ಅಧ್ಯಾಯದ ಆರಂಭವನ್ನು ಸೂಚಿಸುತ್ತಿದೆ."ಭಾರತ-ನ್ಯೂಜಿಲೆಂಡ್: ಒಂದು ಯಶಸ್ವಿ ಪಾಲುದಾರಿಕೆ" ಎಂಬ ವಿಷಯದ ಮೇಲೆ ನ್ಯೂಜಿಲೆಂಡ್ ಪ್ರಧಾನಮಂತ್ರಿ ಅವರು ಆಯೋಜಿಸಿದ್ದ ವಿಶೇಷ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪ್ರಧಾನಮಂತ್ರಿ
July 11th, 12:30 pm
ನ್ಯೂಜಿಲೆಂಡ್ ಪ್ರಧಾನಮಂತ್ರಿ ಅವರಾದ ಮಾನ್ಯ ಕ್ರಿಸ್ಟೋಫರ್ ಅವರು ಆಯೋಜಿಸಿದ್ದ ಭಾರತ-ನ್ಯೂಜಿಲೆಂಡ್: ಒಂದು ಯಶಸ್ವಿ ಪಾಲುದಾರಿಕೆ ಎಂಬ ವಿಷಯಾಧಾರಿತ ವಿಶೇಷ ಭೋಜನಕೂಟದಲ್ಲಿ ಪ್ರಧಾನಮಂತ್ರಿ ಅವರಾದ ಶ್ರೀ ನರೇಂದ್ರ ಮೋದಿಯವರು ಭಾಗವಹಿಸಿದ್ದರು. ರಾಜಕೀಯ, ವ್ಯಾಪಾರ, ಕೈಗಾರಿಕೆ, ಶಿಕ್ಷಣ, ತಂತ್ರಜ್ಞಾನ, ಕ್ರೀಡೆ ಮತ್ತು ಕಲೆ ಮುಂತಾದ ಕ್ಷೇತ್ರಗಳ ಗಣ್ಯರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.ಇಂಡೋನೇಷ್ಯಾ ಅಧ್ಯಕ್ಷರೊಂದಿಗೆ ಜಂಟಿ ಪತ್ರಿಕಾ ಹೇಳಿಕೆಯ ಸಂದರ್ಭದಲ್ಲಿ ಪ್ರಧಾನಮಂತ್ರಿಯವರ ಪತ್ರಿಕಾ ಹೇಳಿಕೆಯ ಕನ್ನಡ ಅನುವಾದ
July 07th, 11:21 am
2018ರಲ್ಲಿ ಸ್ಥಾಪನೆಯಾದ ನಮ್ಮ ʻಸಮಗ್ರ ಕಾರ್ಯತಂತ್ರದ ಸಹಭಾಗಿತ್ವʼವು ಇಂದು ಹೊಸ ಎತ್ತರವನ್ನು ತಲುಪುತ್ತಿದೆ. ಅಭಿವೃದ್ಧಿ, ಭದ್ರತೆ, ತಂತ್ರಜ್ಞಾನ, ಸಂಸ್ಕೃತಿ ಮತ್ತು ಶಿಕ್ಷಣ ಸೇರಿದಂತೆ ಸಹಕಾರದ ಪ್ರತಿಯೊಂದು ಕ್ಷೇತ್ರದಲ್ಲೂ ನಾವು ಗಮನಾರ್ಹ ದಾಪುಗಾಲು ಹಾಕುತ್ತಿದ್ದೇವೆ.ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಅವರ 125ನೇ ಜನ್ಮ ಜಯಂತಿಯಂದು ಪ್ರಧಾನಮಂತ್ರಿ ಅವರ ಭಾಷಣದ ಅನುವಾದ
July 06th, 06:47 pm
ಕೇಂದ್ರ ಸಚಿವ ಸಂಪುಟ ಸಹೋದ್ಯೋಗಿಗಳಾದ ಅಮಿತ್ ಭಾಯಿ ಶಾ, ಗಜೇಂದ್ರ ಸಿಂಗ್ ಶೇಖಾವತ್, ಪಶ್ಚಿಮ ಬಂಗಾಳದ ಕ್ರಿಯಾಶೀಲ ಮುಖ್ಯಮಂತ್ರಿ ಶುಭೇಂದು ಅಧಿಕಾರಿ, ಹಿರಿಯ ಬಿಜೆಪಿ ಸದಸ್ಯ ಮತ್ತು ನನ್ನಂತಹ ಲಕ್ಷಾಂತರ ಕಾರ್ಯಕರ್ತರಿಗೆ ಸ್ಫೂರ್ತಿ, ಶ್ರೀ ಮಖನ್‌ಲಾಲ್ ಜಿ, ಬಿಜೆಪಿ ರಾಜ್ಯ ಅಧ್ಯಕ್ಷ ಶಮಿಕ್ ಭಟ್ಟಾಚಾರ್ಯ, ಗೌರವಾನ್ವಿತ ಸಾರ್ವಜನಿಕ ಪ್ರತಿನಿಧಿಗಳು, ಗಣ್ಯ ಅತಿಥಿಗಳು, ಮಹಿಳೆಯರು ಮತ್ತು ಪುರುಷರು!ಡಾ. ಶ್ಯಾಮ ಪ್ರಸಾದ್ ಮುಖರ್ಜಿಯವರ 125ನೇ ಜನ್ಮ ಜಯಂತಿಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ
July 06th, 06:17 pm
ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಅವರ 125ನೇ ಜನ್ಮ ಜಯಂತಿ ಅಂಗವಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಸಂದೇಶದ ಮೂಲಕ ಸಭೆಯನ್ನುದ್ದೇಶಿಸಿ ಮಾತನಾಡಿದರು. ಪೂರ್ವ ನಿಗದಿತ ಪ್ರಯಾಣದ ಕಾರಣದಿಂದಾಗಿ ತಮ್ಮ ಭೌತಿಕ ಅನುಪಸ್ಥಿತಿಯನ್ನು ವಿವರಿಸುತ್ತಾ, ಈ ಮಹತ್ವದ ಸಂದರ್ಭಕ್ಕಾಗಿ ಭೌಗೋಳಿಕ ಅಂತರವನ್ನು ಕಡಿಮೆ ಮಾಡುವಲ್ಲಿ ಡಿಜಿಟಲ್ ಸಂಪರ್ಕ ವಹಿಸಿದ ಗಮನಾರ್ಹ ಶಕ್ತಿಯನ್ನು ಅವರು ಒತ್ತಿ ಹೇಳಿದರು. ತಂತ್ರಜ್ಞಾನದ ಸಹಾಯದಿಂದ, ನಾನು ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ನಿಮ್ಮೊಂದಿಗೆ ಸೇರುತ್ತಿದ್ದೇನೆ ಎಂದು ಶ್ರೀ ಮೋದಿ ಹೇಳಿದರು.ಗುಜರಾತ್‌ನ ಸನಂದ್‌ನಲ್ಲಿ ಸಿಜಿ ಸೆಮಿ ಒಎಸ್‌ಎಟಿ ಸೌಲಭ್ಯ ಉದ್ಘಾಟನೆ ಸಮಾರಂಭ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
July 04th, 05:15 pm
2024ರಲ್ಲಿ ಈ ಸ್ಥಾವರಕ್ಕೆ ಶಂಕುಸ್ಥಾಪನೆ ನೆರವೇರಿಸುವ ಅವಕಾಶ ನನಗೆ ಸಿಕ್ಕಿತ್ತು. 2025 ಆಗಸ್ಟ್ ಹೊತ್ತಿಗೆ ಚಿಪ್ ಪರೀಕ್ಷಾ ಕಾರ್ಯ ಇಲ್ಲಿ ಪ್ರಾರಂಭವಾಯಿತು, ಇಂದು ಈ ಸ್ಥಾವರವನ್ನು ಉದ್ಘಾಟಿಸಲಾಗಿದೆ. ಶಂಕುಸ್ಥಾಪನೆಯಿಂದ ಹಿಡಿದು ಉತ್ಪಾದನೆಯ ತನಕದ ಪ್ರಯಾಣವು ನಿಸ್ಸಂದೇಹವಾಗಿ ಅನೇಕ ಸಹೋದ್ಯೋಗಿಗಳ ಕಠಿಣ ಪರಿಶ್ರಮ ಮತ್ತು ಸುಬ್ಬಯ್ಯ ಜಿ ಅವರಂತಹ ನಾಯಕರ ಫಲವಾಗಿದೆ. ವೇದಿಕೆಗೆ ಬರುವ ಮೊದಲು, ಈ ಯೋಜನೆಗೆ ಸಂಬಂಧಿಸಿದ ಅನೇಕರೊಂದಿಗೆ ಸಂವಹನ ನಡೆಸುವ ಅವಕಾಶ ನನಗೆ ಸಿಕ್ಕಿತು. ಈ ಕ್ಯಾಂಪಸ್‌ನಲ್ಲಿ ಒಂದು ಮಿನಿ ಭಾರತ ವಾಸಿಸುತ್ತಿದೆ ಎಂದು ಭಾಸವಾಯಿತು - ಎಲ್ಲಾ ಭಾಷೆ, ಉಡುಪು ಮತ್ತು ಪಾಕ ಪದ್ಧತಿಯ ಜನರು ಇಲ್ಲಿದ್ದಾರೆ. ನನ್ನ ಪ್ರದರ್ಶನ ಭೇಟಿಯ ಸಮಯದಲ್ಲಿ ನಾನು ಅನೇಕ ಯುವಕ-ಯುವತಿಯರೊಂದಿಗೆ ಮಾತನಾಡಿದೆ. ನಾನು ಹೆಮ್ಮೆಯಿಂದ ಉಲ್ಲೇಖಿಸಬೇಕಾದ ಒಂದು ವಿಷಯವೆಂದರೆ, ಅವರ ಆತ್ಮವಿಶ್ವಾಸದ ಮಟ್ಟ. ಅವರು ಮಾತನಾಡಿದ ದೃಢನಿಶ್ಚಯ, ತಂತ್ರಜ್ಞಾನದ ಮೇಲಿನ ಅವರ ನಂಬಿಕೆ – ಇದರಿಂದ ನಾನು ನಿಜವಾಗಿಯೂ ಪ್ರಭಾವಿತನಾದೆ.ಗುಜರಾತ್‌ನ ಸನಂದ್‌ನಲ್ಲಿ ಸಿಜಿ ಸೆಮಿ ಔಟ್‌ಸೋರ್ಸ್ಡ್ ಸೆಮಿಕಂಡಕ್ಟರ್ ಅಸೆಂಬ್ಲಿ ಮತ್ತು ಟೆಸ್ಟ್ (ಒಎಸ್‌ಎಟಿ) ಸೌಲಭ್ಯವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಉದ್ಘಾಟಿಸಿದರು
July 04th, 05:00 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಗುಜರಾತ್‌ನ ಸನಂದ್‌ನಲ್ಲಿ CG ಸೆಮಿ ಔಟ್‌ಸೋರ್ಸ್ಡ್ ಸೆಮಿಕಂಡಕ್ಟರ್ ಅಸೆಂಬ್ಲಿ ಮತ್ತು ಟೆಸ್ಟ್ (OSAT) ಸೌಲಭ್ಯವನ್ನು ಉದ್ಘಾಟಿಸಿದರು. ಈ ಸಂದರ್ಭದ ಮಹತ್ವವನ್ನು ವಿವರಿಸಿದ, ಪ್ರಧಾನಮಂತ್ರಿಯವರು ಈ ಉಡಾವಣೆಯನ್ನು ರಾಷ್ಟ್ರವು ತನ್ನ ಗುರಿಗಳಿಗೆ ಹೊಂದಿರುವ ಅಚಲ ಬದ್ಧತೆಗೆ ಸಾಕ್ಷಿಯಾಗಿ ರೂಪಿಸಿದರು. ದೇಶವು ತನ್ನ ಬಲವಾದ ನಿರ್ಣಯಗಳನ್ನು ಹಿಂಜರಿಕೆಯಿಲ್ಲದೆ ನಿರಂತರವಾಗಿ ಸ್ಪಷ್ಟ ವಾಸ್ತವಗಳಾಗಿ ಪರಿವರ್ತಿಸುತ್ತದೆ ಎಂದು ಅವರು ಹೇಳಿದರು. ಭಾರತವು ಏನು ಮಾಡಲು ನಿರ್ಧರಿಸಿದರೂ ಅದು ದೃಢವಾಗಿ ಸಾಧಿಸುತ್ತದೆ ಎಂಬುದಕ್ಕೆ ಇಂದಿನ ಕಾರ್ಯಕ್ರಮ ಪುರಾವೆಯಾಗಿದೆ ಎಂದು ಶ್ರೀ ಮೋದಿ ಪ್ರತಿಪಾದಿಸಿದರು.ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಕ್ಷೇತ್ರದಲ್ಲಿ ಸಹಕಾರ ಕುರಿತು ಭಾರತ-ಜಪಾನ್ ಜಂಟಿ ಹೇಳಿಕೆ
July 02nd, 10:14 pm
ಭಾರತದ ಪ್ರಧಾನ ಮಂತ್ರಿ ಮತ್ತು ಜಪಾನ್ ಪ್ರಧಾನಮಂತ್ರಿ ಅವರು ಕೃತಕ ಬುದ್ಧಿಮತ್ತೆ(ಎಐ)ಯು ಆರ್ಥಿಕತೆಗಳು, ಸಮಾಜಗಳು, ವಿಜ್ಞಾನ ಮತ್ತು ತಂತ್ರಜ್ಞಾನ, ಕೈಗಾರಿಕೆ ಮತ್ತು ಉದ್ಯಮ ವ್ಯವಹಾರ, ಆಡಳಿತ ಮತ್ತು ಭದ್ರತೆಯನ್ನು ಪರಿವರ್ತಿಸುತ್ತಿರುವ ಯುಗ-ವ್ಯಾಖ್ಯಾನಿಸುವ ಸಾಮಾನ್ಯ ಉದ್ದೇಶದ ತಂತ್ರಜ್ಞಾನವಾಗಿದೆ ಎಂದು ಒಪ್ಪಿಕೊಂಡರು. ಎಐನ ವಿನ್ಯಾಸ, ಅಭಿವೃದ್ಧಿ, ನಿಯೋಜನೆ ಮತ್ತು ಆಡಳಿತದಲ್ಲಿ ಇಂದು ಮಾಡಿದ ಆಯ್ಕೆಗಳು ನಾವೀನ್ಯತೆ, ಸಾಮಾಜಿಕ ಕಲ್ಯಾಣ, ಆರ್ಥಿಕ ಭದ್ರತೆ ಮತ್ತು ಅಂತಾರಾಷ್ಟ್ರೀಯ ಕ್ರಮಕ್ಕೆ ದೀರ್ಘಕಾಲೀನ ಪರಿಣಾಮಗಳನ್ನು ಬೀರುತ್ತವೆ ಎಂದು ಅವರು ಗುರುತಿಸಿದರು. ಈ ತಿಳಿವಳಿಕೆಯ ಆಧಾರದ ಮೇಲೆ ಎಐ ಕ್ಷೇತ್ರದಲ್ಲಿ ಎರಡೂ ದೇಶಗಳ ಹೊಂದಾಣಿಕೆ ಮತ್ತು ಸ್ಪರ್ಧಾತ್ಮಕತೆಯನ್ನು ಪರಸ್ಪರ ಹೆಚ್ಚಿಸಲು, ಎರಡೂ ದೇಶಗಳಲ್ಲಿ ನಾವೀನ್ಯತೆ ಮತ್ತು ಬೆಳವಣಿಗೆಯನ್ನು ತರಲು, ಸುರಕ್ಷಿತ, ಸುಭದ್ರ, ವಿಶ್ವಾಸಾರ್ಹ, ಎಲ್ಲರನ್ನೂ ಒಳಗೊಂಡ, ಮಾನವ-ಕೇಂದ್ರಿತ, ಸುಸ್ಥಿರ, ಜವಾಬ್ದಾರಿಯುತ ಮತ್ತು ನಾವೀನ್ಯತೆ-ಆಧಾರಿತ ಎಐ ಪರಿಸರ ವ್ಯವಸ್ಥೆಯನ್ನು ನಿರ್ಮಿಸಲು ಅಗತ್ಯವಾದ ಸಹಕಾರ ಮುಂದುವರಿಸಲು ಉಭಯ ನಾಯಕರು ಒಪ್ಪಿಕೊಂಡರು.ಇಂಧನ ಚೇತರಿಕೆಯ ಕುರಿತು ಭಾರತ ಗಣರಾಜ್ಯದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಹಾಗೂ ಜಪಾನ್ ನ ಆರ್ಥಿಕತೆ, ವ್ಯಾಪಾರ ಮತ್ತು ಕೈಗಾರಿಕಾ ಸಚಿವಾಲಯದ ನಡುವಿನ ಜಂಟಿ ಹೇಳಿಕೆ
July 02nd, 10:04 pm
ಜುಲೈ 2, 2026 ರಂದು, ಭಾರತ ಗಣರಾಜ್ಯದ ಗೌರವಾನ್ವಿತ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಜಪಾನ್ ದೇಶದ ಗೌರವಾನ್ವಿತ ಪ್ರಧಾನಮಂತ್ರಿ ಟಕೈಚಿ ಸನಾಯೆ ಅವರು ಭಾರತದ ನವದೆಹಲಿಯಲ್ಲಿ ಭೇಟಿಯಾದರು. ಪ್ರಸ್ತುತ ಭೌಗೋಳಿಕ ರಾಜಕೀಯ ಪರಿಸ್ಥಿತಿಯ ಹಿನ್ನೆಲೆಯಲ್ಲಿ, ಏಷ್ಯಾದ ಜವಾಬ್ದಾರಿಯುತ ಶಕ್ತಿಗಳು ಮತ್ತು ಪ್ರಮುಖ ಇಂಧನ ಬಳಕೆಯ ದೇಶಗಳಾಗಿ ಜಂಟಿಯಾಗಿ ಇಂಧನ ಚೇತರಿಕೆಯನ್ನು ಬಲಪಡಿಸಲು ಒಟ್ಟಾಗಿ ಕೆಲಸ ಮಾಡುವ ತಮ್ಮ ಜಂಟಿ ಸಂಕಲ್ಪದ ಆಶಯವನ್ನು ವ್ಯಕ್ತಪಡಿಸಿದರು.ನವದೆಹಲಿಯಲ್ಲಿ ಆಯೋಜಿತವಾಗಿದ್ದ ಪ್ರಧಾನ ಮಂತ್ರಿ ವಿಕಸಿತ ಭಾರತ ರೋಜ್ ಗಾರ್ ಯೋಜನೆಯ ಪ್ರೋತ್ಸಾಹಧನ ವಿತರಣೆ ಕಾರ್ಯಕ್ರಮ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ
June 19th, 05:15 pm
ನನ್ನ ಸಂಪುಟ ಸಹೋದ್ಯೋಗಿ ಶ್ರೀ ಮನ್ಸುಖ್ ಮಾಂಡವೀಯ ಜಿ, ಸಹೋದರಿ ಶೋಭಾ ಜಿ, ದೇಶಾದ್ಯಂತ ವಿವಿಧ ಕಾರ್ಯಕ್ರಮಗಳು ಮತ್ತು ತಂತ್ರಜ್ಞಾನದೊಂದಿಗೆ ಸಂಪರ್ಕ ಹೊಂದಿದ ಎಲ್ಲಾ ಗಣ್ಯ ವ್ಯಕ್ತಿಗಳೆ, ದೂರದಿಂದಲೇ ಈ ಕಾರ್ಯಕ್ರಮದೊಂದಿಗೆ 200 ಸ್ಥಳಗಳಿಂದ ಸಂಪರ್ಕ ಹೊಂದಿರುವ ಸುಮಾರು 2 ಲಕ್ಷ ಜನರಿಗೆ ನಾನು ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ಸಲ್ಲಿಸುತ್ತೇನೆ, ಇಂದು ಇಲ್ಲಿ ಕೈಗಾರಿಕಾ ಕ್ಷೇತ್ರದ ಅನೇಕ ಗಣ್ಯ ವ್ಯಕ್ತಿಗಳು ಹಾಜರಿರುವುದನ್ನು ನಾನು ನೋಡುತ್ತಿದ್ದೇನೆ. ಸಹಜವಾಗಿ ಯುವ ಸಮುದಾಯ ಇಲ್ಲಿ ಉತ್ಸಾಹದಿಂದ ದೊಡ್ಡ ಸಂಖ್ಯೆಯಲ್ಲಿ ಇರುವುದು ಗೋಚರಿಸುತ್ತಿದೆ.